ಉದ್ದವನ ಪ್ರಶ್ನೆಗೆ ಕೃಷ್ಣನ ಉತ್ತರ:-
ಕೃಷ್ಣ ತನ್ನ ಅವತಾರದ ಕೊನೆ ಘಳಿಗೆಯಲ್ಲಿ ಹತ್ತಿರವಿದ್ಧ ಉದ್ಧವನಿಗೆ ಕೃಷ್ಣ ಕೇಳಿದ, ನನ್ನ ಲೀಲೆಗಳನ್ನು ನಡೆಯುವಾಗ ಕೆಲವರಿಗೆ ನಾನೇ ಇಚ್ಛೆಪಟ್ಟು ವರಗಳನ್ನು ಕೊಟ್ಟೆ ಮತ್ತೆ ಕೆಲವರು ಕೇಳಿದ್ದನ್ನು ಕೊಟ್ಟೆ. ಆದರೆ ಇಲ್ಲಿ ತನಕ ನೀನು ಮಾತ್ರ ನನ್ನಲ್ಲಿ ಏನು ಕೇಳಿಲ್ಲ ಈಗ ಕೇಳು ನೀನು ಕೇಳಿದ ವರವನ್ನು ಅನುಗ್ರಹಿ ಸುತ್ತೇನೆ ಎಂದನು. ಅದಕ್ಕೆ ಉದ್ದವ ಹೇಳಿದ ನಾನು ನಿನ್ನ ಗೆಳೆಯನಾಗಿ ಇಲ್ಲಿ ತನಕ ಇದ್ದೇನೆ ಎಂದರೆ ಅದು ಭಾಗ್ಯ ನನಗೆ ನಿನ್ನ ಸನಿಹದಲ್ಲಿ ಇರುವ ಸಂತೋಷಕ್ಕಿಂತ ಬೇರೆ ಯಾವ ವರವೂ ಬೇಡ. ಆದರೆ ನನ್ನಲ್ಲಿ ಕೆಲವೊಂದು ಪ್ರಶ್ನೆಗಳು ಕಾಡುತ್ತಿವೆ. ಕೃಷ್ಣ ನಿನ್ನ ಲೀಲೆಗಳನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ .ನೀನು ಜನಗಳಿಗೆ ಜೀವನ ನಡೆಸಲು ಬೇಕಾದ ಸಂದೇಶವನ್ನು ಸರಳವಾಗಿ ಅರ್ಥ ಮಾಡಿಸುವೆ. ಆದರೆ ನೀನು ನಡೆಸುವ ಜೀವನ ನೋಡಿದರೆ ಅಲ್ಲಿ ಕಾಣುವ ಸಂದೇಶವೇ ಬೇರೆ ಇರುತ್ತದೆ. ನನಗೆ ಇದು ಅರ್ಥವಾಗದ
ಪ್ರಶ್ನೆಯಾಗಿ ಕಾಡುತ್ತಿದೆ ನೀನು ಅದಕ್ಕೆ ಉತ್ತರಿಸು ಎಂದಾಗ ಕೃಷ್ಣನು ಹೇಳಿದ. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಗೆ ಭಗವದ್ಗೀತೆ ಬೋಧಿಸಿದೆ ಇಂದು ನಿನಗೆ ಉದ್ದವ ಗೀತೆಯನ್ನು ಬೋಧಿಸುತ್ತೇನೆ ನಿನ್ನ ಪ್ರಶ್ನೆ ಕೇಳು ಎಂದನು. ಉದ್ದವ ಕೇಳಿದ ಕೃಷ್ಣ ಪಾಂಡವರು ನಿನ್ನ ಹೃದಯದ ಗೆಳೆಯರಲ್ಲವೇ ? ಕೌರವರಿಗೆ ನೀನು ಏನು ಮಾಡಲಿಲ್ಲ ನಿಜ ಆದರೆ ನಿನ್ನಂತ ಆಪ್ತ ಬಳಗದವರು ಆದರೂ ಅವರು ಯಾಕೆ ಅಷ್ಟು ಕಷ್ಟ ಪಟ್ಟರು ಅವರಿಗೆ ಜೂಜಾಡಲು ನೀನು ಏಕೆ ಬಿಟ್ಟೆ, ದಾಳ ದಾಟ ನೀನೇ ಆಡಿ ಗೆಲ್ಲಿಸಬಹುದಿತ್ತಲ್ಲವೇ? ಯುಧಿಷ್ಠಿರ ಆಟದಲ್ಲಿ ಕುಳಿತು ಆಡಿದರೂ ಅವನ ತಮ್ಮಿಂದಿರನ್ನು ನೀನು ಕಾಪಾಡಬಹುದಿತ್ತಲ್ಲವೇ? ಅವರ ಸಂಪತ್ತು ಮತ್ತು ಅಧಿಕಾರವನ್ನು ಕಳೆದುಕೊಳ್ಳಲು ನೀನೇ ಪ್ರೇರೇಪಿಸಿದಂತಾಯಿತು. ದ್ರೌಪದಿ ಸ್ವಯಂವರ ಅಷ್ಟು ಕಷ್ಟ ಪಡುತ್ತಿರುವಾಗ ಕೊನೆ ಗಳಿಗೆಯಲ್ಲಿ ಬಂದು ಕಾಪಾಡಿದೆಯಲ್ಲ ಮೊದಲೇ ಏಕೆ ಕಾಪಾಡಲಿಲ್ಲಾ? ಈ ಪ್ರಶ್ನೆಗಳಿಗೆಲ್ಲ ನನಗೆ ಉತ್ತರ ಕೊಡು ಎಂದನು.
ಅದೇ ಮುಗುಳ್ನಗೆಯಿಂದ ಕೃಷ್ಣ ಹೇಳಿದ ನೋಡು ಉದ್ದವ, ಕಷ್ಟದಲ್ಲಿದ್ದಾಗ ನನ್ನನ್ನು ಯಾರು ಸ್ಮರಿಸುತ್ತಾರೋ ಅವರನ್ನು ಕಾಪಾಡಲು ಸದಾ ಕಾಲ ಬದ್ಧನಾಗಿರುತ್ತೇನೆ. ಅಂತ ವಿಕೋಪಗಳು ಬರುವ ಮುನ್ನವೇ ಸ್ವಲ್ಪ ಎಚ್ಚರಿಕೆಯಿಂದ ಇದ್ದು ತಯಾರಿರಬೇಕು. ಆಕಸ್ಮಿಕವಾಗಿ ಅನಿರೀಕ್ಷಿತವಾಗಿ ಕಷ್ಟಗಳು ಬಂದರೆ ನನ್ನನ್ನು ಕರೆಸಿದರೆ ನಾನು ಅವರನ್ನು ಕಾಪಾಡುವೆ. ಪಾಂಡವರಲ್ಲಿ ಯುಧಿಷ್ಠಿರ ತನಗೆ ಪಗಡೆ ಆಟ ಚೆನ್ನಾಗಿ ಆಡಲು ಬರುತ್ತದೆ ನನಗೆ ಯಾರ ಜೊತೆಯೂ ಬೇಡ ಎಂಬ ಅಹಂನಿಂದ ಆಡಲು ಕುಳಿತನು. ಆದರೆ ದುರ್ಯೋಧನನಿಗೆ ದಾಳ ಪಗಡೆ ಆಡುವ ಅನುಭವ ಇಲ್ಲದಿದ್ದರೂ ಅವನು ಅಪಾರ ಸಂಪತ್ತನ್ನು ಹೊಂದಿದ್ದ. ಆ ಸಂಪತ್ತಿಗೆ ತಕ್ಕಂತೆ ಅವನು ಆಟದಲ್ಲಿ ಪಣ ಕಟ್ಟುತ್ತಿದ್ದ ಮತ್ತು ತಾನು ಆಟ ಆಡದೆ ತಾನು ನಂಬಿದ ಸೋದರ ಮಾವ ಶಕುನಿ ಕೈಯ್ಯಲ್ಲಿ ದಾಳಗಳನ್ನು ಆಡಿಸಿದ ತನ್ನ ಕೈಯಿಂದ ಮುಟ್ಟಲು ಇಲ್ಲ.
ಆದರೆ ಯುಧಿಷ್ಠಿರ ಆ ಸಮಯದಲ್ಲಿ ನನ್ನನ್ನು ಸ್ಮರಿಸಲಿಲ್ಲ ಸಹಾಯ ಕೇಳಲಿಲ್ಲ ಒಂದು ವೇಳೆ ಶಕುನಿ ಜೊತೆ ನಾನು ಸೇರಿ ಆಡಿದರೆ ಶಕುನಿ ಗೆಲ್ಲಲು ಆಗುತ್ತಿರಲಿಲ್ಲ. ಯುದಿಷ್ಟಿರ ತನ್ನದೇ ಕರ್ಮಫಲದಿಂದಾಗಿ ಈ ಆಟದಲ್ಲಿ ಭಾಗಿಯಾಗಬೇಕಾಗಿದೆ ಎಂದುಕೊಂಡ ಆದರೆ ನನ್ನನ್ನು ವಿಚಾರಿಸಲಿಲ್ಲ ಅಲ್ಲದೆ ಯಾವುದೇ ಕಾರಣಕ್ಕೂ ಕೃಷ್ಣನಿಗೆ ವಿಷಯ ತಿಳಿಯಬಾರದು ಮತ್ತು ಈ ಕಡೆ ಕೃಷ್ಣ ತಲೆ ಹಾಕಬಾರದು ಎಂದು ಮನದಲ್ಲಿ ಪ್ರಾರ್ಥಿಸಿದ್ದ ನಾನು ಅಪ್ಪಿ ತಪ್ಪಿಯು ಅವರು ಆಡುವ ಜಾಗದಲ್ಲಿ ಬರಬಾರದು ಎಂದು ಮನಸ್ಸಿನಲ್ಲಿ ಬೇಡಿಕೊಂಡಿದ್ದ. ಇದರ ಕುರಿತಾಗಿ ನನ್ನಲ್ಲಿ ಸಲಹೆ ಕೇಳಲಿಲ್ಲ.
ಇನ್ನು ಭೀಮ ಅರ್ಜುನ ನಕುಲ ಸಹದೇವ ಇವರೆಲ್ಲ ದಾಳ ಆಡಿ ಕಳೆದುಕೊಳ್ಳುತ್ತಿರುವುದು ತಮ್ಮ ಕರ್ಮಫಲ ಎಂದು ಕೊಂಡರೆ ಹೊರತು ಒಂದು ಕ್ಷಣವು ನನ್ನ ಸಹಾಯ ಕೇಳಲು ಅವರು ಮನಸ್ಸು ಮಾಡಲಿಲ್ಲ. ಹಾಗೆ ದ್ರೌಪತಿ ಸಹ ಏನೋ ಅವಘಡ ಸಂಭವಿಸುತ್ತಿದೆ ಎಂದು ಅವಳ ಅರಿವಿಗೆ ಬಂದಿದ್ದರು ನನ್ನನ್ನು ಅವಳು ಸ್ಮರಿಸಲಿಲ್ಲ ಕರೆಯಲಿಲ್ಲ. ದುಶ್ಶಾಸನ ಬಂದು ಅವಳನ್ನು ಎಳೆದುಕೊಂಡು ಸಭೆ ಮಧ್ಯೆ ಹೋದಾಗ ಅಲ್ಲಿರುವ ಹಿರಿಯರನ್ನೆಲ್ಲ ಪ್ರಾರ್ಥಿಸಿದಳೇ ಹೊರತು ನನ್ನನ್ನು ಕರೆಯಲಿಲ್ಲ. ಅವರ್ಯಾರು ಇವಳ ಸಹಾಯಕ್ಕೆ ಬರದಿದ್ದಾಗ ಹತಾಶಳಾಗಿ ಸೋತು ದುಃಖದಿಂದ ಕೃಷ್ಣ ಕಾಪಾಡು ಎಂದು ಕೂಗಿದಳು.
ನಾನು ಕಡೆ ಕ್ಷಣದವರೆಗೂ ಅವರು ನನ್ನನ್ನು ಕರೆಯುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆ ನಾನು ದ್ರೌಪದಿ ಕೂಗಿನ ಒಂದೇ ಧ್ವನಿಗೆ ಓಡಿ ಬಂದು ಅವಳಿಗೆ ಸಹಾಯ ಮಾಡಿದೆ. ಈಗ ಹೇಳು ಇದರಲ್ಲಿ ನನ್ನ ತಪ್ಪೇನಿದೆ ಎಂದು ಕೇಳಿದ.
ಉದ್ದವನಿಗೆ ಒಂದು ಹಂತದಲ್ಲಿ ಅರ್ಥವಾಗಿತ್ತು. ಕೃಷ್ಣ ಪಾಂಡವರ ವಿಚಾರದಲ್ಲಿ ನೀನು ಹೇಳಿದ್ದು ಸರಿ ಆದರೆ ನಮ್ಮಂತಹ ಸಾಮಾನ್ಯ ಮನುಷ್ಯರು ಕಷ್ಟದಲ್ಲಿದ್ದಾಗ ನಿನ್ನು ಕರೆಯಲು ನಮ್ಮ ಸ್ಮರಣೆಗೆ ಬರದೇ ಇರಬಹುದು ಅಥವಾ ನಾವು ಗಾಬರಿಯಿಂದ ಮರೆಯಬಹುದು ಆಗ ನೀನು ಸಹಾಯ ಮಾಡಲು ಬರುವುದಿಲ್ಲವೇ? ಗೊತ್ತಿದ್ದೋ ಗೊತ್ತಿಲ್ಲದೇ ಕೆಟ್ಟ ಕೆಲಸ ಮಾಡುತ್ತಿದ್ದರೆ ನೀನು ಅದನ್ನು ನೋಡಿಕೊಂಡು ಸುಮ್ಮನಿರುವೆಯಾ? ಹುಲು ಮಾನವರಾದ ನಮ್ಮಂಥವರನ್ನು ನೀನು ತಡೆಯುವುದಿಲ್ಲವೇ? ನಿನ್ನದು ಇದೆಂಥ ಧರ್ಮ ಎಂದು ಕೇಳಿದ. ಕೃಷ್ಣ ಹೇಳಿದ, ನೀನು ಸರಿಯಾಗಿ ಗಮನಿಸಿ ನೋಡು ಭಗವಂತ ನಿನ್ನೊಳಗೆ ಇದ್ದಾನೆ ನಿನ್ನನ್ನು ನೋಡುತ್ತಿದ್ದಾನೆ ಎಂದು ನೀನು ಭಾವಿಸಿದರೆ ಸಾಕು, ತಪ್ಪು ಮಾಡಲು ಸಾಧ್ಯವೇ ಇಲ್ಲ.ಯಾವಾಗ ನಾನು , ನನಗೆ ಬುದ್ಧಿ ಇದೆ ಎಂದು ಅವಿವೇಕದಿಂದ ನನ್ನನ್ನು ಮರೆತರೆ ಮಾತ್ರ ತಪ್ಪು ಮಾಡುತ್ತಾನೆ ಅಡ್ಡ ದಾರಿ ಹಿಡಿಯುತ್ತಾನೆ. ಅಪಾಯಗಳನ್ನು ಮೈಮೇಲೆ ಅವನೇ ಎಳೆದುಕೊಳ್ಳು ತ್ತಾನೆ. ಸಹಜವಾಗಿ ಬರುವ ಕಷ್ಟ ಕಾಲದಲ್ಲಿ ಅಥವಾ ಸಮಸ್ಯೆಗಳು ಉದ್ಭವಿಸಿದಾಗ ಮನಸ್ಸು ತೋಚದಿದ್ದಾಗ ನನ್ನೊಳಗಿರುವ ಭಗವಂತ ಕಾಪಾಡು ಎಂದು ಹೇಳಿದರೆ ಸಾಕು ತಪ್ಪು ಮಾರ್ಗದಿಂದ ಈಚೆಗೆ ಬರುವಂತೆ ಮಾಡುತ್ತೇನೆ. ನಾನು ಬರುವುದೇ ಬೇಡ ಎಂದಾಗಲಿ ಅಥವಾ ನನ್ನನ್ನು ಸ್ಮರಿಸಿಕೊಳ್ಳದೆ ಇದ್ದಾಗ, ಅಲ್ಲದೆ ಭಗವಂತ ನಮ್ಮ ಆತ್ಮದೊಳಗೆ ಇದ್ದಾನೆ ಎಂಬುದನ್ನು ಗಮನಿಸಿದೆ ಅವಿವೇಕದಿಂದ ವರ್ತಿಸಿದರೆ ಯಾರೂ ಸಹಾಯ ಮಾಡಲು ಸಾಧ್ಯವಿಲ್ಲ ಎಂದನು.
ಆವತ್ತು ಪಗಡೆ ಆಟದಲ್ಲಿ ಧರ್ಮರಾಯ ಮಾಡಿದ್ದು ಇದನ್ನೆ ಪಗಡೆ ಆಟ ಆಡುವ ಸುಳಿವು ಕೂಡ ನನಗೆ ಸಿಗಬಾರದೆಂದು ನಿರ್ಧಾರ ಮಾಡಿದ್ದ ಅವನು ಪಗಡೆ ಆಡುವ ಮೊದಲು ಭಗವಂತ ಗೊತ್ತಿದ್ದೋ ಗೊತ್ತಿಲ್ಲದೆ ಈ ಕರ್ಮಫಲಕ್ಕ ನುಗುಣವಾಗ ಈ ಮೋಸದ ಆಟದಲ್ಲಿ ಭಾಗಿಯಾಗಿದ್ದೀವಿ. ನನ್ನ ಜೊತೆಯಲ್ಲಿರುವ ನೀನು ಕಾಪಾಡು ಎಂದು ಮನಸ್ಸಿನಲ್ಲಿ ಹೇಳಿದ್ದರೆ ಅವನನ್ನು ಸೋಲನ್ನು ನಾನು ಬಿಡುತ್ತಿರಲಿಲ್ಲ ಅವನ ಅನುಕೂಲಕ್ಕೆ ತಕ್ಕಂತೆ ನಾನು ಆಡಿಸುತ್ತಿದ್ದೆ ಎಂದನು. ಶ್ರೀ ಕೃಷ್ಣ ಹೇಳಿದ ಮಾತಿನ ಒಳಾರ್ಥ ತೆಗೆದ ಉದ್ಧವ ಭಕ್ತಿಯಿಂದ ಭಗವಂತ ನಿನ್ನನ್ನು ನಂಬಿದರೆ ನೀನೆಂದು ಕೈಬಿಡುವುದಿಲ್ಲ ನಮ್ಮಂತ ಹುಲು ಮಾನವರು ಮಾತ್ರ ಒಳ್ಳೆಯದನ್ನು ಬಿಟ್ಟು ಸ್ವಾರ್ಥದಿಂದ ಯೋಚಿಸಿ ನಿರ್ಧಾರ ತೆಗೆದುಕೊಂಡಾಗ ಮಾತ್ರ ಸೋಲುಂಟಾಗುತ್ತದೆ ಎಲ್ಲೆಲ್ಲೂ ಎಲ್ಲಾ ಕಡೆಯೂ ನೀನಿರುವೆ ನೀನು ನಮ್ಮನ್ನು ಕಾಪಾಡುವೆ ಎಂದು ಮನಸ್ಸಿನಲ್ಲಿ ಅಂದುಕೊಂಡರೆ ನಾವೆಂದೂ ಸೋಲುವುದಿಲ್ಲ. ನನ್ನ ಅನುಮಾನ ಪರಿಹರಿಸಿದ ನಿನಗೆ ನಮೋ ನಮಃ ಎಂದು ನಮಸ್ಕರಿಸಿ ದನು.
ವಿಶ್ವಾಸವಿದ್ದರೆ ಭಗವಂತನೇ ಒಲಿಯುತ್ತಾನೆ. ಅರ್ಜುನನಿಗೆ ಸಾರಥಿ ಆದ ಶ್ರೀ ಕೃಷ್ಣನು ಯುದ್ಧವನ್ನು ಮಾಡಲಿಲ್ಲ ಅರ್ಜುನನಿಗೆ ಯುದ್ಧದ ಕರ್ತವ್ಯವನ್ನು ಬೋಧಿಸಿದ ಮತ್ತು ಮಾರ್ಗದರ್ಶನವನ್ನು ಕೊಟ್ಟನು ಹೀಗೆ ನಮ್ಮ ಜೀವನದ ಸಾರಥಿಯಾಗಿರುವ ಭಗವಂತನನ್ನು ನಂಬಿದರೆ ಭಗವಂತ ನಮ್ಮನ್ನು ಸುಖವಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗುತ್ತಾನೆ ಎಂಬುದನ್ನು ಸದಾ ಸ್ಮರಣೆಯಲ್ಲಿರಿಸಬೇಕು ಆಗ ಮಾತ್ರ ನಾವು ಜೀವನದಲ್ಲಿ ಸೋಲಲು ಸಾಧ್ಯವಿಲ್ಲ ಆಕಸ್ಮಿಕವಾಗಿ ಅಂತಹ ಪರೀಕ್ಷೆಗಳು ಬಂದರೆ ಭಗವಂತನೇ ಮುಂದೆ ನಿಂತು ಅದನ್ನೆಲ್ಲ ಪರಿಹರಿಸುತ್ತಾನೆ ದೃಢವಾದ ನಂಬಿಕೆ ಇರಬೇಕು.
ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ
ಪ್ರಣತ: ಕ್ಲೇಶ ನಾಶಾಯ ಗೋವಿಂದಾಯ ನಮೋ ನಮಃ!!
ಸಂಗ್ರಹ