ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದತ್ತ ಜಯಂತಿ ಪೂಜೆ ವಿಧಾನ, ಮಹತ್ವ ಮತ್ತು ಮಂತ್ರ

ದತ್ತ ಜಯಂತಿ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ಮತ್ತು ಮಂತ್ರ..!

ದತ್ತಾತ್ರೇಯ ಜಯಂತಿಯನ್ನು ಅತ್ಯಂತ ಮಹತ್ವದ ದಿನವೆಂದು ಪರಿಗಣಿಸಲಾಗಿದೆ. ಈ ದಿನವನ್ನು ಮಾರ್ಗಶೀರ್ಷ ಅಥವಾ ಮಾರ್ಗಶಿರ ಮಾಸದ ಪೂರ್ಣಿಮಾ ತಿಥಿಯಂದು ಆಚರಿಸಲಾಗುತ್ತದೆ. ಈ ಶುಭ ದಿನದಂದು ಭಗವಾನ್ ದತ್ತಾತ್ರೇಯರು ಜನಿಸಿದರು ಎನ್ನುವ ನಂಬಿಕೆಯಿದೆ. ಆದ್ದರಿಂದ ಈ ದಿನವನ್ನು ದತ್ತ ಜಯಂತಿ ಎಂದು ಕರೆಯುತ್ತಾರೆ.


​ದತ್ತಾತ್ರೇಯ ಜಯಂತಿ ಮಹತ್ವ:

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಭಗವಾನ್ ದತ್ತಾತ್ರೇಯ ಮೂರು ಪ್ರಮುಖ ಹಿಂದೂ ಪುರುಷ ದೇವರುಗಳ ಸಮ್ಮಿಲನವನ್ನು ಸಂಕೇತಿಸುತ್ತಾರೆ. ಅವುಗಳೆಂದರೆ, ಬ್ರಹ್ಮ (ಸೃಷ್ಟಿಕರ್ತ), ವಿಷ್ಣು (ಪೋಷಕ) ಮತ್ತು ಮಹೇಶ್ವರ (ಭಗವಾನ್ ಶಿವ, ವಿನಾಶಕ). ಕೆಲವು ಸ್ಥಳಗಳಲ್ಲಿ ಭಗವಾನ್ ದತ್ತಾತ್ರೇಯನನ್ನು ವಿಷ್ಣುವಿನ ಅವತಾರವೆಂದೂ ಪರಿಗಣಿಸಲಾಗಿದೆ.

​ದತ್ತಾತ್ರೇಯ ಜಯಂತಿ ಆಚರಣೆ:

ದಕ್ಷಿಣ ಭಾರತದಲ್ಲಿ ದತ್ತಾತ್ರೇಯರಿಗೆ ಅರ್ಪಿತವಾದ ಅನೇಕ ದೇವಾಲಯಗಳಿವೆ. ಮಹಾರಾಷ್ಟ್ರದಲ್ಲಿ ಅವರನ್ನು ಮುಖ್ಯ ದೇವತೆ ಎಂದು ಪರಿಗಣಿಸಲಾಗುತ್ತದೆ. ಭಗವಾನ್ ದತ್ತಾತ್ರೇಯರಿಗೆ ಮೂರು ತಲೆಗಳು ಮತ್ತು ಆರು ತೋಳುಗಳಿವೆ. ದತ್ತಾತ್ರೇಯ ಜಯಂತಿಯ ದಿನದಂದು ಅವರ ಮಗುವಿನ ರೂಪವನ್ನು ಪೂಜಿಸಲಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ನೆಲೆಗೊಂಡಿರುವ ಭಗವಾನ್ ದತ್ತಾತ್ರೇಯ ದೇವಾಲಯಗಳಲ್ಲಿ ಈ ದಿನವನ್ನು ಬಹಳ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ನಿರ್ದಿಷ್ಟ ದಿನದಂದು ಉಪವಾಸವನ್ನು ಆಚರಿಸುವ ಮತ್ತು ದತ್ತಾತ್ರೇಯನನ್ನು ಸಂಪೂರ್ಣ ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಪೂಜಿಸುವವರಿಗೆ ದತ್ತಾತ್ರೇಯರು ಸಂತೋಷ, ಆಸ್ತಿ ಮತ್ತು ಬಯಸಿದ ಇಷ್ಟಾರ್ಥಗಳನ್ನು ಪೂರೈಸುತ್ತಾರೆ ಎಂದು ನಂಬಲಾಗಿದೆ.

  ಚಾಂದ್ರಮಾನ ಯುಗಾದಿ ಹಬ್ಬ ಇತಿಹಾಸ ಮತ್ತು ಆಚರಣೆ ಮತ್ತು ವೈಜ್ಞಾನಿಕ ವಿಶ್ಲೇಷಣೆ

ದತ್ತಾತ್ರೇಯ ಜಯಂತಿ ಕಥೆ:
ಹಿಂದೂ ಪುರಾಣಗಳ ಪ್ರಕಾರ, ದತ್ತಾತ್ರೇಯನು ಅತ್ರಿ ಮತ್ತು ಅನಸೂಯ ಋಷಿ ದಂಪತಿಗಳ ಮಗ. ಸತಿ ಅನಸೂಯಾ ಬಹಳ ಸದ್ಗುಣಿಯಾಗಿದ್ದಳು. ಒಮ್ಮೆ ಪುರುಷ ತ್ರಿಮೂರ್ತಿಗಳ ಪತ್ನಿಯರು, ತ್ರಿಮೂರ್ತಿ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿ ದೇವಿಯು ಅನುಸೂಯಳ ಪತಿನಿಷ್ಠೆಯ ಬಗ್ಗೆ ಅಸೂಯೆಪಟ್ಟರು ಮತ್ತು ಅವಳ ಸದ್ಗುಣವನ್ನು ಪರೀಕ್ಷಿಸಲು ತಮ್ಮ ಗಂಡಂದಿರನ್ನು ಕೇಳಿದರು.

ಅದರಂತೆ, ಮೂರು ದೇವರುಗಳು ಸಾಧುಗಳ (ತಪಸ್ವಿಗಳು) ರೂಪದಲ್ಲಿ ಕಾಣಿಸಿಕೊಂಡರು ಮತ್ತು ಅವಳ ಪುಣ್ಯವನ್ನು ಪರೀಕ್ಷಿಸಲು ಭಿಕ್ಷೆಯನ್ನು ಕೇಳಿದರು. ಭಿಕ್ಷೆಯಲ್ಲಿ ಅವರು ಬಟ್ಟೆಯಿಲ್ಲದೆ ಬೆತ್ತಲೆ ಸ್ಥಿತಿಯಲ್ಲಿ ಆಹಾರವನ್ನು ನೀಡಿದರೆ ಮಾತ್ರ ಭಿಕ್ಷೆಯನ್ನು ಸ್ವೀಕರಿಸುವುದಾಗಿ ಷರತ್ತನ್ನು ಹಾಕಿದರು. ತಾಯಿ ಅನಸೂಯಾ ಸಾಧ್ವಿಗಳ ಈ ಮಾತುಗಳನ್ನು ಕೇಳಿ ಆತಂಕಗೊಂಡಳು ಮತ್ತು ಉದ್ವಿಗ್ನಳಾದಳು. ಆಗ ಅನಸೂಯಳು ತನ್ನ ಕೈಯಲ್ಲಿ ಪವಿತ್ರ ನೀರನ್ನು ತೆಗೆದುಕೊಂಡು ಆ ಮೂವರು ಸಾಧುಗಳ ಮೇಲೆ ಪ್ರೋಕ್ಷಿಸಿದಳು. ನಂತರ ಆ ಮೂವರು ಸಾಧ್ವಿಗಳು ಶಿಶುಗಳಾಗಿ ಪರಿವರ್ತನೆ ಮಾಡಿ ಶಿಶುಗಳಿಗೆ ನಗ್ನಳಾಗೇ ಹಾಲುಣಿಸುತ್ತಾಳೆ.

  ಯುಗಾದಿ ಹಬ್ಬದ ಪೂಜಾ , ಪಂಚಾಂಗ ಶ್ರವಣ ಹಾಗೂ ಸಂಪ್ರದಾಯ ವಿಧಿ ವಿಧಾನ

ಸತಿ ಅನಸೂಯಾಳ ಪತಿ ಅತ್ರಿ ಮಹರ್ಷಿಯು ತನ್ನ ಆಶ್ರಮಕ್ಕೆ ಹಿಂತಿರುಗಿದಾಗ, ತಾಯಿ ಅನಸೂಯಾ ಅವನಿಗೆ ನಡೆದ ವಿಚಾರವನ್ನೆಲ್ಲಾ ಹೇಳಿದಳು, ಅವನು ಈಗಾಗಲೇ ತನ್ನ ಅತೀಂದ್ರಿಯ ಶಕ್ತಿಗಳ ಮೂಲಕ ನಡೆದ ಘಟನೆಗಳನ್ನೆಲ್ಲಾ ತಿಳಿದುಕೊಂಡನು. ಅವರು ಮೂರು ಶಿಶುಗಳನ್ನು ತಬ್ಬಿಕೊಂಡರು. ಸಮಯ ಮೀರಿದರೂ ತ್ರಿಮೂರ್ತಿ ದೇವರುಗಳು ಹಿಂತಿರುಗದ ಕಾರಣ ಅವರ ಹೆಂಡತಿಯರು ಆತಂಕಕ್ಕೊಳಗಾದರು ಮತ್ತು ಅವರು ಅನಸೂಯೆಯ ಬಳಿಗೆ ಹೋದರು. ಮೂರು ದೇವತೆಗಳು ಅವಳ ಕ್ಷಮೆಗಾಗಿ ಬೇಡಿಕೊಂಡರು ಮತ್ತು ತಮ್ಮ ಗಂಡಂದಿರನ್ನು ಮರಳಿ ಕಳುಹಿಸುವಂತೆ ಮನವಿ ಮಾಡಿದರು. ಅನಸೂಯಾ ಮನವಿಯನ್ನು ಸ್ವೀಕರಿಸಿ ನಂತರ ತ್ರಿಮೂರ್ತಿಗಳು ಅತ್ರಿ ಮತ್ತು ಅನಸೂಯರ ಮುಂದೆ ತಮ್ಮ ನೈಸರ್ಗಿಕ ರೂಪದಲ್ಲಿ ಕಾಣಿಸಿಕೊಂಡರು ಮತ್ತು ಅವರಿಗೆ ದತ್ತಾತ್ರೇಯ ಎಂಬ ಮಗನನ್ನು ವರವಾಗಿ ನೀಡಿದರು.

ದತ್ತಾತ್ರೇಯ ಮಂತ್ರ:
ಆದೌ ಬ್ರಹ್ಮ ಮಧ್ಯ ವಿಷ್ಣುರಂತೇ ದೇವಃ ಸದಾಶಿವಃ |

  ಗೃಹಿಣಿಯ ದಿನೋತ್ಸವ.Happy Housewife Day

ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋಸ್ತುತೇ ||

ಬ್ರಹ್ಮಜ್ಞಾನಮಯೀ ಮುದ್ರ ವಸ್ತ್ರೇ ಚಾಕಾಶಭೂತಲೇ |

ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋಸ್ತುತೇ||

ದತ್ತಾತ್ರೇಯ ಜಯಂತಿ ಪೂಜೆ ವಿಧಾನ:

  • ಈ ದಿನ ಭಕ್ತರು ಮುಂಜಾನೆಯೇ ಎದ್ದು ಪವಿತ್ರ ನದಿಗಳಲ್ಲಿ ಸ್ನಾನ ಮಾಡಬೇಕು.
  • ದೇವಸ್ಥಾನಕ್ಕೆ ಭೇಟಿ ನೀಡಬೇಕು ಮತ್ತು ವಿಶೇಷ ಭಗವಾನ್ ದತ್ತಾತ್ರೇಯ ಪೂಜೆಯನ್ನು ಧೂಪದ್ರವ್ಯ, ದೀಪಗಳು, ಹೂವುಗಳು, ಕರ್ಪೂರ ಮತ್ತು ಸಿಹಿತಿಂಡಿಗಳೊಂದಿಗೆ ಮಾಡಬೇಕು.
  • ಪೂರ್ಣಿಮಾದ ಈ ಮಂಗಳಕರ ದಿನದಂದು ಜನರು ಭಗವಾನ್ ವಿಷ್ಣುವನ್ನು ಪೂಜಿಸಬೇಕು.
  • ಧರ್ಮಮಾರ್ಗವನ್ನು ಪಡೆಯಲು ದತ್ತಾತ್ರೇಯ ದೇವರ ವಿಗ್ರಹಗಳನ್ನು ಮನೆಗಳಲ್ಲಿ ಮತ್ತು ದೇವಾಲಯಗಳಲ್ಲಿ ಪೂಜಿಸಬೇಕು.
  • ದೇವಾಲಯಗಳನ್ನು ಅಲಂಕಾರಗೊಳಿಸಿ, ಎಲ್ಲಾ ದೇವಾಲಯಗಳಲ್ಲಿ ಭಜನೆ – ಕೀರ್ತನೆಗಳನ್ನು ಆಯೋಜಿಸಲಾಗುತ್ತದೆ.
  • ಕೆಲವು ಸ್ಥಳಗಳಲ್ಲಿ, ಜನರು ಅವಧೂತ ಗೀತೆ ಮತ್ತು ಜೀವನ್ಮುಕ್ತ ಗೀತೆಗಳನ್ನು ಪಠಿಸುತ್ತಾರೆ.

Leave a Reply

Your email address will not be published. Required fields are marked *

Translate »