ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದೇವಸ್ಥಾನದಲ್ಲಿ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ನಿಷೇಧ ಏಕೆ?

🔯 ಆಧ್ಯಾತ್ಮಿಕ ವಿಚಾರ.🔯

ದೇವಸ್ಥಾನದ ಮುಂಭಾಗ ಒಂದು ಬೋರ್ಡ್ ಹಾಕಿರುತ್ತಾರೆ ಇಲ್ಲಿ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ನಿಷೇಧಿಸಲಾಗಿದೆ…

ಗರ್ಭಗುಡಿಯಲ್ಲಿ ಪೂಜೆ ಮಾಡುವಂತಹ ವಿಡಿಯೋ ಅಥವಾ ಇನ್ನಿತರ ದೇವರುಗಳ ಫೋಟೋಗಳನ್ನ ಸ್ಟೇಟಸ್ ನಲ್ಲಿ ಹಾಕುವ ಮೊದಲು ಈ ಸಣ್ಣ ಪ್ರಶ್ನೆ ನಿಮ್ಮ ಮುಂದೆ..
ದಿನನಿತ್ಯ ನಾವು ದೇವರುಗಳ ಫೋಟೋ ಅಥವಾ ತಾಯಿಗೆ ಪೂಜೆ ಮಾಡುವಂತಹ ಅಲಂಕಾರದ ವಿಡಿಯೋಗಳನ್ನು ಸ್ಟೇಟಸ್ ನಲ್ಲಿ ಹಂಚಿಕೊಳ್ಳುವಂತದ್ದು ಸರ್ವೇಸಾಮಾನ್ಯ..ಮೊನ್ನೆ ನಾನು ಕಟೀಲು ತಾಯಿಗೆ ಆರತಿ ಮಾಡುವಂತಹ ವಿಡಿಯೋ ವನ್ನ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದೆ..ಅದರಲ್ಲೂ ಅದು ಗರ್ಭಗುಡಿಯ ಅಲಂಕಾರದ ವಿಡಿಯೋ..ಸ್ಟೇಟಸ್ ನೋಡಿ ನನ್ನ ಆತ್ಮೀಯರಾದ ನನ್ನ ಗೆಳೆಯ ನಾವು ಮಾಡುವಂತಹ ತಪ್ಪುಗಳ ಬಗ್ಗೆ ಸ್ಪಷ್ಟನೆ ಕೊಡುತ್ತಾರೆ..ಈ ವಿಷಯದ ಕುರಿತು ಅನೇಕ ವಿಚಾರಗಳನ್ನು ನನ್ನ ಜೊತೆ ಹಂಚಿಕೊಂಡ್ರು..ದೇವಸ್ಥಾನಕ್ಕೆ ಹೋದಾಗ ಎಷ್ಟು ಜನ ಗಮನಿಸಿದ್ದೀರಾ ಗೊತ್ತಿಲ್ಲ..ದೇವಸ್ಥಾನದ ಮುಂಭಾಗ ಒಂದು ಬೋರ್ಡ್ ಹಾಕಿರುತ್ತಾರೆ ಇಲ್ಲಿ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ನಿಷೇಧಿಸಲಾಗಿದೆ..ಅದಕ್ಕೆ ನೂರಾರು ಕಾರಣಗಳಿರಬಹುದು ಅಥವಾ ನಮ್ಮ ನಂಬಿಕೆ ಆ ಜಾಗದಲ್ಲಿ ಇರಲಿ ಎಂಬ ಉದ್ದೇಶ..ನನ್ನನ್ನು ಸೇರಿ ಅನೇಕರು ದೈವ ದೇವರುಗಳ ಫೋಟೋಗಳನ್ನು ಸ್ಟೇಟಸ್ ನಲ್ಲಿ ಹಾಕಿ ಅಥವಾ ಕಟೀಲು ತಾಯಿಯ ನಿತ್ಯ ಪೂಜೆಯ ಅಲಂಕಾರದ ಫೋಟೋಗಳನ್ನು ಶೇರ್ ಮಾಡುತ್ತ ನಮ್ಮ ಭಕ್ತಿಯನ್ನ ನಾವು ಹೊರಹಾಕುತ್ತೇವೆ..
ನನಗೆ ಬಂದಂತಹ ಪ್ರಶ್ನೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ..ನಾವು ಹಾಕುವಂತಹ ಸ್ಟೇಟಸ್ ನ ತುಂಬಾ ಜನ ನೋಡುತ್ತಾರೆ..ನೀವು ಹಾಕಿರುವಂತಹ ಸ್ಟೇಟಸ್ ನ ನಿಮ್ಮ ಸ್ನೇಹಿತರು ಸಂಜೆ ನೋಡಬಹುದು ಅಥವಾ ಮಧ್ಯಾಹ್ನ ಬೆಳಿಗ್ಗೆ ಅವರ ಸಮಯದ ಅನುಕೂಲ ತಕ್ಕಂತೆ ನೋಡುತ್ತಾರೆ..
ನಿಮ್ಮ ಕಾಂಟಾಕ್ಟ್ ನಲ್ಲಿ ಅನೇಕ ಹೆಣ್ಣುಮಕ್ಕಳಿದ್ದಾರೆ..ಪಿರೇಡ್ಸ್ ಆದ ಸಮಯದಲ್ಲಿ ಅವರು ನಾವು ಹಾಕಿರುವಂತಹ ಸ್ಟೇಟಸ್ ಗಳನ್ನು ನೋಡಬಹುದು. ಪಿರೇಡ್ಸ್ ಸಮಯದಲ್ಲಿ ಹೆಣ್ಣು ಮಕ್ಕಳು ಬಹಳ ಭಕ್ತಿಯಿಂದ ಇರುತ್ತಾರೆ ಹಾಗಾಗಿ ಸ್ವಲ್ಪ ಆಲೋಚಿಸೋಣ.., ಅಥವಾ ಒಂದಿಷ್ಟು ಜನ ಬಾರ್ ನಲ್ಲಿ ಕುಳಿತು ಸ್ಟೇಟಸ್ ಗಳನ್ನು ನೋಡಬಹುದು. ಶೌಚಾಲಯದಲ್ಲಿ ಕುಳಿತು ಸ್ಟೇಟಸ್ ನೋಡುವವರಿದ್ದಾರೆ ಇನ್ನೂ ಅನೇಕ ಉದಾಹರಣೆಗಳಿವೆ..
ನಾನು ಹೇಳಲು ಹೊರಟಿರುವುದು ಇಷ್ಟೇ ದೈವ ದೇವರುಗಳ ಮುಖ ದರ್ಶನ ಆ ಪವಿತ್ರವಾದ ಜಾಗದಲ್ಲಿ ಕಂಡರೆ ಮಾತ್ರ ನಮ್ಮ ಮನಸ್ಸಿಗೆ ನೆಮ್ಮದಿ ಸಿಗಬಹುದು ಎಂಬ ಊಹೆ..ಸ್ಟೇಟಸ್ ನಲ್ಲಿ ಹಾಕಿರೋದನ್ನ ನಾಲ್ಕು ಜನ ನೋಡಬಹುದು ಅಥವಾ ನಮಗೆ ಒಂದಿಷ್ಟು ಲೈಕ್ಸ್ ಅಥವಾ ವಿವ್ಸ್ ಬರಬಹುದು..ಆದರೆ ಅದನ್ನು ನೋಡುವಂತಹ ಜನ ಎಲ್ಲಿ ಹೇಗೆ ನೋಡುತ್ತಾರೆ ಎಂಬ ನಿರ್ಧಾರದ ಮೇಲೆ ನಮ್ಮ ನಂಬಿಕೆಯ ತೀರ್ಮಾನವಾಗಲಿ..
ಹಾಗೆ ನ್ಯೂಸ್ ಪೇಪರ್ ಫ್ಲೆಕ್ಸ್ ಜಾತ್ರಾಮಹೋತ್ಸವದ ಪಾಂಪ್ಲೆಟ್ಸ್ ಗಳಲ್ಲಿ ಅಡ್ವಟೈಸ್ ಕೊಡುವಂತಹ ಪದ್ಧತಿ ನಮಗೆಲ್ಲ ಗೊತ್ತಿದೆ.. ಅದರಲ್ಲೂ ಗರ್ಭಗುಡಿಯ ಭಾವಚಿತ್ರ..ಸ್ವಲ್ಪ ದಿನಗಳಾದ ನಂತರ ಅದೆಲ್ಲೋ ಬಿದ್ದಿರುತ್ತದೆ.. ದಿನಸಿ ಅಂಗಡಿಗೋ ಅಥವಾ ಒಣ ಮೀನು ಹಾಕಿ ಕೊಡುವುದಕ್ಕೋ, ಅಥವಾ ಕಸದ ತೊಟ್ಟಿ ಗಳಲ್ಲಿ ಕಾಣಬಹುದು.. ಇದೆಲ್ಲ ನಮ್ಮ ಗಮನಕ್ಕೆ ಬರದಂತಹ ವಿಚಾರ..ಜಾತ್ರಾ ಮುಗಿದನಂತರ ಪಾಂಪ್ಲೆಟ್ಸ್ ಫ್ಲೆಕ್ಸ್ ಹೇಗೆ ಎಲ್ಲಿ ಬಿದ್ದಿರುತ್ತೆ ಎಂಬ ಊಹೆ ಸ್ವಲ್ಪ ಆಲೋಚಿಸಿ.. ಇದೆಲ್ಲ ಸರ್ವೇ ಸಾಮಾನ್ಯ ನಾವು ಪ್ರಶ್ನೆ ಮಾಡೋದು ತಪ್ಪು.. ಆದರೆ ಗರ್ಭ ಗುಡಿಯ ಭಾವಚಿತ್ರ ಹಾಕೋ ಮೊದಲು ಸ್ವಲ್ಪ ಆಲೋಚಿಸಿ ಮುಂದೆ ಸಾಗೋಣ..
ನಾನು ಮಾಡಿದಂತಹ ನನ್ನ ತಪ್ಪು ನನಗೆ ಅರಿವಾಗಿದೆ. ಸ್ಟೇಟಸ್ ನಲ್ಲಿ ಹಾಕುವುದನ್ನು ಕಡಿಮೆ ಮಾಡಿ ಭಕ್ತಿ ಪ್ರಧಾನವಾಗಿ ದೇವಸ್ಥಾನಕ್ಕೆ ಹೋಗಿ ಮನದಲ್ಲಿ ನೆನೆದು ನಮ್ಮ ನಂಬಿಕೆಯನ್ನು ನಾವು ಉಳಿಸಿಕೊಳ್ಳೋಣ..ನಾನು ಬರೆದಿರುವಂತಹ ಅಕ್ಷರಗಳು ನಿಮಗೆ ಸರ್ವಸಾಮಾನ್ಯ ಅನಿಸಿದರೂ ಕೂಡ ನಿಮ್ಮ ಮನಸ್ಸಿಗೆ ನೀವೇ ಪ್ರಶ್ನೆ ಹಾಕಿಕೊಳ್ಳಿ..

  ಗಾದೆ - ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು

ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!
ಅಡ್ಮಿನ್ ಬಳಗ .
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. ಸಂಪಾದಕೀಯ ಶಾಖೆ ಮಂಗಳೂರು.ಮೊಬೈಲ್ +919945295560 WhatsApp:https://chat.whatsapp.com/ISbrOeVLYcP5M7irDdsxKc
⬆️ಇಲ್ಲಿ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *

Translate »