ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶ್ರೀ ವೆಂಕಟರಮಣ ಸ್ವಾಮಿ ದೇವಾಲಯ, ಚಿಕ್ಕತಿರುಪತಿ, ಮಾಲೂರು

ಚಿಕ್ಕತಿರುಪತಿ…!

ವೆಂಕಟರಮಣಸ್ವಾಮಿ ದೇವಾಲಯ ಮಾಲೂರು ಕೋಲಾರ 4000 ವರ್ಷಗಳ ಇತಿಹಾಸ ವಿರುವ ಪುರಾತನ ದೇವಾಲಯ.

ಪುರಾತನ ಹಾಗು ಪುರಾಣಪ್ರಸಿದ್ದ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯ, ಚಿಕ್ಕತಿರುಪತಿ, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ.

ಕೋಲಾರ ಜಿಲ್ಲೆ ಮಾಲೂರಿಗೆ ಸಮೀಪದಲ್ಲೇ ಇರುವ ಚಿಕ್ಕ ತಿರುಪತಿ ನಾಲ್ಕು ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಇರುವ ಪವಿತ್ರ ಪುಣ್ಯಕ್ಷೇತ್ರ.

ಚಿಕ್ಕತಿರುಪತಿಗೆ ಪೌರಾಣಿಕ ಹಿನ್ನೆಲೆಯೂ ಇದೆ. ಇಲ್ಲಿರುವ ದಿವ್ಯ ವಿಗ್ರಹವನ್ನು ಸ್ವತಃ ಪಂಚಭೂತಗಳಲ್ಲಿ ಒಬ್ಬನಾದ ಅಗ್ನಿದೇವ ಪ್ರತಿಷ್ಠಾಪಿಸಿ, ಪೂಜಿಸಿದ ಎನ್ನುತ್ತದೆ ಸ್ಥಳ ಪುರಾಣ.

2 ಮತ್ತು 3ನೇ ಶತಮಾನದಲ್ಲಿ ಅವಿಭಜಿತ ಕೋಲಾರ ಜಿಲ್ಲೆ ಗಂಗರ ಆಳ್ವಿಕೆ ಒಳಪಟ್ಟಿತ್ತು ಆಗ ಇದು ಕೋಳಾಲನಾಡು ಎಂದು ಹೆಸರಾಗಿತ್ತು ಎಂದು ತಿಳಿದುಬರುತ್ತದೆ. ಈ ನಾಡಿನ ಚಿಕ್ಕ ತಿರುಪತಿಯಲ್ಲಿ ಚೋಳರ ಕಾಲದಲ್ಲಿ ಪ್ರಸನ್ನ ವೆಂಕಟರಮಣ ದೇವಾಲಯ ಜೀರ್ಣೋದ್ಧಾರ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಆದರೆ, ಇಲ್ಲಿನ ಪುರಾತನ ದೇವಾಲಯದ ಇತಿಹಾಸ ಮಹಾಭಾರತ ಕಾಲದ್ದೆಂಬ ಪ್ರತೀತಿ ಇದೆ.

  ಆದಿಪರಾಶಕ್ತಿ - ಸತಿ ಅಥವಾ ದಾಕ್ಷಾಯಿಣಿ

ದ್ವಾಪರಯುಗದಲ್ಲಿ ರಾಜ ಮಹಾರಾಜರು, ಋಷಿ ಮುನಿಗಳು ಮಾಡುತ್ತಿದ್ದ ಯಜ್ಞಯಾಗಾದಿಗಳ ಹವಿರ್ಭಾಗವನ್ನು ದೇವತೆಗಳಿಗೆ ಅರ್ಪಿಸುತ್ತಿದ್ದ ಹವ್ಯವಾಹನನಾದ ಅಗ್ನಿದೇವ ಯಥೇಚ್ಛವಾದ ತುಪ್ಪಸೇವನೆಯಿಂದಾಗಿ ಉದರಬೇನೆ (ಹೊಟ್ಟೆನೋವು)ಗೆ ತುತ್ತಾಗುತ್ತಾನೆ. ಸುರವೈದ್ಯರಾದ ಅಶ್ವಿನಿ ಕುಮಾರರು, ಔಷಧ ಸಸ್ಯಗಳಿಂದ ಸಮೃದ್ಧವಾದ ಖಾಂಡವ ವನವನ್ನು ಕಾಳ್ಗಿಚ್ಚಿನಿಂದ ಸುಟ್ಟರೆ, ಆ ಗಿಡಮೂಲಿಕೆಗಳ ಭಕ್ಷಣೆಯಿಂದ ನಿನ್ನ ಉದರ ಬೇನೆ ನಿವಾರಣೆ ಆಗುತ್ತದೆ ಎಂದು ಅಗ್ನಿದೇವನಿಗೆ ತಿಳಿಸುತ್ತಾನೆ.

ಅಗ್ನಿದೇವ ಖಾಂಡವ ದಹನಕ್ಕಾಗಿ ಮಧ್ಯಮ ಪಾಂಡವ ಅರ್ಜುನನ ಮೊರೆ ಹೋಗುತ್ತಾನೆ. ಖಾಂಡವ ದಹನಕ್ಕೆ ಅಡ್ಡಿ ಆಗದಂತೆ ಆರ್ಜುನ ಹಾಗೂ ಶ್ರೀಕೃಷ್ಣ ಪರಮಾತ್ಮ ಬೆಂಗಾವಲಿಗೆ ನಿಲ್ಲುತ್ತಾರೆ. ಈ ದಹನ ಕಾಲದಲ್ಲಿ ತಕ್ಷಕನೆಂಬ ನಾಗ ಸುಟ್ಟಗಾಯಕ್ಕೆ ತುತ್ತಾಗುತ್ತಾನೆ, ಸಿಟ್ಟಿಗೆದ್ದ ತಕ್ಷಣ ನೀನು ತೇಜೋಹೀನನಾಗು ಎಂದು ಅಗ್ನಿಗೆ ಶಪಿಸುತ್ತಾನೆ.

  ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ

ಶಾಪಗ್ರಸ್ಥನಾದ ಅಗ್ನಿ ತನ್ನ ಸುಡುವ ಶಕ್ತಿಯನ್ನೇ ಕಳೆದುಕೊಳ್ಳುತ್ತಾನೆ. ಇದರಿಂದಾಗಿ ಋಷಿ ಮುನಿಗಳು ಮಾಡುವ ಯಾಗದ ಹವಿರ್ಭಾಗ ದೇವತೆಗಳ ತಲುಪದ ಸ್ಥಿತಿಯೂ ಬಂದೊದಗುತ್ತದೆ. ಇದರಿಂದ ದೇವತೆಗಳು ಹಾಗೂ ಋಷಿ ಮುನಿಗಳು ವ್ಯಾಕುಲಗೊಳ್ಳುತ್ತಾರೆ. ಅಗ್ನಿ ದೇವನಿಗೆ ತಕ್ಷಕ ನೀಡಿರುವ ಶಾಪ ವಿಮೋಚನೆ ಮಾಡಿಕೊಳ್ಳಲು ನಾರಾಯಣನ ಕುರಿತು ತಪಸ್ಸು ಆಚರಿಸುವಂತೆ ತಿಳಿಸುತ್ತಾರೆ.

ಹಿರಿಯ ಮಾರ್ಗದರ್ಶನದಂತೆ ಅಗ್ನಿದೇವ ಒಂದು ಮಂಡಲ ಕಾಲ ನಾರಾಯಣನ ಪೂಜೆ ಮಾಡಿ ತಪಸ್ಸು ಮಾಡುತ್ತಾನೆ. ಆಗ ನಾರಾಯಣ ಪ್ರಸನ್ನ ವೆಂಕಟರಮಣನ ರೂಪದಲ್ಲಿ ದರ್ಶನ ನೀಡಿ ಶಾಪ ವಿಮೋಚನೆ ಮಾಡುತ್ತಾನೆ. ವರದ ನಾರಾಯಣನ (ಪ್ರಸನ್ನ ವೆಂಕಟರಮಣ) ಕೃಪೆಯಿಂದ ಅಗ್ನಿ ಶಾಪವಿಮುಕ್ತನಾಗಿ ಮತ್ತೆ ತನ್ನ ಹಿಂದಿನ ಕಾಂತಿ ಪಡೆಯುತ್ತಾನೆ. ಶ್ರೀಮನ್ನಾರಾಯಣನಿಗೆ ಕೃತಜ್ಞತೆ ಅರ್ಪಿಸುವ ಸಲುವಾಗಿ ಈ ಸ್ಥಳದಲ್ಲಿ ತನಗೆ ವಿಷ್ಣು ದರ್ಶನ ನೀಡಿದ ರೂಪದಲ್ಲೇ ವರದ ನಾರಾಯಣಸ್ವಾಮಿ ವಿಗ್ರಹ ಸ್ಥಾಪಿಸಿ ಪೂಜಿಸಿ, ದೇವಾಲಯ ನಿರ್ಮಿಸಿದನೆಂದು ಹೇಳಲಾಗುತ್ತದೆ.

  ಶಕ್ತಿಶಾಲಿ ಶಿವನ ದೇವಾಲಯಗಳು

ನೀವೂ ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿ🙏🏻🙏🏻

Leave a Reply

Your email address will not be published. Required fields are marked *

Translate »