ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಹೆಂಡತಿಯರ ಗುಲಾಮ

*_ಅಂದಿನ, ಇಂದಿನ , ಮುಂದಿನ ಹಾಗೂ ಎಂದೆಂದಿನ🤘 ಸತ್ಯವಾದ ಪುರಾಣ_*🤘😑

ಒಬ್ಬ ರಾಜ ಇದ್ದ.. ಆತನಿಗೆ ಒಂದು ಸಮಸ್ಸೆಗೆ ಪರಿಹಾರ ಕಂಡುಕೊಳ್ಳುವ ಮನಸ್ಸಾಯಿತು…

“ನಮ್ಮ ರಾಜ್ಯದಲ್ಲಿ ಎಷ್ಟು ಜನ ಗಂಡಂದಿರು *_ಹೆಂಡತಿಯರ ಗುಲಾಮರಿದ್ದಾರೆ.??”_* ಎಂದು ತಿಳಿದುಕೊಳ್ಳುವ ಬಗ್ಗೆ ಒಂದು ಪಂದ್ಯ ಇಟ್ಟ.

ರಾಜ ಸಭಾಂಗಣದ ಒಂದು ಕಡೆ ಸೇಬು ಹಣ್ಣುಗಳನ್ನು ಮತ್ತು ಒಂದು ಕಡೆ ಕುದುರೆಗಳನ್ನು ಕಟ್ಟಿದ…

*_ಯಾರು ಹೆಂಡತಿಯರ ಗುಲಾಮರೋ ಅವರು ಸೇಬು ತೆಗೆದುಕೊಳ್ಳಿ_* ಮತ್ತು, ಯಾರು ನಿಮ್ಮ ಸ್ವತಃ ನಿರ್ದಾರ ತೆಗೆದುಕೊಳ್ಳುವಿರೋ, ಅವರು ತಮಗಿಷ್ಟವಾದ ಕುದುರೆಗಳನ್ನು ತೆಗೆದುಕೊಳ್ಳಿ ಎಂದ..

ಜನಗಳೆಲ್ಲ ಬಂದ್ರು ಎಲ್ಲರೂ *_ಸೇಬು ಹಣ್ಣನ್ನೇ_* ತೆಗೆದುಕೊಂಡು ಹೋದರೆ ಹೊರತು ಒಬ್ಬರಾದರೂ ಕುದುರೆಯ ಹತ್ತಿರ ಯಾರೂ ತಿರುಗಿ ಕೂಡಾ ನೋಡಲೇ ಇಲ್ಲಾ …

ರಾಜಾ ಚಿಂತಾಕ್ರಾಂತನಾದ… *_ಹೆಂಡತಿಯರ ಮಾತು ಕೇಳದೇ ಇರುವವರು ಒಬ್ಬರೂ ಇಲ್ಲವೇ ಈ ನನ್ನ ರಾಜ್ಯದಲ್ಲಿ_* ಎಂದು..

  ಹುಡುಗ ಮತ್ತು ಹುಡುಗಿಯರಲ್ಲಿ ಬೇಧ ಭಾವ ಏಕೆ ? - ಒಂದು ಅದ್ಭುತ ಕಥೆ !

ಅಷ್ಟರಲ್ಲಿ ಒಬ್ಬ ಮಹಾ ಬಲಶಾಲಿ💪💪 ವ್ಯಕ್ತಿ ಬಂದ.. ನೋಡಲು ಆಳೆತ್ತರ ವ್ಯಾಘ್ರ😹 ಲಕ್ಷಣದ ಮುಖದವನು.. ಅವನು ಬಂದವನೇ ಕುದುರೆಯನ್ನು 🐎 ತೆಗೆದುಕೊಳ್ಳಲು ಹೋದ.. ಆಗ ರಾಜ “ಹೇ ಗಂಡುಗಲಿ, ನಿನಗೆ ಯಾವ ಕುದುರೆ ಬೇಕೋ ಆ ಕುದುರೆಯನ್ನು ತೆಗೆದುಕೊಂಡು ಹೋಗು” ಎಂದ .
ಆತ ಕಪ್ಪು ಬಣ್ಣದ ಬಲಿಷ್ಠ ಕುದುರೆಯನ್ನು ತೆಗೆದು ಕೊಂಡು ಹೋದ..

ಮತ್ತೆ ಕಾರ್ಯಕ್ರಮ ಸಂಜೆಯತನಕ ನಡೆಯಿತು, ಆದ್ರೆ ಮತ್ತೊಬ್ಬ ಯಾರೂ ಕುದುರೆಯನ್ನು ತೆಗೆದುಕೊಳ್ಳಲು ಬರಲೇಯಿಲ್ಲ…😢😢 ಸಂಜೆ ಹೊತ್ತಿಗೆ ಇನ್ನೇನು ಪಂದ್ಯ ಮುಕ್ತಾಯವಾಗುವ ಹೊತ್ತಿನಲ್ಲಿ ಅದೇ ಆ ಬಲಿಷ್ಠ, ಬಲಶಾಲಿ ವ್ಯಕ್ತಿ ಕುದುರೆಯನ್ನು ವಾಪಸ್ ತೆಗೆದುಕೊಂಡು ಬಂದ..
ರಾಜ ಕೇಳಿದ, “ಏಕೆ ನಿನಗೆ ಇನ್ನೊಂದು ಕುದುರೆ ಬೇಕಾ ವೀರಾ..?”

ಅದಕ್ಕೆ ಆ ಮಹಾಬಲಶಾಲಿ ವ್ಯಕ್ತಿ ಹೇಳಿದ, “ಇಲ್ಲ ಮಹಾಪ್ರಭು *_ನನ್ನ ಹೆಂಡತಿ ಈ ಕಪ್ಪು ಕುದುರೆ ಬೇಡ ಅಂದ್ಲು_* ಕಪ್ಪು ಬಣ್ಣ ಅಶುಭ ಅಂತೆ, ಅದಕ್ಕೇ *_ಅವಳು ಹೇಳಿದ ಹಾಗೆ_* ನಾನು ಬಿಳಿಯ ಕುದುರೆಯನ್ನು ಒಯ್ಯಲು ಬಂದಿದ್ದೇನೆ..”😊 ಎಂದ.

  ಯಾಂತ್ರಿಕ ಜೀವನ - ಗಂಡ ಹೆಂಡತಿ

ರಾಜನಿಗೆ ಕೋಪ ಬಂತು..
” ಥೂ ರಣಹೇಡಿ, ಹೆಂಡತಿಯ ಗುಲಾಮ., ನಾಚಿಕೆ ಆಗಬೇಕು ನಿನಗೆ, ಈ ನಿನ್ನ ಬಲಿಷ್ಠ, ಬಲಾಢ್ಯವಾದ ದೇಹದಾಡ್ಯಕ್ಕೆ.., ಅಮಿಕ್ಕಂಡ್ ಒಂದ್ ಆಪಲ್ ಆಪಲ್ ತಗೊಂಡ್ ಹೋಗ್ಲಾ ಬಡವ ರಾಸ್ಕಲ್ “😡😡😡 ಎಂದು ಜೋರಾಗಿ ಕಿರುಚಿದ..

ಅಂದಿನ ಸಭೆ ಮುಗಿಯಿತು. ಮದ್ಯರಾತ್ರಿ ಮಹಾಮಂತ್ರಿ ರಾಜನ ಕೋಣೆಯ ಬಾಗಿಲು ತಟ್ಟಿದ, ಮಹಾರಾಜ ಕೇಳಿದ ಏನಾಯ್ತು.?

ಮಹಾಮಂತ್ರಿ- ಮಹಾರಾಜಾ ನಾವು ಕುದುರೆ ಬದಲು ವಜ್ರ ವೈಡೂರ್ಯ ಏನಾದ್ರು ಇಟ್ಟಿದ್ರೆ ಯಾರಾದ್ರೂ ಒಯ್ಯೊಕೆ ಬರ್ತಿದ್ರೋ ಏನೋ ಅಲ್ಲವೇ.?

ಮಹಾರಾಜ- ನಾನೂ ಅದನ್ನೇ ಇಡಬೇಕು ಅಂತ ಮಾಡಿದ್ದೆ, ಆದ್ರೆ *_ಇವ್ಳು ಬ್ಯಾಡ ಅಂದ್ಬಿಟ್ಲು._*

ಮಹಾಮಂತ್ರಿ:- ಹೌದಾ..?? ಹಾಗಾದ್ರೆ ನಿಮಗೂ ಸೇಬು ಕೊಡಬೇಕು ಅನ್ನಿ..😃

ಮಹಾರಾಜ- (ನಗುತ್ತಾ) ಅದೇನೋ ಸರಿ, ನೀವು ಇಷ್ಟೋತ್ತಲ್ಲಿ ಯಾಕ್ ಕೇಳೋಕೆ ಬಂದ್ರಿ ಹಗಲೊತ್ತೆ ಕೇಳಬುದಿತ್ತಲ್ವಾ ?

  ಬದುಕಿಗೊಂದು ಅನುಭವಾಮೃತ

ಮಹಾಮಂತ್ರಿ:- ಈ ಪ್ರಶ್ನೆ ನನಗೆ ಹೊಳೆದಿದ್ದಲ್ಲ., *_ನನ್ ಹೆಂಡ್ತಿ ಹೇಳಿದ್ಳು, ಇವಾಗ್ಲೇ ಹೋಗಿ ಕೇಳ್ಕೊಂಡ್ ಬನ್ರೀ.._* ಅಂತ .

ಮಹಾರಾಜ – ಹಾಗಾದ್ರೆ ನಿಮಗೆ ಒಂದು ಲಾರಿ ಲೋಡ್ ಭರ್ತಿ ಸೇಬುಗಳನ್ನೇ ಕಳಿಸಬೇಕು ಬಿಡಿ…
😁😁😁😁😁

ಕಥೆಯ ನೀತಿ:

ನಮ್ಮದು ಪುರುಷ ಸಮಾಜವೇನೋ ನಿಜ.. ಆದ್ರೆ *_ಹೆಂಡತಿಯರ ಮಾತು ಕೇಳದ ಪುರುಷನಿಲ್ಲ…_*
🙈🙈🙈🙈🙈

*_ಹೆಂಡತಿಯರ ಮಾತನ್ನು ಮೀರುವ ಗಂಡ ಇಡೀ ಪ್ರಪಂಚದಲ್ಲಿಯೇ ಇಲ್ಲಾ…_*
😁😁😝😝😍😍🤩🤩😂😂😇😇😝😝😻😻

*_”ಈಗ ನಿಮಗೂ ಸೇಬುಗಳನ್ನು ಕಳುಹಿಸಲಾ..??”_*
🤔🤔🤔
*_ಅಯ್ಯೋ, ಸ್ವಲ್ಪ ಇರೀಪ್ಪಾ, ಮೊದಲು “ಇವಳನ್ನ” ಒಂದ್ ಮಾತು ಕೇಳಿಬಿಡ್ತೀನಿ..!!_*
🤣🤣🤣🤣🤣🤣

Leave a Reply

Your email address will not be published. Required fields are marked *

Translate »