ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದೇವಸ್ಥಾನಗಳಲ್ಲಿ ಅನ್ನಪ್ರಸಾದವನ್ನು ಸ್ವೀಕರಿಸುವ ಸರಳ ಕ್ರಮ

🙏🙏🙏🌹

ದೇವಸ್ಥಾನಗಳಲ್ಲಿ ಅನ್ನಪ್ರಸಾದವನ್ನು ಸ್ವೀಕರಿಸುವ ಸರಳ ಕ್ರಮಗಳು.
🙏

‌‌ ಬಹಳಷ್ಟು ಮಂದಿಗೆ ದೇವಸ್ಥಾನಗಳಲ್ಲಿ ಬಡಿಸುವಂತಹ ಅನ್ನಪ್ರಸಾದದ ಮಹತ್ವ ತಿಳಿದಿರುವುದಿಲ್ಲ .
ಅವರು ಕೇವಲ ಹಸಿವಿಗೋಸ್ಕರ ಅಲ್ಲಿ ಅನ್ನಬಡಿಸಲಾಗುತ್ತದೆ ಅಂತ ಭಾವಿಸಿರುತ್ತಾರೆ..

ದೇವಸ್ಥಾನಗಳಲ್ಲಿ ಮಾಡುವ ಊಟ ಅದು ಕೇವಲ ಊಟವಲ್ಲ ನಮ್ಮ ಶರೀರವನ್ನು ಶುದ್ಧೀಕರಿಸುವಂತಹ ಅಲ್ಲಿನ ದೈವೀ ಶಕ್ತಿಯ ಮಾತೃ ಸ್ವರೂಪ..

ತಾಯಿ ಹೇಗೆ ತನ್ನ ಮಕ್ಕಳನ್ನು ಹಸಿವಿನಲ್ಲಿ ಇರಲು ಬಿಡುವುದಿಲ್ಲವೋ ಹಾಗೆಯೇ ನಮ್ಮ ದೇವರುಗಳು ಕೂಡ ತಮ್ಮ ಸಾನಿಧ್ಯಕ್ಕೆ ಬಂದವರು ಹಸಿವಿನಿಂದ ಮರಳುವುದನ್ನು ಇಚ್ಚಿಸುವುದಿಲ್ಲ..

ಅದೇ ಕಾರಣಕ್ಕೆ ಯಾವುದೇ ದೇವಸ್ಥಾನಗಳ ಬ್ರಹ್ಮ ಕಳಶವಾಗಲಿ ಅಥವಾ ಅಲ್ಲಿನ ನಿತ್ಯ ಅಥವಾ ವಾರಕ್ಕೆ ಒಂದು ಅಥವಾ ಎರಡು ಬಾರಿಯಾದರೂ ಅನ್ನಸಂತರ್ಪಣೆ ಮಾಡುವ ಕಾರ್ಯಕ್ರಮ ಮಾಡಿದಾಗ ಅಲ್ಲಿಗೆ ಅಕ್ಕಿಯಿಂದ ಹಿಡಿದು ದವಸಧಾನ್ಯಗಳ ಸಹಿತ ತರಕಾರಿಗಳು ಸಹಿತ ರಾಶಿ ರಾಶಿ ಬಂದು ಬೀಳುತ್ತದೆ ಇದಕ್ಕೆ ಮುಖ್ಯ ಕಾರಣವೇ ಅದರ ಪವಿತ್ರತೆ ಮತ್ತು ಅಲ್ಲಿನ ಸಾನಿಧ್ಯದ ಆಕರ್ಷಣೆ..

ಊಟ ಮಾಡುವ ಕ್ರಮವನ್ನು ಸರಳವಾಗಿ ನೋಡೋಣ..
ಎಲ್ಲರಿಗೂ ಕೂಡ ಬ್ರಾಹ್ಮಣರಂತೆ ಶಾಸ್ತ್ರ ಬದ್ಧವಾಗಿ ಊಟ ಮಾಡಲು ಗೊತ್ತಿರುವುದಿಲ್ಲ ಮತ್ತು ಸಾಧ್ಯವೂ ಆಗುವುದಿಲ್ಲ..

ಪ್ರತಿಯೊಬ್ಬ ಮನುಷ್ಯನಿಗೂ ಅವರವರದೇ ಆದ ಮೈಂಡ್ ಸೆಟ್ ಅಂತ ಇರುತ್ತದೆ ಅದನ್ನು ಬದಲಿಸುವುದು ಅಷ್ಟು ಸುಲಭ ಅಲ್ಲ..

ಮೊದಲಿಗೆ ಊಟಕ್ಕೆ ಕುಳಿತುಕೊಳ್ಳುವಾಗ ಅದಕ್ಕೊಂದು ಸೂಕ್ತವಾದ ಭಂಗಿ ಅಂತ ಇರುತ್ತದೆ..

ನೆಲದ ಮೇಲೆ ಕುಳಿತುಕೊಳ್ಳುವುದು ಉತ್ತಮ ಹಾಗೂ ಟೇಬಲ್ ಹಾಕಿ ಕುರ್ಚಿಯ ಮೇಲೆ ಕುಳಿತುಕೊಳ್ಳುವುದು ಸುಲಭ ಅನಿಸಿದರೂ ಕೂಡ ಅದಕ್ಕೂ ಕೂಡ ಶಿಸ್ತು ಅಂತ ಇರುತ್ತದೆ..

ಎಲೆಯನ್ನು ಹಾಕುವಾಗ ನೇರ ಎಲೆ ಹಾಕುವುದಕ್ಕಿಂತ ಈ ರೀತಿ ಫೋಟೋದಲ್ಲಿರುವಂತೆ ಅಡ್ಡ ರೀತಿಯ ಎಲೆ ಹಾಕುವುದು ಅತ್ಯುತ್ತಮ..

ಹಾಗೂ ಎಲೆಯ ಯಾವ ಭಾಗ ಯಾವ ಕಡೆಗೆ ಬರಬೇಕು ಅನ್ನೋದು ಮುಖ್ಯವಾಗುತ್ತದೆ ಈ ಕೆಳಗಿನ ಭಾವಚಿತ್ರದಲ್ಲಿ ತೋರಿಸಿದಂತೆ ಎಲೆಯ ತುದಿಯು ನಮ್ಮ ಎಡಭಾಗಕ್ಕೆ ಬರಬೇಕು ಮೊದಲ ಭಾಗವು ನಮ್ಮ ಬಲಭಾಗಕ್ಕೆ ಬರಬೇಕು.

ತುಳುನಾಡಿನಲ್ಲಿ ಅಂದರೆ ಕಾಸರಗೋಡು ದಕ್ಷಿಣ ಕನ್ನಡ ಉಡುಪಿಯ ಜನರು ಈ ಕ್ರಮವನ್ನು ತಪ್ಪುವುದಿಲ್ಲ ಆದರೆ ಇತ್ತೀಚೆಗೆ ನಮ್ಮ ಯುವ ಜನತೆಗೆ ಇದರ ಬಗ್ಗೆ ಮಾಹಿತಿ ಇಲ್ಲ..

ಅದು ಹಾಗೆ ಇರಲಿ ಮುಂದೆ,
ಹಿಂದಿನ ಕಾಲದಲ್ಲಿ ಊಟಕ್ಕೆ ಕುಳಿತವರಿಗೆ ಮೊದಲು ಎಲೆಗೆ ನೀರು ಹಾಕಿದ ನಂತರ ಎಲೆಯನ್ನು ಶುದ್ಧ ಪಡಿಸಿದ ನಂತರ ಹಾಕುವುದು ಉಪ್ಪು..

  ಸಂಕಟ ನಾಶನ ಗಣೇಶ ಸ್ತೋತ್ರಂ

ಉಪ್ಪು ಯಾಕೆ ಹಾಕುವುದು ಅಂದರೆ ಉಪ್ಪಿನ ಋಣ ಅಂತ.. ಉಪ್ಪು ತಿಂದ ಮನೆಗೆ ಎರಡು ಬಗೆಯಬಾರದು ಅನ್ನೋದು ನಮ್ಮ ಸಂಪ್ರದಾಯ..

ಈಗ ಉಪ್ಪಿನ ಬದಲಿಗೆ ಉಪ್ಪಿನಕಾಯಿ ಯಿಂದಲೇ ಬಡಿಸುವುದನ್ನು ಪ್ರಾರಂಭ ಮಾಡುತ್ತಾರೆ..

ಆನಂತರ ಚಟ್ನಿ ಪಲ್ಯ ಇತ್ಯಾದಿಗಳನ್ನು ಬಡಿಸುತ್ತಾ ಕೊನೆಗೆ ಅನ್ನವನ್ನು ಬಡಿಸುತ್ತಾರೆ .
ಅನ್ನವನ್ನು ಬಡಿಸಿದ ಬಳಿಕ ಸಾರು ಬಡಿಸುತ್ತಾರೆ..

ಸಮಸ್ಯೆ ಇರುವುದು ಇಲ್ಲಿ ..
ಕೆಲವೊಂದು ಮಂದಿ ತಮ್ಮ ಎಲೆಗೆ ಚಟ್ನಿ ಬಿದ್ದಾಗಲೇ ತಕ್ಷಣವೇ ಅದನ್ನು ನೆಕ್ಕಿ ಎಲೆಯನ್ನು ಸಾಫ್ ಶುದ್ಧ ಮಾಡಿರುತ್ತಾರೆ..

ಆನಂತರ ಪಲ್ಯ ಹಾಕಲಿಕ್ಕೆ ತಡ ಇಲ್ಲ .
ಬಡಿಸುವವ ಕೈ ಎತ್ತುವ ಮೊದಲೇ ಅದನ್ನು ನುಂಗಿ ಆಗುತ್ತದೆ..!

ಇದೆಲ್ಲವೂ ತಪ್ಪು ಕ್ರಮಗಳು ..
ಕ್ರಮವಾಗಿ ಅನ್ನವನ್ನು ಬಡಿಸಿ ಸಾರು ಬಡಿಸಿದ ಬಳಿಕವಷ್ಟೇ ಅನ್ನ ಸೇವನೆಗೆ ಪ್ರಾರಂಭ ಮಾಡಬೇಕು..

ಅನ್ನವನ್ನು ಮುಟ್ಟುವುದಕ್ಕಿಂತ ಮೊದಲು ಭಗವಂತನನ್ನು ಪ್ರಾರ್ಥಿಸಿ,
ಈ ಅನ್ನವು ನನಗೆ ನನ್ನ ಶರೀರಕ್ಕೆ ಆರೋಗ್ಯವನ್ನು ನೀಡುವಂತಾಗಲಿ .
ನನ್ನ ಒಳಗೆ ಸತ್ವ ಶಕ್ತಿಯನ್ನು ತುಂಬಿಸುವಂತಾಗಲಿ..
ನನ್ನ ಶರೀರದಲ್ಲಿ ಇರುವಂತಹ ವಿಷದ ಅಂಶಗಳನ್ನು ಈ ಅನ್ನಪ್ರಸಾದವು ತೊಡೆದು ಹಾಕುವಂತಾಗಲಿ .
ನಾನು ಹೊರಗಡೆ ತಿಂದಿರುವಂತಹ ಅಶುದ್ಧ ಆಹಾರಗಳು ಇದ್ದರೆ ಅದರಿಂದ ನನ್ನ ಶರೀರಕ್ಕೆ ಕಲ್ಮಶಗಳಿದ್ದರೆ ಅದು ನಿವಾರಣೆಯಾಗಲಿ ..
ಮುಂದಕ್ಕೆ ನಾನು ನನ್ನ ಆರೋಗ್ಯಕ್ಕೆ ಬೇಕಾದ ಉತ್ತಮ ಆಹಾರವನ್ನೇ ಸೇವಿಸುವಂತಾಗಲಿ ..
ಈ ಆಹಾರ ಸೇವನೆಯಿಂದ ನನ್ನೊಳಗೆ ಪರಿಶುದ್ಧ ಭಕ್ತಿ ತುಂಬುವಂತಾಗಲಿ..
ಈ ಪ್ರಕೃತಿಯು ಅಥವಾ ದೇವರು ಕೊಟ್ಟಂತಹ ಈ ಶರೀರವನ್ನು ಆಮರಣಾಂತ ಅಂದರೆ ಸಾಯುವವರೆಗೆ ಕೂಡ ಆರೋಗ್ಯದಿಂದ ಇರುವಂತೆ ಕಾಪಾಡು ತಾಯೇ..
ಅಂತ ಪ್ರಾರ್ಥನೆ ಮಾಡಬೇಕು..

ಬಿಪಿ ಶುಗರ್ ಅಥವಾ ಇತರೆ ಕಾಯಿಲೆಗಳು ಇರುವವರು ತನ್ನೊಳಗೆ ಇರುವಂತಹ ಈ ಕಾಯಿಲೆಗಳನ್ನು ಗುಣಪಡಿಸು ತಾಯಿ ಅನ್ನ ನನಗೆ ಔಷಧಿಯಾಗಲಿ ಅಂತ ಪ್ರಾರ್ಥನೆ ಮಾಡಬೇಕು..

ಆನಂತರ ಅನ್ನಾಹಾರವನ್ನು ಸ್ವೀಕಾರ ಮಾಡಬೇಕು..
ತದ ಬಳಿಕ ಊಟ ಮುಗಿದ ಬಳಿಕ ಇನ್ನೇನು ಏಳಬೇಕು ಅನ್ನುವಷ್ಟರಲ್ಲಿ ಎಲೆಯನ್ನು ಕಿಂಚಿತ್ತಾಗಿ ಇರುವಲ್ಲಿಂದ ಸರಿಸಬೇಕು..
ಮತ್ತು ಭಕ್ತಿಯಿಂದ ಕೃತಜ್ಞತೆಯನ್ನು ಸಲ್ಲಿಸಬೇಕು..

  ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೆ

ಎಲೆಯನ್ನು ಸರಿಸುವುದು ಯಾಕೆಂದರೆ ಪ್ರಕೃತಿಗೆ ನಾವು ಹೇಳುವುದು ..ನನ್ನ ಊಟ ಮುಗಿದಿದೆ ಅಂತ..

ಪ್ರಾರಂಭಿಸುವುದು ಹೇಗೆ ಮುಖ್ಯವೋ ಮುಗಿಸುವುದು ಕೂಡ ಮುಖ್ಯವೇ ಆಗಿರುತ್ತದೆ..

ಬಹುತೇಕ ಮಂದಿ ದೇವಸ್ಥಾನಗಳಿಗೆ ಹೋಗುವಾಗ ದೇವರ ಅನ್ನಪ್ರಸಾದವನ್ನು ನಿರ್ಲಕ್ಷ್ಯ ಮಾಡುತ್ತಾರೆ ..

ಸಮಯ ಇಲ್ಲ ಅಂತಾದರೆ ಅಥವಾ ವಿಪರೀತ ಜನಸಂದಣಿ ಭಕ್ತರ ಸಂಖ್ಯೆ ಇದ್ದರೆ .. ಅಥವಾ ಅಲ್ಲಿ ವ್ಯವಸ್ಥೆಗಳು ಸರಿಯಾಗಿ ಇಲ್ಲದಿದ್ದರೆ .. ಆ ಸಂದರ್ಭಗಳಲ್ಲಿ ಊಟವನ್ನು ಬಿಟ್ಟು ಬೇರೆ ಹೊರಗಡೆ ಊಟ ಮಾಡಬಹುದು..

ನಮ್ಮ ಅಹಂಕಾರಕ್ಕೆ ಕಾರಣವಾಗಿ ಅಥವಾ ನಾನು ದೇವಸ್ಥಾನದ ಊಟ ಮಾಡುವುದಿಲ್ಲ , ಊಟ ಒಳ್ಳೆಯದಿಲ್ಲ ಅನ್ನುವ ಕಾರಣ ಕೊಟ್ಟು ಊಟವನ್ನು ತ್ಯಜಿಸಿ ಹೋಗಬಾರದು..

ಹೊರಗಡೆ ಹೋಟೆಲ್ ನಲ್ಲಿ ರುಚಿಕರವಾದ ಬಗೆಬಗೆಯ ತಿನಸುಗಳನ್ನು ತಿನ್ನಬಹುದು ..ಊಟ ಮಾಡಬಹುದು ಎಂಬ ಅತಿ ಆಸೆಯಿಂದ ಬಾಯಿ ಚಪಲದಿಂದ ದೇವರ ಊಟವನ್ನು ತಿರಸ್ಕರಿಸಬಾರದು

ಮೊದಲೇ ಹೇಳಿದಂತೆ ನಿರಂತರವಾಗಿ ಮತ್ತು ನಿತ್ಯವಾಗಿ ಪದೇಪದೇ ಹೋಗುವವರು ಹೋದಷ್ಟು ಬಾರಿ ಊಟ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ ..
ಹಾಗೆಯೇ ನಮ್ಮ ನಮ್ಮ ಊರಿನ ದೇವಸ್ಥಾನಗಳಲ್ಲಿ ಕೂಡ ಊಟ ಮಾಡಬೇಕು ಯಾವಾಗಲೂ ಊಟ ಮಾಡಬೇಕು ಹೋದಷ್ಟು ಬಾರಿ ಊಟ ಮಾಡಬೇಕು ಅಂತ ಇಲ್ಲ .
ಹೊರಗಿನಿಂದ ಬಂದವರಿಗೆ ಊಟ ಸಿಗುವ ಹಾಗೆ ಮಾಡಿದರೆ ಅದು ಕೂಡ ಪುಣ್ಯದ ಫಲವೇ ಆಗಿರುತ್ತದೆ..

ದೇವಸ್ಥಾನಗಳಲ್ಲಿ ಸೇವಿಸುವ ಅನ್ನಪ್ರಸಾದವು ನಮ್ಮ ಒಳಗಿನ ಅಹಂಕಾರವನ್ನು ದಮನ ಮಾಡುವಂತಿರಬೇಕು..

ಹೊರಗಡೆ ಹೋಗಿ ನಮ್ಮಲ್ಲಿ ದುಡ್ಡಿದೆ ಅಂತ ಅದು ಕೊಡಿ ಇದು ಕೊಡಿ ಅಂತ ಆರ್ಡರ್ ಮಾಡಿ ತರಿಸುತ್ತೇವೆ .

ಆದರೆ ದೇವಸ್ಥಾನಗಳಲ್ಲಿ ಅವರು ಏನು ಬಡಿಸುತ್ತಾರೆ ಅದನ್ನಷ್ಟೇ ತಿನ್ನಬೇಕು .
ಮತ್ತೆ ನಮ್ಮ ಅಕ್ಕ ಪಕ್ಕ ಬಡವರಿರಬಹುದು ಬೇರೆ ಬೇರೆ ಜಾತಿಯವರು ಇರಬಹುದು ಅಥವಾ ಆರೋಗ್ಯ ಸರಿ ಇಲ್ಲದಿದ್ದವರು ಇರಬಹುದು ಸುಂದರರು ಇರಬಹುದು ಚೆನ್ನಾಗಿಲ್ಲದವರು ಇರಬಹುದು .
ಜಗತ್ತಿನ ಎಲ್ಲಾ ನಮೂನೆಯ ಜನರು ಕೂಡ ನಾವು ಊಟ ಮಾಡುವ ಪರಿಸರದಲ್ಲಿ ಇರಬಹುದು .
ಅವರೆಲ್ಲರ ಜೊತೆಗೆ ಕುಳಿತು ಊಟ ಮಾಡಿದಾಗ ನಾವೇನು ಅನ್ನೋದು ನಮಗೆ ಅರ್ಥವಾಗುತ್ತಾ ಹೋಗುತ್ತದೆ..

ಇನ್ನು ಶ್ರೀಮಂತರು ಈ ರೀತಿಯ ಊಟಗಳಲ್ಲಿ ಭಾಗವಹಿಸುವುದಿಲ್ಲ
ಸಾರ್ವಜನಿಕ ಊಟಗಳಲ್ಲಿ ಭಾಗವಹಿಸುವುದಿಲ್ಲ.
ಒಂದೋ ಅವರಿಗೆ ಪ್ರತ್ಯೇಕ ಊಟಗಳನ್ನು ವ್ಯವಸ್ಥೆ ಮಾಡಿರುತ್ತಾರೆ .

  ಸಾವಿನ ನಂತರ ಜೀವ ಎಲ್ಲಿಗೆ ಹೋಗುತ್ತದೆ? ಸ್ವರ್ಗ ನರಕಗಳು ಇರುವುದು ನಿಜವೇ?

ಅದು ಬೇರೆ ಪ್ರಶ್ನೆ .
ಏಕೆಂದರೆ ಅವರಿಗೆ ದೇವರು ಕೊಟ್ಟಿರುತ್ತಾರೆ ..
ಆಗರ್ಭ ಶ್ರೀಮಂತಿಕೆ ಬರಬೇಕಾದರೂ ಕೂಡ ಹಿಂದಿನ ಜನ್ಮದಲ್ಲಿ ದಾನ ಧರ್ಮದಿಂದ ಮಾಡಿ ಪುಣ್ಯ ಸಂಪಾದಿಸಿದಂತವರಾಗಿರಬಕು.
ಆದ ಕಾರಣವೇ ಅವರಿಗೆ ಅಷ್ಟೊಂದು ಶ್ರೀಮಂತಿಕೆ ಬಂದಿರುತ್ತದೆ

ಹಾಗಾಗಿ ಅವರು ಬಂದಿಲ್ಲಿ ಉಳಿತು ಊಟ ಮಾಡಲಿ ಅಂತ ಅಪೇಕ್ಷಿಸಬಾರದು ..

ಬಡವರು ಮಧ್ಯಮ ವರ್ಗದವರು ಇವರಿಗೆಲ್ಲ ಈ ರೀತಿಯ ಅವಶ್ಯಕತೆಗಳು ಬರುವುದು ..
ಪ್ರಕೃತಿಯ ಪರೀಕ್ಷೆಯಲ್ಲಿ ಕುಳಿತುಕೊಳ್ಳಬೇಕಾದದ್ದು ನಾವುಗಳೇ ಹೊರತು ಪರೀಕ್ಷೆ ಪಾಸ್ ಮಾಡಿ ಮುಂದೆ ಹೋದವರು ಮತ್ತೆ ಬಂದು ಪರೀಕ್ಷೆ ಕುಳಿತುಕೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ.

ಈ ಜಗತ್ತಿನಲ್ಲಿ ಸಾಕು ಸಾಕು ಅಂತ ಮನುಷ್ಯ ಹೇಳುವಂತಹ ಒಂದೇ ಒಂದು ಐಟಂ ಇದ್ದರೆ ಅದು ಅನ್ನ ಮಾತ್ರ..

ಉಳಿದ ಧನಕನಕ ವಸ್ತು ವಾಹನಗಳನ್ನು ಆಸ್ತಿ ಕಟ್ಟಡಗಳನ್ನು ಎಷ್ಟು ಕೊಟ್ಟರು ಕೂಡ ಆತ ಸಾಕು ಅನ್ನೋದಿಲ್ಲ ಇನ್ನಷ್ಟು ಬಂದರೆ ಒಳ್ಳೆಯದಿತ್ತು ಅಂತಲೇ ಆತ ಒಳಗಿನಿಂದ ಆಸೆ ಪಡುತ್ತಿರುತ್ತಾನೆ..

ಹಸಿದವರಿಗೆ ಮತ್ತು ಬಡವರಿಗೆ ನಿರಾಶ್ರಿತರಿಗೆ ಆಶ್ರಮಗಳಿಗೆ ಕೊಡುವಂತ ಅನ್ನದಾನ ಅನ್ನದಾನವೇ ಹೊರತು ತಮ್ಮ ಶ್ರೀಮಂತಿಕೆಯನ್ನು ತೋರಿಸಲು ಹೊಟ್ಟೆ ತುಂಬಿದವರನ್ನು ಕರೆಸಿ ಮಾಡುವ ಅನ್ನದಾನ ಅದು ಅನ್ನದಾನ ಆಗುವುದಿಲ್ಲ..‌

ಅಂತಹ ಹಣವನ್ನು ದೇವಸ್ಥಾನಗಳಿಗೆ ಅನ್ನದಾನಕ್ಕೆ ದೇಣಿಗೆಯಾಗಿ ಕೊಡುವುದರಿಂದ ದೇವತಾ ಅನುಗ್ರಹವಾಗುತ್ತದೆ ..
ಯಾಕೆಂದರೆ ದೇವಸ್ಥಾನಗಳಿಗೆ ಜಗತ್ತಿನ ಎಲ್ಲ ರೀತಿಯ ಜನರು ಬಂದು ಅಲ್ಲಿ ಅನ್ನಪ್ರಸಾದವನ್ನು ಸ್ವೀಕರಿಸುತ್ತಾರೆ ..
ಮತ್ತು ಆ ಅನ್ನಪ್ರಸಾದವನ್ನು ದೇವರ ಪ್ರಸಾದ ಅಂತ ಸ್ವೀಕರಿಸುತ್ತಾರೆ .
ಆ ಉಂಡವರ ಸಂತೃಪ್ತಿಯ ಫಲ ಸತ್ಕರ್ಮದ ಫಲವಾಗಿ ದೇಣಿಗೆ ನೀಡಿದವರಿಗೆ ನೇರವಾಗಿ ತಲುಪುತ್ತದೆ..

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಒಂದು ವರ್ಷಕ್ಕೆ ಏಳು ಕೋಟಿ ರೂಪಾಯಿಗಳನ್ನು ಅನ್ನದಾನಕ್ಕೆ ವಿನಯೋಗಿಸಲುತ್ತಿದೆ ಎಂಬ ಲೆಕ್ಕವಿದೆ..
ಅಂದರೆ ಅನ್ನದಾನದ ಮಹತ್ವ ಏನು ಅನ್ನೋದು ಅರಿವಾಗುತ್ತದೆ..
🙏🙏🙏

ಅನ್ನ ಬ್ರಹ್ಮ ನೇ ನಮಃ
🙏🙏🚩🚩🚩🚩

Leave a Reply

Your email address will not be published. Required fields are marked *

Translate »