ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶಕ್ತಿ ಶಾಲಿ ಹನುಮಂತ

-:ಶಕ್ತಿ ಶಾಲಿ ಹನುಮಂತ:-
ಶ್ರೀ ರಾಮಭಕ್ತನಾದ ಹನುಮಂತನು ಜ್ಞಾನ, ಭಕ್ತಿ, ವೈರಾಗ್ಯ
ಮತ್ತು ಅಷ್ಟಸಿದ್ದಿಗಳನ್ನು ಗಳಿಸಿಕೊಂಡ ಮಹಾನ್ ಶಕ್ತಿಶಾಲಿ ಹನುಮಂತ. ಭಕ್ತರ ಅಭೀಷ್ಟಗಳನ್ನು ನೆರವೇರಿಸುವ ಸರ್ವ ಶಕ್ತ ದೇವನೆಂದು ಭಕ್ತಾದಿಗಳ ನಂಬಿಕೆಗೆ ಪಾತ್ರನಾಗಿದ್ದಾನೆ. ಆಂಜನೇಯನು ಸಾಕ್ಷಾತ್ ಪರಮೇಶ್ವರನ ಅಂಶದಿಂದ ಜನಿಸಿದವನು ಅತ್ಯಂತ ಬಲಶಾಲಿ ಎಂಬುದಕ್ಕೆ ಅನೇಕ ಪುರಾಣ ಕಥೆಗಳು ಇವೆ.

ಹನುಮಂತನು ಹಿಂದು ದೇವತೆಗಳಲ್ಲಿ ಒಬ್ಬ ಶಕ್ತಿದೇವತೆ. ಶ್ರೀರಾಮ ಚಂದ್ರನ ಪರಮಭಕ್ತ. ಶಿವನ ಹನ್ನೊಂದನೇ ಅವತಾರ ಎಂದು ಹೇಳಲಾಗುತ್ತದೆ. ಶಿವಪುರಾಣದ ಪ್ರಕಾರ ದೇವತೆಗಳು ಮತ್ತು ದಾನವರ ನಡುವೆ ಅಮೃತ ಹಂಚುವ ಸಂದರ್ಭದಲ್ಲಿ ಮೋಹಿನಿ ರೂಪವನ್ನು ಧರಿಸಿದ ವಿಷ್ಣುವ ನ್ನು ಕಂಡು ಶಿವನು ಆಕರ್ಷಿತನಾಗುತ್ತಾನೆ. ಆ ಸಮಯದಲ್ಲಿ
ಶಿವನ ವೀರ್ಯ ಸ್ಖಲನವಾಯಿತು. ಸಪ್ತಋಷಿಗಳು ಶಿವನ
ವೀರ್ಯವನ್ನು ಎಲೆಗಳ ದೊನ್ನೆಗಳಲ್ಲಿ ಸಂಗ್ರಹಿಸಿದರು. ಸೂಕ್ತವಾದ ಸಂದರ್ಭದಲ್ಲಿ ಆ ವೀರ್ಯವನ್ನು ವಾನರರಾಜ ಕೇಸರಿಯ ಪತ್ನಿಯಾದ ಅಂಜನಾದೇವಿಯ ಕಿವಿಗಳ ಮೂಲಕ ಅವಳ ಉದರಕ್ಕೆ ಸೇರಿಸಿದರು. ಆಕೆ ಮಕ್ಕಳಿಗಾಗಿ ಶಿವನನ್ನು ಕುರಿತು ಕಠಿಣ ತಪಸ್ಸು ಮಾಡಿದ್ದಳು. ಮುಂದೆ ಅಂಜನ ಗರ್ಭ ಧರಿಸಿ ನವಮಾಸಗಳು ತುಂಬಿದಾಗ ಆಕೆಗೆ ಅಂಜನಾಸುತ ಹನುಮಂತ ಜನಿಸಿದನು ಹೀಗೊಂದು ಕಥೆ. ಇದೆ.

ಸಂಸ್ಕೃತದಲ್ಲಿ ‘ಹನುಮಾನ್’ ಎಂಬುದು, ದವಡೆ ಎಂದು
ಅರ್ಥ ‘ಹನು’ ಎಂದರೆ ದವಡೆ, ‘ಮಾನ್’ ಎಂದರೆ ವಿರೂಪ ಗೊಂಡಿದೆ ಎಂದು ಅರ್ಥ. ಬಾಲ್ಯದಲ್ಲಿ ಹನುಮನು ಆಕಾಶ
ದಲ್ಲಿ ಉದಯಿಸುತ್ತಿದ್ದ ಕೆಂಪು ರಂಗಿನ ಸೂರ್ಯನನ್ನು ಹಣ್ಣೆಂದು ತಪ್ಪಾಗಿ ತಿಳಿದು, ತಿನ್ನಲು ಮುಂದಾಗುತ್ತಾನೆ. ಸೂರ್ಯನನ್ನು ಹನುಮಂತನಿಂದ ರಕ್ಷಿಸಲು ಇಂದ್ರದೇವನು ತನ್ನ ಆಯುಧದಿಂದ ಆಂಜನೇಯನ ಮೇಲೆ ಹಲ್ಲೆ ಮಾಡು ತ್ತಾನೆ. ಇಂದ್ರನ ವಜ್ರಾಯುಧ ಹನುಮಂತನ ದವಡೆಗೆ ತಗಲಿ ದವಡೆ ವಿರೂಪಗೊಳ್ಳುತ್ತದೆ. ಇದರಿಂದ ಆಂಜನೇಯನನ್ನು “ಹನುಮಾನ್” ಎಂದು ಕರೆಯುತ್ತಾರೆ. ಪ್ರಜ್ಞಾಹೀನನಾಗಿದ್ದ ಆಂಜನೇಯನ ಸ್ಥಿತಿಯನ್ನು ನೋಡಿ ವಾಯುದೇವರಿಗೆ ಕೋಪಬಂದು ಗಾಳಿ ನಿಲ್ಲಿಸಿ, ಇಂದ್ರ ಮತ್ತು ಸೂರ್ಯದೇವ ಕ್ಷಮೆಯನ್ನು ಕೇಳಿ ಪ್ರಜ್ಞಾಹೀನ ನಾದ ಆಂಜನೇಯನನ್ನು ಯಥಾಸ್ಥಿತಿಗೆ ಬರುವಂತೆ ಮಾಡುತ್ತಾರೆ. ಆನಂತರ ಎಲ್ಲಾ ದೇವಾನುದೇವತೆಗಳು ಹನುಮನಿಗೆ ಶಕ್ತಿಯುತವಾದ ವರ ಕೊಟ್ಟು ಆಶೀರ್ವದಿಸುತ್ತಾರೆ.

  ಪೂರ್ವಜರ ಮಾತಿದು ಮರಿಬ್ಯಾಡ

ಸೂರ್ಯದೇವನು ತನ್ನ ತೇಜಸ್ಸಿನ ಜೊತೆಯಲ್ಲಿ ಆತನಿಗೆ ಶಾಸ್ತ್ರಗಳ ಜ್ಞಾನವನ್ನು ಕೊಡುತ್ತಾನೆ .ಯಮನು ಹನುಮಂತ ನಿಗೆ ರೋಗಗಳು ಭಾದಿಸದೆ ಆರೋಗ್ಯ ಹಾಗೂ ತೇಜೋ ವಂತನಾಗಿರು ಎಂದು ಹರಸುತ್ತಾನೆ. ಹನುಮಂತ ಮಾಡುವ ಎಲ್ಲಾ ಯುದ್ಧಗಳಲ್ಲಿ ಅವನಿಗೆ ಜಯ ಲಭಿಸಲಿ. ಎಂದು ಕುಬೇರ ಆಶೀರ್ವದಿಸುತ್ತಾನೆ. ಶಿವನು, ಯಾವುದೇ ಅಸ್ತ್ರಶಸ್ತ್ರಗಳಿಂದ ಹನುಮಂತನಿಗೆ ಮರಣ ವಾಗದಂತೆ ಹರಸುತ್ತಾನೆ. ಬ್ರಹ್ಮದೇವನು ಹನುಮಂತನು ಇಚ್ಛಿಸಿದಂತೆ ರೂಪ ಧರಿಸುವ ವರ ಕೊಡುತ್ತಾನೆ. ಮತ್ತು ಎಲ್ಲಿಗೆ ಹೋಗ ಬೇಕೆಂದು ಇಚ್ಚಿಸಿದರು ಅಲ್ಲಿಗೆ ಸುಲಲಿತವಾಗಿ ಶೀಘ್ರವಾಗಿ ಹೋಗುವಂತೆ ವರ ಕೊಡುತ್ತಾನೆ. ಹೀಗೆ ಸಕಲ ದೇವತೆಗಳು
ಹನುಮಂತನಿಗೆ ವರಗಳ ಸುರಿಮಳೆ ಗರೆದರು.
ಸರ್ವಶಕ್ತ ಸಂಪನ್ನನಾದ ಹನುಮಂತನಿಗೆ ‘ಶಕ್ತಿಮಾನ್’ ಎಂಬ ಹೆಸರು ಬರುತ್ತದೆ. ಮುಂದೆ ರಾಮಾಯಣದಲ್ಲಿ
ಹನುಮನ ಮಹತ್ತರವಾದ ಗುರುತರವಾದ ಪಾತ್ರ ವಹಿಸುತ್ತಾನೆ.”ರಾಮಾಯಣ ಮಹಾಮಾಲಾ ರತ್ನಂ, ವಂದೇ ನಿಲಾತ್ಮಜಂ” ‘ರಾಮಾಯಣ ಮಹಾಮಾಲೆಯೊಳಗೆ ರತ್ನದಂತಿರುವ ಆಂಜನೇಯನಿಗೆ ನಮಸ್ಕಾರಗಳು’ ಭಕ್ತ ಶಿರೋಮಣಿ ಹನುಮಂತ ಸದಾಕಾಲ ರಾಮನಾಮಜಪ
ಸ್ಮರಣೆ ಮಾಡುತ್ತಲೇ, ತನ್ನ ಬುದ್ಧಿಚಾತುರ್ಯಗಳನ್ನು ಬಳಸಿ ರಾಮನಿಗೆ ಎಲ್ಲ ಕಾರ್ಯಗಳಲ್ಲೂ ಸಹಕಾರಿಯಾಗಿದ್ದನು. ಆಂಜನೇಯ ಇಲ್ಲದ ರಾಮಾಯಣ ಕಲ್ಪಿಸಲು ಸಾಧ್ಯವಿಲ್ಲ ಆಂಜನೇಯ ರಾಮ ಭಕ್ತನಾಗಿ ಮತ್ತು ಭಾರತದ ಎಲ್ಲಾ ಜನ ಮನಸ್ಸನ್ನು ಗೆದ್ದ ದೇವರಾಗಿದ್ದಾನೆ.

ನಮ್ಮ ದೇಶದ ಹಳ್ಳಿ, ಹಳ್ಳಿಗಳಲ್ಲೂ ಆಂಜನೇಯನ ಗುಡಿ ಇರುತ್ತದೆ. ರಾಮನ ದೇವಸ್ಥಾನ ಕಡಿಮೆ ಇರಬಹುದು. ಎಲ್ಲೇ ರಾಮನ ದೇವಸ್ಥಾನವಿರಲಿ ಅಲ್ಲಿ ಆಂಜನೇಯ ಇರುತ್ತಾನೆ. ಆಂಜನೇಯ ಇಲ್ಲದ ರಾಮ ಮಂದಿರ ಇಲ್ಲ. ಆದರೆ ರಾಮ ನಿಲ್ಲದ ಆಂಜನೇಯ ಗುಡಿ ಬೇಕಾದಷ್ಟು ಕಡೆ ಇದೆ.
“ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇ ತು ಜನಕಾತ್ಮಜಾ! ಪುರತೋ ಮಾರುತೀರ್ಯಸ್ಯ ತಂ ವಂದೇ ರಘುನಂದನಂ” (ಎಡಗಡೆಯಲ್ಲಿ ಪತ್ನಿ ಸೀತೆ, ಬಲಗಡೆಯಲ್ಲಿ ಸಹೋದರ
ಲಕ್ಷ್ಮಣ, ರಾಮನ ಮುಂದುಗಡೆ ‘ದಾಸ ಮಾರುತಿ’ ಇರುವ ಆ ರಘುನಂದನ ಶ್ರೀರಾಮಚಂದ್ರನಿಗೆ ನಾನು ವಂದಿಸುವೆನು.)

ಬಾಲ್ಯದಲ್ಲಿ ಆಂಜನೇಯ ತನ್ನ ಬಾಲಲೀಲೆಗಳಿಂದ ಮಿತಿ ಮೀರಿ ಚೇಷ್ಟೆ ಮಾಡಿ ಎಲ್ಲರಿಗೂ ತೊಂದರೆ ಕೊಡುತ್ತಿದ್ದನು. ಇವನ ಕಾಟವನ್ನು ಸಹಿಸಲಾರದೆ ಋಷಿಮುನಿಗಳು ಕೋಪ ಗೊಂಡಿದ್ದು ಉಂಟು. ಆದರೆ ಇವನು ಯಾರ ಕೋಪಕ್ಕೂ ಬಗ್ಗಲಿಲ್ಲ. ವನಗಳಲ್ಲಿ ತಪಸ್ಸಿನಲ್ಲಿ ನಿರತರಾಗಿದ್ದ ಋಷಿ ಮುನಿಗಳಿಗೆ ತೊಂದರೆ ಕೊಡುತ್ತಿದ್ದನು. ಇವನ ತೊಂದರೆ ಸಹಿಸಲಾರದೆ ಮನಸ್ಸಿನಲ್ಲಿ ಬೈದುಕೊಂಡಿದ್ದು ಇದೆ. ಹಾಗೆ ಕೋಪಗೊಂಡ ಋಷಿಗಳಲ್ಲಿ ‘ಮಾತಂಗಮುನಿ’ಗಳು ಒಬ್ಬರು. ಇವರು ಆಂಜನೇಯನ ಚೇಷ್ಟೆ, ಕುಚೇಷ್ಟೆಗಳನ್ನು ತಡೆಯಲಾರದೆ, ‘ನಿನಗಿರುವ ಈ ಅಪಾರ ಶಕ್ತಿಯೆಲ್ಲವೂ ಮರೆತು ಹೋಗಲಿ’ ಎಂದು ಶಾಪ ಕೊಟ್ಟರು. ಇದನ್ನು ತಿಳಿದ ತಾಯಿ ‘ಅಂಜನಾದೇವಿ’ ಮುನಿಗಳ ಹತ್ತಿರ ಬಂದು, ಕ್ಷಮೆ ಯಾಚಿಸಿ, ಮಗನನ್ನು ಕ್ಷಮಿಸುವಂತೆ ಬೇಡಿಕೊಂಡಳು. ತಾಳ್ಮೆ ತಂದುಕೊಂಡ ಮಾತಂಗ ಮುನಿಗಳು ಸಮಾಧಾನ ದಿಂದ ಇವನು ಮುಂದೆ ಯಾವುದಾದರೂ ಮಹತ್ಕಾರ್ಯ ಮಾಡುವ ಸಂದರ್ಭದಲ್ಲಿ ಯಾರಾದರೂ ಹಿರಿಯರು ಅವನ ಶಕ್ತಿಯ ಬಗ್ಗೆ ನೆನಪಿಸಿದಾಗ, ಮರಳಿ ಶಕ್ತಿ ಬರುತ್ತದೆ ಎಂದು ಹೇಳಿದರು.

  ಕೃಷ್ಣನ ಕೊಳಲಿನ ಕಥೆ

ಆಗಿನಿಂದ ಹನುಮನಿಗೆ ತನ್ನ ಶಕ್ತಿ ಮತ್ತು ಶಾಪದ ಕಾರಣ
ಎಲ್ಲವೂ ಮರೆತು ಹೋಗಿದ್ದರ ಪರಿಣಾಮ ಕಿಷ್ಕಿಂದ ಪಟ್ಟಣ ದ ರಾಜ ಸುಗ್ರೀವನಿಗೆ ಸಹಾಯ ಮಾಡುತ್ತಾ ಜೊತೆಯಲ್ಲಿ ಓಡಾಡುತ್ತಿದ್ದ. ಹನುಮಂತನಿಗೆ ಇದ್ದ ಆ ಶಕ್ತಿಗೆ ಶಕ್ತಿಗೆ ನೇರ ವಾಗಿ ‘ವಾಲಿಯನ್ನು’ ಸೋಲಿಸುವ, ಸಾಮರ್ಥ್ಯವಿದ್ದು, ಮರೆವಿನಿಂದಾಗಿ ಹಾಗೆ ಇದ್ದನು. ಮುಂದೆ ರಾವಣನಿಂದ ಸೀತೆ ಅಪಹರಣವಾದ ಸಂದರ್ಭದಲ್ಲಿ, ಸಮುದ್ರವನ್ನು ಲಂಘಿಸಿ ಯಾರು ರಾವಣನ ಆಸ್ಥಾನಕ್ಕೆ ಹೋಗಲು ಸಾಧ್ಯ ಎಂಬ ಪ್ರಶ್ನೆ ಬಂದಾಗ, ಎಲ್ಲಾ ವಾನರರಂತೆ ಹನುಮಂತನು ತನ್ನ ಕೈಯಲ್ಲಿ ಸಾಧ್ಯವಿಲ್ಲವೆಂದು ದೂರದಲ್ಲಿ ಕುಳಿತಿದ್ದನು ಆಗ ಅವನ ಶಕ್ತಿಯ ಬಗ್ಗೆ ತಿಳಿದಿದ್ದ ಅನುಭವಿ, ಹಿರಿಯ ಜಾಂಬುವಂತ, ಹನುಮಂತನನ್ನು ಕರೆದು ನಿನಗೆ ಎಂತಹ ಶಕ್ತಿ ಇದೆ ಎಂದು ನಿನಗೇ ತಿಳಿದಿಲ್ಲ. ನಿನ್ನ ಶಕ್ತಿಯಿಂದ ಏನು ಬೇಕಾದರೂ ಮಾಡಬಹುದು ಬೆಟ್ಟ ಎತ್ತಬಹುದು, ಸಮುದ್ರ ಹಾರಬಹುದು,ಗಾಳಿ ಹಿಡಿದು ನಿಲ್ಲಿಸಬಹುದು, ಎಂದು ಅವನಿಗಿರುವ ಶಕ್ತಿಯನ್ನು ನೆನಪಿಸಿದನು. ನೀನು ಬಾಲ್ಯ ದಲ್ಲಿದ್ದಾಗ ನಿನ್ನ ಚೇಷ್ಟೆ ತಡೆಯಲಾರದೆ, ಋಷಿಗಳು ಕೊಟ್ಟ ಶಾಪ, ಎಲ್ಲವನ್ನೂ ಹೇಳಿದನು.

ಆಂಜನೇಯನಿಗೆ ತನ್ನಲ್ಲಿರುವ ಎಲ್ಲಾ ಶಕ್ತಿ ನೆನಪಾಯಿತು. ‘ರಾಮ ನಾಮ ಸ್ಮರಣೆ’ ಮಾಡುತ್ತಾ ದೊಡ್ಡ ಬೆಟ್ಟದ ಮೇಲೆ ನಿಂತು ತನ್ನ ದೇಹವನ್ನು ಹಿಗ್ಗಿಸಿ ಬಾಲವನ್ನು ನೆಲಕ್ಕೆ ಅಪ್ಪಳಿ ಸಿದನು, ಭೂಮಂಡಲವೇ ಅಲ್ಲೋಲಕಲ್ಲೋಲ ವಾಗುವಂತೆ ಘರ್ಜನೆ ಮಾಡಿ ಆಕಾಶದಷ್ಟೆತ್ತರ ನಿಂತು ಅದೆಷ್ಟೋಯೋಜ ನೆಗಳ ದೂರ ಹಾರಿದನು. ಚಿಕಿತರಾಗಿ ನೋಡುತ್ತಿದ್ದ ಉಳಿದ ವಾನರರೆಲ್ಲಾ ಉತ್ಸಾಹದಿಂದ ಕುಣಿದು ಹರ್ಷೋದ್ಗಾರದ ಜಯಘೋಷ ಮಾಡಿದರು. ಹನುಮಂತನಿಗೆ ತನ್ನ ಅಪಾರ ಶಕ್ತಿಯ ಅರಿವಾಗುತ್ತಿದ್ದಂತೆ, ಸಮುದ್ರವನ್ನು ಲಂಘಿಸಿ ಲಂಕೆ ಗೆ ಹಾರಿದನು. ಅಶೋಕವನದಲ್ಲಿ ಸೀತೆ ಇರುವ ಜಾಗವನ್ನು ಪತ್ತೆ ಹಚ್ಚಿ ತನ್ನ ಪರಿಚಯ ಮಾಡಿಕೊಂಡು ರಾಮ ಮುದ್ರಿಕೆ ಆಕೆಗೆ ಕೊಟ್ಟು ಎಲ್ಲ ವಿಷಯವನ್ನು ತಿಳಿಸಿದನು.

  ದೇವಾಲಯದಲ್ಲಿ ಶಿವನ / ವಿಷ್ಣುವಿನ ದರ್ಶನ ಪಡೆಯುವ ಯೋಗ್ಯ ಪದ್ಧತಿ

ಹಾಗೆ ಹಸಿವು ನೀಗಿಸಿಕೊಳ್ಳಲು ಅಲ್ಲಿಂದ ಹೊರಟು ಫಲ ಭರಿತ ಉದ್ಯಾನವನ ಹಣ್ಣುಗಳನ್ನು ತಿಂದನು. ಎದುರು ಬಂದ ರಾಕ್ಷಸರನ್ನೆಲ್ಲಾ ಸದೆಬಡಿದನು. ಕಣ್ಣಿಗೆ ರಾವಣನ ಆಸ್ಥಾನಕ್ಕೆ ನುಗ್ಗಿ, ಗಲಾಟೆ ಮಾಡಿ ಲಂಕಾ ನಗರವನ್ನು ಸಾಕಷ್ಟು ಧ್ವಂಸಮಾಡಿ, ಕಿಷ್ಕಿಂಧೆಗೆ ಬಂದು ಸೀತಾಮಾತೆ
ಇದ್ದ ಜಾಗ ಅವಳು ತಿಳಿಸಿದ ಎಲ್ಲ ವಿಚಾರ ತಿಳಿಸಿದನು.
ಸೀತೆಯು ಕೊಟ್ಟ ಚೂಡಾಮಣಿಯನ್ನು ರಾಮನಿಗೆ ಕೊಟ್ಟ ನು.
ಸೀತೆಯನ್ನುಹುಡುಕಿ ಬಂದ ಶುಭ ಸಮಾಚಾರವನ್ನು ತಿಳಿಸಿದ ಹನುಮಂತನನ್ನು ರಾಮನು ಬಿಗಿದಪ್ಪಿದನು. ಮುಂದೆ ನಡೆದ ರಾಮ-ರಾವಣರ ಯುದ್ಧದಲ್ಲಿ ರಾವಣನು ಹತನಾದನು. ಸೀತೆ ಬಂಧನದಿಂದ ಮುಕ್ತಳಾದಳು. ಎಂತಹ ಅಸಾಧ್ಯವಾದ ಕಾರ್ಯವನ್ನು ಸಾಧ್ಯ ಮಾಡುವ ಶಕ್ತಿ ಹನುಮಂತನಿಗೆ ಮಾತ್ರ ಇರುವುದು. ಎಂಬುದು ಲೋಕ
ಪ್ರಸಿದ್ಧಿಯಾಯಿತು.

“ಯತ್ರ ಯತ್ರ ರಘುನಾಥ ಕೀರ್ತನಂ , ತತ್ರ ತತ್ರ ಕೃತ ಮಸ್ತಕಾಂಜಲಿಮ್!
ಭಾಷ್ಪವಾರಿ ಪರಿಪೂರ್ಣ ಲೋಚನಂ, ಮಾರುತಿಂ ನಮತಾ ರಾಕ್ಷಸಾಂತಕಮ್!
ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಮ್ ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀ ರಾಮದೂತಂ ಶರಣಂ ಪ್ರಪದ್ಯೇ”

ಈ ಶ್ಲೋಕವನ್ನು ಪ್ರತಿದಿನ ಸಂಜೆ ಕೈಕಾಲು ತೊಳೆದುಕೊಂಡು ದೇವರ ಮುಂದೆ ಕೈ ಮುಗಿದು ಹೇಳಿಕೊಂಡರೆ, ಧೈರ್ಯ, ಶಕ್ತಿ, ವಾಕ್ಚಾತುರ್ಯ, ಮನೋನಿಗ್ರಹಗಳು ದೊರೆಯುತ್ತದೆ.

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

Leave a Reply

Your email address will not be published. Required fields are marked *

Translate »