ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಹಿಂದೂ ಧರ್ಮದ ಅರವತ್ತನಾಲ್ಕು 64 ವಿದ್ಯೆಗಳ ಪಟ್ಟಿ

ಹಿಂದೂ ಧರ್ಮದ ಅರವತ್ತನಾಲ್ಕು ವಿದ್ಯೆಗಳ ಪಟ್ಟಿ..!

೧.ವೇದ
೨.ವೇದಾಂಗ
೩.ಇತಿಹಾಸ
೪.ಆಗಮ
೫.ನ್ಯಾಯ
೬.ಕಾವ್ಯ
೭.ಅಲಂಕಾರ
೮.ನಾಟಕ
೯.ಗಾನ
೧೦.ಕವಿತ್ವ
೧೧.ಕಾಮಶಾಸ್ತ್ರ
೧೨.ದೂತನೈಪುಣ್ಯ
೧೩.ದೇಶಭಾಷಾಜ್ಞಾನ
೧೪.ಲಿಪಿಕರ್ಮ
೧೫.ವಾಚನ
೧೬.ಸಮಸ್ತಾವಧಾನ
೧೭.ಸ್ವರಪರೀಕ್ಷಾ
೧೮.ಶಾಸ್ತ್ರಪರೀಕ್ಷಾ
೧೯.ಶಕುನಪರೀಕ್ಷಾ
೨೦.ಸಾಮುದ್ರಿಕಪರೀಕ್ಷಾ
೨೧.ರತ್ನಪರೀಕ್ಷಾ
೨೨.ಸ್ವರ್ಣಪರೀಕ್ಷಾ
೨೩.ಗಜಲಕ್ಷಣ
೨೪.ಅಶ್ವಲಕ್ಷಣ
೨೫.ಮಲ್ಲವಿದ್ಯಾ
೨೬.ಪಾಕಕರ್ಮ
೨೭.ದೋಹಳ
೨೮.ಗಂಧವಾದ
೨೯.ಧಾತುವಾದ
೩೦.ಖನಿವಾದ
೩೧.ರಸವಾದ
೩೨.ಅಗ್ನಿಸ್ತಂಭ
೩೩.ಜಲಸ್ತಂಭ
೩೪.ವಾಯುಸ್ತಂಭ
೩೫.ಖಡ್ಗಸ್ತಂಭ
೩೬.ವಶ್ಯಾ
೩೭.ಆಕರ್ಷಣ
೩೮.ಮೋಹನ
೩೯.ವಿದ್ವೇಷಣ
೪೦.ಉಚ್ಛಾಟನ
೪೧.ಮಾರಣ
೪೨.ಕಾಲವಂಚನ
೪೩.ವಾಣಿಜ್ಯ
೪೪.ಪಶುಪಾಲನ
೪೫.ಕೃಷಿ
೪೬.ಸಮಶರ್ಮ
೪೭.ಲಾವುಕಯುದ್ಧ
೪೮.ಮೃಗಯಾ
೪೯.ಪುತಿಕೌಶಲ
೫೦.ದೃಶ್ಯಶರಣಿ
೫೧.ದ್ಯೂತಕರಣಿ
೫೨.ಚಿತ್ರಲೋಹ, ಪಾರ್ಷಾಮೃತ್, ದಾರು ವೇಣು ಚರ್ಮ ಅಂಬರ ಕ್ರಿಯ
೫೩.ಚೌರ್ಯ
೫೪.ಔಷಧಸಿದ್ಧಿ
೫೫.ಮಂತ್ರಸಿದ್ಧಿ
೫೬.ಸ್ವರವಂಚನಾ
೫೭.ದೃಷ್ಟಿವಂಚನಾ
೫೮.ಅಂಜನ
೫೯.ಜಲಪ್ಲವನ
೬೦.ವಾಕ್ ಸಿದ್ಧಿ
೬೧.ಘಟಿಕಾಸಿದ್ಧಿ
೬೨.ಪಾದುಕಾಸಿದ್ಧಿ
೬೩.ಇಂದ್ರಜಾಲ
೬೪.ಮಹೇಂದ್ರಜಾಲ

  ಧೃತರಾಷ್ಟ್ರನ 101 ಮಕ್ಕಳ ಹೆಸರು ತಿಳಿಯಿರಿ

ಅರುವತ್ತನಾಲ್ಕು ವಿದ್ಯೆಗಳು : ಪ್ರಪಂಚದಲ್ಲಿ ಬಾಳಿಬದುಕಿ ಯಶಸ್ಸುಗಳಿಸಬೇಕಾದರೆ ಈ ವಿದ್ಯೆಗಳ ಜ್ಞಾನ ಅತ್ಯಾವಶ್ಯಕವೆಂಬ ದೃಷ್ಟಿಯಿಂದ ಹಿಂದೆ ಪ್ರಚಲಿತವಿದ್ದ ವಿದ್ಯೆಗಳನ್ನೆಲ್ಲ ಒಂದೆಡೆ ಕಲೆ ಹಾಕಲಾಗಿದೆ. ಇವನ್ನು ಅಭ್ಯಸಿಸಿ ತಿಳಿದವನೇ ಪಂಡಿತ. ಅಂತಹವನನ್ನು ಪೂರ್ವದಲ್ಲಿ ಜ್ಞಾನಿ ಎನ್ನುತ್ತಿದ್ದರು. ಈ ವಿದ್ಯೆಗಳಲ್ಲಿ ಪಾರಂಗತನಾದವನು ತನ್ನ ಪಾಂಡಿತ್ಯವನ್ನು ಮೆರೆಯಲು ದೇಶವಿದೇಶಗಳನ್ನು ಸುತ್ತಿ, ರಾಜಾಶ್ರಯ ಪಡೆದು, ಆಯಾ ಸ್ಥಳದ ಪಂಡಿತರನ್ನು ಈ ವಿದ್ಯೆಗಳ ಹಿನ್ನೆಲೆಯ ವಾದ ವಿವಾದಗಳಲ್ಲಿ ಸೋಲಿಸಿ ದಿಗ್ವಿಜಯ ಪಡೆದು ರಾಜರುಗಳಿಂದ ಬಹುಮಾನಿತನಾಗಿ ಬರುವುದು ರೂಢಿಯಲ್ಲಿತ್ತು. ಭಾರತೀಯ ಇತಿಹಾಸದಲ್ಲಿ ದಿಗ್ವಿಜಯ ಪಡೆದು ಬಂದ ಪಂಡಿತರುಗಳ ಐತಿಹ್ಯಗಳಿಗೆ ಕೊರತೆಯೇನಿಲ್ಲ. ಈ ವಿದ್ಯೆಗಳಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ, ತಾಂತ್ರಿಕ, ಜ್ಯೋತಿಷ್ಯ, ಕುಲ್ಲಕ- ಎಲ್ಲ ವಿಷಯಗಳೂ ಸೇರುತ್ತವೆ, ಆಧುನಿಕ ಪ್ರಪಂಚದ ವಿದ್ಯೆಗಳಿಗೆಲ್ಲ ಈ ಅರುವತ್ತನಾಲ್ಕು ವಿದ್ಯೆಗಳೇ ಮೂಲ ಎಂಬುದನ್ನು ಮರೆಯುವಂತಿಲ್ಲ. ಈ ಮೂಲಗಳಿಂದ ಆಧುನಿಕ ಜ್ಞಾನ ಹೇಗೆ ಶಾಖೋಪಶಾಖೆಗಳಾಗಿ ಬೆಳೆದಿವೆಯೆಂಬುದನ್ನು ಗಮನಿಸಿದಾಗ ಆಶ್ಚರ್ಯವಾಗದಿರದು.

  ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆ ಏಕೆ ಹಾಕುತ್ತಾರೆ ?

ಅವು ಹೀಗಿವೆ:

ನಾಲ್ಕು ವೇದಗಳು: ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ.

ಆರು ಅಂಗಗಳು : ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ, ಕಲ್ಪ.

ಆರು ಶಾಸ್ತ್ರಗಳು : ವೇದಾಂತ, ಧರ್ಮ, ಕಾವ್ಯ, ಶಿಲ್ಪ, ಕಾಮ, ಅಲಂಕಾರ.

ಹದಿನೆಂಟು ಪುರಾಣಗಳು: ಬ್ರಾಹ್ಮ , ಪದ್ಮ , ವೈಷ್ಣವ, ಶೈವ, ಭಾಗವತ, ಭವಿಷ್ಯತ್, ನಾರದೀಯ, ಮಾರ್ಕಂಡೇಯ, ಆಗ್ನೇಯ, ಬ್ರಹ್ಮ ವೈವರ್ತ, ಲಿಂಗ, ವರಾಹ, ಸ್ಕಂದ ವಾಮನ, ಕೂರ್ಮ, ಮತ್ಸ್ಯ, ಗರುಡ, ಬ್ರಹ್ಮಾಂಡ.

ಹದಿನೆಂಟು ಸ್ಮೃತಿಗಳು: ಮನು, ಅತ್ರಿ, ವಿಷ್ಣು, ಹಾರೀತ, ಯಾಜ್ಞವಲ್ಕ್ಯ, ಉಶನ, ಅಂಗಿರ, ಯಮ, ಆಪಸ್ತಂಬ, ವಾತ್ಸ್ಯಾಯನ, ಬೃಹಸ್ಪತಿ, ಪರಾಶರ, ವ್ಯಸ¸, ಶಂಕಲಿಖಿತ, ದಕ್ಷ, ಗೌತಮ, ಶಾಂತಾತಪ, ವಸಿಷ್ಠ.

  ಮಹಾ ಮೃತ್ಯುಂಜಯ ಮಂತ್ರ ಅರ್ಥ ಸಹಿತ

ಅಲ್ಲದೆ ಗಾಂಧರ್ವ, ವಿಶ್ವಕರ್ಮ, ಸೂದ ಭೈಷಜ, ಕಾವ್ಯ, ನರ್ತನ, ನಾಟಕ, ಅಲಂಕಾರ, ಕೃತಕ, ಚೋರ, ಕಳ, ಮಹೇಂದ್ರ ಈ ವಿದ್ಯೆಗಳ ಉಲ್ಲೇಖವನ್ನು ಭಾರತೀಯ ಕಾವ್ಯ, ಪುರಾಣಗಳಲ್ಲಿ ಕಾಣಬಹುದು.


ಸಂಕ್ಷಿಪ್ತ ಸಂಗ್ರಹ

ಪ್ರಶಾಂತ್ ಮೈಸೂರ್

Leave a Reply

Your email address will not be published. Required fields are marked *

Translate »