ಜೀವನಾಮೃತಸಾರ
ಪ್ರೀತಿ
ನಾವೆಲ್ಲರೂ ಪ್ರೀತಿಯಿಲ್ಲದೆ ಬದುಕಲು ಸಾಧ್ಯವಿಲ್ಲ. ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು. ಎಂಥ ಪ್ರೀತಿ ಹೊಂದಿರಬೇಕು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಹುಡಗಿ ಹುಡರ ನಡುವೆ ಇರುವುದಷ್ಟೇ ಪ್ರೀತಿಯಲ್ಲ.
ತಾಯಿ ಮಗನ ಪ್ರೀತಿ, ಅಣ್ಣ ತಂಗಿಯರ ಪ್ರೀತಿ, ಸೇಹಿತರ ನಡುವಿನ ಪ್ರೀತಿ ಕೂಡ ಮಹತ್ವದ್ದಾಗಿದೆ.
ನಮ್ಮ ಜೀವನ ಹೇಗಿರಬೇಕಂದರೆ, ನಾವು ಹುಟ್ಟಿದರೆ ತಾಯಿ ಸಂತೋಷ ಪಡಬೇಕು, ಬೆಳೆದರೆ ತಂದೆ ಆನಂದಿಸುವಂತಿರಬೇಕು. ಬಾಳಿದರೆ ಸಮಾಜ ಸಂಭ್ರಮಿಸುವಂತಿರಬೇಕು, ಕೊನೆಗೆ ನಾವು ಸತ್ತರೆ ಸ್ಮಶಾನ ಅಳುವಂತೆ ಬದುಕು ನಮ್ಮದಾಗಿರಬೇಕು.
ಈ ನಾಲ್ಕು ಸಾಲಿನಲ್ಲಿ ಮನುಷ್ಯ ಹೇಗಿರಬೇಕು ಎಂಬದನ್ನು ತಿಳಿಯಬುದಾಗಿದೆ.
ನಾವು ಹುಟ್ಟಿದರೆ ತಾಯಿ ಸಂತೋಷ ಪಡುವಂತರಬೇಕು ಎಂದರೆ ನಾವು ಸುಂದರವಾಗಿರಬೇಕು, ಉತ್ತರ ಗುಣಗಳನ್ನು ರೂಢಿಸಿಕೊಂಡು ಬೆಳೆಯುವ ಮೂಲಕ ತಂದೆ ಆನಂದಿಸಬೇಕು, ಇಡಿ ಸಮಾಜ ಸಂಭ್ರಮಿಸುವಂತೆ ಉತ್ತಮ ಪ್ರಜೆಯಾಗಿ ಬಾಳಬೇಕು, ಎಂಥ ಒಳ್ಳೆ ಮನುಷ್ಯ ಇನ್ನೂ ನಾಲ್ಕು ದಿನ ಬದುಕುಬೇಕಿತ್ತು ಯಾಕೆ ಸತ್ತ ಎಂದು ಸ್ಮಶಾನ ಕೂಡ ಅಳುವಂತೆ ನಾವೆಲ್ಲರೂ ಬದುಕಬೇಕು . ಈಗೆ ಬದುಕಬೇಕಾದರೆ ಪ್ರೀತಿಯಿಂದ ಬಾಳಬೇಕು. ಪ್ರೀತಿಗೆ ವ್ಯಾಖ್ಯಾನ ಮಾಡಲು ಪದಗಳೇ ಇಲ್ಲ. ಗುರುಗಳು ಶಿಷ್ಯರ ಮೇಲೆ ಅಪಾರ ಪ್ರೀತಿ ಹೊಂದಿರುತ್ತಾರೆ. ಅವರಲ್ಲಿ ಅಭ್ಯಾಸ ಮಾಡುವ ಎಲ್ಲ ಶಿಷ್ಯರನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಇದು ನಿಸ್ವಾರ್ಥ ಪ್ರೀತಿ.
ಪ್ರೀತಿಯಲ್ಲಿ ಎರಡು ವಿಧಗಳು, ಒಂದು ಸ್ವಾರ್ತಕ್ಕಾಗಿ ಪ್ರೀತಿಸುವುದು, ಇನ್ನೊಂದು ನಿಸ್ವಾರ್ಥ ಪ್ರೀತಿ. ಬಡವರ ಮೇಲಿನ ಪ್ರೀತಿಗಾಗಿ ಅವರಿಗೆ ಸಹಾಯ ಮಾಡಿದರೆ ಅದು ನಿಸ್ವಾರ್ಥ ಪ್ರೀತಿ ಎನಿಸುತ್ತದೆ. ಅವರಿಂದ ಏನೋ ಸಿಗಬಹುದು ಎಂದು ಪ್ರೀತಿಸಿದರೆ ಅದು ಸ್ವಾರ್ಥ ಪ್ರೀತಿ. ಅವರಿಂದ ಆಪೇಕ್ಷಿತ ವಸ್ತು ಸಿಕ್ಕ ಮೇಲೆ ಅವರ ಮೇಲೆ ಪ್ರೀತಿ ಉಳಿಯುವುದಿಲ್ಲ. ಯಾವಾಗಲೂ ನಿಸ್ವಾರ್ಥ ಪ್ರೀತಿ ಮಾಡಬೇಕು.
ಜೀವನ ಎಂದರೆ ನದಿ ಇದ್ದಂತೆ. ನದಿ ಹರಿದು ಸಮುದ್ರ ಸೇರುತ್ತದೆ. ತಾನು ಹರಿಯುವಾಗ ಅಕ್ಕ ಪಕ್ಕದಲ್ಲಿ ಭೂಮಿಗೆ ನೀರುಣಿಸಿ ಮರಗಳನ್ನು ಬೆಳೆಸಿ ಹಣ್ಣು ನೀಡುತ್ತದೆ.
ಹೂ ನೀಡುತ್ತದೆ. ಕೊನೆಗೆ ಸಮುದ್ರವನ್ನು ಸೇರುತ್ತದೆ. ಅಂಥ ನದಿಯನ್ನು ಸಾಗರವು ಸ್ವಾಗತಿಸಿಕೊಳ್ಳುತ್ತದೆ. ಏಕಂದರೆ ಕೇವಲ ತನ್ನಷ್ಟಕ್ಕೆ ತಾನು ಹರಿದು ಬರಲಿಲ್ಲ ಈ ನದಿ. ಎಲ್ಲಿ ಹುಟ್ಟಿದೆಯೋ ಅಲ್ಲಿಂದ ಸಮುದ್ರ ಸೇರುವ ವರೆಗೂ ಸೃಷ್ಟಿಗೆ ಸಹಾಯ ಮಾಡಿದೆ ಅಂತ ಸ್ವಾಗತಿಸುತ್ತದೆ.
ನಮ್ಮ ಜೀವನವೂ ಒಂದು ನದಿ ಇದ್ದಂತೆ.
ನೂರು ವರ್ಷ ನಮಗಾಗಿ ಬದುಕಿದರೆ ಪ್ರಯೋಜನವಿಲ್ಲ. ನಮ್ಮ ಸುಂದರ ಬುದುಕಿನ ಜತೆ ಪರರ ಕಷ್ಟ ಸುಖದಲ್ಲಿ ಭಾಗಿಯಾಗಿ ನದಿಯಂತೆ ಜೀವನ ಸಾಗಿಸಿ ಕೊನೆಗೆ ದೇವ ಸಾಗರ ಸೇರಬೇಕು ಅಂದಾಗಮಾತ್ರ ಜೀವನಕ್ಕೆ ಅರ್ಥ ಬರುತ್ತದೆ. ನದಿಯಂತೆ ಹಸಿರು ಸೃಷ್ಟಿಸಬೇಕೆ ವಿನಹ: ದುಶ್ಚಟಕ್ಕೆ ಬಲಿಯಾಗಿ ಚರಂಡಿ ನೀರಿನಂತೆ ದುರ್ನಾತ ಬೀರಬಾರದು.
ಋಷಿ ಮುನಿಗಳು ತಾವು ಸುಂದವಾರದ ಬದುಕು ಸಾಗಿಸುವ ಮೂಲಕ ಜೀವಿಸುವುದನ್ನು ನಮಗೂ ಕಲಿಸಿಕೊಟ್ಟಿದ್ದಾರೆ. ಋಷಿ ಮುನಿಗಳು ಕಾಡಿನಲ್ಲಿದ್ದು, ನಾಡಿನ ಹಿತ ಬಯಸಿದ್ದಾರೆ. ಆದರೆ ನಾವು ನಾಡಿನಲ್ಲಿದ್ದು, ಕಾಡನ್ನು ನಾಶಪಡಿಸುತ್ತಿದ್ದೇವೆ.
*ಪುಣ್ಯಭೂಮಿ ರಾಷ್ಟ್ರ ವೇದಿಕೆ*
*ಉತ್ತಮ ನಾಗರಿಕ ರಾಷ್ಟ್ರ ನಿರ್ಮಾಣ*