ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸಣ್ಣ ಕಥೆ. ದೊಡ್ಡ ಸಂದೇಶ

ಕೃಷ್ಣಂ ವಂದೇ ಜಗದ್ಗುರುಂ
ಸಣ್ಣ ಕಥೆ. ದೊಡ್ಡ ಸಂದೇಶ
ಮೃತ್ಯುವಿನಿಂದ ಯಾರೂ ತಪ್ಫಿಸಿಕೊಳ್ಳಲು ಸಾಧ್ಯವಿಲ್ಲ ಎಂದಾದ ಮೇಲೆ ನಾವು ಜಪ, ತಪ, ಹೋಮ, ಸತ್ಸಂಗ, ಪೂಜೆ ಇವುಗಳನ್ನೆಲ್ಲಾ ಮಾಡಿ ಯಾಕೆ ಕಷ್ಟ ಪಡಬೇಕು? ಮೋಜು, ಮಸ್ತಿ, ಮಜಾ ಮಾಡಿಕೊಃಡು ಬೇರೆಯವರಿಗೆ ಕಣ್ಣೀರು ತರಿಸುವವನಿಗೂ ಮರಣ ಇದೆ. ಹಾಗಾದರೆ ನಾವು ಮೋಜು ಮಸ್ತಿ ಮಜಾವನ್ನೇ ಯಾಕೆ ಮಾಡಬಾರದು?
ಇದು ರಣರಂಗದಲ್ಲಿ ಆರ್ಜುನನು ಶ್ರೀ ಕೃಷ್ಣ ಪರಮಾತ್ಮನಿಗೆ ಕೇಳಿದ ಪ್ರಶ್ನೆ. ಹಾಗಾದರೆ ಶ್ರೀಕೃಷ್ಣ ಪರಮಾತ್ಮನು ಎನೆಂದು ಉತ್ತರಿಸಿದನು ಓದೋಣ ಬನ್ನಿ.
ಹೇ ಪಾರ್ಥಾ ಕೇಳು.
ಬೆಕ್ಕು ಇಲಿಯನ್ನು ಹಿಡಿಯುವಾಗ ತನ್ನ ಹಲ್ಲುಗಳಿಂದ ಹಿಡಿದು ಹರಿದು ಕೊಂದು ತಿನ್ನುತ್ತದೆ. ಆದರೆ ಅದೇ ಬೆಕ್ಕು ಅದೇ ಹಲ್ಲುಗಳಿಂದ ತನ್ನ ಮರಿಗಳನ್ನು ಎತ್ತುತ್ತದೆ ವಿನಃ ಮರಿಗಳನ್ನು ಸಾಯಿಸುವುದಿಲ್ಲಾ. ತುಂಬಾ ನಾಜೂಕಾಗಿ ಮೆತ್ತಗೆ ಮರಿಗಳನ್ನು ಎತ್ತಿಕೊಂಡು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುತ್ತದೆ.
ಅದೇ ಹಲ್ಲುಗಳು. ಮುಖವೂ ಅದೇ ಆದರೆ ಪರಿಣಾಮ ಬೇರೆ ಬೇರೆ.
ಇಲ್ಲಿ ನೀನು ಬೆಕ್ಕಿನ ಹಲ್ಲುಗಳನ್ನು ಮನುಷ್ಯನ ಸಾವೆಂದು ತಿಳಿ.
ಮೃತ್ಯುರೂಪಿ ಹಲ್ಲುಗಳಿಂದ ಬೆಕ್ಕು ಇಲಿಯನ್ನು ಸಾಯಿಸುವುದೂ, ಮರಿಗಳನ್ನು ಎತ್ತಿಕೊಳ್ಳುವುದೂ ನಿಶ್ಚಿತವೇ. ಅದೇ ರೀತಿ ಮನುಷ್ಯರ ಶರೀರ ರೂಪಿ ಆತ್ಮಕ್ಕೆ ಮೃತ್ಯುರೂಪಿ ಹಲ್ಲುಗಳಿಂದ ಬರುವ ಎಟು (ಮರಣ) ಸತ್ಯವೂ ನಿಶ್ಚಿತವೂ ಆಗಿದೆ.
ನಾನು ಸತ್ಕರ್ಮ ನಿರತ ಹೋಮ ಹವನ ಜಪ ತಪಾದಿಗಳಲ್ಲಿ ತೊಡಗಿರುವವನ ಆತ್ಮವನ್ನು ನನ್ನ ಧಾಮಕ್ಕೆ ಕರೆಸಿಕೊಂಡರೆ ಪರರನ್ನು ಹಿಂಸಿಸಿ ಕಣ್ಣೀರು ತರಿಸಿ ಮೋಜು ಮಸ್ತಿ ಮಜಾಗಳಲ್ಲಿ ತೊಡಗಿರುವವನ ಆತ್ಮವನ್ನು 84 ಲಕ್ಷ ಯೋನಿಗಳಲ್ಲಿ ಬಿಸುಟಿ ಆವನು ಪುನರಪಿ ಜನನಂ ಪುರನಪಿ ಮರಣಂ ಎಂಬ ಚಕ್ರದಲ್ಲಿ ತಿರುಗುತ್ತಲೇ ಇರುವಂತೆ ಮಾಡುತ್ತೇನೆ ಪಾರ್ಥಾ.
ಆದ್ದರಿಂದ ಪರಹಿಂಸೆ ಕಣ್ಣೀರನ್ನು ಬಿಡು. ಸತ್ಕರ್ಮದಲ್ಲಿ ತೊಡಗು. ನನ್ನ ಸನ್ನಿಧಾನದಲ್ಲಿ ನೆಲೆ ನಿಲ್ಲು.

  'ಹೇಳಿಕೊಳ್ಳದಿದ್ದರೆ ಅದೆಂತಹ ಪ್ರೀತಿ?' ಸುಂದರವಾದ ಕನ್ನಡ ಕಥೆ

Leave a Reply

Your email address will not be published. Required fields are marked *

Translate »