ಪ್ರಜೆಗಳ ಪ್ರತಿನಿಧಿ ಯಾರಾಗ ಬೇಕು ? – ಪ್ರಜಾಕೀಯದ ಚಿಂತನೆ
- ತನ್ನ ಸಂಪೂರ್ಣ ಸಮಯ ಪ್ರಜೆಗಳಿಗಾಗಿ ಮೀಸಲಿಡುವ ಪ್ರಜೆ.
- ಕೇವಲ MLA- MP ಗಳಿಗೆ ಸಿಗುವ ಸಂಭಾವನೆ ( ಸಂಬಳ- ಭತ್ತೆ) ಯಲ್ಲಿ ಜೀವನ ಮಾಡುವ ದ್ರಡ ಸಂಕಲ್ಪ.
- ಇದರೊಂದಿಗೆ ತನ್ನ ಕುಟುಂಬವನ್ನೂ ಕಡೆಗಣಿಸದೆ, ಅವರಿಗೂ ಕ್ವಾಲಿಟಿ ಸಮಯ ಕೊಡ ಬೇಕು.
- ಯಾವುದೇ ಅನೈತಿಕ ಹಣ ಮಾಡುವ ಎಳ್ಳಷ್ಟು ಆಸೆ ಇರಬಾರದು.
- ಪ್ರಾಮಾಣಿಕವಾಗಿ ಬದುಕುವ ಹಂಬಲವಿರ ಬೇಕು.
- ಪ್ರತಿ ಪ್ರಜೆಯ ತೊಂದರೆಗಳನ್ನು ಆಲಿಸುವ ಹ್ರಧಯವಂತನಾಗಿರ ಬೇಕು.
- ತನ್ನ ಕ್ಷೇತ್ರದ ವಿಷಯ ವಿವರವಾಗಿ ತಿಳಿದುಕೊಂಡು, ಅದಕ್ಕೆ ತಕ್ಕಂತೆ ಅವಶ್ಯಕತೆಗಣುಗುಣವಾಗಿ ಕಾರ್ಯಮಾಡುವ ಕಾರ್ಯ ಕುಶಲತೆ ಹೊಂದಿರ ಬೇಕು.
- ಎಲ್ಲದರಲ್ಲೂ ಪಾರದರ್ಶಕತೆಯಿಂದ ವ್ಯವಹಾರ ಮಾಡುವ ಮಾನಸಿಕ ಪ್ರಬುದ್ಧತೆ ಇರ ಬೇಕು.
- ಜೀವನವು ಶಿಸ್ತು ಬದ್ದವಾಗಿ, ಯಾವುದೇ ಕ್ರಿಮಿನಲ್ ಕೇಸ್ ಗಳಲ್ಲಿ ಬೆರೆತಿರ ಬಾರದು. ಸಂಪೂರ್ಣ ಸ್ವಚ್ಚ ಜೀವನ ಮಾಡಿರ ಬೇಕು ಹಾಗು ಮುಂದೆಯೂ ಅದನ್ನು ಕಾಪಾಡಿಕೊಂಡು ಬರುವಂತಹ ದ್ರಡತೆ ಇರಬೇಕು.
- ಕನ್ನಡ- ಇಂಗ್ಲೀಷ್ ಭಾಷೆಯಲ್ಲಿ ಓದುವ, ಬರೆಯುವ ಹಾಗು ಮಾತನಾಡುವ ಅನುಭವವಿರಬೇಕು.
- ಪ್ರತೀಷ್ಟೆ ಅಥವಾ ಘನತೆ ಎಂಬ ಮನೋಭಾವ ಇರಲೇ ಬಾರದು. ತಾನೂ ಪ್ರಜೆಗಳಳ್ಳೊಬ್ಬನು ಎಂಬ ದ್ರಡವಾದ ನಂಬಿಕೆ ಇರಬೇಕು.
- ತನ್ನ ಸ್ಥಾನ- ಮಾನದ ಅನೈತಿಕ ಉಪಯೋಗ ಎಲ್ಲಿಯೂ ಮಾಡ ಬಾರದು.
- ಎಲ್ಲವೂ ಪ್ರಜೆಗಳ ಮೇಲೆ ಕೇಂದ್ರಿಕರಿತವಾಗಿರ ಬೇಕು.
- ಆತ್ಮಸಾಕ್ಷಿಯಾಗಿ ಎಲ್ಲಾ ವ್ಯವಹಾರವನ್ನು ಮಾಡುವ ಸ್ವಚ್ಚಂದ ಮನಸಿನವನಾಗಿರ ಬೇಕು.
- ಪ್ರಜೆಗಳ ವಿಧೇಯ ಕೆಲಸದವನಾಗಿ, ತನ್ನ ಕರ್ತವ್ಯವನ್ನು ಶಿರಸಾ ವಹಿಸಿ ಮಾಡುವುದೇ – ಪ್ರಜೆಗಳ ಪ್ರತಿನಿಧಿ.