ಈ # ಮಕ್ಕಳ ದಿನಾಚರಣೆಯಲ್ಲಿ, ಒರಿಸ್ಸಾದ ನೀಲಕಾಂತ್‌ಪುರದ ” ಶಹೀದ್ ಬಾಜಿ ರೂಟ್ ” ಭಾರತದ ಸ್ವಾತಂತ್ರ್ಯ ಹೋರಾಟದ ಕಿರಿಯ ಹುತಾತ್ಮನ ಬಗ್ಗೆ ನಾವು ತಿಳಿಯುವ ಸಮಯ, .
ತನ್ನ 12 ನೇ ವಯಸ್ಸಿನಲ್ಲಿ, ಈ ಬಾಲಕ ಹಳ್ಳಿಗಾಡಿನ ಬ್ರಾಹ್ಮಣಿ ನದಿಗೆ ಅಡ್ಡಲಾಗಿ ಸಾಗಿಸುವ ದೋಣಿಯೊಂದರಲ್ಲಿ ಕೆಲಸ ಮಾಡುತಲಿದ್ದನು ಮತ್ತು ಅವನ ಬಳಿ ಬ್ರಿಟಿಷ್ ಸೈನ್ಯವು ಬ್ರಾಹ್ಮಣಿ ನದಿಯ ಆಚೆ ಬದಿ ಸಾಗಿಸಲು ಆದೇಶಿಸಿತು.
ಹಳ್ಳಿಯಲ್ಲಿ ಮುಗ್ಧ ಜನರನ್ನು ಕೊಂದ ಸೈನ್ಯದ ಕ್ರೂರತೆಯ ವಿವರಗಳನ್ನು ಈಗಾಗಲೇ ಕೇಳಿದ್ದ ಬಾಜಿ, ಬ್ರಿಟಿಷ್ ಸೈನ್ಯಕ್ಕೆ ಅಡ್ಡಿಯಾಗಬೇಕೆಂಬುದನ್ನು ಅರ್ಥಮಾಡಿಕೊಂಡನು , ನಂತರ ಅವರನ್ನು ನದಿಯ ಆಚೆ ಬದಿ ಹೋಗುವುದನ್ನು ನಿಲ್ಲಿಸಬೇಕಾಗಿತ್ತು. ಆದ್ದರಿಂದ ಅವರ ಸೈನ್ಯವನ್ನು ಸಾಗಿಸಲು ಅವನು ನಿರಾಕರಿಸಿದನು.
ಸೈನ್ಯವು ತಕ್ಷಣ ದೋಣಿಯಲ್ಲಿ ಸಾಗಿಸಲು ಒಪ್ಪದಿದ್ದರೆ ಅವನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿತು. ಆದರೆ ಬಾಜಿ ಅವರ ಆದೇಶಗಳನ್ನು ತಿರಸ್ಕರಿಸಿದನು.
ಬ್ರಿಟಿಷ್ ಸೈನಿಕರೊಬ್ಬರು ಬಾಜಿ ತಲೆಗೆ ಗನ್ ಬಟ್ ನಿಂದ ಹೊಡೆದರು ಮತ್ತು ಅದು ಅವನ ತಲೆಬುರುಡೆಗೆ ತೀವ್ರವಾಗಿ ಪೆಟ್ಟು ಮಾಡಿತು. ಆ ಹೊಡೆತ್ತಕ್ಕೆ ಬಾಜಿ ಕುಸಿದು ಬಿದ್ದನು, ಆದರೆ ಅವನ ಛಲ ಮತ್ತು ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಹೊರಡುವ ಕಿಚ್ಚು ಇನ್ನು ಹೆಚ್ಚಾಯಿತು , ಅವನ ಬಳಿ ಉಳಿದಿದ್ದ ಸ್ವಲ್ಪ ಶಕ್ತಿ ಮತ್ತು ಧೈರ್ಯವನ್ನು ಒಟ್ಟುಗೂಡಿಸಿ, ಮತ್ತು ತನ್ನ ಶಕ್ತಿಯನ್ನು ಮೀರಿ ಜೋರಾಗಿ ಕೂಗುತ್ತ ತನ್ನ ಧ್ವನಿ ಎತ್ತಿದನು, ತಾನು ಜೀವಂತವಾಗಿ ಇರುವವರೆಗೆ ಬ್ರಿಟಿಷ್ ಸೈನ್ಯವನ್ನು ಸಾಗಿಸುವುದಿಲ್ಲ ಎಂದು ಎಚ್ಚರಿಸಿದನು. ಸೈನಿಕನೊಬ್ಬ ತನ್ನ ಗನ್ ಬಟ್ ನಿಂದ ಬಾಜಿಯ ಮೃದುವಾದ ತಲೆಬುರುಡೆಗೆ ಚುಚ್ಚಿದನು, ಇನ್ನೊಬ್ಬ ಬ್ರಿಟಿಷ್ ಸೈನಿಕನು ನಿರ್ದಯವಾಗಿ ಗುಂಡು ಹಾರಿಸಲು ಪ್ರಾರಂಭಿಸಿದನು. ಒಂದು ಗುಂಡು ಬಾಜಿಗೆ ಅಪ್ಪಳಿಸಿ ಅವನು ಸತ್ತರೆ, ಅವನ ಇತರ ಸ್ನೇಹಿತರಾದ ಲಕ್ಷ್ಮಣ್ ಮಲಿಕ್, ಫಾಗು ಸಾಹೂ, ಹರ್ಷಿ ಪ್ರಧಾನ್ ಮತ್ತು ನಾಟಾ ಮಲಿಕ್ ಸಹ ಕೊಲ್ಲಲ್ಪಟ್ಟರು.
ಭಾರತದ ಕಿರಿಯ ಹುತಾತ್ಮನು ಖಂಡಿತವಾಗಿಯೂ ಹೆಚ್ಚಿನ ಮನ್ನಣೆಗೆ ಅರ್ಹನಾಗಿರುತ್ತಾನೆ. ಅವನಂತಹ ಧೈರ್ಯಶಾಲಿ ಮಗುವನ್ನು ಗೌರವಿಸಿ.