ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

“ಶ್ರೀ ಕಾಲಭೈರವಾಷ್ಟಕ” ಸ್ತೋತ್ರದ ಮಹತ್ವಗಳು ..!

🕉️ ಓ ‌‌‌‌ ‌ ಂ ‌ ‌ ‌ “ಶ್ರೀ ಕಾಲಭೈರವಾಷ್ಟಕ” ಸ್ತೋತ್ರದ ಮಹತ್ವಗಳು..!

“ಶ್ರೀ ಕಾಲಭೈರವಾಷ್ಟಕವನ್ನು ಆದಿ ಗುರು ” ಶ್ರೀ ಶಂಕರಾಚಾರ್ಯರು” ಶ್ರೀ ಕಾಶೀ ಕ್ಷೇತ್ರದಲ್ಲಿ “ಕಾಲಭೈರವ” ದೇವಾಲಯಕ್ಕೆ ಭೇಟಿಕೊಟ್ಟಾಗ ರಚಿಸಿದರು..!
ಈ ಸ್ತೋತ್ರವನ್ನು ಪ್ರತಿದಿನ ಯಾರು ಓದುತ್ತಾರೋ ಅವರಿಗೆ ಜ್ಞಾನ ಹಾಗೂ ಮುಕ್ತಿಯು ಸಿಗುತ್ತದೆ..
ಸಕಲ ವಿಧವಾದ ಕೋಪ-ತಾಪಗಳು ಬಹಳ ಬೇಗ ನಿವಾರಣೆಯಾಗುತ್ತದೆ..

“ಶ್ರೀ ಕಾಲಭೈರವಾಷ್ಟಕ” ವನ್ನು ಓದಿದರೆ ಏನು ಫಲ..?

೧. ಶ್ರೀ ಕಾಲಭೈರವಾಷ್ಟಕವನ್ನು ಶಿವನ ದೇವಾಲಯದಲ್ಲಿ ಓದಿದರೆ ಜ್ಞಾನ ಹಾಗೂ ಮುಕ್ತಿಯು ದೊರೆಯುತ್ತದೆ..

೨. ಪುಣ್ಯಕ್ಷೇತ್ರಗಳಲ್ಲಿ ಅಥವಾ ಪ್ರಾಚೀನ ಶಿವನ ದೇವಾಲಯಗಳಲ್ಲಿ ಓದಿದರೆ ಬಹಳ ಬೇಗ ಮಂತ್ರಸಿದ್ಧಿಯಾಗುತ್ತದೆ..

೩. ಯಾರಿಗೆ ನಾಯಿ ಪದೇ ಪದೇ ಕಚ್ಚುತ್ತದೆಯೋ ಅಂತಹವರು ಓದಿದರೆ ಮುಂದೆ ಎಂದೂ ನಾಯಿ ಕಚ್ಚುವುದಿಲ್ಲ..

೪. ಮಕ್ಕಳಿಗೆ ಬಾಲಗ್ರಹದೋಷ ಮತ್ತು ರಾತ್ರಿಹೊತ್ತು ಮಕ್ಕಳು ಬೆಚ್ಚುಬೀಳುವುದು, ರಾತ್ರಿ ಹೊತ್ತು ನಿದ್ಧೆ ಸರಿಯಾಗಿ ಮಾಡದೇ ಇದ್ದರೆ ಅಂತಹ ಮಕ್ಕಳ ತಂದೆ ಅಥವಾ ತಾಯಿ ಶ್ರೀ ಕಾಲಭೈರವಾಷ್ಟಕವನ್ನು ಓದಿ, ಮಕ್ಕಳಿಗೆ ವಿಭೂತಿ ಪ್ರಸಾದ ಇಟ್ಟರೆ ಬಹಳ ಬೇಗ ವಾಸಿಯಾಗುತ್ತದೆ..!

  ಲೋಕಮಾತೆ ವಾಸವಿ ದೇವಿ

೫. ಯಾರ ಮನೆಯಲ್ಲಿ “ಗ್ರಹದೋಷ” ವಿದ್ದು ಮನೆಯು ಏಳಿಗೆಯಾಗುವುದಿಲ್ಲವೋ, ಅಂತಹ ಮನೆಯಲ್ಲಿ ಪ್ರತಿದಿನ ಓದಿದರೆ ಬಹಳ ಬೇಗ ಗ್ರಹದೋಷ ನಿವಾರಣೆಯಾಗುತ್ತದೆ..

೬. ಬೆಳಗ್ಗೆ ಎದ್ದಾಗ ಯಾರಿಗೆ ತಲೆಸುತ್ತು ಬರುತ್ತದೆಯೋ, ತಲೆ ತುಂಬಾ ತಿರುಗಿದ‌ ಹಾಗೆ ಆಗುತ್ತದೆಯೋ ಅಂತಹವರು ಓದಿದರೆ ಬಹಳ ಬೇಗ ಖಾಯಿಲೆ ವಾಸಿಯಾಗುತ್ತದೆ..

೭. ಯಾರಿಗೆ ತುಂಬಾ ಕೋಪ ಬರುತ್ತದೆಯೋ ಅಂತಹವರು ಓದಿದರೆ ಬಹಳ ಬೇಗ ಕೋಪ ಕಡಿಮೆಯಾಗಿ, ಮನಸ್ಸಿಗೆ ಶಾಂತಿ ದೊರೆಯುತ್ತದೆ.

೮. ಅಧಿಕ ರಕ್ತದೊತ್ತಡ ಇರುವವರು ಓದಿದರೆ ರಕ್ತದೊತ್ತಡ ನಾರ್ಮಲ್ ಆಗುತ್ತದೆ..

೯. ಕುಜದೋಷ, ಮಾಂಗಲ್ಯದೋಷ, ಸರ್ಪದೋಷ, ಕಾಳಸರ್ಪದೋಷ, ಇರುವವರು ಓದಿದರೆ ಸಕಲ ದೋಷಗಳೂ ನಿವಾರಣೆಯಾಗುತ್ತದೆ.. ‌ ‌ ‌ ‌ ‌ ‌ ‌ ‌ ಕಾಲಭೈರವಾಷ್ಟಕಮ್

ದೇವರಾಜಸೇವ್ಯಮಾನಪಾವನಾಙ್ಘ್ರಿಪಙ್ಕಜಂ ವ್ಯಾಲಯಜ್ಞಸೂತ್ರಮಿನ್ದುಶೇಖರಂ ಕೃಪಾಕರಮ್ ನಾರದಾದಿಯೋಗಿವೃನ್ದವನ್ದಿತಂ ದಿಗಂಬರಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ|| ೧|| ‌ ‌ ‌ ‌ ‌ ಭಾನುಕೋಟಿಭಾಸ್ವರಂ ಭವಾಬ್ಧಿತಾರಕಂ ಪರಂ ನೀಲಕಣ್ಠಮೀಪ್ಸಿತಾರ್ಥದಾಯಕಂ ತ್ರಿಲೋಚನಮ್ | ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ ಕಾಶಿಕಾ ಪುರಾಧಿನಾಥ ಕಾಲಭೈರವಂ ಭಜೇ||೨|| ‌ ‌ ‌ ‌ ಶೂಲಟಙ್ಕಪಾಶದಣ್ಡಪಾಣಿಮಾದಿಕಾರಣಂ ಶ್ಯಾಮಕಾಯಮಾದಿದೇವಮಕ್ಷರಂ ನಿರಾಮಯಮ್ | ಭೀಮವಿಕ್ರಮಂ ಪ್ರಭುಂ ವಿಚಿತ್ರತಾಣ್ಡವಪ್ರಿಯಂ ಕಾಶಿಕಾ ಪುರಾಧಿನಾಥ ಕಾಲಭೈರವಂ ಭಜೇ ||೩|| ‌ ‌ ‌ ‌ ‌ ‌ ‌ ‌ ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ ಭಕ್ತವತ್ಸಲಂ ಸ್ಥಿತಂ ಸಮಸ್ತಲೋಕವಿಗ್ರಹಮ್ | ವಿನಿಕ್ವಣನ್ಮನೋಜ್ಞಹೇಮಕಿಙ್ಕಿಣೀಲಸತ್ಕಟಿಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||೪|| ‌ ‌ ‌ ‌ ಧರ್ಮಸೇತುಪಾಲಕಂ ತ್ವಧರ್ಮಮಾರ್ಗನಾಶಕಂ ಕರ್ಮಪಾಶಮೋಚಕಂ ಸುಶರ್ಮದಾಯಕಂ ವಿಭುಮ್ | ಸ್ವರ್ಣವರ್ಣಶೇಷಪಾಶಶೋಭಿತಾಙ್ಗಮಣ್ಡಲಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || ೫|| ‌ ‌ ‌ ‌ ರತ್ನಪಾದುಕಾಪ್ರಭಾಭಿರಾಮಪಾದಯುಗ್ಮಕಂ ನಿತ್ಯಮದ್ವಿತೀಯಮಿಷ್ಟದೈವತಂ ನಿರಞ್ಜನಮ್ | ಮೃತ್ಯುದರ್ಪನಾಶನಂ ಕರಾಳದಂಷ್ಟ್ರಮೋಕ್ಷಣಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||೬|| ‌ ‌ ‌ ‌ ‌ ‌ ‌ ‌ ‌ ಅಟ್ಟಹಾಸಭಿನ್ನಪದ್ಮಜಾಣ್ಡಕೋಶಸನ್ತತಿಂ ದೃಷ್ಟಿಪಾತನಷ್ಟಪಾಪಜಾಲಮುಗ್ರಶಾಸನಮ್ | ಅಷ್ಟಸಿದ್ಧಿದಾಯಕಂ ಕಪಾಲಮಾಲಿಕನ್ಧರಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||೭|| ‌ ‌ ‌ ‌ ‌ ‌ ‌ ‌ ‌ ಭೂತಸಙ್ಘನಾಯಕಂ ವಿಶಾಲಕೀರ್ತಿದಾಯಕಂ ಕಾಶಿವಾಸಲೋಕಪುಣ್ಯಪಾಪಶೋಧಕಂ ವಿಭುಮ್ | ನೀತಿಮಾರ್ಗಕೋವಿದಂ ಪುರಾತನಂ ಜಗತ್ಪತಿಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||೮|| ‌ ‌ ‌ ‌ ಕಾಲಭೈರವಾಷ್ಟಕಂ ಪಠನ್ತಿ ಯೇ ಮನೋಹರಂ ಜ್ಞಾನಮುಕ್ತಿಸಾಧನಂ ವಿಚಿತ್ರಪುಣ್ಯವರ್ಧನಮ್ | ಶೋಕಮೋಹದೈನ್ಯಲೋಭಕೋಪತಾಪನಾಶನಂ ತೇ ಪ್ರಯಾನ್ತಿ ಕಾಲಭೈರವಾಙ್ಘ್ರಿಸನ್ನಿಧಿಂ ಧ್ರುವಮ್ ||೯|| ‌ ‌ ‌ ‌ ಇತಿ ಶ್ರೀಮಚ್ಛಙ್ಕರಾಚಾರ್ಯವಿರಚಿತಂ ಕಾಲಭೈರವಾಷ್ಟಕಂ ಸಂಪೂರ್ಣಮ್ ||

Leave a Reply

Your email address will not be published. Required fields are marked *

Translate »