ಸ್ತ್ರೀಯರು ಸುಲಭವಾಗಿ ಮಾಡಬಹುದಾದ ದಾನಗಳು.
- ಮೂವತ್ಮೂರು ಶಂಖ ಚಕ್ರ ಪದ್ಮ ರಂಗೋಲಿ ವ್ರತ.
- ಮೂವತ್ಮೂರು ಸ್ವಸ್ತಿಕ ರಂಗೋಲಿ ಶ್ರೀಕಾರ ರಂಗೋಲಿ ವ್ರತ.
- ಮೂವತ್ಮೂರು ನಮಸ್ಕಾರ ವ್ರತ
- ಮೂವತ್ಮೂರು ಗೆಜ್ಜೆ ಏರಿಸುವ ವ್ರತ
- ಮೂವತ್ಮೂರು ತುಪ್ಪದ ಬತ್ತಿ ಹಚ್ಚುವ ವ್ರತ
- ಮೂವತ್ಮೂರು ಹಾಡು ಹೇಳುತ್ತಾ ಭಜನೆ ಮಾಡುವುದು.
- ಮೂವತ್ಮೂರು ಹೂವು ಏರಿಸುವುದು
- ನಿತ್ಯವೂ ಲಕ್ಷ್ಮೀಶೋಭಾನ ಪಾರಾಯಣ
- ಮೂವತ್ಮೂರು ಬೆಳ್ಳಿಯ ಆಕಳುಗಳ ದಾನ
- ಮೂವತ್ಮೂರು ವಿಷ್ಣುಪಾದ ದಾನ
- ಮೂವತ್ಮೂರು ಅರಿಷಣ ಕುಂಕುಮ ಬಟ್ಟಲು ದಾನ
- ಮೂವತ್ಮೂರು ಮುತ್ತೈದೆಯರಿಗೆ ಉಡಿ ತುಂಬುವ ವ್ರತ.
- ಮೂವತ್ಮೂರು ಮುತ್ತೈದೆಯರಿಗೆ ಬಳೆ ಇಡಿಸುವ ವ್ರತ.
- ಒಂದು ವಟುವಿಗೆ ನಿತ್ಯ ಊಟ ಹಾಕುವ ವ್ರತ.
- ಒಂದು ಮುತ್ತೈದೆಗೆ ನಿತ್ಯ ಹರಳು ಹಾಕಿ ಹೂವು ಮುಡಿಸುವ ವ್ರತ.
- ಒಂದು ಬ್ರಾಹ್ಮಣ ಮುತ್ತೈದೆಗೆ ನಿತ್ಯ ತಾಂಬೂಲ ದಕ್ಷಿಣೆ ವ್ರತ.
- ಒಂದು ಒಣಕೊಬ್ಬರಿ ಗಿಟುಕಿನಲ್ಲಿ ರಂಧ್ರಮಾಡಿ ಅಕ್ಕಿಯನ್ನು ತುಂಬಿ ಕೃಷ್ಣನ ಮೂರ್ತಿಯನ್ನು ಇಟ್ಟು ಮತ್ತೆ ಗಿಟುಕಿನ ರಂದ್ರ ಮುಚ್ಚಿ ತಾಂಬೂಲ ದಕ್ಷಿಣೆ ಸಹಿತ ದಾನ ಮಾಡಬೇಕು. (ಸಂತಾನ ಪ್ರಾಪ್ತಿಗೆ ).
- ಮೂವತ್ಮೂರು ಮುತ್ತೈದೆಯರಿಗೆ ವಸ್ತ್ರ ದಾನ
- ಮೂವತ್ಮೂರು ವಟುಗಳಿಗೆ ಸಂಧ್ಯಾವಂದನೆ ಸಾಮಾಗ್ರಿ ದಾನ.
- ಮೂವತ್ಮೂರು ಮರದ ಬಾಗಿನ ಸಹಿತ ಮೂವತ್ಮೂರು ದಂಪತಿ ಭೋಜನ.
- ಮೂವತ್ಮೂರು ಗಣದ ಸೀರಿಯ ದಾನ.
- ಮೂವತ್ಮೂರು ಜೊತೆ ದೀಪ ದಾನ
ಅಪೂಪದಾನ ವಿಶೇಷವಾದದ್ದು. ಅಂದೆ ಅಕ್ಕಿ ಬೆಲ್ಲ ತುಪ್ಪದಿಂದ ಮಾಡಿದ ಭಕ್ಷ್ಯ ಒಂದು ತಟ್ಟೆಯಲ್ಲಿಟ್ಟು ತಟ್ಟೆ ಸಮೇತ ಆಚಾರವಂತ ಬ್ರಾಹ್ಮಣನಿಗೆ ಅಥವಾ ಆಚಾರವಂತ ಅಳಿಯನಿಗೆ ದಾನ ಮಾಡಬೇಕು.
ಅನಾನಸ್ ಶ್ರೇಷ್ಠ. ಕರ್ಜಿಕಾಯಿ ಬೇಸನ್ ಲಾಡು ಅಥವಾ ನಿಮಗೆ ಏನು ಅನುಕೂಲ ಅದನ್ನು ಮಾಡಿ
ದಾನ ಮಾಡಿ.
ವಿಶೇಷ ವಿಷಯ… ದಯವಿಟ್ಟು ನಿಮ್ಮ ನಿಮ್ಮ ಶಕ್ತ್ಯಾನುಸಾರ ಯಾವುದೇ ದಾನಗಳಗಾಲಿ ಮಾಡಬೇಕು. ಮನೆಯಲ್ಲಿ ಇದ್ದವರ ಗೋಳಾಡಿಸಿ, ಹಣದ ಮುಗ್ಗಟ್ಟಿನಲ್ಲಿ ಸಿಕ್ಕಾಪಟ್ಟೆ ದೇಹವ ದಂಡಿಸಿ, ತೋರಿಕೆಗೆ ಮಾಡಬಾರದು ಅಂತ ಶಾಸ್ತ್ರ ಹೇಳುತ್ತದೆ. ಅನುಕೂಲ ಇದ್ದವರು ಖಂಡಿತ ಮಾಡಬೇಕು.
ಆದರೆ ನೀವು ಏನೇ ದಾನ ಮಾಡಿದರೂ ಭಗವಂತನ ಮೂವತ್ಮೂರು ರೂಪಗಳ ಚಿಂತನೆ ಹಾಗೂ ಒಂದೊಂದು ರೂಪಗಳ ಅನುಸಂಧಾನ ಎಲ್ಲಾ ದಾನಕ್ಕಿಂತಲೂ ಶ್ರೇಷ್ಠ.
ಹೆಣ್ಣುಮಕ್ಕಳು ವಿಶೇಷವಾಗಿ ಮದ್ವನಾಮ, ಶ್ರೀ ಹರಿಕಥಾಮೃತಸಾರ, ಶ್ರೀ ಲಕ್ಷ್ಮಿ ಶೋಭಾನ, ಹಿಂದಿನ ದಾಸರ ದೇವರ ನಾಮಗಳು, ತುಲಸಿ ಹಾಡುಗಳು ನಿತ್ಯವೂ ಹೇಳಿಕೊಂಡರೆ ಖಂಡಿತ ಭಗವಂತ ನಿಮ್ಮನ್ನ ಬಿಟ್ಟು ಹೋಗಲ್ಲ. ಸದಾ ನಿಮ್ಮ ಹೃದಯದಲ್ಲಿ ಇದ್ದು ಒಳ್ಳೆಯ ಸಾಧನೆ ಮಾಡಿಸುತ್ತಾನೆ.
ಪ್ರಯತ್ನ ಮಾಡಿ. ಮಾಡಿಸೋನು ಅವನು. ಆದರೂ ಮಾಡಿಸೋ ಮಹರಾಯ ಅಂತ ಪ್ರಾರ್ಥನೆ ಮಾಡೋಣ.
ಎಸ್ ದಾಸ.