ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕಲ‌ರ್ ಫೋಟೋಗ್ರಫಿಯನ್ನು ಪರಿಚಯಿಸಿದ ಜಾರ್ಜ್ ಈಸ್ಟ್‌ಮನ್

ಅಸಂಮಾನೇ ತಪೋವೃದ್ಧಿಃ
ಸಂಮಾನಾಚ್ಚ ತಪಃಕ್ಷಯಃ |
ಪೂಜಯಾ ಪುಣ್ಯಹಾನಿಃ
ಸ್ಯಾನ್ನಿಂದಯಾ ಸದ್ಗತಿರ್ಭವೇತ್ ॥
(ಸುಭಾಷಿತರತ್ನ-ಭಾಂಡಾಗಾರ)

“ಸಂಮಾನಕ್ಕೆ ಆಸೆಪಡದಿದ್ದಷ್ಟೂ ತಪಸ್ಸು ಹೆಚ್ಚುತ್ತದೆ. ಸಂಮಾನವನ್ನು ಬಯಸಿದಷ್ಟೂ ತಪಸ್ಸು ತಗ್ಗುತ್ತದೆ. ಪೂಜೆಗೊಂಡಷ್ಟೂ ಪುಣ್ಯವು ನಷ್ಟವಾಗುತ್ತ ಹೋಗುತ್ತದೆ. ನಿಂದೆಯ ಬಗೆಗೆ ಔದಾಸೀನ್ಯದಿಂದಿದ್ದಷ್ಟೂ ಸದ್ಗತಿಗೆ ಅನುಕೂಲವಾಗುತ್ತದೆ.”

ಜಗತ್ತಿನಲ್ಲಿ ಹಣದ ಆಸೆ, ಅಧಿಕಾರದ ಆಸೆ ಮೊದಲಾದ ಆಕರ್ಷಣೆಗಳಿಗೆ ಒಳಗಾಗದವರು ವಿರಳ. ಅವಕ್ಕಿಂತ ಸೂಕ್ಷ್ಮರೂಪದ್ದು ಮತ್ತು ಸ್ವಭಾವವನ್ನು ವಿಚಲಿತಗೊಳಿಸುವುದು ಕೀರ್ತಿಕಾಮನೆ, ಮನ್ನಣೆ ಬೇಕೆಂಬ ಅಭಿಲಾಷೆ. ಹೇಗಾದರೂ ಕೀರ್ತಿ-ಪ್ರತಿಷ್ಠೆ ಪಡೆದುಕೊಳ್ಳಬೇಕೆಂಬ ತಹತಹ ಜನರನ್ನು ನಾನಾ ಅಡ್ಡದಾರಿಗಳಿಗೆ ತಳ್ಳುತ್ತದೆ. ಆದರೆ ಸ್ವವಿಕಾಸದ ಎತ್ತರದ ಹಂತಗಳನ್ನು ತಲಪಿದವರು ಸಂಮಾನಕ್ಕಾಗಿ ಇಚ್ಛಿಸುವುದಿಲ್ಲ ಮಾತ್ರವಲ್ಲ, ಅದರಿಂದ ವಿಮುಖರೇ ಆಗುತ್ತಾರೆ. ಸಂಮಾನವು ಆಂತರಿಕ ಉತ್ಕರ್ಷಕ್ಕೆ ಪ್ರತಿಬಂಧಕವೆಂದೇ ಮೇಲಣ ಉಕ್ತಿಯು ಸಾರುತ್ತದೆ.

  ಉತ್ತಮ ಪ್ರಜಾಕೀಯ ಪಕ್ಷ ಅಧಿಕೃತ ವಾಟ್ಸ್ಯಾಪ್ ಗುಂಪು

ಫೋಟೊಗ್ರಫಿ ಕ್ಷೇತ್ರದ ಓರ್ವ ಅತಿಶಯ ಸಾಧಕ ಜಾರ್ಜ್ ಈಸ್ಟ್‌ಮನ್. ಬರಿಯ ಕಪ್ಪು-ಬಿಳುಪು ಛಾಯಾಗ್ರಹಣವಷ್ಟೆ ಸಾಧ್ಯವಿದ್ದ ಕಾಲದಲ್ಲಿ ಬಣ್ಣಗಳ ಛಾಯಾಚಿತ್ರಣ ತಂತ್ರಜ್ಞಾನವನ್ನು ಆವಿಷ್ಕರಿಸಿ ಕೋಟ್ಯಧಿಪತಿಯಾಗಿದ್ದ ಆತ. ಒಮ್ಮೆ ನ್ಯೂಯಾರ್ಕಿನ ಆತನ ಭವ್ಯಬಂಗಲೆಗೆ ಬಂದ ಪತ್ರಕರ್ತನೊಬ್ಬ ಕೋರಿದ:

“ನೀವು ಇಷ್ಟು ಪ್ರಸಿದ್ಧರಾಗಿದ್ದೀರಿ. ಜಗತ್ತಿಗೆಲ್ಲ ಉಪಯುಕ್ತವೆನಿಸಿರುವ ತಾಂತ್ರಿಕತೆಯನ್ನು ಲಭ್ಯವಾಗಿಸಿದ್ದೀರಿ. ಆದರೆ ನಿಮ್ಮ ಒಂದೇ ಒಂದು ಚಿತ್ರವೂ ಎಲ್ಲಿಯೂ ನನಗೆ ದೊರೆತಿಲ್ಲ. ನೀವು ಅನುಮತಿ ನೀಡಿದರೆ ನಿಮ್ಮ ಒಂದು ಛಾಯಾಚಿತ್ರ ತೆಗೆದುಕೊಳ್ಳುವೆ.” ಈಸ್ಟ್‌ಮನ್ ಉತ್ತರಿಸಿದ: “ಇದುವರೆಗೆ ನಾನು ಅದನ್ನು ನಿರಾಕರಿಸುತ್ತಲೇ ಬಂದಿದ್ದೇನೆ. ದಯವಿಟ್ಟು ಆ ವ್ಯಾಧಿಯನ್ನು ನನಗೆ ಸೋಂಕಿಸಬೇಡಿ. ಚಿತ್ರಪ್ರಕಟನೆಯಿಂದ ದೂರವಾಗಿ ಅಜ್ಞಾತನಾಗಿ, ಒಬ್ಬ ಸಾಮಾನ್ಯ ವ್ಯಕ್ತಿಯಾಗಷ್ಟೆ ನಾನು ಉಳಿಯಬಯಸುತ್ತೇನೆ.”

  Useful information - Abbreviations

ಹೀಗೆ ಜಗತ್ತಿಗೆ ಕಲ‌ರ್ ಫೋಟೋಗ್ರಫಿಯನ್ನು ಪರಿಚಯಿಸಿದ ಜಾರ್ಜ್ ಈಸ್ಟ್‌ಮನ್ ಮಹಾಶಯನ ಬಣ್ಣದ ಫೋಟೋ ಒಂದು ಕೂಡ ಲಭ್ಯವಿಲ್ಲ!

Leave a Reply

Your email address will not be published. Required fields are marked *

Translate »