ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಭಾಗವತ ಪುರಾಣ ಏನು ಹೇಳುತ್ತದೆ?

18 ಪುರಾಣಗಳು : ಭಾಗವತ ಪುರಾಣ ಏನು ಹೇಳುತ್ತದೆ?
ಭಾಗವತ ಪುರಾಣ
ವಿಷ್ಣು ಮಹಾಪುರಾಣದಂತೆಯೇ ಭಾಗವತವೂ ವಿಷ್ಣುವಿನ ಮೇಲ್ಮೆಯನ್ನು ಹೇಳ ಹೊರಟದ್ದು. ಇದರಷ್ಟು ಸುಪ್ರಸಿದ್ಧವಾದ ಮಹಾಪುರಾಣವಿನ್ನೊಂದಿಲ್ಲ. ಯುರೋಪಿನಲ್ಲಿ ಸಂಪಾದಿಸಿ ಅನುವಾದಿಸಲಾದ ಮೊಟ್ಟ ಮೊದಲ ಪುರಾಣವಿದು. ಆದರೆ ಇದು ಅರ್ವಾಚೀನ ಗ್ರಂಥ. ವಿಷ್ಣುಪುರಾಣವನ್ನು ಬಹಳವಾಗಿ ಅವಲಂಬಿಸಿದೆ. ಹೀಗಿದ್ದರೂ ಈ ಪುರಾಣ ಪ್ರಾಚೀನಾಂಶಗಳನ್ನು ಬಹಳಮಟ್ಟಿಗೆ ಬಳಸಿಕೊಂಡಿದೆ. ಪುರಾಣ ಸಾಹಿತ್ಯದಲ್ಲಿ ಇದೊಂದೇ ಏಕಸೂತ್ರತೆ, ಸಾಹಿತ್ಯಸೌಂದರ್ಯಗಳಿಂದ ಕೂಡಿರುವ ಕೃತಿ. ಇದರ ಸ್ಕಂಧಗಳು (ಅಥವಾ ಖಂಡ) 12. ಶ್ಲೋಕಗಳ ಮೊತ್ತ 18000. *ಅಲ್ಪಸ್ವಲ್ಪ ಭಿನ್ನವಾದರೂ ಇದರ ಸೃಷ್ಟಿಕಥೆಗಳು ಪುರಾಣವನ್ನೇ ಹೆಚ್ಚಾಗಿ ಹೋಲುತ್ತವೆ. ವಿಷ್ಣುವಿನ ವರಾಹಾವತಾರದ ಕಥೆ ವಿಸ್ತಾರವಾಗಿ ಬಂದಿದೆ. ಮೂರನೆಯ ಸ್ಕಂಧದ ಕೊನೆಯಲ್ಲಿ ವಿಷ್ಣುವಿನ ಅವತಾರವೆಂದು ಹೇಳಲಾದ ಸಾಂಖ್ಯದರ್ಶನದ ಮೂಲಾಚಾರ್ಯನೆನ್ನಿಸಿರುವ ಕಪಿಲಮುನಿಯ ಬಾಯಿಯಿಂದ ಯೋಗಶಾಸ್ತ್ರವನ್ನು ಸುದೀರ್ಘವಾಗಿ ಹೇಳಿಸಲಾಗಿದೆ. ಪ್ರ.ಶ. 12ನೆಯ ಶತಮಾನದಲ್ಲಿದ್ದ ಜಯದೇವನ ಗೀತಗೋವಿಂದದಲ್ಲಿರುವಂತೆ ಇಲ್ಲಿ ಗೌತಮಬುದ್ಧ ವಿಷ್ಣುವಿನ ಬೌದ್ಧಾವತಾರವಾಗಿದ್ದಾನೆ.
ಹಿಂದಿನ ಪರಂಪರೆಯಂತೆ ತುಲಸೀಪತಿಯಾದ ಜಲಂಧರನ ಸಂಹಾರಕ್ಕಾಗಿ ಆಕಾಶ, ಪಾತಾಳಗಳನ್ನೊಂದು ಮಾಡುವಂತೆ ನಗ್ನಮೂರ್ತಿಯಾಗಿ ತುಲಸಿಯೆದುರು ನಿಂತ ವಿಷ್ಣವಿನದು ಬೌದ್ಧಾವತಾರ. ಭಾಗವತದಲ್ಲಿ ವಿಷ್ಣು ಪ್ರಭಾವವನ್ನು ಹೇಳುವ ಧ್ರುವ, ಪ್ರಹ್ಲಾದಾದಿ ವಿಷ್ಣುಭಕ್ತರ ಕಥೆಗಳೂ ಭಗವದ್ಗೀತೆಯ ಕೆಲಶ್ಲೋಕಗಳೂ ಶಕುಂತಲೋಪಾಖ್ಯಾನವೂ ಬಂದಿರುತ್ತವೆ. ಅಲ್ಲದೆ, ಹರಿವಂಶ, ವಿಷ್ಣು ಪುರಾಣಗಳಲ್ಲಿರುವುದ ಕ್ಕಿಂತಲೂ ಹೆಚ್ಚು ವಿವರಗಳಿಂದ ಕೃಷ್ಣಚರಿತಾಮೃತ ಇದರ ಹತ್ತನೆಯ ಸ್ಕಂಧದಲ್ಲಿ ಬಂದಿದೆ.
ಇದರಲ್ಲಿರುವ ಕೃಷ್ಣ ಗೋಪಿಯರ ಪ್ರೇಮದೃಶ್ಯಗಳು ಜನಪ್ರಿಯವಾಗಿವೆ. ಯಾದವರ ನಾಶವೂ ಕೃಷ್ಣನ ನಿರ್ಯಾಣವೂ ಕಲಿಯುಗದ ಭವಿಷ್ಯವೂ ಪ್ರಳಯವೂ ಕೊನೆಯ ಭಾಗಗಳಲ್ಲಿ ಬಂದಿವೆ. ಭಾಗವತದ ಹೇಳಿಕೆಯಂತೆ ರಾಜನಿಲ್ಲದ ರಾಜ್ಯ ಅರಾಜಕ. ರಾಜನಲ್ಲಿ ವಿಷ್ಣುವಿನ ಅಂಶವಿದೆ. ಅವನ ಶಕ್ತಿ ಅತಿಮಾನುಷ. ಪ್ರಜೆಗಳು ಅವನಿಗೆ ವಿಧೇಯರಾಗಿರಬೇಕು. ಅವರು ತೆರುವ ಕರಕಂದಾಯಗಳಿಗೆ ಪ್ರತಿಯಾಗಿ ಆತ ಅವರ ವಿತ್ತಜೀವಿತಗಳನ್ನು ಕಾಪಾಡಬೇಕು.
ದುರಾಡಳಿತವೆಸಗಿದ ವೇಣರಾಜ ಋಷಿಶಾಪದಿಂದ ಸತ್ತ. ಅವನಾದ ಬಳಿಕ ಪಟ್ಟಕ್ಕೆ ಬಂದ ಪೃಥು ಯೋಗ್ಯವಾಗಿ ರಾಜ್ಯಭಾರ ಮಾಡಿ, ಸ್ವಧರ್ಮಶಿಕ್ಷಣವನ್ನು ಪ್ರಜೆಗಳಿಗೀಯದೆ ಅವರಿಂದ ತೆರಿಗೆ ವಸೂಲು ಮಾಡುವ ಅರಸ ಅವರ ಪಾಪಗಳಿಗೆ ಬಾಧ್ಯನಾಗಿ ತನ್ನ ಮಹತ್ತ್ವವನ್ನು ಕಳೆದುಕೊಳ್ಳುವನೆಂದು ಸಾರಿದ ಈ ಅಂಶವನ್ನೂ ಭಾಗವತ ಉಲ್ಲೇಖಿಸಿದೆ.
*ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*

Leave a Reply

Your email address will not be published. Required fields are marked *

Translate »