ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕೃಷ್ಣಾಷ್ಟಮಿ ಪೂಜಾ ಮಾಡುವುದು ಹೇಗೆ? ಮಂತ್ರ ಸಹಿತ ವಿವರಣೆ

ಕೃಷ್ಣಾಷ್ಟಮಿ ಪೂಜಾ ಮಾಡುವುದು ಹೇಗೆ?
ಕೃಷ್ಣ ಜನ್ಮಾಷ್ಟಮಿ ಹಬ್ಬದ ದಿನ ಭಕ್ತರು ಧಾರ್ಮಿಕ ಸ್ನಾನ ಮಾಡುತ್ತಾರೆ. ನಂತರ ಪೂಜೆ ಮಾಡುವ ಮನೆಯನ್ನು ಪವಿತ್ರಗೊಳಿಸಲಾಗುತ್ತದೆ.

ಪೂಜೆ ಆರಂಭಕ್ಕೂ ಮುನ್ನ ಕೃಷ್ಣನ ಹೆಜ್ಜೆ ಗುರುತುಗಳನ್ನು ಭಕ್ತರು ಬರೆಯುತ್ತಾರೆ. ಜನ್ಮಾಷ್ಟಮಿ ಹಬ್ಬದಂದು ಕೃಷ್ಣ ತಮ್ಮ ಮನೆಗೆ ಬರುವವನೆಂಬ ನಂಬಿಕೆ ಹಲವು ಭಕ್ತರಲ್ಲಿದೆ. ಅಕ್ಕಿ ಹಿಟ್ಟಿನಲ್ಲಿ ಹಾಗೂ ಬಣ್ಣ ಬಣ್ಣದ ಪೇಂಟ್‌ಗಳಲ್ಲಿ ಕೃಷ್ಣನ ಹೆಜ್ಜೆಗುರುತುಗಳನ್ನು ಬರೆಯಲಾಗುತ್ತದೆ. ಕೆಲವೆಡೆ ಕೃಷ್ಣ ಜನ್ಮಾಷ್ಟಮಿಯ ಮಣ್ಣಿನ ಪ್ರತಿಮೆಯನ್ನು ಪೂಜಿಸಲಾಗುತ್ತದೆ. ಇನ್ನೊಂದೆಡೆ, ಕೃಷ್ಣನ ಫೋಟೋ ಅಥವಾ ಇನ್ನಾವುದೇ ಪ್ರತಿಮೆಯನ್ನಿಟ್ಟು ಹಲವೆಡೆ ಪೂಜೆ ಮಾಡುತ್ತಾರೆ.

ಜನ್ಮಾಷ್ಟಮಿ ಪೂಜೆ ಮಾಡಲು ಅಗತ್ಯವಿರುವ ಪೂಜಾ ಸಾಮಗ್ರಿಗಳು

ಭಗವಾನ್‌ ಶ್ರೀ ಕೃಷ್ಣನಿಗೆ ಹೊಸ ಬಟ್ಟೆಗಳು
ಕೃಷ್ಣನಿಗೆ ಕೊಳಲು ಹಾಗೂ ಆಭರಣಗಳು
ಶಂಖ ( ಕಡ್ಡಾಯವಿಲ್ಲ )
ಪೂಜೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಇಟ್ಟುಕೊಳ್ಳಲು ಪೂಜಾ ತಟ್ಟೆ
ಗಂಟೆ
ಮಣ್ಣಿನ ದೀಪ
ಅಕ್ಕಿ
ಏಲಕ್ಕಿ
ಸುಪಾರಿ
ಎಲೆಯಡಿಕೆ
ವೀಳ್ಯದೆಲೆ
ಪವಿತ್ರವಾದ ದಾರ
ಗಂಗಾಜಲ (ಪವಿತ್ರ ನೀರು)
ಸಿಂಧೂರ
ಅಗರಬತ್ತಿ
ಹೂವುಗಳು
ತುಪ್ಪ
ಪಂಚಾಮೃತ ( ಹಾಲು, ಮೊಸರು, ಗಂಗಾಜಲ, ಜೇನತುಪ್ಪ, ತುಪ್ಪ)
ಜನ್ಮಾಷ್ಟಮಿಗೆ ಸಿಹಿ ತಿಂಡಿಗಳು
ಜನ್ಮಾಷ್ಟಮಿಯ ಉಪವಾಸ ಮಾಡುತ್ತಾ ಈ ಆಹಾರಗಳನ್ನು ಸೇವಿಸಬಹುದು!

ಜನ್ಮಾಷ್ಟಮಿ ಪೂಜೆ ಮಾಡುವುದು ಹೇಗೆ?
ಬಿಳಿ ಅಥವಾ ಹಳದಿ ಬಟ್ಟೆಯನ್ನು ತೆಗೆದುಕೊಳ್ಳಿ. ಅದರ ಮೇಲೆ ಭಗವಾನ್ ಶ್ರೀ ಕೃಷ್ಣನ ಮೂರ್ತಿಯನ್ನು ಪೂಜೆ ಮಾಡುವ ಸ್ಥಳದಲ್ಲಿಡಿ. ಬಳಿಕ ಪೂಜೆಯ ಸ್ಥಳದಲ್ಲಿ ಪೂಜಾ ಸಾಮಗ್ರಿಗಳನ್ನಿಟ್ಟು ನಂತರ ದೀಪವನ್ನು ಹಚ್ಚುತ್ತಾರೆ.

ಕೃಷ್ಣನಿಗೆ ಶೋಡಷೋಪಚಾರ ಪೂಜೆ ( 16 ಹಂತಗಳ ಪೂಜೆ) ಯನ್ನು ಮಾಡಲಾಗುತ್ತದೆ. ಇವುಗಳನ್ನು ಅಗತ್ಯವಿರುವ ಮಂತ್ರಗಳೊಂದಿಗೆ ನೀಡಲಾಗಿದೆ.

ಪವಿತ್ರೀಕರಣ
ಪೂಜೆ ಆರಂಭಕ್ಕೂ ಮುನ್ನ ಪೂಜಾ ಸಾಮಗ್ರಿಗಳ ಮೇಲೆ, ಪೂಜಾ ಸ್ಥಳದ ಮೇಲೆ ಹಾಗೂ ಭಗವಾನ್‌ ಶ್ರೀ ಕೃಷ್ಣನ ಮೂರ್ತಿ ಅಥವಾ ಫೋಟೋ ಮೇಲೆ ಹಾಗೂ ಪೂಜಾ ಮಂಟಪದಲ್ಲಿರುವ ಎಲ್ಲ ಮೂರ್ತಿಗಳ ಮೇಲೂ ಸ್ವಲ್ಪ ನೀರು ಚಿಮುಕಿಸಿ. ಪವಿತ್ರೀಕರಣ ಮಂತ್ರವನ್ನು ಹೇಳಿಕೊಂಡು ಈ ಮಂತ್ರವನ್ನು ಜಪಿಸಬೇಕಿದೆ.

ಮಂತ್ರ
ಓಂ ಅಪವಿತ್ರ ಪವಿತ್ರೋ ವಾ ಸರ್ವಾವಸ್ತಾಂ ಗತೋಪಿ ವಾ!
ಯಾ ಸ್ಮರೇತ್ ಪುಂಡರೀಕಾಕ್ಷಂ ಸಾ ಬಾಹ್ಯಂಭ್ಯತರಂ ಶುಚಿ: !!

ಆಚಮನಂ
ಮೂರು ಬಾರಿ ನೀರನ್ನು ತೆಗೆದುಕೊಂಡು ಕುಡಿಯಿರಿ. ಆಚಮನಂ ಮಂತ್ರ ಹೇಳಿಕೊಂಡು ಜಪಿಸಿ.

ಮಂತ್ರ
ಓಂ ಕೇಶವಾಯ ನಮ: ಓಂ ಮಾಧವಾಯ ನಮ: ಓಂ ಗೋವಿಂದಾಯ ನಮ:

ಕೈಗಳನ್ನು ತೊಳೆದುಕೊಳ್ಳಿ ಹಾಗೂ ಭಗವಾನ್‌ ಗಣೇಶನನ್ನು ಮನಸ್ಸಿನಲ್ಲೇ ನೆನಪಿಸಿಕೊಂಡು ಭಗವಂತನಿಗೆ ನಮಿಸಿ.

ಗಣಪತಿ ಪೂಜೆ
ಸಾಮಾನ್ಯವಾಗಿ ಯಾವುದೇ ದೇವರಿಗೆ ಅಥವಾ ಯಾವುದೇ ಪೂಜೆ ಆರಂಭಿಸುವ ಮುನ್ನ ವಿನಾಯಕನಿಗೆ ಅಥಚಾ ಗಣೇಶನಿಗೆ ಪೂಜೆ ಮಾಡುವುದು ವಾಡಿಕೆ.

ಮಂತ್ರ
ಓಂ ಲಕ್ಷ್ಮೀ ನಾರಾಯಣಭ್ಯಂ ನಮ:
ಓಂ ಉಮಾಮಹೇಶ್ವರಾಯ ನಮ:
ಓಂ ವಾಣಿ ಹಿರಣ್ಯಗರ್ಭಭ್ಯಂ ನಮ:
ಓಂ ಶಾಚಿ ಪುರಂದರಭ್ಯಂ ನಮ:
ಓಂ ಮಾತ್ರ ಪಿತೃಚಾರಣ ಕಮಲೇಭ್ಯೋ ನಮ:
ಓಂ ಗ್ರಾಮ ದೇವತಭ್ಯಂ ನಮ:
ಓಂ ಸ್ಥಾನ ದೇವತಭ್ಯೋ ನಮ:
ಓಂ ಕುಲದೇವತಭ್ಯೋ ನಮ:
ಓಂ ವಾಸ್ತು ದೇವತಭ್ಯೋ ನಮ:
ಓಂ ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮ:
ಸುಮುಖಾಸ್‌ಚೈಕಾ ಏಕ ದಂತಷ್ಚ ಕಪಿಲೋ ಗಜಕರ್ಣಕಾ:
ಲಂಬೋದರೋ ವಿಕಟೋ ವಿಘ್ನನಾಶೋ ವಿನಾಯಕ:
ಧೂಮ್ರಕೇತು ಗಣಾಧ್ಯಕ್ಷೋ ಬಾಲಚಮದ್ರೋ ಗಜಾನನ
ದ್ವಾದಷಾಯಿತಾನಿ ನಮನಿ ಯಾ ಪತೇತಥ್‌ ಶ್ರುರುಣುಯಾದಪಿ
ವಿಧ್ಯಾರಂಭೇ ವಿವಾಹೇ ಚಾ ಪ್ರವೇಶೆ ನಿರ್ಗಾಮೆ ಥಾಥಾ
ಸಂಗ್ರಾಮೇ ಸರ್ವಕಾರ್ಯೇಶು ವಿಘ್ನಸ್ಥಾಸ್ಯ ನಾ ಜಾಯಥೇ

  ಹನುಮಂತನ ನಿಸ್ವಾರ್ಥ ಭಕ್ತಿ

ಸಂಕಲ್ಪ
ನೀರು, ಕುಂಕುಮ, ಅಕ್ಷತೆಯನ್ನು ತೆಗೆದುಕೊಂಡು ಸಂಕಲ್ಪ ಮಂತ್ರವನ್ನು ಜಪಿಸಿ ನೆಲದ ಮೇಲೆ ಬಿಡಿ.

ಮಂತ್ರ
ಓಂ ವಿಷ್ಣುರ್ ವಿಷ್ಣು: ಶ್ರೀ ಮಧ್ಭಗವಥೋ ಮಹಾಪುರುಶಸ್ಯ ವಿಷ್ಣೋ ರಗ್ನಾಯಿ ಪ್ರವರ್ಥಮಾನಸ್ಯ ಆದ್ಯ ಬ್ರಾಹ್ಂಣೋ ದ್ವಿತೀಯ ಪರಾರ್ಥೆ ಶ್ವೇತ ವರಹ ಕಲ್ಪೆ ಜಂಬು ಸದ್ವೀಪೇ ಭರತ ಖಮಡೇ ಛಾ ಆರ್ಯ ವರ್ಥೈಕ ದೇಶಾಂತರಗಾಥೆ ಪುಣ್ಯಕ್ಷೇತ್ರೆ ಕಲಿಯುಗೇ ಕಲಿ ಪ್ರಥಮ ಚರಣೆ ಮಾಸನ ಮಾತ್ತಮೇ ಶ್ರವಣ ಮಾಸೆ ಕೃಷ್ಣ ಪಕ್ಷೆ ಅಷ್ಟಮ್ಯಾಸಂ ತಿಥಿ, ರೋಹಿಣಿ ನಕ್ಷತ್ರ, ಶುಭ ವಾಸರೆ, (ನಿಮ್ಮ ಹೆಸರು) ( ನಿಮ್ಮ ಗೋತ್ರ ಜಪಿಸಿ ), ಹಂ ಜನ್ಮಾಷ್ಟಮಿ ಪುಣ್ಯವಾಸರೆ ಭಗವಥೋ ಮಹಾಪುರುಷಸ್ಯ ಕೃಷ್ಣಾಸ್ಯ ವಿಶಿಷ್ಟ ಪೂಜಾನಂ ಅಹಂ ಕರಿಷ್ಯೇ

ದೀಪ ಪೂಜಾ
ಕುಂಕುಮ, ಅಕ್ಷತೆಯನ್ನು ದೀಪದ ಬಳಿ ಹಾಕಿ. ಈ ವೇಳೆ ದೀಪ ಮಂತ್ರವನ್ನು ಜಪಿಸಿ.

ಮಂತ್ರ
ಧೋ ದೀಪೋ ! ದೇವ ರೂಪಸ್ಥವಾಂ ಕರ್ಮಸಾಕ್ಷಿ ಹ್ಯಾ ವಿಘ್ನಕೃಥ್, ಯವತ್ ಕರ್ಮ ಸಮಾಪ್ತಿ: ಸ್ಯಾರ್ರ್ಥ ಥವದಾತ್ರ ಸ್ಥಿರೋ ಭಾವ ! ಓಂ ದೀಪ ದೇವತಾಯಿ ನಮ: !

ಕಲಶ ಪೂಜೆ
ಕೃಷ್ಣನ ಮೂರ್ತಿ ಎದುರು ಕಲಶವನ್ನು ಬಲಗಡೆ ಸ್ಥಾಪನೆ ಮಾಡಿ. ಕಲಶದ ನಾಲ್ಕು ಕಡೆಗಳಲ್ಲೂ ಕುಂಕುಮದ ತಿಲಕವಿಡಿ. ಈ ವೇಳೆ ಕಲಶ ಪೂಜಾ ಮಂತ್ರವನ್ನು ಜಪಿಸಿ

ಗಂಧ
ಕಲಶದ ನೀರಿನಲ್ಲಿ ಚಂದನ ಅಥವಾ ಕುಂಕುಮವನ್ನಿಡಿ

ಮಂತ್ರ
ದಂಧ ದ್ವಾರಾನ್ ದೂರದರ್ಶಂ ನಿತ್ಯ ಪುಷ್‌ತಂಕಾರಿ ಶಿನಿಮ್
ಈಶ್ವರೀಂ ಸರ್ವಭೂತಾನಂ ತಾಮಿಪೋಪಹ್ವೇ ಶಿರಿಯಂ

ಅಕ್ಷತೆ ಹಾಗೂ ಅಡಿಕೆ ಯನ್ನು ಕಲಶದಲ್ಲಿಟ್ಟು ಅಕ್ಷತಾಣ ಸಮರ್ಪಯಾಮಿ ಎಂಬ ಮಂತ್ರ ಜಪಿಸಿ. ಈ ಕೆಳಗಿನ ಶ್ಲೋಕವನ್ನು ಸಹ ಹೇಳಿ.

ಮಂತ್ರ
ಓ ಯಾ ಫಲಿನಿ ಯಾ ಅಫಲ ಅಪುಷ್ಪಾ ಯಾಶ್ಚ ಪುಷ್ಪಿನ್
ಬೃಹಸ್ಪಿತ್ ಪ್ರಸುತಸ್ಥಾನ್ನೋ ಮುಷ್ಯಂತಿ ಹಸ:

ಇನ್ನು, ಕಲಶದೊಳಗೆ ಪಂಚ ಪಲ್ಲವ (ಪೂಜೆಗೆ ಶ್ರೇಷ್ಠವಾದ ಐದು ಎಲೆಗಳು) ಅಥವಾ ವೀಳ್ಯದೆಲೆಯನ್ನಿಟ್ಟು ಕಲಶದ ಮೇಲೆ ತೆಂಗಿನ ಕಾಯಿ ಇಡಿ. ಬಳಿಕ, ಕಲಶಕ್ಕೆ ಚಂದನ, ಧೂಪ, ದೀಪ, ಪುಷ್ಪ ಹಾಗೂ ನೈವೇದ್ಯವನ್ನು ಅರ್ಪಿಸಿ. ಈ ವೇಳೆ ಈ ಮಂತ್ರವನ್ನು ಜಪಿಸಿ.

ಮಂತ್ರ
ಕಲಶಸ್ಯ ಮುಖೇ ವಿಷ್ಣು ಕಂತೆ ರುದ್ರ ಸಮಶ್ರಿತ
ಮೂಲೇ ತತ್ರ ಸ್ಥಿಥೋ ಬ್ರಹ್ಮ ಮಧ್ಯೇ ಮಾತೃಗಣ ಸ್ಥಿತಿ
ಕುಕ್ಷೋ ಥು ಸಾಗರ ಸರ್ವೇ ಸಪ್ತದ್ವೀಪ ವಸುಂಧರ
ರುಗ್ವೇದೊ ಯರ್ಜುವೇದ ಸಾಮವೇದೋ ಅಥರ್ವನ
ಅಂಗೈಶ್ಚ ಸಹಿತ ಸರ್ವೇ ಕಲಶಂ ಥು ಸಮಶ್ರಿತ
ಅಥ್ರ ಯಜಮಾನಸ್ಯ ದುರಿತಾಕ್ಷ್ಯ ಕಾರಕ
ಓಂ ಕಲಶಾಸ್ಥ ದೇವತ ಉಪಂ ಪಥಯೇ ನಮ:

ಗುರು ಪೂಜೆ
ಶ್ರೀ ಕೃಷ್ಣ ಪೂಜೆಯಲ್ಲಿ ಗುರು ಪೂಜೆಗೂ ಪ್ರಾಮುಖ್ಯತೆ ಇದೆ. ಭಗವಾನ್ ಶ್ರೀ ಕೃಷ್ಣನನ್ನು ನಿಮ್ಮ ಸರ್ವೋಚ್ಚ ದೇವರೆಂದು ಭಾವಿಸಿಕೊಳ್ಳಿ. ಈ ವೇಳೆ ಗುರು ಬ್ರಹ್ಮ ಮಂತ್ರವನ್ನು ಜಪಿಸಿ.

ಮಂತ್ರ
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಂಬ್ರಹ್ಮ ತಸ್ಮೈಶ್ರೀ ಗುರವೇ ನಮಃ
ಮೂಕಂ ಕರೋಥಿ ವಾಚಲಂ ಪಂಗುಂ ಲಂಘಾಯಾಥೆ ಗಿರಿಮ್
ಯತ್ ಕೃಪಾ ಥಮಹ: ವಂದೇ ಪರಮಾನಂದ ಮಾಧವಂ

ನಂತರ ಧ್ಯಾನದೊಂದಿಗೆ ಶ್ರೀ ಕೃಷ್ಣ ಪೂಜೆಯನ್ನು ಆರಂಭಿಸಿ.

ಧ್ಯಾನ
ಶ್ರೀ ಕೃಷ್ಣನನ್ನು ನಿಮ್ಮ ಮನಸ್ಸಿನಲ್ಲಿ ಹಾಗೂ ಹೃದಯದಲ್ಲಿಟ್ಟುಕೊಂಡು ಈ ಮಂತ್ರವನ್ನು ಜಪಿಸಿ

  ಮಾಘದಲ್ಲಿ ಶ್ರೀಕೃಷ್ಣನ ಪೂಜೆ ಏಕೆ ? ಮತ್ತು ಹೇಗೆ ?

ಮಂತ್ರ
ಬರ್ಹ ಪೀಡಂ ನಟವರಂ ದ್ವಾಯು ಕರ್ಣಯೋ ಕರ್ಣಿಕಾರಂ

ಭಿಭ್ರದ್ವಾಸ ಕನಕ ಕಪೀಷಂ ವೈಜಯಂತಿಂ ಛಾ ಮಾಲಂ
ರಂಧ್ರಾನ್ ವೇಣುರಥ ರಸುಧಾಯ ಪೂರಾಯನ್ ಗೋಪಬ್ರುಂದಾಯ್
ಬೃಂದಾರಣ್ಯಂ ಸ್ವಪದ ರಮಣಂ ಪ್ರವೀಷದ್ ಗೀತಕೀರ್ತಿ
ಧ್ಯಾನಂ ಸಮರ್ಪಯಾಮಿ, ಶ್ರೀ ಕೃಷ್ಣಾಯ ನಮ:

ಆಸನಂ
ಶ್ರೀ ಕೃಷ್ಣನ ಮೂರ್ತಿಯ ಮೇಲೆ ಹೂವನ್ನಿಡಿ. ಈ ವೇಳೆ ಈ ಕೆಳಗಿನ ಆಸನಂ ಮಂತ್ರವನ್ನು ಹೇಳಿಕೊಳ್ಳಿ

ಮಂತ್ರ
ಓಂ ಪುರುಷ ಯೇ ವೇದಂ ಯದ್ಭುತಂ ಯಚ್ಚ ಭವ್ಯಂ
ಉತ್ತಾಂರುತತ್ವಾ ಸ್ಯೇಶಾನೋ ಯದನ್ನೇನಾಥಿ ರೋಹತಿ
ಪುಷ್ಪಾಸನಂ ಸಮರ್ಪಯಾಮಿ

ಪಾಡ್ಯಂ
ಶ್ರೀ ಕೃಷ್ಣನಿಗೆ ಎರಡು ಹನಿ ನೀರು ಚಿಮುಕಿಸಿ.

ಮಂತ್ರ
ಓಂ ಯೇಥವನಸ್ಯ ಮಹಿಮಾಥೋ ಜ್ಯಾಯಶ್ಚ ಪುರುಷಾ:
ಪದೋದಾಸ್ಯ ವಿಶ್ವಭೂಮಿ ತ್ರಿಪಾದಸ್ಯಅಮೃತಂ ದಿಥಿ
ಪಾಡ್ಯಂ ಸಮರ್ಪಯಾಮಿ ನಮ:

ಅರ್ಘ್ಯಂ
ನೀರು, ಕುಂಕುಮ, ಚಂದನ, ಅಕ್ಷತೆ ಹಾಗೂ ಹೂವುಗಳನ್ನು ಶ್ರೀ ಕೃಷ್ಣನಿಗೆ ಅರ್ಪಿಸಿ

ಮಂತ್ರ
ತಾಮ್ರಪತ್ರೆ ಸ್ಥೀಥಂ ಥೋಯಂ ಗಂಧ ಪುಷ್ಪ ಫಲನೀವಥಂ
ನಹಿರಣ್ಯಂ ದಾಧಂಅರ್ಘ್ಯಂ ಗೃಹಾಣ ಪರಮೇಶ್ವರ

ಆಚಮನಂ
ಶ್ರೀ ಕೃಷ್ಣನ ಮೂರ್ತಿ ಎದುರಲ್ಲಿ ಕೆಲ ಹನಿಗಳಷ್ಟು ನೀರು ಚಿಮುಕಿಸಿ. ಈ ವೇಳೆ ಈ ಮಂತ್ರ ಹೇಳಿಕೊಳ್ಳಿ

ಮಂತ್ರ
ಸರ್ವ ತೀರ್ಥ ಸಮನೀತಂ ಸುಗಂಧಿ ಇರ್ಮಲಂ ಜಲಂ,
ಅಚಮನಾರ್ಥ ಮಯಾ ದತ್ತಂ ಗೃಹಾಣ ಪರಮೇಶ್ವರ

ಸ್ನಾನಂ
ಕೃಷ್ಣನಿಗೆ ಹೂವಿನೊಂದಿಗೆ ಕೆಲ ಹನಿಗಳಷ್ಟು ನೀರನ್ನು ಚಿಮುಕಿಸಿ. ಈ ವೇಳೆ, ಈ ಮಂತ್ರವನ್ನು ಜಪಿಸಿ.

ಮಂತ್ರ
ಗಂಗೇ ಛಾ ಯಮುನೇ ಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಾಲೇಸ್ಮಿನ್ ಸನ್ನಿಧಿಂ ಕುರು
ಸ್ನಾನಂ ಸಮರ್ಪಯಾಮಿ ನಮ:

ದುಗ್ದ
ಕೃಷ್ನನಿಗೆ ಬಟ್ಟಲಿನಲ್ಲಿ ಹಾಲನ್ನು ಅರ್ಪಿಸಿ. ಈ ವೇಳೆ, ಈ ಮಂತ್ರವನ್ನು ಜಪಿಸಿ.

ಮಂತ್ರ
ಕಾಮಧೇನು ಸಮೂದ್ಭೂಥಂ ಸರ್ವೇಷ ಜೀವನಂ ಪರಂ
ಪವನಂ ಯಗ್ನ ಹೇಥುಶ್ಚ ಪಾಯ: ಸ್ನಾನರ್ಥಂ ಅರ್ಪಿತಂ
ದುಗ್ಧ ಸ್ನಾನಂ ಸಮರ್ಪಯಾಮಿ ನಮ:

ಧಾಧಿ
ಅದೇ ಬಟ್ಟಲಿನಲ್ಲಿ ಮೊಸರು ಹಾಕಿ ಕೃಷ್ಣನಿಗೆ ಅರ್ಪಿಸಿ. ಈ ವೇಳೆ ಈ ಮಂತ್ರವನ್ನು ಜಪಿಸಿ.

ಮಂತ್ರ
ಪಾಯಸಾಸ್ಥು ಸಮುದ್ಭೂತಂ ಮಧುರಾಮ್ಲಂ ಶಶಿ ಪ್ರಭಂ,
ದಯಸನಿಥಂ ಮಾಯಾದೇವ ಸ್ನಾನರ್ಥಂ ಪ್ರತಿಗೃಹ್ಯಯಾಥಂ
ಧಾಧಿ ಸ್ನಾನಂ ಸಮರ್ಪಯಾಮಿ ನಮ:

ಗೃತ
ಮತ್ತೆ ಅದೇ ಬಟ್ಟಲಿನಲ್ಲಿ ತುಪ್ಪವನ್ನು ಹಾಕಿ ಅರ್ಪಿಸಿ. ಈ ವೇಳೆ, ಈ ಮಂತ್ರವನ್ನು ಜಪಿಸಿ.

ಮಂತ್ರ
ನವನೀಥ ಸಮೂತ್‌ಪನ್ನಂ ಸರ್ವ ಸಂತೋಷ ಕಾರಕಂ,
ಗೃತಂ ತೂಭ್ಯಂ ಪ್ರದಸ್ಯಮಿ ಸ್ನಾನರ್ಥಂ ಪ್ರಥಿಗೃಹ್ಯಾಥಂ
ಗೃತ ಸ್ನಾನಂ ಸಮರ್ಪಯಾಮಿ ನಮ:

ಮಧು
ಅದೇ ಬಟ್ಟಲಿನಲ್ಲಿ ಜೇನು ತುಪ್ಪ ಹಾಕಿಕೊಂಡು ಗೋಪಾಲನಿಗೆ ಅರ್ಪಿಸಿ. ಈ ವೇಳೆ, ಈ ಮಂತ್ರವನ್ನು ಜಪಿಸಿ.

ಮಂತ್ರ
ಥಾರು ಪುಷ್ಪ ಸಮುದ್‌ಭುತಂ ಸುಸ್ವಾದು ಮಧುರಂ ಮಧು,
ತೇಜಾ: ಪುಷ್ಠೀಕರಂ ದಿವ್ಯಾಂ ಸ್ನಾನಾರ್ಥಂ ಪ್ರಥಿಗೃಹ್ಯಾಥಂ
ಮಧು ಸ್ನಾನಂ ಸಮರ್ಪಯಾಮಿ ನಮ:

ಶರ್ಕರ (ಸಕ್ಕರೆ) ಸ್ನಾನ
ಶ್ರೀ ಕೃಷ್ಣನಿಗೆ ಬಟ್ಟಲಿನಲ್ಲಿ ಸಕ್ಕರೆಯನ್ನು ಅರ್ಪಿಸಿ. ಈ ವೇಳೆ ಈ ಮಂತ್ರವನ್ನು ಜಪಿಸಿ

ಮಂತ್ರ
ಇಕ್ಷುಸರ ಸಮುದ್ಭುತ ಶರ್ಕರ ಪುಷ್ಠಿಕಾರಕ,
ಮಲಾಪ ಹರಿಕಾ ದಿವ್ಯ ಸ್ನಾನರ್ಥಂ ಪ್ರಥಿ ಗೃಹ್ಯಥಾಂ

ಶರ್ಕರ ಸ್ನಾನಂ ಸಮರ್ಪಯಾಮಿ ನಮ:

ಬಳಿಕ ಶುದ್ಧ ನೀರಿನೊಂದಿಗೆ ಸ್ನಾನ ಮಾಡಿಸಿ.

ಆಚಮನಂ
ಶ್ರೀ ಕೃಷ್ಣನ ಮೂರ್ತಿಯ ಮೇಲೆ ಕೆಲ ಹನಿಗಳಷ್ಟು ನೀರು ಚಿಮುಕಿಸಿ. ಈ ವೇಳೆ ಈ ಮಂತ್ರ ಚಿಮುಕಿಸಿ

  ಶ್ರೀರಂಗಪಟ್ಟಣದ ಶ್ರೀಚಕ್ರಧಾರಿ ಕ್ಷಣಾಂಬಿಕಾ ದೇವಾಲಯ

ಮಂತ್ರ
ಕಾವೇರಿ ನರ್ಮದೇ ವೇಣಿ ತುಂಗಭದ್ರಾ ಸರಸ್ವತಿ
ಗಂಗೇ ಚ ಯಮುನಾ ಥೋಯಂ ಮಯಾ ಸ್ನಾನರ್ಥಂ ಅರ್ಪಿತಂ
ಶುದ್ಧ ಜಲ ಸ್ನಾನಂ ಸಮರ್ಪಯಾಮಿ ನಮ:

ವಸ್ತ್ರೋಪ ವಸ್ತ್ರ
ಮೂರ್ತಿಯನ್ನು ಶುಚಿಗೊಳಿಸಿದ ಬಳಿಕ ಶ್ರೀ ಕೃಷ್ಣನಿಗೆ ಬಟ್ಟೆಯನ್ನು ಅರ್ಪಿಸಿ. ಈ ವೇಳೆ ಈ ಮಂತ್ರ ಜಪಿಸಿ.

ಮಂತ್ರ
ಭೂಶಾದಿ ಸೌಮ್ಯೇ ಲೋಕ ಲಗ್ನ ನಿವಾರಿಣೇ,
ಭಯೋಪಾಪಾಡಿಥೇ ಥುಬ್ಯಂ ವಪಸೀ ಪ್ರತಿ ಗೃಹ್ಯಥಾಂ

ತಿಲಕ
ಶ್ರೀ ಕೃಷ್ನನಿಗೆ ಚಂದನ ಹಾಗೂ ಕುಂಕುಮದಿಂದ ತಿಲಕವನ್ನಿಡಿ. ಈ ವೇಳೆ ಈ ಮಂತ್ರ ಜಪಿಸಿ

ಮಂತ್ರ
ಶ್ರೀಖಂಡ ಚಂದನಂ ದಿವ್ಯಂ ಗಂಧಾದ್ಯಂ ಸುಮನೋಹರಂ
ವಿಲೇಪನಂ ಸುರಶ್ರೇಷ್ಠ ಚಂದನಂ ಪ್ರತಿ ಗೃಹ್ಯತಂ

ಪುಷ್ಪ

ಶ್ರೀ ಕೃಷ್ಣನಿಗೆ ಹಲವು ವಿಧದ ಹೂವುಗಳನ್ನು ಅರ್ಪಿಸಿ. ಈ ವೇಳೆ ಈ ಮಂತ್ರ ಜಪಿಸಿ

ಮಂತ್ರ
ಪುಷ್ಫಾಣಿ ಸಮರ್ಪಯಾಮಿ ನಮ:

ನಂತರ ತುಳಸಿ ಎಲೆಗಳ ಮೇಲೆ ಚಂದನವನ್ನಿಟ್ಟು ಭಗವಂತನಿಗೆ ಅರ್ಪಿಸಿ. ಈ ವೇಳೆ ಈ ಮಂತ್ರ ಜಪಿಸಿ.

ಮಂತ್ರ
ಇದಂ ಸಚಂದನಂ ತುಳಸೀ ದಳಂ ಸಮರ್ಪಯಾಮಿ

ಧೂಪ ಹಾಗೂ ದೀಪ
ಧೂಪ ಹಾಗೂ ದೀಪವನ್ನು ಅರ್ಪಿಸಿ

ಮಂತ್ರ
ವನಸ್ಪತಿ ರಸೋದ್ಭೂತಾ: ಗಂಧದ್ಯಾ ಸುಮನೋಹರ:
ಆಘ್ರೇಯ ಸರ್ವ ದೇವಾನಂ ಧೂಪೋಯಂ ಪ್ರಥಿಗೃಹ್ಯತಂ
ಧೂಪಂ, ದೀಪಂ ದರ್ಶಯಾಮಿ ನಮ:

ನೈವೇದ್ಯ ಅರ್ಪಿಸಿ
ಶ್ರೀ ಕೃಷ್ನನಿಗೆ ಹಲವು ವಿಧಗಳ ತಿಂಡಿಗಳನ್ನು ಅರ್ಪಿಸಿ (ಭೋಗ). ಈ ವೇಳೆ ಈ ಮಂತ್ರ ಜಪಿಸಿ

ಮಂತ್ರ
ಓಂ ಕೃಷ್ಣಾಯ ವಸುದೇವಾಯ ನೈವೇದ್ಯಂ ನಿವೇದಯಾಮಿ ನಮ:

ಆಚಮನಂ
ನೈವೇದ್ಯಕ್ಕೆ ಐದು ಬಾರಿ ನೀರು ಚಿಮುಕಿಸಿ.
ಓಂ ಪ್ರಾಣಾಯ ಸ್ವಾಹ:, ಓಂ ಅಪನಾಯ ಸ್ವಾಹ:, ಓಂ ಸಮನಾಯ ಸ್ವಾಹ:, ಓಂ ವ್ಯನಾಯ ಸ್ವಾಹ:, ಓಂ ಉದನಾಯ ಸ್ವಾಹ:

ಫಲ
ಭಗವಂತನಿಗೆ ಹಲವು ವಿಧಗಳ ಹಣ್ಣುಗಳನ್ನು ಅರ್ಪಿಸಿ. ಈ ವೇಳೆ ಈ ಮಂತ್ರ ಜಪಿಸಿ.

ಮಂತ್ರ
ಇದಂ ಫಲಂ ಮಯಾ ದೇವ ಸ್ಥಾಪಿಥಂ ಪುರಥಸ್ವ,
ಥೇನ ಮೇಮ್ ಸಫಲವಪ್ಥೀಹ್ ಭಾವೆಜ್ಜನ್ಮಣಿ ಜನ್ಮನಿ
ಫಲಂ ಸಮರ್ಪಯಾಮಿ ನಮ:

ತಾಂಬೂಲಂ
ತಾಂಬೂಲವನ್ನು ಅರ್ಪಿಸಿ

ಪುಷ್ಫಾಂಜಲಿ
ಎರಡೂ ಕೈಗಳಿಂದ ಹೂವುಗಳನ್ನು ತೆಗೆದುಕೊಂಡು ಶ್ರೀ ಕೃಷ್ಣನಿಗೆ ಅರ್ಪಿಸಿ. ಈ ವೇಳೆ, ಈ ಮಂತ್ರ ಜಪಿಸಿ

ಮಂತ್ರ
ನಾನಾ ಸುಗಂಧ ಪುಷ್ಪಾಣಿ ಯತ ಕಲೋರ್ದಭವಾನಿ ಚ,
ಪುಷ್ಪಂಜಲೀರ್ ಮಯಾ ದತ್ತ ಗೃಹನ ಪರಮೇಶ್ವರ

ನಮಸ್ಕಾರ
ಭಗವಂತನಿಗೆ ವಂದಿಸಿ

ಮಂತ್ರ
ಕೃಷ್ಣಾಯ ವಸುದೇವಾಯ ಹರಯೇ ಪರಮಾತ್ಮನೇ,
ಪ್ರಣಥ ಕ್ಲೇಷ ನಾಶಯ ಗೋವಿಂದಾಯ ನಮೋ ನಮ:

ಮಂತ್ರ ಜಪ

ಈ ಕೆಳಗಿನ ಮಂತ್ರವನ್ನು 15 ಇಮಿಷಗಳ ಕಾಲ ಜಪ ಮಾಡಿ
ಓಂ ಕ್ರೀಂ ಕೃಷ್ಣಾಯ ಬ್ರಾಹ್ಮಣ್ಯ ದೇವಾಯ ನಮ:

ಪ್ರಾರ್ಥನ
ಆರೋಗ್ಯ, ಸಮೃದ್ಧಿ ಹಾಗೂ ಐಶ್ವರ್ಯಕ್ಕಾಗಿ ಭಗವಂತನನ್ನು ಪ್ರಾರ್ಥಿಸಿ

ಮಂತ್ರ
ನಮೋ ಬ್ರಾಹ್ಮಣ್ಯ ಹಿತಾಯ ಚಾ,
ಜಗದ್ಧೀತಾಯ ಕೃಷ್ಣಾಯ ಗೋವಿಂದಾಯ ನಮೋ ನಮ:

ಬಳಿಕ ಶ್ರೀ ಕೃಷ್ಣನಿಗೆ ಆರತಿ ಮಾಡಿ. ನಂತರ, ಭಕ್ತರಿಗೆ ತೀರ್ಥ, ಪ್ರಸಾದವನ್ನು ನೀಡಿ

Leave a Reply

Your email address will not be published. Required fields are marked *

Translate »