ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಹಾಗೇ ಒಂಥರಾ ಖುಷಿ, ಬೇಜಾರು

ಈ ಕೆಳಗಿನ ಪದಗಳು ಎಷ್ಟು ಸಲ ಓದಿದರೂ ಮತ್ತೆ ಮತ್ತೆ ಓದಬೇಕು ಎನಿಸುತ್ತದೆ.. ಎಷ್ಟು ನಿಜ ಎನಿಸುತ್ತದೆ. ಹಾಗೇ ಒಂಥರಾ ಖುಷಿ, ಬೇಜಾರು ಎರಡೂ ಆಗುತ್ತದೆ 👇👇😌

          *ಗೊತ್ತಾಗಲೇ ಇಲ್ಲ*


             ದಿನಗಳು ಕಳೆದವು...
             *ಹೇಗೆ ಕಳೆದವು*.?
             ಗೊತ್ತಾಗಲೇ ಇಲ್ಲ..

           .  ಬದುಕಿನ ಓಟದಲ್ಲಿ  
        *ಉರುಳಿದವು ವರ್ಷಗಳು* 
          .   ಗೊತ್ತಾಗಲೇ ಇಲ್ಲ..

      ಹೆಗಲೇರಿ ಆಡುತ್ತಿದ್ದ ಮಕ್ಕಳು 
      . *ಹೆಗಲವರೆಗೆ ಬೆಳೆದದ್ದು*    
             ಗೊತ್ತಾಗಲೇ ಇಲ್ಲ...


           ಸೈಕಲ್ನಲ್ಲಿ ' ಏರಿ' ಏರಿ   
     ಏದುಸಿರು ಬಿಡುತ್ತಿದ್ದ ನಾವು

ಯಾವಾಗ ಕಾರಿನಲ್ಲಿ ನುಸುಳಿದೆವೋ
ಗೊತ್ತಾಗಲೇ ಇಲ್ಲ…

  ಏಕಾದಶಿ ದಿನದಂದು ಉಪವಾಸ ಏಕೆ ಮಾಡಬೇಕು ?

ಅಮ್ಮ- ಅಪ್ಪನ ಹೊರೆಯಾಗಿದ್ದ ನಾವು ಮಕ್ಕಳ ಹೊರೆ ಯಾವಾಗ ಹೊತ್ತೆವೋ
ಗೊತ್ತಾಗಲೇ ಇಲ್ಲ..

    ಗಂಟೆಗಟ್ಟಲೇ ಮಲಗಿ ಗೊರಕೆ
       ಹೊಡೆಯುತ್ತಿದ್ದ ನಮ್ಮ  
     *ನಿದ್ರೆ ಯಾವಾಗ ಹಾರಿತೋ* 
             ಗೊತ್ತಾಗಲೇ ಇಲ್ಲ..

  ದಟ್ಟ ಕರಿ ಕೂದಲಿನಲ್ಲಿ ಬೆರಳಾಡಿಸಿ     
   ಸುಖಿಸಿದ ಕ್ಷಣಗಳು ಮನದಲ್ಲಿ  
      ಹಸಿರಾಗಿರುವ ಮೊದಲೇ.,

ನಮ್ಮ ಕೂದಲು ಬಿಳಿಯಾಗತೊಡಗಿದ್ದು
ಗೊತ್ತಾಗಲೇ ಇಲ್ಲ..

ಕೈಯಲ್ಲಿ ಅರ್ಜಿ ಹಿಡಿದು ಕಚೇರಿ, ಕಚೇರಿ
ಅಲೆದ ನಮಗೆ
ನಿವೃತ್ತಿಯ ಗಳಿಗೆ ಬಂದುದು
ಗೊತ್ತಾಗಲೇ ಇಲ್ಲ..

    ಮಕ್ಕಳು, ಮಕ್ಕಳೆಂದು ಹಲುಬುತ್ತ,
             ಗಳಿಸಿ ಉಳಿಸುವಲ್ಲಿ
    ಆ *ಮಕ್ಕಳೇ ದೂರವಾದದ್ದು*  
               ಗೊತ್ತಾಗಲೇ ಇಲ್ಲ..

  ನಾವು, ನಮ್ಮವರೆಂದು ಎದೆಯುಬ್ಬಿಸಿ                 
  ಮೆರೆದ ನಮಗೆ ಅವರೆಲ್ಲ ದೂರಾಗಿ,   
           *ಒಂಟಿಯಾದುದು* 
              ಗೊತ್ತಾಗಲೇ ಇಲ್ಲ..

ನಮಗಾಗಿ ಏನಾದರೂ ಮಾಡಬೇಕೆಂದಾಗ
ದೇಹ ಸಹಕರಿಸುವದನ್ನು ನಿಲ್ಲಿಸಿದ್ದು
ಗೊತ್ತಾಗಲೇ ಇಲ್ಲ…

       ಹೀಗೆ ಗೊತ್ತಾಗುವ ಮುನ್ನವೇ 
            *ಗತಿಸುವ ಬದುಕಿನ*
          *ಬಗೆಗೆ ಒಂದು ಬೆರಗಿನ*  
                *ನೋಟವಿರಲಿ.!*

      *ಜೊತೆಯಲಿರುವವರನ್ನು*     
*ನೋಯಿಸದ* *ಮುದ ನೀಡುವ* 
            *ಮನಸಿರಲಿ..!

Leave a Reply

Your email address will not be published. Required fields are marked *

Translate »