ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಮಹಾತ್ಮೆ ಹಾಗು ಪುರಾಣ

ಕಟೀಲು ಶ್ರೀ ದುರ್ಗಾಪರಮೇಶ್ವರಿ

ಕಟೀಲು ಕ್ಷೇತ್ರವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಧಾರ್ಮಿಕ ಶಕ್ತಿ ಆರಾಧನಾ ಕ್ಷೇತ್ರಗಳಲ್ಲಿ ಒಂದಾಗಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಮಂದಿರವು ನಂದಿನಿ ಮತ್ತು ಸುವರ್ಣ ನದಿಗಳ ಮಧ್ಯದಲ್ಲಿದೆ. ಜಾಬಾಲಿ ಮುನಿಯು ತನ್ನ ತಪಸ್ಸಿನ ಪ್ರಭಾವದಿಂದ ನಂದಿನಿಯನ್ನು ಭೂಮಿಗೆ ತರಿಸಿದನು ಎಂಬುದು ಪುರಾಣಗಳಿಂದ ತಿಳಿದು ಬರುವ ಕಥೆ. ಕಟೀಲು ಕ್ಷೇತ್ರವು ತನ್ನ ಅದ್ವಿತೀಯತೆಯನ್ನು ಮತ್ತು ಆಧ್ಯಾತ್ಮಿಕ ಮಹತ್ತ್ವವನ್ನು ಸದಾ ಉಳಿಸಿಕೊಂಡಿದೆ.

ಪುರಾಣ ಕಥೆಯ ಪ್ರಕಾರ ಅರುಣಾಸುರ ಎಂಬ ರಾಕ್ಷಸನು ತಪಸ್ಸು ಮಾಡಿ ತನಗೆ ದೇವತೆಗಳಿಂದಾಗಲಿ, ಮಾನವರಿಂದಾಗಲಿ, ಮರಣ ಬರಬಾರದು ಎಂಬ ವರವನ್ನು ಬ್ರಹ್ಮದೇವನಿಂದ ಪಡೆಯುತ್ತಾನೆ. ಬಳಿಕ ದುಷ್ಟ ಅರುಣಾಸುರನು ದೇವತೆಗಳನ್ನು, ಮಾನವರನ್ನು ಪೀಡಿಸುತ್ತಾ ಮಿತಿ ಮೀರಿ ಮೆರೆಯುತ್ತಾನೆ. ಅವನ ಸಂಹಾರಕ್ಕಾಗಿ ಜಗನ್ಮಾತೆಯು ಭ್ರಮರದ ರೂಪವನ್ನು ಧರಿಸಿ, ಭ್ರಮರಾಂಬಿಕೆ ಎಂಬ ಹೆಸರಿನಿಂದ ಅವತರಿಸಿ, ಅರುಣಾಸುರನ ಸಂಹಾರ ಮಾಡುತ್ತಾಳೆ ಮತ್ತು ನಂದಿನಿಗೆ ಮೊದಲೇ ವಚನವಿತ್ತಂತೆ ಕಟೀಲು ಕ್ಷೇತ್ರದಲ್ಲಿ ನೆಲೆಸುತ್ತಾಳೆ.

ಎರಡು ನದಿಗಳ ಮಧ್ಯ, ದ್ವೀಪದಲ್ಲಿ ಸ್ಥಾಪಿತವಾಗಿರುವ ಶ್ರೀ ದುರ್ಗಾಪರಮೇಶ್ವರಿ ದೇಗುಲವು ನೈಸರ್ಗಿಕವಾಗಿ ಮತ್ತು ಧಾರ್ಮಿಕವಾಗಿ ಪವಿತ್ರ ಕ್ಷೇತ್ರವೆನಿಸಿಕೊಂಡಿದೆ. ಶಕ್ತಿ ದೇವತೆಯಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರನ್ನು ಸ್ಥಳೀಯರು ಮಾತ್ರವಲ್ಲದೆ, ಬೃಹತ್ ಹಿಂದೂ ಧರ್ಮದವರು ಬಹಳ ಶ್ರದ್ಧಾಭಕ್ತಿಗಳಿಂದ ಆರಾಧಿಸುತ್ತಾರೆ.
ಕಟೀಲಿನ ಅಮ್ಮ ಭಕ್ತರಿಗೆ ಆಧ್ಯಾತ್ಮಿಕ ಶಕ್ತಿ, ಧೈರ್ಯ ಮತ್ತು ಸಮೃದ್ಧಿಯನ್ನು ನೀಡುತ್ತಾಳೆ, ಸಲಹುತ್ತಾಳೆ ಮತ್ತು ಉದ್ಧರಿಸುತ್ತಾಳೆ ಎಂಬುದು ಭಕ್ತ ಜನರ ದೃಢವಾದ ನಂಬಿಕೆ.

  ಸಾರಂಗಪಾಣಿ ಶ್ರೀ ಲಕ್ಷ್ಮೀ ದೇವಸ್ಥಾನ

ಶತಮಾನಗಳ ಹಿಂದೆಯೇ ಇಲ್ಲಿನ ಜನರು ಈ ದೇವಸ್ಥಾನವನ್ನು ಅವರ ಜೀವನದ ಕೇಂದ್ರಬಿಂದು ಮಾಡಿಕೊಂಡಿದ್ದರು. ಇದು ಕಟೀಲಿನ ಪರಂಪರೆ ಮತ್ತು ಧಾರ್ಮಿಕ ಆಚರಣೆಗಳನ್ನು ಬಲಗೊಳಿಸಿದೆ. ಪ್ರತಿದಿನವೂ ಇಲ್ಲಿ ನಡೆಸಲ್ಪಡುವ ಹೋಮ, ಹವನ ಮತ್ತು ವಿವಿಧ ಧಾರ್ಮಿಕ ಕಾರ್ಯಗಳು ಅಪಾರ ಶ್ರದ್ಧಾ-ಭಕ್ತಿ, ನಂಬಿಕೆ, ಗೌರವಗಳಿಂದ ಕೂಡಿರುತ್ತವೆ. ವಿವಾಹ ಯೋಗ್ಯರಾದವರಿಗೆ ಕಂಕಣ ಬಲ ವಿಳಂಬವಾದರೆ “ಹೂವಿನ ಪೂಜಾ” ಹರಕೆ ಇಲ್ಲಿನ ವಿಶೇಷ ಸೇವೆಗಳಲ್ಲಿ ಒಂದು.

ಕಟೀಲು ಕ್ಷೇತ್ರವು ಧಾರ್ಮಿಕ ಕೇಂದ್ರ ಮಾತ್ರವಲ್ಲದೆ, ಸಾಂಸ್ಕೃತಿಕ ಕಲೆಗಳಿಗೆ ತುಂಬಾ ಪ್ರೋತ್ಸಾಹವನ್ನು ನೀಡುವಲ್ಲಿ ಹೆಸರುವಾಸಿಯಾಗಿದೆ.
ಶ್ರೀ ದುರ್ಗಾಪರಮೇಶ್ವರಿ ದೇವಾಲಯವು ಯಕ್ಷಗಾನ ಪರಂಪರೆಯನ್ನು ಸಂರಕ್ಷಿಸುವ, ಕಲೆ ಮತ್ತು ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಯಕ್ಷಗಾನದ ಆರು ಮೇಳಗಳಿದ್ದು, ಅವು ದೇವಸ್ಥಾನಕ್ಕೆ ಸಂಬಂಧಿಸಿದ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸುತ್ತವೆ. ಕಟೀಲಿನ ಯಕ್ಷಗಾನ ಮೇಳಗಳು ಜಗತ್ಪ್ರಸಿದ್ಧವಾಗಿವೆ. ದೇವಿಮಹಾತ್ಮೆ, ಸ್ಥಳಪುರಾಣ ಮಹಾತ್ಮೆ ಇತ್ಯಾದಿಯ ಬಯಲಾಟಗಳನ್ನು ಹರಕೆ ಹೊತ್ತು, ವೀಳ್ಯ ಕೊಟ್ಟು ಆಡಿಸುವವರು ಬಹಳಷ್ಟು ಮಂದಿ. ಇಲ್ಲಿಯ ಮೇಳಗಳ ಯಕ್ಷಗಾನ ಬಯಲಾಟಗಳನ್ನು ಆಡಿಸಲು ಮೂರು ವರ್ಷ ಮುಂಚಿತವಾಗಿ, ದಿನ ಕಾದಿರಿಸಬೇಕಾಗುತ್ತದೆ. ಅಷ್ಟು ಬೇಡಿಕೆಯನ್ನು ಪಡೆದುಕೊಂಡಿವೆ ಈ ಯಕ್ಷಗಾನ ಮೇಳಗಳು. ಹಿಮ್ಮೇಳ ಮತ್ತು ಮುಮ್ಮೇಳಗಳು ಒಗ್ಗೂಡಿಕೊಂಡು ನಾಟ್ಯ, ಅಭಿನಯ ಮತ್ತು ಸಂಗೀತವನ್ನು ಒಂದೆಡೆ ಸೇರಿಸುವ ಪ್ರಬಲವಾದ ಕಲಾತ್ಮಕ ಪ್ರದರ್ಶನವಾಗಿದೆ ಯಕ್ಷಗಾನ. ಇದು ಕೇವಲ ಕಲಾ ಪ್ರದರ್ಶನವಲ್ಲ; ಬದಲಾಗಿ ದೇವಾಲಯಕ್ಕೆ ಸಮರ್ಪಿತವಾದ ಒಂದು ಧಾರ್ಮಿಕ ವಿಧಿಯಾಗಿದೆ. ದೇವಿಮಹಾತ್ಮೆ ಕಥೆಯನ್ನು ಕಟೀಲು ಕ್ಷೇತ್ರದಿಂದ ಹೊರಗೆ ಆಡುವುದು ಪದ್ಧತಿ. ಕ್ಷೇತ್ರದ ಒಳಗಡೆ ಆಡುವುದು ನಿಷಿದ್ಧವಾಗಿದೆ. ಇದಕ್ಕೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರಣಗಳಿದ್ದು, ಈ ನಂಬಿಕೆಗಳನ್ನು ಅನಾದಿಕಾಲದಿಂದಲೂ ಪಾಲಿಸುತ್ತಾ ಬಂದಿದ್ದಾರೆ. ದೇವಿಯ ವೈಶಿಷ್ಟ್ಯವನ್ನು ದೇವಾಲಯದ ಆವರಣದ ಒಳಗಡೆ ಕೇವಲ ನಾಟಕೀಯ ರೂಪದಲ್ಲಿ ತೋರಿಸುವುದು ಅಶ್ರದ್ಧೆ ಆಗಬಹುದೆಂಬ ಭಯವಿರಬಹುದು.

  ಪೂಜೆಯಲ್ಲಿ / ಧಾರ್ಮಿಕ ಕಾರ್ಯಗಳಲ್ಲಿ ನಿಷಿದ್ಧ ಕಾರ್ಯಗಳು

ಇಲ್ಲಿ ನವರಾತ್ರಿ ಉತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುವುದು. ನವರಾತ್ರಿಯಲ್ಲಿ ಸಂಪೂರ್ಣ ದೇಗುಲವನ್ನು ದಿವ್ಯ ದೀಪಾಲಂಕಾರಗಳಿಂದ ಆಕರ್ಷಕವಾಗಿ, ಅಲಂಕರಿಸಲಾಗುತ್ತದೆ. ಪ್ರತಿದಿನವೂ ದೇವಿಯನ್ನು ವಿಭಿನ್ನ ವೇಷದಲ್ಲಿ, ವಿವಿಧ ಅಲಂಕಾರಗಳಲ್ಲಿ ಪೂಜಿಸಲಾಗುತ್ತದೆ. ಹೋಮ, ಹವನ, ವಿಶೇಷ ಪೂಜೆಗಳು, ಯಜ್ಞಗಳು ನಡೆಯುತ್ತಿರುತ್ತವೆ. ಇದು ಭಕ್ತರಿಗೆ ಆಧ್ಯಾತ್ಮಿಕ ಶಾಂತಿ ನೀಡುತ್ತದೆ. ಈ ಉತ್ಸವವು ಪರಂಪರೆ, ಶ್ರದ್ಧೆ ಮತ್ತು ಸಂಸ್ಕೃತಿಯ ಸಂಕೇತವಾಗಿದೆ.
ಭ್ರಮರಾಂಬಿಕೆಯ ಸನ್ನಿಧಿಯಲ್ಲಿ ಮಹಾಪೂಜೆ, ರಥೋತ್ಸವ ಅಲ್ಲದೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ತಿರುತ್ತವೆ. ದೇವಿಯ ಉತ್ಸವದಲ್ಲಿ ಪಾಲ್ಗೊಳ್ಳಲು ಸ್ಥಳೀಯರು ಮಾತ್ರಲ್ಲದೆ ದೂರ ದೂರದ ಪ್ರದೇಶಗಳಿಂದಲೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಲಲಿತ ಪಂಚಮಿಯಂದು
ಅಮ್ಮನವರಿಗೆ ಸಮರ್ಪಣೆಯಾದ ಸೀರೆಗಳನ್ನು ಬಂದಿರುವ ಮಹಿಳೆಯರಿಗೆಲ್ಲಾ ಹಂಚಲಾಗುವುದು. ಇಲ್ಲಿ ನಿತ್ಯವೂ ಅನ್ನ ಸಂತರ್ಪಣೆ ಇರುತ್ತದೆ. ಅಲ್ಲದೆ ಸಂಗೀತ, ನೃತ್ಯ ಮುಂತಾದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

  ಕೋಲಾರ ಜಿಲ್ಲೆಯಲ್ಲಿರುವ ಪುರಾತನ ಪುಣ್ಯಕ್ಷೇತ್ರ ವಕ್ಕಲೇರಿಯ ಮಾರ್ಕಂಡೇಶ್ವರಸ್ವಾಮಿ

ಶ್ರೀ ಭ್ರಮರಾಂಬಿಕೆಯನ್ನು ಅಲಂಕರಿಸಲು ಮಲ್ಲಿಗೆ ಹೂವನ್ನು ಬಳಸುವುದು ಒಂದು ಪ್ರಮುಖ ಧಾರ್ಮಿಕ ಆಚರಣೆಯಾಗಿದೆ. ಅಮ್ಮನವರಿಗೆ ಮಲ್ಲಿಗೆ ಹೂವನ್ನು ಅರ್ಪಿಸುವುದು ಪವಿತ್ರ ಮತ್ತು ಶುಭಕಾರ್ಯ ಎಂದು ಭಾವಿಸಲಾಗುತ್ತದೆ. ಹೀಗೆ ಕಟೀಲು ಕ್ಷೇತ್ರವು ತನ್ನ ಯಕ್ಷಗಾನ ಪರಂಪರೆ, ನವರಾತ್ರಿ ಉತ್ಸವ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ತ್ವವನ್ನು ಹೊಂದಿರುವ ಪವಿತ್ರ ಕ್ಷೇತ್ರವಾಗಿದೆ.

               

Leave a Reply

Your email address will not be published. Required fields are marked *

Translate »