ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ವಿಷ್ಣು ವಿಗ್ರಹ ಲಕ್ಷಣಗಳು ..!

ವಿಷ್ಣು ವಿಗ್ರಹ ಲಕ್ಷಣಗಳು!..!

ವಿಷ್ಣು ವಿಗ್ರಹಗಳು ಸಾಮಾನ್ಯವಾಗಿ ನಾಲ್ಕು ಕೈಗಳನ್ನು ಹೊಂದಿದ್ದು, ಚಕ್ರ, ಶಂಖ, ಬಿಲ್ಲು, ಗದೆಗಳನ್ನು ಆಯುಧಗಳನ್ನಾಗಿ ಹೊಂದಿರುತ್ತವೆ. ವಿಷ್ಣುವಿನ ಇತರ ಆಯುಧಗಳು ಖೇಟಕ, ಕಠಾರಿ, ಪರಶು, ಹಲ, ಇನ್ನು ಕೆಲಬಾರಿ ಚಾವಟಿ, (ಗೋಪಾಲಕೃಷ್ಣನ ಆಯುಧ) ಆಗಬಹುದು. ಕೈಗಳು ಸಾಮಾನ್ಯವಾಗಿ ‘ಅಭಯ, ವರದ, ಕಟ್ಯವಲಂಬಿತ’ – ಮುದ್ರೆಗಳಲ್ಲಿ ಇರುತ್ತವೆ.
ಯೋಗಶಾಸ್ತ್ರವು ಕೈಗಳ ಮುದ್ರೆಗಳಲ್ಲಿ ಇಪ್ಪತ್ತೈದು ರೀತಿಗಳನ್ನು ಗುರುತಿಸುತ್ತದೆ ಎಂಬುದು ಗಮನಾರ್ಹ ಅಂಶವಾಗಿರುತ್ತದೆ.

ಅಭಯಮುದ್ರೆಯೆಂದರೆ ಸ್ವಾಮಿಯ ಬಲಹಸ್ತ ಭಕ್ತನತ್ತ ಮುಖಮಾಡಿ, ಎಲ್ಲ ಬೆರಳುಗಳೂ ಮೇಲೆ ಚಾಚಿರುವಂತಹ ರೂಪ. ಈ ಮುದ್ರೆಯಲ್ಲಿ ದೇವರು ಭಕ್ತನ ಭಯವನ್ನು ದೂರಾಗಿಸಿ ಅವನಿಗೆ ಅಭಯವನ್ನು ನೀಡುತ್ತಾನೆ.

ವರದಹಸ್ತವೆಂದರೆ ಭಕ್ತನತ್ತ ಮುಖಮಾಡಿ ಅಂಗೈಯಲ್ಲಿರುವ ಎಲ್ಲ ಬೆರಳುಗಳೂ ಭೂಮಿಯತ್ತ ಚಾಚಿರುವುದು. ಈ ಮುದ್ರೆಯು ದೇವರು ‘ವರಪ್ರದಾತ’ ಎಂಬುದನ್ನು ಸೂಚಿಸುತ್ತದೆ.

ಮಯ ಶಾಸ್ತ್ರದ ಪ್ರಕಾರ ಹೆಬ್ಬೆರಳ ಅಗ್ರಭಾಗವು ಎದೆಯನ್ನು ತಾಕುತ್ತಿದ್ದರೆ, ಅದು ‘ಅಭಯ’ ಅಥವಾ ‘ರಕ್ಷಣೆಯ’ ಸಂಕೇತ. ಹಸ್ತವು ಸೊಂಟದ ಮೇಲಿದ್ದಲ್ಲಿ, ಅದು ‘ವರದ ಮುದ್ರೆ’.

‘ಕಟ್ಯವಲಂಬಿತ ಹಸ್ತ’ ಮುದ್ರೆಯಲ್ಲಿ ದೇವರು ವಾಮಹಸ್ತವನ್ನು ಸೊಂಟದ ಮೇಲಿಟ್ಟಿರುವಂತಿರುತ್ತದೆ. ಇದರಿಂದಾಗಿ ನಿರಂತರ ಭಕ್ತಿ, ಪ್ರಪತ್ತಿಗಳಿಂದ ಅವನನ್ನು ಆರಾಧಿಸಿದವರಿಗೆ ದೇವರು ರಕ್ಷಣೆ ಹಾಗೂ ಕರುಣೆಯನ್ನು ದಯಪಾಲಿಸುವನು ಎಂದು ತಿಳಿಯುತ್ತದೆ. ಇನ್ನೊಂದು ಅರ್ಥಸೂಚಕದಂತೆ, ದೇವರ ಪಾದಗಳಲ್ಲಿ ನಂಬಿಕೆಯಿದ್ದವರಿಗೆ ಸಂಸಾರಸಾಗರವು ಜಾನುಮಾತ್ರ ಆಳವಾಗಿರುವುದು.

  ಕಾಟೇರಮ್ಮ ದೇವಿಯ ಅವತಾರದ ಹಿನ್ನೆಲೆ

ವಿಷ್ಣುವಿನ ವಿಗ್ರಹಗಳು ಹಲವಾರು ಆಭರಣಗಳನ್ನು ತೊಟ್ಟಿರುವಂತೆ – ಪದ್ಮ ಕಿರೀಟ, ಮಕರ ಕುಂಡಲ, ಕೇಯೂರ, ಕಂಕಣ, ಉದರಬಂಧ, ಕಟಿಬಂಧ, ಜನಿವಾರ, ಮೊದಲಾದವುಗಳನ್ನು ತೊಟ್ಟಿರುವಂತೆ ತೋರಿಸಲಾಗಿದೆ. ಸಾಮಾನ್ಯವಾಗಿ ಎದೆಯ ಮೇಲಿರುವ ವಜ್ರ ಖಚಿತವಾದ ಕೌಸ್ತುಭ ಲಕ್ಷ್ಮಿಗೆ ಬಹುಪ್ರಿಯವಾದದ್ದು. ಶ್ರೀಲಕ್ಷ್ಮಿಯನ್ನು ಕೌಸ್ತುಭ ಹಾಗೂ ಶ್ರೀವತ್ಸಗಳ ಬಳಿಯಲ್ಲಿ ಚಿತ್ರಿಸಲಾಗುವುದು.

ಸಾಮಾನ್ಯವಾಗಿ ಯೋಗಮೂರ್ತಿಗಳನ್ನು ಯೋಗಮುದ್ರೆಯಲ್ಲಿಯೇ ಸ್ಥಾನಕ ಭಂಗಿಯಲ್ಲಿ ಕೆತ್ತಲಾಗುವುದು. ದೇವರಿಗೆ ನಾಲ್ಕು ಕೈಗಳಿದ್ದು, ಮೇಲಿನೆರಡು ಕೈಗಳಲ್ಲಿ ಶಂಖಚಕ್ರಗಳಿವೆ, ಮಿಕ್ಕೆರಡು ಹಸ್ತಗಳು ಅಭಯ, ಕಟ್ಯವಲಂಬಿತ ಮುದ್ರೆಗಳಲ್ಲಿವೆ.

ಯೋಗಾಸನ ಮೂರ್ತಿಯನ್ನು ಘೇರಂಡ ಸಂಹಿತೆಯು ಈ ರೀತಿ ವಿವರಿಸಿದೆ:

  • ಆಸನದ ಮೇಲೆ ಕುಳಿತು ಮೊಣಕಾಲುಗಳನ್ನು ಮೇಲ್ಮುಖ ಮಾಡಿ, ಕೈಗಳನ್ನು ಮೊಣಕಾಲುಗಳ ಮೇಲಿಟ್ಟು, ಅಂಗೈ ಮೇಲ್ಮುಖವಾಗಿರುವಂತೆ ಹಸ್ತಗಳನ್ನಿಟ್ಟು ದೃಷ್ಟಿ ಮೂಗಿನ ತುದಿಯಲ್ಲಿರುವುದು.
  • ಈ ಭಂಗಿಯ ಒಂದು ಅತ್ಯುತ್ತಮ ಉದಾಹರಣೆಯೆಂದರೆ, ಬದರೀನಾರಾಯಣ ಕ್ಷೇತ್ರದಲ್ಲಿನ ಬದರೀನಾರಾಯಣ ದೇವರು. ಯೋಗಮೂರ್ತಿಯ ಶಯನ ಭಂಗಿಯಲ್ಲಿ ಎರಡೇ ಕೈಗಳನ್ನು ಹೊಂದಿದ್ದು, ಬಲಗೈಯನ್ನು ತಲೆಯ ಅಡಿಯಲ್ಲಿಡಲಾಗುತ್ತದೆ. ದಕ್ಷಿಣ ಭಾರತದ ಶ್ರೀರಂಗದಲ್ಲಿನ ಶ್ರೀರಂಗನಾಥ ಸ್ವಾಮಿ ಈ ರೀತಿಯ ಮಾದರಿಯಾಗಿದೆ. ಸ್ಥಾನಕ ಭಂಗಿಯ ವಿಷ್ಣುವಿನ ವಿಗ್ರಹಕ್ಕೂ ನಾಲ್ಕು ಕೈಗಳಿದ್ದು ಮೇಲಿನ ಕೈಗಳಲ್ಲಿ ಶಂಖಚಕ್ರಗಳಿರುತ್ತವೆ. ಕೆಳಗಡೆಯಲ್ಲಿ ಅಭಯ ವರದ ಅಥವಾ ಕಟ್ಯವಲಂಬಿತ ಹಸ್ತಗಳಿರುತ್ತವೆ. ಆಸನ ಭಂಗಿಯಲ್ಲಿನ ಭೋಗಮೂರ್ತಿಯು ಸುಖಾಸನದಲ್ಲಿ ಕುಳಿತಿರುವಂತೆಯೂ ಬಲಗಾಲು ಇಳಿಬಿಟ್ಟಂತೆ ಹಾಗೂ ಎಡಗಾಲು ಬಲತೊಡೆಯನ್ನು ತಗಲುವಂತೆ ಮಡುಚಿರುವ ಹಾಗೆ ಚಿತ್ರಿತವಾಗಿರುತ್ತದೆ. ಮಲಗಿರುವ ಭೋಗಮೂರ್ತಿಗೆ ಎರಡು ಅಥವಾ ನಾಲ್ಕು ಕೈಗಳಿದ್ದು ದೃಢವಾದ ಬಲವಾದ ದೇಹವಿರುವುದು. ಈ ವಿಧದಲ್ಲಿ ಲಕ್ಷ್ಮಿಯನ್ನು ಸ್ವಾಮಿಯ ತೋಳಿನ ಬಳಿ ಕುಳಿತಿರುವಂತೆಯೂ ಬ್ರಹ್ಮನನ್ನು ಮುಖ್ಯಮೂರ್ತಿಯ ನಾಭಿಯ ಬಳಿಯಲ್ಲೂ, ಭೂದೇವಿಯು ಸ್ವಾಮಿಯ ಪಾದಗಳ ಬಳಿಯೂ ಇರುವಂತೆ ತೋರಿಸಲಾಗುವುದು. ಸ್ಥಾನಕ ಭಂಗಿಯ ವೀರ ಮೂರ್ತಿಯೂ ಸ್ಥಾನಕ ಯೋಗಮೂರ್ತಿಯಂತೆಯೇ ಇದ್ದರೂ, ಇಲ್ಲಿ ಒಬ್ಬನೇ ನಿಂತಿರುವಂತೆಯೋ ಅಥವಾ ಸೂರ್ಯ, ಚಂದ್ರ, ಬ್ರಹ್ಮ ಶಿವರಿಂದ ಆವೃತನಾಗಿರುವಂತೆಯೋ ಚಿತ್ರಿತವಾಗಿರುವನು. ಆಸನ ಭಂಗಿಯ ವೀರಮೂರ್ತಿಯು ಸಿಂಹಾಸನದಲ್ಲಿ ಕುಳಿತಂತೆ, ಎಡಗಾಲು ಮಡಚಿದಂತೆಯೂ ಬಲಗಾಲು ಮುಂದೆ ಚಾಚಿದಂತೆ ಇರುವುದು. ಮಲಗಿದ ವೀರಮೂರ್ತಿಗೆ ನಾಲ್ಕು ಕೈಗಳಿದ್ದು, ಒಂದು ತಲೆದಿಂಬಾಗಿ ಬಳಸಿ, ಇನ್ನೊಂದು ಕೈಯಲ್ಲಿ ಚಕ್ರ ಹಿಡಿದಂತೆಯೂ ಮತ್ತೊಂದು ಮೊದಲ ಎಡಗೈ ನೀಳವಾಗಿ ದೇಹಕ್ಕೆ ಹೊಂದಿಕೊಂಡಂತೆಯೂ, ಎರಡನೆಯ ಎಡಗೈಯಲ್ಲಿ ಶಂಖ ಹಿಡಿದಂತೆಯೂ ಇರುವುದು.
    ಅಭಿಚಾರಕ ನಮೂನೆಯ ಮೂರ್ತಿ ಸಾಮಾನ್ಯವಾಗಿ ಕಪ್ಪುಬಣ್ಣದಿಂದ ಕೂಡಿದ್ದು ಕ್ರೋಧವನ್ನು ಪ್ರದರ್ಶಿಸುತ್ತದೆ. ಸ್ಥಾನಕ ಮೂರ್ತಿ ಎರಡು ಅಥವಾ ನಾಲ್ಕು ಕೈಗಳನ್ನು ಹೊಂದಿ ಅಲಂಕಾರ ರಹಿತ ಪೀಠದ ಮೇಲಿರುವುದು.
  ದೇಹದ ಆರೋಗ್ಯ ಇಂದ್ರಿಯ ದೇವತೆ

ಶಯನಮೂರ್ತಿಯು ಎರಡು ಅಥವಾ ನಾಲ್ಕು ಕೈಗಳೊಡನೆ ಮಲಗಿರುವಂತಿರುವುದು. ಈ ವಿಧದ ಮೂರ್ತಿಗಳಿಗೆ ದೇವನಾಯಕಿಯರು ಸಂಗಡವಿರುವುದಿಲ್ಲ. ಆದರೆ ಋಷಿಮುನಿಗಳನ್ನೂ, ಮಧುಕೈಟಭ ರಾಕ್ಷಸರನ್ನೂ ಪರಿವಾರವಾಗಿ ಕಾಣಿಸಲಾಗುವುದು.

ಹೀಗಾಗಿ ಸ್ಥಾನಕ ಆಸನ ಶಯನ ಭಂಗಿಗಳಲ್ಲಿನ ಯೋಗ, ಭೋಗ, ವೀರ, ಅಭಿಚಾರಕ ಮೂರ್ತಿಗಳಿದ್ದು, ಇವುಗಳಿಗಾಗಿ ಉತ್ತಮ, ಮಧ್ಯಮ, ಅಧಮ ವಿಧದ ದೇವಾಲಯಗಳುಂಟಾಗಿ ಒಟ್ಟು ಮೂವತ್ತಾರು ರೀತಿಯ ಆಲಯಗಳನ್ನು ಆಗಮಗಳಲ್ಲಿ ಕಾಣುತ್ತೇವೆ. ವಿಷ್ಣು ವಿಗ್ರಹ ಈ ಮೂವತ್ತಾರರಲ್ಲಿ ಯಾವುದಾದರೂ ಒಂದು ರೀತಿಯದಾಗಿರಬೇಕು.

ತಿರುಮಲೆಯ ಆಲಯದಲ್ಲಿನ ಶ್ರೀ ವೆಂಕಟೇಶ್ವರಸ್ವಾಮಿ ನಿಂತ ಭಂಗಿಯಲ್ಲಿದ್ದು ಸ್ಥಾನಕ ಮೂರ್ತಿಯ ವಿಧವಾಗಿರುತ್ತದೆ. 🙏

  Surya Grahana ಸೂರ್ಯ ಗ್ರಹಣ 25.10.22  ಮಂಗಳವಾರ

ಶುಭಮಸ್ತು..

Leave a Reply

Your email address will not be published. Required fields are marked *

Translate »