ರಾಕ್ಷಸರ ನಾಶಕ್ಕಾಗಿ ಭಯಂಕರ ಸ್ವರೂಪವನ್ನು ತಾಳುವ ದುರ್ಗಾದೇವಿ, ನವರಾತ್ರಿಯ ಏಳನೇ ದಿನದಂದು ಕಾಲರಾತ್ರಿಯಾಗಿ ಕಾಣಿಸಿಕೊಳ್ಳುತ್ತಾಳೆ. ಗಾಡಾಂಧಕಾರದಂತೆ ಶರೀರವೆಲ್ಲಾ ಕಪ್ಪಾಗಿ ಕತ್ತೆಯ ಮೇಲೆ ವಿರಾಜಮಾನಳಾಗಿ ಭಕ್ತರ ಅಭೀಷ್ಟವನ್ನು ನೆರವೇರಿಸುವವಳೇ ಕಾಲರಾತ್ರಿ. ಈಕೆಯನ್ನು ಶುಭಂಕರಿಯೆಂದೂ ಕರೆಯುತ್ತಾರೆ.
ಇದು ತುಂಬಾ ವಿಚಿತ್ರ ರೂಪವಾಗಿದೆ. ಈ ರೂಪದಲ್ಲಿ ತಾಯಿಯು ತುಂಬಾ ರೌದ್ರಾವತಾರ ಮತ್ತು ಕಪ್ಪಾಗಿ ಕಾಣುವರು. ಹೆಸರೇ ಹೇಳುವಂತೆ ಇದು ತಾಯಿಯ ಕರ್ಗತ್ತಲು ಮತ್ತು ಸಮಯದ ರೂಪವಾಗಿದೆ. ಕತ್ತೆಯ ಮೇಲೆ ಆಕೆ ಸಂಚಾರಿಯಾಗಿದ್ದಾರೆ. ಕಾಲರಾತ್ರಿ ದೇವಿಗೆ ನಾಲ್ಕು ಕೈಗಳಿವೆ. ಇದರಲ್ಲಿ ಎರಡಲ್ಲಿ ಒಂದರಲ್ಲಿ ಬೆಂಕಿ, ಮತ್ತೊಂದರಲ್ಲಿ ಖಡ್ಗವಿದೆ. ಇನ್ನೆರಡು ಕೈಗಗಳು ವರ ನೀಡುವ ಮತ್ತು ರಕ್ಷಿಸುವ ಹಾಗೆ ಇದೆ. ಈ ದೇವಿಯ ಶರೀರ ದಟ್ಟವಾದ ಅಂಧಕಾರದಂತೆ ಕಪ್ಪಾಗಿದೆ. ತಲೆಕೂದಲನ್ನು ಭಯಂಕರವಾಗಿ ಹರಡಿಕೊಂಡಿದ್ದಾಳೆ. ಕತ್ತು, ಕೈ ಕಾಲುಗಳಲ್ಲಿ ಮಿಂಚಿನಂತೆ ಹೊಳೆಯುವ ಮಾಲೆ ಇದೆ. ಬ್ರಹ್ಮಾಂಡದಂತಹ 3 ಕಣ್ಣುಗಳಿವೆ. ಇವಳ ಕಣ್ಣುಗಳು ಭಕ್ತರನ್ನು ಭಯಗೊಳಿಸುತ್ತೆ. ಇವಳು ಉಸಿರಾಡಿದ್ರೆ ಅಗ್ನಿ ಜ್ವಾಲೆ ಹೊರಹೊಮ್ಮುತ್ತೆ. ಇವಳಿಗೆ ನಾಲ್ಕು ಭುಜಗಳಿವೆ. ಬಲಭಾಗದ ಎರಡು ಕೈ ವರಮುದ್ರೆ, ಅಭಯ ಮುದ್ರೆಯಲ್ಲಿವೆ. ಎಡಗೈಗಳಲ್ಲಿ ಖಡ್ಗ ಮತ್ತು ಕಬ್ಬಿಣದ ಮುಳ್ಳಿನ ಅಸ್ತ್ರವಿದೆ. ಈಕೆ ಅಸುರರ ಪಾಲಿಗೆ ದುಃಸ್ವಪ್ನ. ಧರ್ಮದ ರಕ್ಷಣೆಗಾಗಿ, ಅಧರ್ಮರ ಪಾಲಿಗೆ ಭಯ ಹುಟ್ಟಿಸುವವಳು ಈಕೆ. ಆದರೆ ತನ್ನನ್ನು ಪೂಜಿಸುವ ಭಕ್ತರ ಪಾಲಿಗೆ ಮಾತ್ರ ಮಾತೃಸ್ವರೂಪಿಣಿಯಾದ ಪಾರ್ವತಿಯಾಗಿರುವವಳು.
ರಕ್ತಬೀಜಾಸುರನನ್ನು ವಧಿಸುವ ಸಲುವಾಗಿ ದುರ್ಗೆ ಕಾಲರಾತ್ರಿಯ ರೂಪವನ್ನು ತಾಳುತ್ತಾಳೆ. ರಕ್ತಬೀಜಾಸುರನನ್ನು ಕೊಂದು ರಕ್ತಬೀಜಾಸುರನ ರಕ್ತದ ಒಂದು ಹನಿಯೂ ಕೆಳಗೆ ಬೀಳದಂತೆ ಕುಡಿದು ಮದದಿಂದ ನರ್ತಿಸುತ್ತಾಳೆ. ಕಾಲರಾತ್ರಿ ದೇವಿಯು ದುರ್ಗಾಮಾತೆಯ ಏಳನೇ ಅವತಾರವಾಗಿದ್ದಾಳೆ. ರಕ್ತಬೀಜಾಸುರನನ್ನು ವಧಿಸುವ ಸಲುವಾಗಿ ದುರ್ಗೆ ಕಾಲರಾತ್ರಿಯ ರೂಪವನ್ನು ತಾಳುತ್ತಾಳೆ. ರಕ್ತಬೀಜಾಸುರನನ್ನು ಕೊಂದು ರಕ್ತಬೀಜಾಸುರನ ರಕ್ತದ ಒಂದು ಹನಿಯೂ ಕೆಳಗೆ ಬೀಳದಂತೆ ಕುಡಿದು ಮದದಿಂದ ನರ್ತಿಸುತ್ತಾಳೆ. ಶಿವನ ಎದೆಯ ಮೇಲೆ ಕಾಲಿಟ್ಟ ನಂತರ ಆಕೆಯು ಸಹಜ ಸ್ಥಿತಿಗೆ ಬರುತ್ತಾಳೆ. ಈಕೆಯನ್ನು ಆರಾಧಿಸುವವರ ಮನಸ್ಸು ಸಹಸಾರ ಚಕ್ರದಲ್ಲಿ ಸ್ಥಿತಗೊಂಡು ಪಾಪ ಹಾಗೂ ವಿಘ್ನಗಳು ನಾಶವಾಗಿ ಪುಣ್ಯಲೋಕ ಪ್ರಾಪ್ತಿಯಾಗುವುದು ಎನ್ನಲಾಗುತ್ತೆ. ಕಾಲ ಎಂದರೆ ಸಮಯ ಹಾಗೂ ಸಾವು ಎಂಬುದರ ಸೂಚಕ. ಕಾಲರಾತ್ರಿಯು ಕಾಲದ ಸಾವು ಎಂಬುದನ್ನು ಹೇಳುತ್ತದೆ. ತಾಯಿ ಕಾಲರಾತ್ರಿ ದೇವಿಯು ಅಂಧಕಾರವನ್ನು ಹೊಡೆದೋಡಿಸಿ ಬೆಳಕೆಂಬ ಧನಾತ್ಮಕ ಶಕ್ತಿಯನ್ನು ಪ್ರಾಪ್ತಿ ಮಾಡುತ್ತಾಳೆ. ತಾಯಿಯು ಕತ್ತಲೆಯನ್ನು ಪ್ರತಿನಿಧಿಸುತ್ತಾಳೆ. ಆಕೆಯು ತನ್ನ ಶಕ್ತಿಯಿಂದ ಅಂಧಕಾರವನ್ನು ಹೇಗೆ ದೂರ ಮಾಡುತ್ತಾಳೋ, ಅದೇ ರೀತಿ ಮನುಷ್ಯನ ಬದುಕಿನಲ್ಲಿ ಅನಾರೋಗ್ಯ, ಕೆಟ್ಟ ಆಲೋಚನೆಯನ್ನು ತೆಗೆದುಹಾಕಿ ಶಾಂತಿ, ಧೈರ್ಯವನ್ನು ತುಂಬುತ್ತಾಳೆ. ತಾಯಿ ಕಾಲರಾತ್ರಿಯು ಶನಿ ಗ್ರಹದ ಅಧಿಪತಿ. ಆಕೆ ಜನರು ಮಾಡಿರುವ ಕೆಡುಕು ಹಾಗೂ ಒಳಿತನ್ನು ನೋಡಿಕೊಂಡು ವರ ನೀಡುವರು. ಆಕೆ ದುಷ್ಟತೆಯನ್ನು ಶಿಕ್ಷಿಸಿ, ಒಳ್ಳೆಯದನ್ನು ರಕ್ಷಿಸುವರು. ಅವರು ಯಾವಾಗಲೂ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯನ್ನು ಗುರುತಿಸುವರು. ತಾಯಿ ಕಾಲರಾತ್ರಿಯನ್ನು ಪೂಜಿಸುವುದರಿಂದಾಗಿ ಶನಿಯಿಂದ ಆಗುವ ತೊಂದರೆ ಹಾಗೂ ಸಾಡೇಸಾತಿ ಪ್ರಭಾವ ತಗ್ಗಿಸಬಹುದು.
ಕಾಲರಾತ್ರಿಯ ಪೂಜಾವಿಧಾನ
ನವರಾತ್ರಿಯ ಏಳನೇ ದಿನವು ವ್ಯಕ್ತಿಯು ತಾಯಿ ಕಾಲರಾತ್ರಿಯ ಪೂಜೆ ನೆರವೇರಿಸಿದರೆ ಬದುಕಿನಲ್ಲಿ ಪೂರ್ಣಪ್ರಮಾಣದ ಅಭಿವೃದ್ಧಿ ಕಾಣುತ್ತಾನೆ ಎಂದು ಹೇಳಲಾಗುತ್ತದೆ. ರಾತ್ರಿ ಅರಳುವ ಮಲ್ಲಿಗೆ ಹೂವು ಕಾಲರಾತ್ರಿಗೆ ಅರ್ಪಿಸಲು ಪ್ರಸಕ್ತವಾದ ಹೂವು. ಕಾಲರಾತ್ರಿಗೆ ಪೂಜೆ ಸಲ್ಲಿಸುವ ಮೊದಲು ಗಣೇಶನಿಗೆ ಪೂಜೆ ಸಲ್ಲಿಸಬೇಕು. ತಾಯಿಯ ವಿಗ್ರಹವನ್ನು ಚೆನ್ನಾಗಿ ತೊಳೆದು ಹಾಲು, ಮೊಸರು, ಸಕ್ಕರೆ, ಜೇನುತುಪ್ಪ ಹಚ್ಚಿ ಕೊನೆಯಲ್ಲಿ ಎಲೆ ಅಡಿಕೆಯನ್ನು ಅರ್ಪಿಸಬೇಕು. ತಾಯಿಗೆ ಪುಷ್ಪಾರ್ಚನೆ ಮಾಡಿ, ಕುಂಕುಮ, ಅಕ್ಷತೆ ಮತ್ತು ಗಂಧವನ್ನು ಅರ್ಪಿಸಿ. ಕಳಶ ಪೂಜೆ ಮಾಡುವ ಮೂಲಕ ತಾಯಿ ದುರ್ಗೆಯ ಒಂಭತ್ತು ಅವತಾರಗಳನ್ನು ನೆನೆದು ಪೂಜೆ ಮಾಡಿ. ಬಳಿಕ ಕಾಲರಾತ್ರಿಗೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು.ತಾಯಿಗೆ ಅರ್ಪಿಸುವ ಪ್ರಸಾದವು ಹಾಲು, ಜೇನುತುಪ್ಪವನ್ನು ಒಳಗೊಂಡಿರಲಿ. ಪಾಯಸವೂ ಶ್ರೇಷ್ಠ.ಆರತಿಯೊಂದಿಗೆ ಪೂಜೆ ಕೊನೆಗೊಳಿಸಬೇಕು. ತಾಯಿಯ ಹಣೆಗೆ ಕುಂಕುಮ ಇಟ್ಟು ಮನಃಸ್ಫೂರ್ವಕವಾಗಿ ಪೂಜಿಸಿ. ತಾಯಿ ಕಾಲರಾತ್ರಿಯನ್ನು ಪೂಜಿಸಲು ಓಂ ದೇವಿ ಕಾಲರಾತ್ರಿಯೇ ನಮಃ ಎಂದು ಮಂತ್ರ ಪಠಿಸಿ.
ಕಾಲರಾತ್ರಿಯ ಮಂತ್ರ
ಓಂ ದೇವೀ ಕಾಲರಾತ್ರೈ ನಮಃ
ಓಂ ದೇವಿ ಕಾಲರಾತ್ರೈ ನಮಃ
ಎಕ್ವೇಣಿ ಜಪಕಾರ್ಣಪೂರ ನಗ್ನಾ ಖರಾಸ್ಥಿತಾ
ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ ಶರೀರಿಣೀ ವಂ
ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ
ಭರ್ಧನ್ ಮೂರ್ಧಂ ಧ್ವಜಾ ಕೃಷ್ಣ ಕಾಲರಾತ್ರಿ ಭಯಂಕರಿ
ಕಾಲರಾತ್ರಿ ಸ್ತುತಿ
ಯಾ ದೇವಿ ಸರ್ವಭುತೇಶ್ ಮಾ
ಕಾಲರಾತ್ರಿ ರೂಪೇನಾ ಸಂಹಿತಾ
ನಮಸ್ತಾಸ್ಯೈ ನಮಸ್ತಾಸ್ಯೈ ನಮಸ್ತಾಸ್ಯೈ
ನಮೋ ನಮಃ
ಕಾಲರಾತ್ರಿ ದೇವಿ ಧ್ಯಾನ
ಕರಲಾವಂದನ ಘೋರಂ
ಮುಕ್ತಾಕ್ಷಿ ಚತುರ್ಭುಜಂ
ಕಾಲರಾತ್ರಿಮ್ ಕರಾಲಿಮ್ಕಾ ದಿವ್ಯಾಂ
ವಿದ್ಯುತ್ಮಾಲ ವಿಭಾಷಿತಂ ದಿವ್ಯಾಂ
ಲಾಹುವಾಜ್ರಾ ಖಡ್ಗ ವಮೊಘೋರ್ಧ್ವಾ ಕರಂಭುಜಮ್
ಅಭಯಂ ವರದಂ
ಚೈವ ದಕ್ಷಿಣೋಧವಘಹ್ ಪರ್ಣಿಕಾಮ್ ಮಾಮ್
ಮಹಮೇಘ ಪ್ರಬಂಧ ಶ್ಯಾಮಮ್
ತಕ್ಷ ಚೈವಾ ಗಾರ್ದಭಾರುಧ ಘೋರದಾಂಶ ಕರಾಲ್ಯಾಸಂ
ಪಿನ್ನೊನಾತಾ ಪಯೋಧರಂ
ಸುಖ ಪ್ರಸನ್ನವಧನ ಶರ್ಮೆನ್ನಾ
ಸರೊರುಹಮ್ ಇವಾಮ್
ಸಚಿಯಂತಾಯೆತ್ ಕಾಲರಾತ್ರಿಮ್
ಸರ್ವಕಂ ಸಮೃದ್ಧಿಂ
ತಾಯಿ ಕಾಲರಾತ್ರಿ ಸ್ತೋತ್ರ
ಹಿಮ್ ಕಲಾರತ್ರಿ ಶಿಮ್
ಕರಾಳಿ ಚಾ ಕ್ಲೈಮ್
ಕಲ್ಯಾಣಿ ಕಲಾವತಿ ಕಲಾಮತಾ ಕಾಳಿದರ್ಪದ್ನಿ
ಕಾಮದಿಶಾ ಕುಪನ್ವಿತಾ
ಕಾಮಬಿಜಪಂದ ಕಮಬಿಜಸ್ವರ್ಪಿನಿ
ಕುಮತಿಘಿನಿ ಕುಲಿನಾರ್ನಾನಿಶಿ
ಕುಲಾ ಕಾಮಿನಿ ಕ್ಲಿಮ್ ಹ್ರಮ್ ಶ್ರೀಮಿ
ಮಾಂತ್ರ್ವರ್ನೆನಾ
ಕಲಾಕಂತಕಘಾತಿನಿ
ಕೃಪಮಾಯಿ ಕೃಪಾಧಾರ
ಕೃಪಾಪಾರಾ ಕೃಪಾಗಾಮಾ
ಕಾಲರಾತ್ರಿ ಕವಚ
ಓಂ ಕ್ಲಿಮ್ ಮಿ ಹೃದಯಂ ಪತು ಪದೂ ಶ್ರೀಕಾಲಾರಾತ್ರಿ
ಲಲೇತೆ ಸತತಂ ಪತು ತುಶ್ಗ್ರಾಘ ನಿವಾರಿಣಿ
ರಾಸನಮ್ ಪತು ಕೌಮರಿ, ಭೈರವಿ ಚಕ್ರಶೋರ್ಭಮಾ
ಕತೂ ಪ್ರಿಶ್ಥ್ ಮಹೇಶನಿ, ಕರ್ಣಶಂಕರಾಭಮಿಣಿ
ವರ್ಜಿತಾನಿ ತು ಸ್ತಾನಭಿ ಯಾನಿ ಚಾ ಕವಚೇನಾ ಹಾಯ್
ತನಿ ಸರ್ವಾನಿ ಮೀ ದೇವಿಸತಾಪಂಪತು ಸ್ಟ್ಯಾಂಬಿಣಿ
ಕಾಲರಾತ್ರಿಯನ್ನು ಏಳನೇ ದಿನದಂದು ಪೂಜಿಸುವುದರಿಂದ ಸರ್ವಭಯವೂ ನಿವಾರಣೆಯಾಗುವುದು. ವ್ಯಕ್ತಿಯ ಶ್ರೋಯೋಭಿವೃದ್ಧಿಯಲ್ಲಿ ಕಾಣಿಸಿಕೊಳ್ಳುವ ಎಲ್ಲಾ ತೊಂದರೆಗಳೂ ನಿವಾರಣೆಯಾಗುವುದು ಹಾಗೂ ಸರ್ವರೋಗಗಳಿಂದ ಮುಕ್ತಿ ಸಿಗುವುದು. ಮಾನಸಿಕ ಶಾಂತಿ ಹಾಗೂ ನೆಮ್ಮದಿಯನ್ನು ನೀಡುವವಳು ಕಾಲರಾತ್ರಿ.