ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಯಾಗ್ ರಾಜ್ ನಲ್ಲಿ ವೇಣಿ ದಾನ

ಪ್ರಯಾಗ್ ರಾಜ್ ನಲ್ಲಿ ವೇಣಿ ದಾನ ಎಂಬ ಪ್ರಕ್ರಿಯೆ ನಡೆಯುತ್ತೆ… ಗಂಡ ತನ್ನ ಬಲ ತೊಡೆಯಮೇಲೆ ಹೆಂಡತಿಯನ್ನು ಕೂಡಿಸಿಕೊಂಡು ಹೆಂಡತಿಗೆ ಜಡೆ ಹಾಕಬೇಕು, ನಂತರ ಸುಮಾರು ಒಂದು ಅಥವಾ ಒಂದೂವರೆ ಇಂಚಿನಷ್ಟು ಜಡೆ ತುದಿಯ ಕೂದಲನ್ನು ಕತ್ತಿರಿಯಿಂದ ಕತ್ತರಿಸಿ ಆ ವೇಣಿದಾನ ಪ್ರಕ್ರಿಯೆಯ ವಿಧಿಯಲ್ಲಿ ಸಲ್ಲಿಸಿದ ಪೂಜಾದ್ರವ್ಯಗಳ ಜೊತೆಗೆ ಕತ್ತರಿಸಿದ ಕೂದಲನ್ನೂ ಕೊಂಡುಹೋಗಿ ದಂಪತಿಗಳಿಬ್ಬರೂ ಮೂರೂ ನದಿಗಳು ಕೂಡವ ಸ್ಥಳದಲ್ಲಿ ಅರ್ಥಾತ್ ಗಂಗಾ-ಯಮುನಾ-ಸರಸ್ವತಿ ನದಿಗಳು ಸಂಗಮವಾಗುವ ಸ್ಥಳದಲ್ಲಿ ಆ ಕೂದಲನ್ನು ವಿಸರ್ಜಿಸಿ ಸಂಗಮದಲ್ಲಿ ಸ್ನಾನಮಾಡಿ ಬರಬೇಕು…‌

  ದೈವತ್ವ ಕ್ಕೆ ಹೋಗಲು ಮೆಟ್ಟಿಲುಗಳು

ನೋಡಿ ನಮ್ಮ ದೇಶದ ಅತ್ಯಂತ ಪುರಾತನ ಕಾಲದಿಂದಲೂ ಹೆಣ್ಮಕ್ಕಳು ಜಡೆ ಹಾಕುವ ಪದ್ದತಿಯಲ್ಲಿ ತ್ರಿವೇಣಿ ಸಂಗಮವೇ ಇದೆ… ಜಡೆ ಹಾಕುವಾಗ ಮೊದಲು ಅವರು ತಲೆಗೂದಲನ್ನು ಮೂರುಭಾಗ ಮಾಡ್ಕೋತಾರೆ, ಅದರಲ್ಲಿ ಮಧ್ಯದ ಭಾಗವನ್ನು ಆಸರೆಯಾಗಿ ಗೌಪ್ಯವಾಗಿ ಇರಿಸಿಕೊಂಡು ಅದರ ಮೇಲೆ ಜಡೆ ಹೆಣೆಯುತ್ತಾ ಹೋಗ್ತಾರೆ… ಆ ಜಡೆ ಹೊರನೋಟಕ್ಕೆ ಎರಡೇ ಭಾಗ ಒಂದರಮೇಲೊಂದು overlapಆದ ಹಾಗೆ ಕಾಣಿಸೋದು ಆದರೆ ಮಧ್ಯ ಭಾಗದ ಜಡೆ ಗೌಪ್ಯವಾಗಿಯೇ ಜಡೆಹೆಣೆದುಕೊಂಡಿರುತ್ತದೆ… ಈ ತ್ರಿವೇಣಿ ಸಂಗಮದಂತೆ ಬಿಳಿ ಬಣ್ಣದ ಗಂಗೆ, ಹಸಿರು ಬಣ್ಣದ ಯಮುನೆ ಮಾತ್ರ ಸಂಗಮದಲ್ಲಿ ಸ್ಪಷ್ಟವಾಗಿ ಕಾಣೋದು ಆದರೆ ಸರಸ್ವತಿ ಈ ಎರಡೂ ನದಿಗಳ ಜೊತೆ ಜೊತೆಗೆ ಗೌಪ್ಯವಾಗಿಯೇ ಹರಿಯುತ್ತಿರುತ್ತಾಳೆ, Just Like ನಮ್ಮ ಭಾರತೀಯ ನಾರಿಯರ ಜಡೆಯಂತೆ… 😊🙏
ಸನಾತನ ಧರ್ಮದ ವೈಶಿಷ್ಟ್ಯ ಹೀಗೆ ನಮ್ಮ ಬದುಕಿನ ಪ್ರತಿಯೊಂದು ನಡೆಯಲ್ಲೂ ಎಷ್ಟು ಹಾಸುಹೊಕ್ಕಾಗಿ ಸಾಗಿದೆ ಎಂಬುದಕ್ಕೆ ಸಂಪ್ರದಾಯಸ್ಥ ಹೆಣ್ಣುಮಕ್ಕಳು ಹೆಣೆಯುವ ಜಡೆಯೇ ಇದಕ್ಕೊಂದು ಉತ್ತಮ ಉದಾಹರಣೆ… ಇದು ಕುಂಭಮೇಳದ ಪ್ರತೀಕವೂ ಹೌದು… 😊🙏

Leave a Reply

Your email address will not be published. Required fields are marked *

Translate »