*ಎಂತಹ ಗ್ಯಾಸ್ಟ್ರಿಕ್ ಸಮಸ್ಯೆ ಇದ್ರು ತಕ್ಷಣದಲ್ಲೇ ನಿವಾರಿಸುವ ಮನೆ ಮದ್ದು ಕರಿಬೇವಿನ ಪುಡಿ.! ಇದನ್ನು ಹೇಗೆ ಬಳಸಬೇಕು ಗೊತ್ತಾ.?*
ಇತ್ತೀಚಿನ ದಿನಗಳಲ್ಲಿ ಈ ಗ್ಯಾಸ್ಟ್ರಿಕ್ ಸಮಸ್ಯೆ ಅನ್ನೋದು ಸಾಮಾನ್ಯವಾಗಿ ಬಿಟ್ಟಿದೆ, ಬಹಳಷ್ಟು ಜನ ಈ ಸಮಸ್ಯೆಯನ್ನು ಪ್ರತಿದಿನ ಅನುಭವಿಸುತ್ತಿರುತ್ತಾರೆ. ಈ ಸಮಸ್ಯೆಯಿಂದ ಹೊಟ್ಟೆಯಲ್ಲಿ ನೋವು ಶುರುವಾಗುತ್ತದೆ ಹಾಗು ಬೇರೆ ಬೇರೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಈ ಸಮಸ್ಯೆಗೆ ಪ್ರತಿದಿನ ಔಷಧಿ ಮಾತ್ರೆಗಳನ್ನು ಸೇವಿಸುವ ಬದಲು ನೈಸರ್ಗಿವಾಗಿ ಸಿಗುವಂತ ಮನೆ ಮದ್ದು ಕರಿಬೇವನ್ನು ಪಡೆದು ಅದರ ಉಪಯೋಗವನ್ನು ಪಡೆದುಕೊಳ್ಳುವುದು ಉತ್ತಮ. ಅಷ್ಟಕ್ಕೂ ಕರಿಬೇವಿನ ಪುಡಿಯನ್ನು ಹೇಗೆ ತಯಾರಿಸೋದು ಅನ್ನೋದನ್ನ ತಿಳಿಸುತ್ತೇವೆ ನೋಡಿ.
ಕರಿಬೇವಿನ ಪುಡಿ ತಯಾರಿಸಲು ಬೇಕಾಗುವ ಪದಾರ್ಥಗಳು: ಒಂದು ಬಟ್ಟಲು ಕರಿಬೇವು, ಮೆಣಸಿನಕಾಳು 10 ರಿಂದ 12 , ಜೀರಿಗೆ ಎರಡು ಚಮಚ. ಹಾಗು ರುಚಿಗೆ ಎಷ್ಟು ಬೇಕೋ ಅಷ್ಟು ಉಪ್ಪು.
ತಯಾರಿಸೋದು ಹೇಗೆ.? ಒಂದು ಬಟ್ಟಲು ಕರಿಬೇವನ್ನು ತಗೆದುಕೊಂಡು ಅದನ್ನು ನೀರಿನಲ್ಲಿ ಚನ್ನಾಗಿ ತೊಳೆದು ಬಿಸಿಲಿನಲ್ಲಿ ಚನ್ನಾಗಿ ಒಣಗಿಸಿ. ಪೂರ್ತಿಪ್ರಮಾಣದಲ್ಲಿ ಒಣಗಿದ ಮೇಲೆ ಮೇಲೆ ತಿಳಿಸಿದ ಜೀರಿಗೆ, ಕಾಳುಮೆಣಸು, ಉಪ್ಪು ಇವುಗಳನ್ನು ಕರಿಬೇವಿನ ಜೊತೆಗೆ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿಮಾಡಿಕೊಳ್ಳಿ.
ಈ ಕರಿಬೇವಿನ ಪುಡಿಯನ್ನು ಊಟದ ಜೊತೆಯಲ್ಲಿ ಸೇವಿಸಬಹುದು ಬಿಸಿ ಬಿಸಿ ಅನ್ನದ ಜೊತೆಗೆ ಸ್ವಲ್ಪ ತುಪ್ಪವನ್ನು ಹಾಕಿ ಕೊಂಡು ಸೇವಿಸಬಹುದು. ಒಟ್ಟಾರೆಯಾಗಿ ಈ ನೈಸರ್ಗಿಕ ಪುಡಿಯನ್ನು ಮನೆಯಲ್ಲಿ ಮಾಡಿ ಉತ್ತಮ ರೋಗ್ಯವನ್ನು ಪಡೆಯುವುದರ ಜೊತೆಗೆ ಪ್ರತಿದಿನ ಕಾಡುವ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರ ಉಳಿಯಬಹುದು. ಇದನ್ನು ಇತರರಿಗೂ ತಿಳಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.