ನೀರೊಳಗೆ ವಿರಾಜಿಪ ಗುಡ್ಡಟ್ಟು ಗಣಪ…!
ಜಲವಾಸಿಗಣಪ::
ಪ್ರಕೃತಿ ಸಿರಿ ಮೆರೆದಾಡುವ ಭವ್ಯಶರಧಿ ಬೋರ್ಗರೆವ ಉಡುಪಿ ಜಿಲ್ಲೆಯ ಸೊಬಗಿನ ತಾಣ ಕುಂದಾಪುರ ತಾಲೂಕಿನ ಶಿರಿಯಾರದ ಸಮೀಪ ಯಡಾಡಿ ಮತ್ಯಾಡಿಯಲ್ಲಿದೆ ಜಲವಾಸಿ ನೀರೊಳಗೆ ವಿರಾಜಿಪ ಉದ್ಭವ ಗಣಪ ಶ್ರೀ ವಿನಾಯಕ ದೇವಸ್ಥಾನ ಗುಡ್ಡಟ್ಟು ಎಂಬ ಅಪರೂಪದ ಸಾನಿಧ್ಯ. ಸುತ್ತಲೂ ಹಚ್ಚಹಸಿರು, ನಿಸರ್ಗದ ಮಡಿಲಲ್ಲಿ ಉಡುಪಿ ಬ್ರಹ್ಮಾವರ, ಬಾರಕೂರು- ಸ್ಯಾಬರಕಟ್ಟೆ ಮಾರ್ಗವಾಗಿ ಹೋದರೆ ಸಿಗುವ ವಿಶೇಷ ಕ್ಷೇತ್ರವಿದು.
ಕಾಡು,ಮೇಡುಗಳ ಹಸಿರು ಬಯಲಿನ ಮಧ್ಯದಲ್ಲಿ ರಮಣಿಯವಾದ ಬೃಹತ್ ಬಂಡೆಯ ಗುಹೆಯಂತಹ ರಚನೆಯಲ್ಲಿ ಸಾಧಾರಣ 8 ಅಡಿ ಉದ್ದ 7 ಅಡಿ ಅಗಲ ಇರುವ ಕಲ್ಲಿನ ದೋಣಿ ಆಕಾರದ ಜಾಗದಲ್ಲಿ ಕಲ್ಲು ಬಂಡೆಯ ಚಿಕ್ಕ ಗುಹೆಯಲ್ಲಿ ಉದ್ಬವಿಸಿದ ಸುಮಾರು 3 ಅಡಿ ಎತ್ತರದ ಕಪ್ಪುಶಿಲ್ಪದಲ್ಲಿರುವ ದ್ವಿಬಾಹು ಗಣಪತಿಯ ವಿಗ್ರಹ ಪೂರ್ವಾಭಿಮುಖವಾಗಿ ತೆರೆದಿರುವ ಮಡುವಿನಲ್ಲಿ ಕಾಲು ಮಡಿಚಿ, ಸೊಂಡಿಲು ತಿರುಚಿ ಕುಳಿತಿರುವನು. ಸ್ವಯಂಭುವಿನಲ್ಲಿ ಸ್ಪಷ್ಟ ಆಕಾರ ಹೊಂದಿರುವ ಶ್ರೀ ದೇವರ ಮೂಲಬಿಂಬವೂ ಕಂಠಪ್ರಮಾಣದವರೆಗೆ ಸದಾ ನೀರಿನಲ್ಲಿ ಮುಳುಗಿರುವುದೇ ಇಲ್ಲಿನ ಕೌತುಕ.
ಲೆಕ್ಕ ಮಾಡಿ ಸಾವಿರ ಕೊಡ ನೀರು ಸುರಿದಾಗ ಗಣಪತಿ ಮೂರ್ತಿ ಪೂರ್ಣ ಮುಳುಗುವ ಆರ್ಯಕೊಡ ಸೇವೆ ಇಲ್ಲಿನ ವಿಶೇಷ.
🙏🙏🙏