ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸ್ವಾಮಿ ವಿವೇಕಾನಂದ – ಸಂದೇಶ ನುಡಿ ಮುತ್ತುಗಳು

ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ – ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು.
ಸ್ವಾಮಿ ವಿವೇಕಾನಂದರು ಜ್ಞಾನದ ದೀವಿಗೆ ಹಚ್ಚಿದ ವೀರ ಸನ್ಯಾಸಿಯ ಸಂದೇಶಗಳು ಇಲ್ಲಿವೆ. ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ವಿವೇಕಾನಂದರ ಚಿಂತನೆ, ಸಂದೇಶಗಳು ಎಂದೆಂದಿಗೂ ಪ್ರಸ್ತುತ.
ಸ್ವಾಮಿ ವಿವೇಕಾನಂದರ ಜೀವನ, ಸಂದೇಶಗಳಲ್ಲಿ ವಿಶೇಷವಾಗಿ ಯುವಜನರ ಮೇಲೆ ಪ್ರಭಾವ ಬೀರುವ, ಬಾಳು ಬೆಳಗುವ ಅಂಶಗಳಿರುತ್ತಿದ್ದವು.
ಇವರು 1863, ಜನವರಿ 12ರಂದು ಕೊಲ್ಕತ್ತದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ‘ವಿವೇಕಾನಂದ’ ಎಂಬ ಹೆಸರನ್ನು ಪಡೆದರು.
ವಿವೇಕಾನಂದರು ಭಾರತದ ತತ್ವಜ್ಞಾನ, ಯೋಗ, ವೇದಾಂತ ಇವೆಲ್ಲವನ್ನು ಪಾಶ್ಚಿಮಾತ್ಯದೇಶಗಳಲ್ಲಿ ಪ್ರಚಾರ ಮಾಡಿದರು. ಅವರು ತಮ್ಮ ಗುರುಗಳ ಒಳ್ಳೆಯ ಮನೋಭಾವದ ಕಡೆಗೆ ವಾಲಿದರು. ಅವರು ಸನ್ಯಾಸಿಯಾಗಿ ದೇವರಸೇವೆ ಹೇಗೆ ಮಾಡಬಹುದೆಂದು ನಿರೂಪಿಸಿದರು.
ಸರ್ವಧರ್ಮಸಮ್ಮೇಳನ, ದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸಿದ್ಧಾಂತಗಳು, ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಶಿಸಿದವು. ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು೧೮೯೩ ರಲ್ಲಿ ಶಿಕಾಗೊ ನಗರದಲ್ಲಿ ನಡೆದ ಪ್ರಪಂಚ ಮತಗಳ ಸಂಸತ್ತಿನಲ್ಲಿ ಬಂದಿತು.
ಅವರ ಶಿಕಾಗೊ ನಗರದಲ್ಲಿ ನಡೆದ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ “ಅಮೆರಿಕದ ಸಹೋದರ ಸಹೋದರಿಯರೇ” ಎಂಬ ವಾಕ್ಯ ಚಿರಸ್ಮರಣೀಯವಾಗಿದೆ. ಭಾರತದ ಸಂಸ್ಕೃತಿ, ಸಿರಿವಂತಿಕೆ, ಜ್ಞಾನ, ಧರ್ಮ ಇವೆಲ್ಲದರ ವಿರಾಟ್ ರಾಯಭಾರಿ ಸ್ವಾಮಿ ವಿವೇಕಾನಂದರು.
ತಮ್ಮ ಪ್ರಖರ ಚಿಂತನೆ, ಸಮಾಜವನ್ನು ತಿದ್ದುವ ಸಂದೇಶಗಳ ಮೂಲಕವೇ ಸ್ವಾಮಿ ವಿವೇಕಾನಂದರು ವಿದೇಶಿಯನ್ನರ ಮನಗೆದ್ದಿದ್ದರು. ಸ್ವಾಮಿ ವಿವೇಕಾನಂದರ ಮಾತುಗಳನ್ನು ವಿದೇಶಿಗರು ತದೇಕಚಿತ್ತದಿಂದ ಆಲಿಸುತ್ತಿದ್ದರು.

ಜೀವನವೆಂಬುದು ಕಠಿಣ ಸತ್ಯ. ಧೈರ್ಯವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು. – ಸ್ವಾಮಿ ವಿವೇಕಾನಂದ

ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ರಾಷ್ಟ್ರವೂ ಶ್ರೇಷ್ಠತೆಯನ್ನು ಪಡೆಯಲು ಮೂರು ಸಂಗತಿಗಳು ಅವಶ್ಯಕ: 1.ಒಳಿತಿನ ಶಕ್ತಿಯಲ್ಲಿ ದೃಢನಂಬಿಕೆ 2.ಮಾತ್ಸರ್ಯ ಹಾಗೂ ಅಪನಂಬಿಕೆಗಳಿಲ್ಲದಿರುವಿಕೆ 3.ಒಳ್ಳೆಯವರಾಗಲು, ಒಳಿತನ್ನು ಮಾಡಲು ಪ್ರಯತ್ನಿಸುವವರಿಗೆ ಸಹಾಯ ಮಾಡುವಿಕೆ. – ಸ್ವಾಮಿ ವಿವೇಕಾನಂದ

ಪರಹಿತಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿಡಿ. ನೀವು ತ್ಯಾಗಜೀವನವನ್ನು ಆರಿಸಿಕೊಳ್ಳುವುದಾದರೆ ಸೌಂದರ್ಯ, ಹಣ, ಅಧಿಕಾರಗಳ ಕಡೆ ತಿರುಗಿಯೂ ನೋಡಬೇಡಿ. – ಸ್ವಾಮಿ ವಿವೇಕಾನಂದ

ನಮಗೆ ನಾವೇ ಕೇಡನ್ನುಂಟುಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಮಗೆ ಕೇಡನ್ನುಂಟುಮಾಡಲಾರದು ಎಂಬುದು ನಿಶ್ಚಯ. – ಸ್ವಾಮಿ ವಿವೇಕಾನಂದ

ಮೊದಲು ಚಾರಿತ್ರ್ಯವನ್ನು ಬೆಳೆಸಿ. ನೀವು ಮಾಡಬೇಕಾದ ಅತ್ಯುನ್ನತ ಕರ್ತವ್ಯ ಇದು. – ಸ್ವಾಮಿ ವಿವೇಕಾನಂದ

ನಿಮ್ಮೊಬ್ಬರ ಮೇಲೆಯೇ ಇಡೀ ಕೆಲಸವೂ ಬಿದ್ದಿದೆಯೇನೋ ಎಂಬಂತೆ ನೀವು ಪ್ರತಿಯೊಬ್ಬರೂ ಕೆಲಸ ಮಾಡಿ. ಐವತ್ತಕ್ಕೂ ಹೆಚ್ಚು ಶತಮಾನಗಳು ನಿಮ್ಮನ್ನು ನೋಡುತ್ತ ನಿಂತಿವೆ. ಭಾರತದ ಭವಿಷ್ಯ ನಿಮ್ಮನ್ನು ಅವಲಂಬಿಸಿದೆ. ಕೆಲಸಮಾಡಿಕೊಂಡು ಹೋಗಿ. – ಸ್ವಾಮಿ ವಿವೇಕಾನಂದ

ವಿಕಾಸವೇ ಜೀವನ ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ ಸ್ವಾರ್ಥವೆಲ್ಲಾ ಸಂಕೋಚ ಆದುದರಿಂದ ಪ್ರೇಮವೇ ಬದುಕಿನ ಧರ್ಮ. – ಸ್ವಾಮಿ ವಿವೇಕಾನಂದ

ಇತರರಿಗೆ ತಿಳಿಯದೆ ಅವರನ್ನು ನಿಂದಿಸುವುದು ಮಹಾಪರಾಧ ಎಂಬುದನ್ನು ತಿಳಿಯಿರಿ. ಇದನ್ನು ನೀವು ಸಂಪೂರ್ಣ ತ್ಯಜಿಸಬೇಕು. – ಸ್ವಾಮಿ ವಿವೇಕಾನಂದ

ಪ್ರಾಣಿಸಹಜ ವ್ಯಕ್ತಿಯನ್ನು ಮನುಷ್ಯನನ್ನಾಗಿಸಿ, ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ. – ಸ್ವಾಮಿ ವಿವೇಕಾನಂದ

ಬುದ್ಧಿ ಶ್ರೇಷ್ಠವಾದುದು ನಿಜ. ಆದರ ಕಾರ್ಯವ್ಯಾಪ್ತಿ ಸೀಮಿತವಾದುದು. ಸ್ಫೂರ್ತಿ ಉಂಟಾಗುವುದು ಹೃದಯದ ಮೂಲಕ ಹೃದಯವೇ ಸ್ಫೂರ್ತಿಯ ಮೂಲ. – ಸ್ವಾಮಿ ವಿವೇಕಾನಂದ

ನಿಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಮಾಡಿ ನೀವು ಶುದ್ಧ ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು. ಕರ್ತವ್ಯವನ್ನು ಮಾಡಿದರೆ ಕರ್ತವ್ಯಭಾರದಿಂದ ಪಾರಾಗುತ್ತೇವೆ. – ಸ್ವಾಮಿ ವಿವೇಕಾನಂದ

ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ. – ಸ್ವಾಮಿ ವಿವೇಕಾನಂದ

ಯಾರಿಗೆ ತನ್ನಲ್ಲಿ ತನಗೇ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೋ ಅವನು ನಾಸ್ತಿಕ ಎಂದು. – ಸ್ವಾಮಿ ವಿವೇಕಾನಂದ

ಆದರ್ಶದಿಂದ ಕೂಡಿದ ವ್ಯಕ್ತಿ ಒಂದು ಸಾವಿರ ತಪ್ಪುಗಳನ್ನು ಮಾಡಿದರೆ, ಆದರ್ಶವಿಲ್ಲದ ವ್ಯಕ್ತಿಯು ಐವತ್ತು ಸಾವಿರ ತಪ್ಪುಗಳನ್ನು ಮಾಡುತ್ತಾನೆ. ಆದ್ದರಿಂದ ಆದರ್ಶವನ್ನು ಇಟ್ಟುಕೊಳ್ಳುವುದು ಒಳ್ಳೆಯದು. – ಸ್ವಾಮಿ ವಿವೇಕಾನಂದ

ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ. – ಸ್ವಾಮಿ ವಿವೇಕಾನಂದ

ನಿಮಗಾಗಿ ಏನನ್ನೂ ಬಯಸಬೇಡಿ. ಎಲ್ಲವನ್ನೂ ಇತರರಿಗಾಗಿ ಮಾಡಿ. ಭಗವಂತನಲ್ಲೇ ಇರುವುದು ಅವನಲ್ಲೇ ಬಾಳುವುದು, ಚಲಿಸುವುದು ಎಂದರೆ ಇದೇ. – ಸ್ವಾಮಿ ವಿವೇಕಾನಂದ

ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವವನ್ನು ಪ್ರಕಾಶಪಡಿಸುವುದೇ ಧರ್ಮ. – ಸ್ವಾಮಿ ವಿವೇಕಾನಂದ

ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ದವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು. – ಸ್ವಾಮಿ ವಿವೇಕಾನಂದ

ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೆ? – ಸ್ವಾಮಿ ವಿವೇಕಾನಂದ

ಪ್ರತಿಯಾಗಿ ಏನನ್ನೂ ಬಯಸಬೇಡಿ. ಆದರೆ ನೀವು ಹೆಚ್ಚು ಕೊಟ್ಟಷ್ಟೂ ನಿಮಗೆ ಹೆಚ್ಚು ಬರುತ್ತದೆ. – ಸ್ವಾಮಿ ವಿವೇಕಾನಂದ

ಹೇಡಿಗಳು ಮಾತ್ರ, ಬಲಹೀನರು ಮಾತ್ರ ಪಾಪವನ್ನು ಮಾಡುವುದು ಮತ್ತು ಸುಳ್ಳನ್ನು ಹೇಳುವುದು ಎಂಬುದನ್ನು ನೆನಪಿನಲ್ಲಿಡಿ. ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಧೀರರಾಗಿ, ನೀತಿವಂತರಾಗಿ , ಸಹಾನುಭೂತಿಯುಳ್ಳವರಾಗಿ. – ಸ್ವಾಮಿ ವಿವೇಕಾನಂದ

ಧರ್ಮದ ರಹಸ್ಯವಿರುವುದು ಸಿದ್ಧಾಂತಗಳಲ್ಲಲ್ಲ. ಅದರ ಅನುಷ್ಠಾನದಲ್ಲಿ. ಒಳ್ಳೆಯವರಾಗಿರುವುದು, ಒಳ್ಳೆಯದನ್ನು ಮಾಡುವುದು –ಇದೇ ಧರ್ಮದ ಸರ್ವಸ್ವ. – ಸ್ವಾಮಿ ವಿವೇಕಾನಂದ

ಜೀವನಾವಧಿ ಅಲ್ಲ, ಪ್ರಾಪಂಚಿಕ ವಿಷಯಗಳೆಲ್ಲ ಕ್ಷಣಿಕ. ಆದರೆ ಯಾರು ಇತರರಿಗಾಗಿ ಬಾಳುತ್ತಾರೋ ಅವರೇ ನಿಜವಾಗಿ ಬಾಳುತ್ತಾರೆ. ಉಳಿದವರು ಜೀವನ ಮೃತರು. – ಸ್ವಾಮಿ ವಿವೇಕಾನಂದ

ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ ಅವುಗಳನ್ನು ಹಗಲಿರುಳೂ ನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹತಕಾರ್ಯ ಉದ್ಭವಿಸುತ್ತದೆ. – ಸ್ವಾಮಿ ವಿವೇಕಾನಂದ

ನೀವು ಯಶಸ್ಸನ್ನು ಪಡೆಯಲು ದೃಢ ಪ್ರಯತ್ನಬೇಕು, ಅಪಾರ ಇಚ್ಚಾಶಕ್ತಿ ಬೇಕು. ‘ನಾನು ಸಮುದ್ರವನ್ನೇ ಪಾನಮಾಡುತ್ತೇನೆ’, ಎಂದು ಪ್ರಯತ್ನಶೀಲನು ಹೇಳುತ್ತಾನೆ. ‘ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿಯಾಗುತ್ತವೆ’ ಎನ್ನುತ್ತಾನವನು. ಇಂತಹ ಶಕ್ತಿ ಯನ್ನೂ ಛಾತಿಯನ್ನೂ ಪಡೆಯಿರಿ ಕಷ್ಟಪಟ್ಟು ದುಡಿಯಿರಿ, ನೀವು ಗುರಿ ಸೇರುವುದು ನಿಶ್ಚಯ. – ಸ್ವಾಮಿ ವಿವೇಕಾನಂದ

ಎದ್ದೇಳಿ ಕಾರ್ಯೋನ್ಮುಖರಾಗಿ, ಈ ಜೀವನವಾದರೂ ಎಷ್ಟು ಕಾಲ? ನೀವು ಈ ಜಗತ್ತಿಗೆ ಬಂದ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ, ಅದಿಲ್ಲದಿದ್ದರೆ ನಿಮಗೂ ಮರಕಲ್ಲುಗಳಿಗೂ ಏನು ವೆತ್ಯಾಸ? ಅವೂ ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ. – ಸ್ವಾಮಿ ವಿವೇಕಾನಂದ

ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ. ನಾವಿಲ್ಲಿ ಬಲಿಷ್ಠರಾಗುವುದಕ್ಕೆ ಬಂದಿದ್ದೇವೆ. – ಸ್ವಾಮಿ ವಿವೇಕಾನಂದ ;

ನಮಗೆ ತ್ಯಾಗ ಮಾಡುವ ಧೈರ್ಯ ಬೇಕಾದರೆ ನಾವು ಉದ್ವೇಗವಶರಾಗಕೂಡದು. ಉದ್ವೇಗ ಕೇವಲ ಪ್ರಾಣಿಗಳಿಗೆ ಸೇರಿದ್ದು. ಪ್ರಾಣಿಗಳು ಸಂಪೂರ್ಣವಾಗಿ ಉದ್ವೇಗದ ಅಧೀನದಲ್ಲಿರುವುವು. – ಸ್ವಾಮಿ ವಿವೇಕಾನಂದ

ಈ ಜಗತ್ತಿನ ಇತಿಹಾಸ ಆತ್ಮಶ್ರದ್ಧೆಯನ್ನು ಹೊಂದಿದ್ದ ಕೆಲವೇ ವ್ಯಕ್ತಿಗಳ ಇತಿಹಾಸ. ಆ ಶ್ರದ್ಧೆ ಅಂತರಂಗದ ದಿವ್ಯತೆಯನ್ನು ಬಡಿದೆಬ್ಬಿಸುತ್ತದೆ. ಆಗ ನೀವೇನನ್ನು ಬೇಕಾದರೂ ಸಾಧಿಸಬಲ್ಲಿರಿ. – ಸ್ವಾಮಿ ವಿವೇಕಾನಂದ

ನೀವು ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಳು ಚಕ್ರಬಡ್ಡಿ ಸಮೇತ ನಿಮಗೇ ಹಿಂತಿರುಗುತ್ತವೆ. ಯಾವು ಶಕ್ತಿಯೂ ಅದನ್ನು ತಡೆಯಲಾರದು. ಒಮ್ಮೆ ನೀವು ಅವುಗಳನ್ನು ಚಲಿಸುವಂತೆ ಮಾಡಿದರೆ ಅದರ ದುಷ್ಪರಿಣಾಮವನ್ನು ನೀವು ಅನುಭವಿಸಲೇಬೇಕು. ನೀವಿದನ್ನು ನೆನಪಿನಲ್ಲಿಟ್ಟರೆ ದುಷ್ಕಾರ್ಯಗಳಿಂದ ಪಾರಾಗಬಹುದು. – ಸ್ವಾಮಿ ವಿವೇಕಾನಂದ

ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು. ಮತ್ತಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ. – ಸ್ವಾಮಿ ವಿವೇಕಾನಂದ

ವತ್ಸ, ಪ್ರೀತಿಗೆ ಸೋಲೆಂಬುದಿಲ್ಲ ಇಂದೋ ನಾಳೆಯೋ ಅಥವಾ ಯುಗಾಂತರವೋ ಸತ್ಯ ಗೆದ್ದೇ ತೀರುವುದು. ಪ್ರೀತಿ ಖಂಡಿತ ಜಯ ಗಳಿಸುತ್ತದೆ. ನಮ್ಮ ಮಾನವಬಂಧುಗಳನ್ನು ನೀವು ಪ್ರೀತಿಸುತ್ತೀರೇನು? – ಸ್ವಾಮಿ ವಿವೇಕಾನಂದ

ಎಲ್ಲವನ್ನೂ ದೂರ ಎಸೆಯಿರಿ. ನಿಮ್ಮ ಮುಕ್ತಿಯ ಬಯಕೆಯನ್ನು ಕೂಡ. ಇತರರಿಗೆ ಸಹಾಯಮಾಡಿ. – ಸ್ವಾಮಿ ವಿವೇಕಾನಂದ

ಯಾವುದಕ್ಕೂ ಅಂಜದಿರು ಅಧ್ಭುತ ಕಾರ್ಯವನ್ನೆಸಗುವೆ. ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ. ನಮ್ಮ ದುರವಸ್ಥೆಗಳಿಗೆಲ್ಲಾ ಭೀತಿಯೇ ಕಾರಣ. ನಿರ್ಭೀತಿಯೇ ಕ್ಷಣಮಾತ್ರದಲ್ಲಿ ಸ್ವರ್ಗವನ್ನು ಸಾಧಿಸಿಕೊಡಬಲ್ಲದು. ಆದುದರಿಂದ ಎದ್ದು ನಿಲ್ಲು, ಜಾಗೃತನಾಗು ಮತ್ತು ಗುರಿ ಪ್ರಾಪ್ತವಾಗುವವರೆಗೂ ನಿಲ್ಲದಿರು. – ಸ್ವಾಮಿ ವಿವೇಕಾನಂದ

ಮಹಾಕಾರ್ಯಗಳನ್ನು ಮಹಾತ್ಯಾಗದಿಂದ ಮಾತ್ರ ಸಾಧಿಸಲು ಸಾಧ್ಯ. ಅನ್ಯಾಯದ ಸ್ಥಾನವು ಅಭದ್ರವಾದುದು. ಅದರಿಂದ ಏಳಿಗೆ ಆಗದು. – ಸ್ವಾಮಿ ವಿವೇಕಾನಂದ

ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ – ಸ್ವಾಮಿ ವಿವೇಕಾನಂದ

ಅಹಂಕಾರವಿಲ್ಲದ ಮನುಷ್ಯ ಯಾವ ಧರ್ಮಗ್ರಂಥವನ್ನೂ ಓದದೆ, ಯಾವ ಮಂದಿರವನ್ನೂ ಪ್ರವೇಶಿಸದೆ ಮೋಕ್ಷ ಪಡೆಯಬಹುದು. – ಸ್ವಾಮಿ ವಿವೇಕಾನಂದ

ಸತ್ಯಕ್ಕಾಗಿ ಯಾವುದನ್ನಾದರೂ ತ್ಯಾಗ ಮಾಡಿ ಆದರೆ ಯಾವುದಕ್ಕಾದರು ಸತ್ಯವನ್ನು ಮಾತ್ರ ತ್ಯಾಗ ಮಾಡಬೇಡಿ. – ಸ್ವಾಮಿ ವಿವೇಕಾನಂದ

ಜ್ಞಾನಿಗಳು ತಮ್ಮ ದೋಷವನ್ನು ಮೊದಲು ಕಂಡುಕೊಳ್ಳುತ್ತಾರೆ – ಸ್ವಾಮಿ ವಿವೇಕಾನಂದ

ದಾನ ಮಾಡಿರಿ. ಆದರೆ ಅದರಿಂದ ಪ್ರತಿಫಲ ನಿರೀಕ್ಷಿಸಬೇಡಿ. ಅದು ತಾನಾಗಿಯೇ ವಾಪಸ್ ಬರಲಿದೆ. -ಸ್ವಾಮಿ ವಿವೇಕಾನಂದ.

ಆತ್ಮವಿಶ್ವಾಸದಂತಹ ಮಿತ್ರ ಬೇರಿಲ್ಲ. ಇದು ಉನ್ನತಿಯ ಮೊದಲ ಮೆಟ್ಟಿಲು. ಆದ್ದರಿಂದ ಮೊದಲು ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಬೇಕು. -ಸ್ವಾಮಿ ವಿವೇಕಾನಂದ

ವಿವೇಕಿಯಾದವನು ಬೇರೆಯವರ ತಪ್ಪನ್ನು ಕಂಡು ತನ್ನಲ್ಲಿರುವ ತಪ್ಪನ್ನು ತಿದ್ದಿಕೊಳ್ಳುತ್ತಾನೆ. -ಸ್ವಾಮಿ ವಿವೇಕಾನಂದ

ಏಳು ಎದ್ದೇಳು ನಿನಗಾಗಿ ಕಾಯುತ್ತಿದೆ ಒಂದು ಸುಂದರ ದಿನ . ಒಳ್ಳೆಯ ಗುರಿಯತ್ತ ನಡೆ .ನಿರ್ಧಿಷ್ಟತೆಯ ಜೊತೆ ಓಡು ಸಾಧನೆಗಳ ಜೊತೆ ಹಾರಾಡು ನಿನಗಾಗಿ ಕಾಯುತ್ತಿರುವ ಸುಂದರ ಬದುಕಿದೆ ಏಳು ಎದ್ದೇಳು – ಸ್ವಾಮಿ ವಿವೇಕಾನಂದ

ನಿಜವಾದ ಶಿಕ್ಷಕನೆಂದರೆ ಮಕ್ಕಳ ಮಟ್ಟಕ್ಕೆ ಇಳಿದು ತನ್ನಾತ್ಮವನ್ನು ವಿದ್ಯಾರ್ಥಿಗಳ ಆತ್ಮಕ್ಕೆ ವರ್ಗಾಯಿಸುವವರು- ಸ್ವಾಮಿ ವಿವೇಕಾನಂದ

ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ ಕಾಲ ಕೆಡುವುದಿಲ್ಲ, ಕೆಡುವುದು ಜನರ ನಡತೆ ಮತ್ತು ಆಚಾರ – ವಿಚಾರ ಮಾತ್ರ. – ಸ್ವಾಮಿ ವಿವೇಕಾನಂದ

ಯಾವುದಕ್ಕೂ ಅಂಜದಿರಿ ಅದ್ಭುತ ಕಾರ್ಯವನ್ನೆಸಗುವೆ. ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ. ನಮ್ಮ ದುರವಸ್ಥೆಗಳಿಗೆಲ್ಲ ಭೀತಿಯೇ ಕಾರಣ – ಸ್ವಾಮಿ ವಿವೇಕಾನಂದ

ಸರಿಮಾಡಿಕೊಳ್ಳದೆ ಬಿಟ್ಟಂತಹ ತಪ್ಪುಗಳಿಗಿಂತ ಮಿಂಚಿದ ಆಪತ್ತು ಬೇರೇನು ಇಲ್ಲ. – ಸ್ವಾಮಿ ವಿವೇಕಾನಂದ

ಒಂದು ಆದರ್ಶವನ್ನು, ಗುರಿಯನ್ನು ಕೈಗೆತ್ತಿಕೊಳ್ಳಿ. ಕೇವಲ ಆ ಗುರಿಯ ಬಗ್ಗೆ ಮಾತ್ರ ಯೋಚಿಸಿ, ಚಿಂತಿಸಿ. ನಿಮ್ಮ ಬದುಕನ್ನೇ ಅದಕ್ಕಾಗಿ ಮುಡಿಪಾಗಿಡಿ. ಆ ಗುರಿಯು ನಿಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳು, ನರ-ನಾಡಿಗಳನ್ನೆಲ್ಲ ವ್ಯಾಪಿಸಲಿ. ಬೇರೆಲ್ಲ ಆಲೋಚನೆಗಳನ್ನು ಬದಿಗಿಡಿ. ಇದೇ ಯಶಸ್ಸಿನ ಏಕಮಾತ್ರ ಸೂತ್ರ! – ಸ್ವಾಮಿ ವಿವೇಕಾನಂದ

ನಮ್ಮಲ್ಲಿ ನಾವು ವಿಶ್ವಾಸ ಕಳೆದುಕೊಳ್ಳದಿರುವುದು ಮತ್ತು ನಮ್ಮನ್ನು ನಾವು ದ್ವೇಷಿಸದಿರುವುದೇ ನಮ್ಮ ಮೊದಲ ಕರ್ತವ್ಯ. ಮೊದಲು ನಮ್ಮ ಬಗ್ಗೆ ನಮಗೆ ನಂಬಿಕೆಯಿದ್ದಲ್ಲಿ ಮಾತ್ರ ಭಗವಂತನಲ್ಲಿ ನಂಬಿಕೆಯಿಡಲು ಸಾಧ್ಯ. ತನ್ನನ್ನೇ ನಂಬದವನು ಭಗವಂತನನ್ನು ಹೇಗೆ ತಾನೇ ನಂಬಲು ಸಾಧ್ಯ?! – ಸ್ವಾಮಿ ವಿವೇಕಾನಂದ

ಮಹಾ ಮೂರ್ಖನೂ ಕೂಡ ತನ್ನ ಹೃದಯಕ್ಕೆ ಒಪ್ಪಿಗೆಯಾಗುವಂತಹ ಕಾರ್ಯವನ್ನು ಸಾಧಿಸಬಲ್ಲ ಆದರೆ ಯಾರು ಯಾವುದೇ ಕೆಲಸವನ್ನಾದರೂ ತನಗೆ ರುಚಿಸುವಂತೆ ಪರಿವರ್ತಿಸಬಲ್ಲನೋ ಅವನೇ ಬುದ್ಧಿವಂತನು. – ಸ್ವಾಮಿ ವಿವೇಕಾನಂದ

ತಮ್ಮನ್ನು ಸರಿಪಡಿಸಿಕೊಂಡವರು ಪ್ರಪಂಚವನ್ನು ಸರಿಪಡಿಸಿದವರಾಗುತ್ತಾರೆ. – ಸ್ವಾಮಿ ವಿವೇಕಾನಂದ

ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ – ಸ್ವಾಮಿ ವಿವೇಕಾನಂದ

ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು – ಸ್ವಾಮಿ ವಿವೇಕಾನಂದ

ಇದೊಂದು ದೊಡ್ಡ ಸತ್ಯ ಶಕ್ತಿಯೇ ಜೀವನ, ದುರ್ಬಲತೆಯೇ ಮರಣ ಶಕ್ತಿಯೇ ಪರಮಾನಂದ, ಅಖಂಡಜೀವನ, ಅಮರತ್ವ. ದುರ್ಬಲತೆಯೇ ಅನವರತ ದುಃಖ, ತಳಮಳ, ದುರ್ಬಲತೆಯೇ ಮರಣ. – ಸ್ವಾಮಿ ವಿವೇಕಾನಂದ

ನೀವು ಯಾವುದೇ ಕೆಲಸವನ್ನು ಮಾಡುವಾಗಲೂ ನಿಮ್ಮ ಮನಸ್ಸು ಹೃದಯ, ನಿಮ್ಮ ಸರ್ವಸ್ವವನ್ನೂ ಆಕೆಲಸಕ್ಕೆ ಕೊಡಿ. ನಾನೊಮ್ಮೆ ಒಬ್ಬ ಸಾಧು ಮಹಾತ್ಮನನ್ನು ನೋಡಿದ್ದೆ. ಆತ ಪೂಜೆ, ಧ್ಯಾನಗಳನ್ನು ಎಷ್ಟು ಏಕಾಗ್ರತೆ ಶ್ರದ್ಧೆಗಳಿಂದ ಮಾಡುತ್ತಿದ್ದನೋ ಅಷ್ಟೇ ಸಾವಧಾನದಿಂದ ತನ್ನ ಆಡುಗೆ ಮಾಡುವ ಹಿತ್ತಾಳೆ ಪಾತ್ರೆಗಳನ್ನು ಫಳ ಫಳನೆಹೊಳೆಯುವ ಚಿನ್ನದಂತೆ ತೊಳೆದಿಡುತ್ತಿದ್ದನು. – ಸ್ವಾಮಿ ವಿವೇಕಾನಂದ

ಶಿಕ್ಷಣವೆಂದರೆ ಮೊದಲೇ ಮನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶಪಡಿಸುವುದು. – ಸ್ವಾಮಿ ವಿವೇಕಾನಂದ

ವಿಕಾಸವೇ ಜೀವನ ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ,ಸ್ವಾರ್ಥವೆಲ್ಲಾ ಸಂಕೋಚ. ಆದ್ದರಿಂದ ಪ್ರೇಮವೇ ಬದುಕಿನ ಧರ್ಮ. – ಸ್ವಾಮಿ ವಿವೇಕಾನಂದ

ಭಾರತೀಯರಲ್ಲಿ ದೊಡ್ಡದೊಂದು ದೋಷವಿದೆ.ನಾವು ಒಂದು ಸ್ಥಿರವಾದ ಸಂಸ್ಥೆಯನ್ನು ಕಟ್ಟಲಾರೆವು. ಕಾರಣವೇನೆಂದರೆ ಅಧಿಕಾರವನ್ನು ಇತರರೊಂದಿಗೆ ಹಂಚಿಕೊಳ್ಳುವುದು ನಮಗೆ ಇಷ್ಟವಿಲ್ಲ. ನಾವು ಕಾಲವಾದ ಮೇಲೆ ಇದರ ಗತಿ ಏನೆಂಬುದನ್ನು ಕುರಿತು ಚಿಂತಿಸುವುದೇ ಇಲ್ಲ. – ಸ್ವಾಮಿ ವಿವೇಕಾನಂದ

ಎದ್ದೇಳಿ, ಕಾರ್ಯೋನ್ಮುಕರಾಗಿ ಈ ಬದುಕಾದರು ಎಷ್ಟು ದಿನ ಮಾನವರಾಗಿ ಹುಟ್ಟಿದಮೇಲೆ ಏನಾದರು ಸಾಧಿಸಿ – ಸ್ವಾಮಿ ವಿವೇಕಾನಂದ

ಈ ಜಗತ್ತೆನ್ನುವುದು ನಮ್ಮನ್ನು ನಾವು ಗಟ್ಟಿಗೊಳಸಲೆಂದೇ ಇರುವ ವ್ಯಾಯಾಮಶಾಲೆ. – ಸ್ವಾಮಿ ವಿವೇಕಾನಂದ

ಮೊಹಮ್ಮದ್ ಅಗಲಿ ಬುದ್ಧ ನಾಗಲಿ ಒಳ್ಳೆಯ ಮನುಷ್ಯನಾಗಿದ್ದರಿಂದ ನನಗಾಗ ಬೇಕಾದುದೇನು? ಅದು ನನ್ನ ಒಳ್ಳೆಯ ಅಥವಾ ಕೆಟ್ಟ ತನವನ್ನು ಬದಲಾಯಿಸುತ್ತದೆಯೇ? ನಾವು ನಮಗೋಸ್ಕರವಾಗಿಯೇ ಒಳ್ಳೆಯವರಾಗುವ ಜವಾಬ್ದಾರಿಯನ್ನು ತೆಗೆದುಕೊಳ್ಳೋಣ. ಯಾರೋ ಯಾವಾಗಲೋ ಹಿಂದೆ ಒಳ್ಳೆಯವರಾಗಿದ್ದರು ಎಂಬ ಕಾರಣಕ್ಕಲ್ಲ . – ಸ್ವಾಮಿ ವಿವೇಕಾನಂದ

ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ. – ಸ್ವಾಮಿ ವಿವೇಕಾನಂದ

ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು, ಮತ್ತಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ. – ಸ್ವಾಮಿ ವಿವೇಕಾನಂದ

ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ, ಕಾಲ ಕೆಡುವುದಿಲ್ಲ. ಕೆಡುವುದು ಜನರ ನಡತೆ ಮತ್ತು ಆಚಾರ- ವಿಚಾರ ಮಾತ್ರ. – ಸ್ವಾಮಿ ವಿವೇಕಾನಂದ

ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ಧವೇ ಗುರು. – ಸ್ವಾಮಿ ವಿವೇಕಾನಂದ

ಜೀವ ನಮ್ಮ ಮಾತನ್ನು ಕೇಳುವುದಿಲ್ಲ, ಯಾವಾಗ ಬೇಕಾದರೂ ಹೋಗಬಹುದು. ಜೀವನ ನಮ್ಮ ಮಾತನ್ನು ಕೇಳುತ್ತದೆ, ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು. – ಸ್ವಾಮಿ ವಿವೇಕಾನಂದ

ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ. ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ. – ಸ್ವಾಮಿ ವಿವೇಕಾನಂದ

ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ. – ಸ್ವಾಮಿ ವಿವೇಕಾನಂದ

ನೀನು ಯೋಚನೆ ಮಾಡದೆ ಹೇಳುವ ಒಂದೊಂದು ಮಾತು, ನಿನ್ನನ್ನು ಒಂದೊಂದು ನಿಮಿಷವೂ ಯೋಚನೆ ಮಾಡಿಸುತ್ತೆ. – ಸ್ವಾಮಿ ವಿವೇಕಾನಂದ

ಮಾರ್ಗದರ್ಶನ ನೀಡುವವರು ಇಲ್ಲದಿದ್ದರೇನು? ಹೊಸ ಮಾರ್ಗ ಸೃಷ್ಟಿಸುವ ಧೈರ್ಯ, ತಾಕತ್ತು ನಿನ್ನಲ್ಲಿದ್ದರೆ ಇಡೀ ಜಗತ್ತು ನಿನ್ನ ಹಿಂದೆ. – ಸ್ವಾಮಿ ವಿವೇಕಾನಂದ

ಹಣವಂತರ ಜೊತೆ ನೂರಾರು ವರ್ಷ ಬದುಕುವುದಕ್ಕಿಂತ, ಹರದಯವಂತರ ಜೊತೆ ಮೂರು ದಿನ ಬದುಕಿದರೂ ಜೀವನ ಸಾರ್ಥಕ. – ಸ್ವಾಮಿ ವಿವೇಕಾನಂದ

ನಿನ್ನ ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ನಿನ್ನ ಶತ್ರು ಮಾತ್ರವಲ್ಲ, ಇಡೀ ಪ್ರಪಂಚ ನಿನ್ನೆದುರು ಆಯುಧವನ್ನು ಕೆಳಗಿಡುತ್ತದೆ. – ಸ್ವಾಮಿ ವಿವೇಕಾನಂದ

ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ದವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು. – ಸ್ವಾಮಿ ವಿವೇಕಾನಂದ

ನಿಂತ ನೀರಿನಲ್ಲಿ ಕ್ರಿಮಿ ಹುಟ್ಟುತ್ತವೆ. ಕೆಲಸವಿಲ್ಲದವ ಮನುಷ್ಯನಲ್ಲಿ ಕೆಟ್ಟ ವಿಚಾರಗಳು ಜನಿಸುತ್ತವೆ. – ಸ್ವಾಮಿ ವಿವೇಕಾನಂದ

ನಿನ್ನ ನಂಬಿದವರನ್ನು ಎಂದಿಗೂ ಮೋಸ ಮಾಡಬೇಡ, ಸಹಾಯ ಮಾಡಿದರವರನ್ನು ಮರೆಯಬೇಡ, ಮನೆ ಬಾಗಿಲಿಗೆ ಬಂದವರನ್ನು ಅವಮಾನ ಮಾಡಬೇಡ. – ಸ್ವಾಮಿ ವಿವೇಕಾನಂದ

ಸತ್ಯಕ್ಕಾಗಿ ಯಾವುದನ್ನು ಬೇಕಾದರೂ ತ್ಯಾಗ ಮಾಡಿ. ಆದರೆ, ಯಾವುದಕ್ಕೂ ಸತ್ಯವನ್ನು ತ್ಯಾಗ ಮಾಡಬೇಡಿ. – ಸ್ವಾಮಿ ವಿವೇಕಾನಂದ

ಬದುಕುವ ಆಸೆ ಇದ್ದರೆ ನಿನ್ನ ಶತ್ರುಗಳ ಕಣ್ಣೆದುರಲ್ಲೇ ಬದುಕು. ಅವರು ನಿನ್ನ ಎದುರು ಸುಳಿದಾಗೆಲ್ಲಾ ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ. – ಸ್ವಾಮಿ ವಿವೇಕಾನಂದ

ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ. – ಸ್ವಾಮಿ ವಿವೇಕಾನಂದ

ಪ್ರತಿದಿನ ಒಮ್ಮೆಯಾದರೂ ನಿಮ್ಮೊಂದಿಗೆ ನೀವು ಮಾತನಾಡಿ, ಇಲ್ಲದಿದ್ದರೆ ನೀವು ಈ ಜಗತ್ತಿನ ಅತ್ಯುತ್ತಮ ವ್ಯಕ್ತಿಯೊಂದಿಗೆ ಸಭೆಯನ್ನು ಕಳೆದುಕೊಳ್ಳಬಹುದು. – ಸ್ವಾಮಿ ವಿವೇಕಾನಂದ

ಒಳಗಿನಿಂದ ನೀವು ಬೆಳೆಯಬೇಕಾಗಿದೆ ಅದನ್ನು ಯಾರೂ ನಿಮಗೆ ಕಲಿಸಲು ಸಾಧ್ಯವಿಲ್ಲ, ಯಾರು ನಿಮ್ಮನ್ನು ಆಧ್ಯಾತ್ಮಿಕಗೊಳಿಸುವುದಿಲ್ಲ, ಬೇರೆ ಶಿಕ್ಷಕರು ಇಲ್ಲ, ಅದು ಸ್ವತಃ ನಿಮ್ಮ ಆತ್ಮದಿಂದ ಮಾತ್ರ ಸಾಧ್ಯ. – ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದರ 3 ನಿಯಮಗಳು- ನಿಮಗೆ ಯಾರು ಸಹಾಯ ಮಾಡುತ್ತಿದ್ದಾರೆ ಅವರನ್ನು ಮರೆತು ಬಿಡಬೇಡಿ, ಯಾರು ನಿಮ್ಮನ್ನು ಪ್ರೀತಿಸುತ್ತಾರೋ ಅವರನ್ನು ದ್ವೇಷಿಸಬೇಡಿ, ನಿಮ್ಮನ್ನು ಯಾರು ನಂಬುತ್ತಾರೋ ಅವರಿಗೆ ಮೋಸ ಮಾಡಬೇಡಿ. – ಸ್ವಾಮಿ ವಿವೇಕಾನಂದ

ನನ್ನನ್ನು ಇಷ್ಟಪಡಿ ಅಥವಾ ದ್ವೇಷಿಸಿ ಎರಡು ನನ್ನ ಪರವಾಗಿದೆ, ನೀವು ನನ್ನನ್ನು ಇಷ್ಟಪಟ್ಟರೆ ನಾನು ನಿನ್ನ ಹೃದಯದಲ್ಲಿದ್ದೇನೆ, ನೀವು ನನ್ನನ್ನು ದ್ವೇಷಿಸಿದರೆ ನಾನು ನಿನ್ನ ಮನಸಿನಲ್ಲಿದ್ದೇನೆ. – ಸ್ವಾಮಿ ವಿವೇಕಾನಂದ

ನಿಮ್ಮ ಮೆದುಳನ್ನು ದೊಡ್ಡ ಅಲೋಚನೆಗಳಿಂದ ತುಂಬಿರಿ ಅತ್ಯುನ್ನತ ಅದರ್ಶಗಳನ್ನ ಹಗಲು ರಾತ್ರಿ ನಿಮ್ಮ ಮುಂದೆ ಇಡಿ ಮತ್ತು ಅದರಿಂದ ದೊಡ್ಡ ಕೆಲಸ ಹೊರಬರುತ್ತದೆ. – ಸ್ವಾಮಿ ವಿವೇಕಾನಂದ

ನಿಮ್ಮ ಆಲೋಚನೆಗಳು ನಿಮ್ಮ ಮನಸ್ಸನ್ನು ಆಕ್ರಮಿಸಿಕೊಂಡಾಗ ಅದು ನಿಜವಾದ ದೈಹಿಕ ಅಥವಾ ಮಾನಸಿಕ ಸ್ಥಿತಿಯಾಗಿ ರೂಪಾಂತರಗೊಳ್ಳುತ್ತದೆ. – ಸ್ವಾಮಿ ವಿವೇಕಾನಂದ

ಬ್ರಹ್ಮಾಂಡದ ಎಲ್ಲಾ ಶಕ್ತಿ ಈಗಾಗಲೇ ನಮ್ಮಲ್ಲಿದೆ ಆದರೆ ನಮ್ಮ ಕಣ್ಣುಗಳನ್ನು ನಮ್ಮ ಕೈಗಳಿಂದ ಮುಚ್ಚಿ ನಾವು ಅದನ್ನು ಕತ್ತಲೆ ಎಂದು ಕೂಗುತ್ತೇವೆ. – ಸ್ವಾಮಿ ವಿವೇಕಾನಂದ

ನಮ್ಮ ಚಿಂತೆಗಳು ನಮ್ಮನ್ನು ಮಾಡಿವೆ ಆದ್ದರಿಂದ ನೀವು ಯೋಚಿಸುವ ಬಗ್ಗೆ ಕಾಳಜಿ ತೆಗೆದುಕೊಳ್ಳಿ ಕೊನೆಗೆ ನಿಮ್ಮ ಚಿಂತನೆಗಳು ಮಾತ್ರ ಉಳಿಯುತ್ತದೆ. – ಸ್ವಾಮಿ ವಿವೇಕಾನಂದ

ಏಳು, ಎದ್ದೇಳು ಗುರಿ ಮುಟ್ಟುವ ತನಕ ನಿಲ್ಲದಿರು. – ಸ್ವಾಮಿ ವಿವೇಕಾನಂದ

ನಾವು ಹೊಂದಿರುವ ಏಕೈಕ ಶಿಕ್ಷಕ ಅದು ನಮ್ಮ ಅನುಭವ. – ಸ್ವಾಮಿ ವಿವೇಕಾನಂದ

ಯಾವುದು ನಿಮ್ಮನ್ನು ದೈಹಿಕವಾಗಿ, ಬೌದ್ಧಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ದುರ್ಬಲಗೊಳಿಸಿದರೆ ಅದನ್ನು ವಿಷದಂತೆ ತಿರಸ್ಕರಿಸಿ. – ಸ್ವಾಮಿ ವಿವೇಕಾನಂದ

ನಿಮ್ಮನ್ನು ನೀವು ನಂಬುವ ತನಕ ನೀವು ದೇವರಲ್ಲಿ ನಂಬಲು ಸಾಧ್ಯವಿಲ್ಲಾ. – ಸ್ವಾಮಿ ವಿವೇಕಾನಂದ

ನಾವು ನಮ್ಮ ಹೃದಯದಲ್ಲಿ ಮತ್ತು ಪ್ರತಿಯೊಂದು ಜೀವಿಯಲ್ಲಿ ದೇವರನ್ನ ಕಾಣದಿದ್ದರೆ ದೇವರನ್ನು ಹುಡುಕಲು ನಾವು ಎಲ್ಲಿ ಹೋಗಬಹುದು. – ಸ್ವಾಮಿ ವಿವೇಕಾನಂದ

ವಿವಿಧ ಧರ್ಮಗಳ ಅಧ್ಯಯನದಿಂದ ನಾವು ಮೂಲಭೂತವಾಗಿ ಅವು ಒಂದೇ ಎಂದು ಕಂಡುಕೊಳ್ಳುತ್ತೇವೆ. – ಸ್ವಾಮಿ ವಿವೇಕಾನಂದ

ಸಂಬಂಧಗಳು ಜೀವನಕ್ಕಿಂತ ಹೆಚ್ಚು ಮಹತ್ವದ್ದಾಗಿವೆ ಆದರೆ ಅಂತಹ ಸಂಬಂಧಗಳು ಜೀವವನ್ನು ಹೊಂದಿರುವುದು ಮುಖ್ಯವಾಗಿದೆ. – ಸ್ವಾಮಿ ವಿವೇಕಾನಂದ

ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ – ಸ್ವಾಮಿ ವಿವೇಕಾನಂದ

ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. – ಸ್ವಾಮಿ ವಿವೇಕಾನಂದರು.

ಯಾರಿಗೆ ತನ್ನಲ್ಲಿ ತನಗೆ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೊ ಅವನು ನಾಸ್ತಿಕ ಎಂದು. – ಸ್ವಾಮಿ ವಿವೇಕಾನಂದ

ನಿಮ್ಮ ನಂಬಿಕೆಯಂತೆ ನೀವಾಗುತ್ತೀರಿ. ನಿಮ್ಮನ್ನು ನೀವು ಋಷಿಗಳೆಂದು ನಂಬಿದರೆ ನೀವು ನಾಳೆ ಋಷಿಗಳೇ ಆಗುತ್ತೀರಿ. – ಸ್ವಾಮಿ ವಿವೇಕಾನಂದ

ಶೈವಾವಸ್ಥೆಯಿಂದಲೇ ಮಕ್ಕಳು ಶಕ್ತಿ ಶಾಲಿಗಳಾಗುವಂತೆ ಮಾಡಿ. ಅವರಿಗೆ ದುರ್ಬಲತೆಯನ್ನಾಗಲಿ, ಮೂಢ ಆಚರಣೆಗಳನ್ನಾಗಲಿ ಬೋಧಿಸಬೇಡಿ. ಅವರನ್ನು ಶಕ್ತಿವಂತರನ್ನಾಗಿ ಮಾಡಿ. – ಸ್ವಾಮಿ ವಿವೇಕಾನಂದ

ಶಕ್ತಿಶಾಲಿಗಳಾಗಿ, ಶ್ರದ್ಧಾವಂತರಾಗಿ. ಆಗ ಎಲ್ಲವೂ ನಿಶ್ಚಿತವಾಗಿ ಸಾಧಿಸಲ್ಪಡುತ್ತದೆ. – ಸ್ವಾಮಿ ವಿವೇಕಾನಂದ

ಶಕ್ತಿಯೆಲ್ಲ ನಿಮ್ಮೊಳಗೇ ಇದೆ ನೀವು ಏನು ಬೇಕಾದರೂ ಮಾಡಬಲ್ಲಿರಿ, ಎಲ್ಲವನ್ನೂ ಮಾಡಬಲ್ಲಿರಿ. – ಸ್ವಾಮಿ ವಿವೇಕಾನಂದ

ನೀವು ಯಶಸ್ಸನ್ನು ಪಡೆಯಲು ಧೃಢ ಪ್ರಯತ್ನ ಮಾಡಬೇಕು, ಅಪಾರ ಇಚ್ಛಾಶಕ್ತಿ ಬೇಕು. ನಾನು ಸಮುದ್ರವನ್ನೇ ಪಾನ ಮಾಡುತ್ತೇನೆ ಎಂದು ಪ್ರಯತ್ನಶೀಲನು ಹೇಳುತ್ತಾನೆ. ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿಯಾಗುತ್ತವೆ ಎನ್ನುತ್ತಾನವನು. ಇಂತಹ ಶಕ್ತಿಯನ್ನು, ಗಟ್ಟಿ ಗುಂಡಿಗೆಯನ್ನು ಪಡೆಯಿರಿ. ಕಷ್ಟಪಟ್ಟು ದುಡಿಯಿರಿ, ನೀವು ಗುರಿ ಸೇರುವುದು ನಿಶ್ಚಯ. – ಸ್ವಾಮಿ ವಿವೇಕಾನಂದ

ಸ್ವಾರ್ಥವೇ ಅಧರ್ಮ ನಿ:ಸ್ವಾರ್ಥವೇ ಧರ್ಮ. ಹೆಚ್ಚು ನಿ:ಸ್ವಾರ್ಥಿಯಾದವನೇ ಧರ್ಮಿಷ್ಟ ಮತ್ತು ಶಿವನಿಗೆ ಹತ್ತಿರ. ನಿಜವಾಗಿಯೂ ಜೀವನ ಸೇವೆಯೇ ಶಿವನ ಸೇವೆ. – ಸ್ವಾಮಿ ವಿವೇಕಾನಂದ

ಸ್ವಾರ್ಥತೆಯೇ ಪ್ರತಿಯೊಬ್ಬನಲ್ಲಿಯೂ ಇರುವ ಪ್ರತ್ಯಕ್ಷ ರಾಕ್ಷಸ. ಪ್ರತಿಯೊಂದು ಬಗೆಯ ಸ್ವಾರ್ಥವೂ ಸೈತಾನನೇ. – ಸ್ವಾಮಿ ವಿವೇಕಾನಂದ

ಪ್ರತಿಯಾಗಿ ಏನನ್ನೂ ಬಯಸಬೇಡಿ. ಆದರೆ ನೀವು ಹೆಚ್ಚು ಕೊಟ್ಟಷ್ಟು ನಿಮಗೆ ಹೆಚ್ಚು ಬರುತ್ತದೆ. – ಸ್ವಾಮಿ ವಿವೇಕಾನಂದ

ವಿಕಾಸವೇ ಜೀವನ ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ ಸ್ವಾರ್ಥವೆಲ್ಲಾ ಸಂಕೋಚ ಆದುದರಿಂದ ಪ್ರೇಮವೇ ಬದುಕಿನ ಧರ್ಮ. – ಸ್ವಾಮಿ ವಿವೇಕಾನಂದ

ಪ್ರೀತಿಯ ಮೂಲಕ, ಸಹಾನುಭೂತಿಯ ಮೂಲಕ ಮಾತ್ರವೇ ಒಳ್ಳೆಯ ಫಲಿತಾಂಶಗಳು ಉಂಟಾಗುತ್ತವೆ. ಪರರ ಸೇವೆಗಾಗಿ ಸರ್ವಸ್ವವನ್ನು ತೊರೆಯುವವನು ಮಾತ್ರ ಮುಕ್ತಿಗೆ ಅರ್ಹ. – ಸ್ವಾಮಿ ವಿವೇಕಾನಂದ

ಬುದ್ಧಿ ಶ್ರೇಷ್ಠವಾದುದು ನಿಜ. ಆದರೆ ಅದರ ಕಾರ್ಯವ್ಯಾಪ್ತಿ ಸೀಮಿತವಾದುದು. ಸ್ಪೂರ್ತಿ ಉಂಟಾಗುವುದು ಹೃದಯದ ಮೂಲಕ ಹೃದಯವೇ ಸ್ಪೂರ್ತಿಯ ಮೂಲ. – ಸ್ವಾಮಿ ವಿವೇಕಾನಂದ

ವತ್ಸ ಪ್ರೀತಿಗೆ ಸೋಲೆಂಬುದಿಲ್ಲ ಇಂದೊ ನಾಳೆಯೊ ಅಥವಾ ಯುಗಾಂತರವೊ ಸತ್ಯ ಗೆದ್ದೇ ತೀರುವುದು. ಪ್ರೀತಿ ಖಂಡಿತ ಜಯ ಗಳಿಸುತ್ತದೆ. – ಸ್ವಾಮಿ ವಿವೇಕಾನಂದ

ಜೀವನಾವಧಿ ಅಲ್ಪ, ಪ್ರಾಪಂಚಿಕ ವಿಷಯಗಳೆಲ್ಲ ಕ್ಷಣಿಕ. ಆದರೆ ಯಾರು ಇತರರಿಗಾಗಿ ಬಾಳುತ್ತಾರೋ ಅವರೇ ನಿಜವಾಗಿ ಬಾಳುತ್ತಾರೆ. ಉಳಿದವರು ಜೀವನ್ಮ್ರತರು. – ಸ್ವಾಮಿ ವಿವೇಕಾನಂದ

ಎದ್ದೇಳಿ ಕಾರ್ಯೋನ್ಮುಖರಾಗಿ. ಈ ಜೀವನವಾದರೂ ಎಷ್ಟು ಕಾಲ? ನೀವು ಈ ಜಗತ್ತಿಗೆ ಬಂದ ಮೇಲೆ ಗುರುತನ್ನು ಬಿಟ್ಟು ಹೋಗಿ. ಅದಿಲ್ಲದಿದ್ದರೆ ನಿಮಗೂ ಮರ ಕಲ್ಲುಗಳಿಗೂ ಏನು ವ್ಯತ್ಯಾಸ? ಅವು ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ. – ಸ್ವಾಮಿ ವಿವೇಕಾನಂದ

ಪರಹಿತಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿಡಿ. ನೀವು ತ್ಯಾಗಜೀವನವನ್ನು ಆರಿಸಿಕೊಳ್ಳುವುದಾದರೆ ಸೌಂದರ್ಯ, ಹಣ, ಅಧಿಕಾರಗಳ ಕಡೆಗೆ ತಿರುಗಿಯೂ ನೋಡಬೇಡಿ. – ಸ್ವಾಮಿ ವಿವೇಕಾನಂದ

ಮಹತ್ಕಾರ್ಯವು ಮಹಾ ಬಲಿದಾನದ ಮೂಲಕ ಮಾತ್ರ ಸಾಧ್ಯ. – ಸ್ವಾಮಿ ವಿವೇಕಾನಂದ

ಆದರ್ಶದಿಂದ ಕೂಡಿದ ವ್ಯಕ್ತಿ ಒಂದು ಸಾವಿರ ತಪ್ಪುಗಳನ್ನು ಮಾಡಿದರೆ ಆದರ್ಶವಿಲ್ಲದ ವ್ಯಕ್ತಿ ಐವತ್ತು ಸಾವಿರ ತಪ್ಪುಗಳನ್ನು ಮಾಡುತ್ತಾನೆ. ಆದ್ದರಿಂದ ಆದರ್ಶಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು. – ಸ್ವಾಮಿ ವಿವೇಕಾನಂದ

ನಮ್ಮ ದೇಶಕ್ಕೆ ಪುರುಷಸಿಂಹರು ಬೇಕಾಗಿದ್ದಾರೆ. ಪುರುಷಸಿಂಹರಾಗಿ. ಬಂಡೆಯಂತೆ ಸ್ಥಿರವಾಗಿ ನಿಲ್ಲಿ. ಸತ್ಯವು ಯಾವಾಗಲೂ ಜಯಿಸುತ್ತದೆ. – ಸ್ವಾಮಿ ವಿವೇಕಾನಂದ

ಯಾರು ತನ್ನ ಹೃದಯದ ನೆತ್ತರದಿಂದ ಇತರರಿಗೆ ದಾರಿ ನಿರ್ಮಿಸುತ್ತಾನೋ ಅವನೇ ಶ್ರೇಷ್ಠ ವ್ಯಕ್ತಿ. – ಸ್ವಾಮಿ ವಿವೇಕಾನಂದ

ಕಷ್ಟದಿಂದ ಪಾರಾಗುವ ದಾರಿಯನ್ನು ತೋರಿಸುವವನೇ ಮಾನವ ಕೋಟಿಯ ಸ್ನೇಹಿತ. – ಸ್ವಾಮಿ ವಿವೇಕಾನಂದ

ನಿಮ್ಮ ಸೌಲಭ್ಯಗಳನ್ನು, ನಿಮ್ಮ ಸುಖಗಳನ್ನು, ನಿಮ್ಮ ಹೆಸರು, ಕೀರ್ತಿ ಸ್ಥಾನಮಾನಗಳನ್ನು, ಅಷ್ಟೇ ಏಕೆ ನಿಮ್ಮ ಜೀವಿತವನ್ನೇ ಬಲಿ ಕೊಟ್ಟು ಒಂದು ಮಾನವ ಸೇತುವೆಯನ್ನು ನಿರ್ಮಿಸಿ. ಅದರ ಮೂಲಕ ಲಕ್ಷಾಂತರ ಜನರು ಈ ಭವ ಜಲಧಿಯನ್ನು ದಾಟುವಂತಾಗಲಿ.. – ಸ್ವಾಮಿ ವಿವೇಕಾನಂದ

ಜೀವನವೆಂಬುದು ಕಠಿಣ ಸತ್ಯ. ಧೈರ್ಯವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು. – ಸ್ವಾಮಿ ವಿವೇಕಾನಂದ

ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ. ನಾವಿಲ್ಲಿ ಬಲಿಷ್ಟರಾಗುವುದಕ್ಕೆ ಬಂದಿದ್ದೇವೆ. – ಸ್ವಾಮಿ ವಿವೇಕಾನಂದ

ನಿಮ್ಮನ್ನು ನೀವು ಜಯಿಸಿ. ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ. – ಸ್ವಾಮಿ ವಿವೇಕಾನಂದ

ಹೇಡಿಗಳು, ಬಲಹೀನರು ಮಾತ್ರ ಪಾಪವನ್ನು ಮಾಡುವುದು ಮತ್ತು ಸುಳ್ಳನ್ನು ಹೇಳುವುದು ಎಂಬುದನ್ನು ನೆನಪಿನಲ್ಲಿಡಿ. ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಧೀರರಾಗಿ, ನೀತಿವಂತರಾಗಿ, ಸಹಾನುಭೂತಿಯುಳ್ಳವರಾಗಿ. – ಸ್ವಾಮಿ ವಿವೇಕಾನಂದ

ಸತ್ಯಕ್ಕಾಗಿ ಸರ್ವಸ್ವವನ್ನು ಸಮರ್ಪಿಸಬಹುದು. ಆದರೆ ಸತ್ಯವನ್ನು ಮತ್ಯಾವುದಕ್ಕೂ ತೆರುವುದಕ್ಕೆ ಆಗುವುದಿಲ್ಲ. – ಸ್ವಾಮಿ ವಿವೇಕಾನಂದ

ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ. – ಸ್ವಾಮಿ ವಿವೇಕಾನಂದ

ಶುದ್ಧಚಾರಿತ್ರ್ಯವೊಂದೇ ಕಷ್ಟಪರಂಪರೆಗಳ ಅಭೇದ್ಯ ಕೋಟೆಯನ್ನು ಸೀಳಿಕೊಂಡು ಹೋಗಬಲ್ಲದು. – ಸ್ವಾಮಿ ವಿವೇಕಾನಂದ

ಶಕ್ತಿ ಇರುವುದು ಸಾಧುಸ್ವಭಾವದಲ್ಲಿ, ಚಾರಿತ್ರ್ಯ ಶುದ್ಧಿಯಲ್ಲಿ. ಮೊದಲು ಚಾರಿತ್ರ್ಯವನ್ನು ಬೆಳಸಿ. ನೀವು ಮಾಡಬೇಕಾದ ಅತ್ಯುನ್ನತ ಕರ್ತವ್ಯ ಇದು. – ಸ್ವಾಮಿ ವಿವೇಕಾನಂದ

ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ಧವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು. – ಸ್ವಾಮಿ ವಿವೇಕಾನಂದ

ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ. ಅವುಗಳನ್ನು ಹಗಲಿರುಳುನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹತ್ಕಾರ್ಯ ಉದ್ಭವಿಸುತ್ತದೆ. – ಸ್ವಾಮಿ ವಿವೇಕಾನಂದ

ನಿಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಮಾಡಿ ನೀವು ಶುದ್ಧ ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು. ಕರ್ತವ್ಯವನ್ನು ಮಾಡಿದರೆ ಕರ್ತವ್ಯಭಾರದಿಂದ ಪಾರಾಗುತ್ತೇವೆ. – ಸ್ವಾಮಿ ವಿವೇಕಾನಂದ

ಯಾವಾಗಲೂ ಒಳ್ಳೆಯದನ್ನೇ ಮಾಡಿ. ನಿರಂತರವಾಗಿ ಸದ್ವಿಚಾರವನ್ನೇ ಆಲೋಚಿಸಿ. ದುಷ್ಟ ಸಂಸ್ಕಾರಗಳನ್ನು ನಿಗ್ರಹಿಸುವುದಕ್ಕೆ ಇದೊಂದೇ ಮಾರ್ಗ. – ಸ್ವಾಮಿ ವಿವೇಕಾನಂದ

ಪ್ರತಿಕೂಲವಾದ ಸನ್ನಿವೇಶಗಳನ್ನು ಎದುರಿಸಿ ಜೀವಿಯು ವಿಕಾಸ ಮತ್ತು ಬೆಳವಣಿಗೆಯನ್ನು ಹೊಂದುವುದೇ ಜೀವನ. – ಸ್ವಾಮಿ ವಿವೇಕಾನಂದ

ಪರಿಸ್ಥಿತಿಗಳನ್ನು ಉತ್ತಮಪಡಿಸಲಾಗುವುದಿಲ್ಲ. ಆದರೆ ಅವುಗಳನ್ನು ಬದಲಾಯಿಸುವುದರಿಂದ ನಾವು ಉತ್ತಮರಾಗುತ್ತೇವೆ. – ಸ್ವಾಮಿ ವಿವೇಕಾನಂದ

ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ರಾಷ್ಟ್ರವೂ ಶ್ರೇಷ್ಠ ತೆಯನ್ನು ಪಡೆಯಲು ಮೂರು ಸಂಗತಿಗಳು ಅವಶ್ಯಕ. ೧) ಒಳಿತಿನ ಶಕ್ತಿಯಲ್ಲಿ ಧೃಢ ನಂಬಿಕೆ. ೨) ಮಾತ್ಸರ್ಯ ಹಾಗೂ ಅಪನಂಬಿಕೆಗಳಿಲ್ಲದಿರುವಿಕೆ. ೩) ಒಳ್ಳೆಯವರಾಗಲು, ಒಳಿತನ್ನು ಮಾಡಲು ಪ್ರಯತ್ನಿಸುತ್ತಿರುವವರಿಗೆ ಸಹಾಯ ಮಾಡುವಿಕೆ. – ಸ್ವಾಮಿ ವಿವೇಕಾನಂದ

ನಮಗೆ ನಾವೇ ಕೇಡನ್ನುಂಟುಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಮಗೆ ಕೇಡನ್ನುಂಟು ಮಾಡಲಾರದು ಎಂಬುದು ನಿಶ್ಚಯ. – ಸ್ವಾಮಿ ವಿವೇಕಾನಂದ

ನಮ್ಮ ದು:ಖಗಳಿಗೆಲ್ಲ ನಾವೇ ಜವಾಬ್ದಾರರು, ಮತ್ಯಾರು ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ. – ಸ್ವಾಮಿ ವಿವೇಕಾನಂದ

ನಿಮ್ಮ ತಪ್ಪಿಗಾಗಿ ಇತರರನ್ನು ದೂಷಿಸಬೇಡಿ. ನಿಮ್ಮ ಕಾಲ ಮೇಲೆ ನೀವು ನಿಲ್ಲಿ. ಸಂಪೂರ್ಣ ಜವಾಬ್ದಾರಿಯನ್ನು ನಿಮ್ಮ ತಲೆಯ ಮೇಲೆ ಹೊತ್ತುಕೊಳ್ಳಿ. – ಸ್ವಾಮಿ ವಿವೇಕಾನಂದ

ನಿಮ್ಮನ್ನು ನಿಂದಿಸುವ ಜನರನ್ನು ಆಶೀರ್ವದಿಸಿ. ನಿಮ್ಮಲ್ಲಿರುವ ದುರಹಂಕಾರವನ್ನು ಹತ್ತಿಕ್ಕಲು ಅವರು ಎಷ್ಟೊಂದು ಸಹಾಯ ಮಾಡುತ್ತಿದ್ದಾರೆ ಎಂಬುದನ್ನು ಯೋಚಿಸಿ. – ಸ್ವಾಮಿ ವಿವೇಕಾನಂದ

ನಿಮಗಾಗಿ ಏನನ್ನೂ ಬಯಸಬೇಡಿ. ಎಲ್ಲವನ್ನೂ ಇತರರಿಗಾಗಿ ಮಾಡಿ. ಭಗವಂತನಲ್ಲೇ ಇರುವುದು, ಅವನಲ್ಲೇ ಬಾಳುವುದು, ಚಲಿಸುವುದು ಎಂದರೆ ಇದೇ. – ಸ್ವಾಮಿ ವಿವೇಕಾನಂದ

ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೆ? – ಸ್ವಾಮಿ ವಿವೇಕಾನಂದ

ಯಾವುದನ್ನು ಬಯಸಬೇಡಿ. ನಮ್ಮನ್ನು ದು:ಖಕ್ಕೊಳಪಡಿಸುವ ಎಲ್ಲ ಕಷ್ಟಗಳಿಗೂ ಆಸೆಯೇ ಕಾರಣ. – ಸ್ವಾಮಿ ವಿವೇಕಾನಂದ

ಇತರರ ಯೋಜನೆಯ ಮೇಲೆ ತಣ್ಣೀರೆರಬೇಡಿ. ನಿಂದನೆಯನ್ನು ಸಂಪೂರ್ಣವಾಗಿ ಪರಿತ್ಯಜಿಸಿ. ಇತರರಿಗೆ ತಿಳಿಯದಂತೆ ಅವರನ್ನು ನಿಂದಿಸುವುದು ಮಹಾ ಅಪರಾಧ ಎಂಬುದನ್ನು ತಿಳಿಯಿರಿ. – ಸ್ವಾಮಿ ವಿವೇಕಾನಂದ

ಸಾಧ್ಯವಾದರೆ ಸಹಾಯ ಮಾಡಿ. ಇಲ್ಲದಿದ್ದರೆ ಕೈಕಟ್ಟಿಕೊಂಡು ಸುಮ್ಮನೆ ನಡೆಯುವುದನ್ನು ನೋಡುತ್ತಿರಿ. ನಿಮಗೆ ಸಹಾಯ ಮಾಡಲಾಗದಿದ್ದರೆ ನೋಯಿಸಲು ಪ್ರಯತ್ನಿಸದಿರಿ. – ಸ್ವಾಮಿ ವಿವೇಕಾನಂದ

ನೀವು ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಳು ಚಕ್ರಬಡ್ಡಿ ಸಮೇತ ನಿಮಗೇ ಹಿಂತಿರುಗುತ್ತವೆ. ಯಾವ ಶಕ್ತಿಯೂ ಅದನ್ನು ತಡೆಯಲಾರದು. ಒಮ್ಮೆ ನೀವು ಅವುಗಳನ್ನು ಚಲಿಸುವಂತೆ ಮಾಡಿದರೆ ಅದರ ದುಷ್ಪರಿಣಾಮವನ್ನು ನೀವು ಅನುಭವಿಸಲೇಬೇಕು. ನೀವಿದನ್ನು ನೆನಪಿನಲ್ಲಿಟ್ಟರೆ ದುಷ್ಕಾರ್ಯಗಳಿಂದ ನೀವು ಪಾರಾಗಬಹುದು. – ಸ್ವಾಮಿ ವಿವೇಕಾನಂದ

ಅಸೂಯೆ ಎಂಬುದು ಎಲ್ಲ ಗುಲಾಮರ ಹಾನಿಕರ ಲಕ್ಷಣ. ಅದೇ ನಮ್ಮ ದೇಶದ ದೊಡ್ಡ ಪಿಡುಗು. ಅದನ್ನು ಯಾವಾಗಲೂ ತೊಡೆದು ಹಾಕಿ. – ಸ್ವಾಮಿ ವಿವೇಕಾನಂದ

ಹಿಂತಿರುಗಿ ನೋಡಬೇಡಿ. ಯಾವಾಗಲೂ ಮುನ್ನಡೆಯಿರಿ. ಅನಂತ ಶಕ್ತಿ, ಅನಂತ ಉತ್ಸಾಹ, ಅನಂತ ಸಾಹಸ ಮತ್ತು ಅನಂತ ತಾಳ್ಮೆ ಇವುಗಳಿದ್ದರೆ ಮಾತ್ರ ಮಹತ್ಕಾರ್ಯಗಳನ್ನು ಸಾಧಿಸಲು ಸಾಧ್ಯ. – ಸ್ವಾಮಿ ವಿವೇಕಾನಂದ

ಸುಖವು ದು:ಖದ ಕಿರೀಟವನ್ನು ಧರಿಸಿ ಮಾನವನೆದುರಿಗೆ ಬಂದು ನಿಲ್ಲುತ್ತದೆ. ಯಾರಿಗೆ ಸುಖ ಬೇಕೋ ಅವರು ದು:ಖವನ್ನು ಸ್ವೀಕರಿಸಬೇಕು. – ಸ್ವಾಮಿ ವಿವೇಕಾನಂದ

ವೈಯಕ್ತಿಕವಾಗಿ ಯಾರೊಬ್ಬರನ್ನು ಪ್ರೀತಿಸುವುದು ಬಂಧನ. ಎಲ್ಲರನ್ನೂ ಸಮಾನವಾಗಿ ಪ್ರೀತಿಸಿ. ಆಗ ಎಲ್ಲ ಆಸೆಗಳು ಬಿದ್ದು ಹೋಗುತ್ತವೆ. – ಸ್ವಾಮಿ ವಿವೇಕಾನಂದ

ಮಹಾ ಮೂರ್ಖನು ಕೂಡ ತನ್ನ ಹೃದಯಕ್ಕೆ ಒಪ್ಪಿಗೆಯಾಗುವಂತಹ ಕಾರ್ಯವನ್ನು ಸಾಧಿಸಬಲ್ಲ. ಆದರೆ ಯಾವುದೇ ಕೆಲಸವನ್ನಾದರೂ ತನಗೆ ರುಚಿಸುವಂತೆ ಪರಿವರ್ತಿಸಬಲ್ಲನೋ ಅವನೇ ಬುದ್ಧಿವಂತನು. – ಸ್ವಾಮಿ ವಿವೇಕಾನಂದ

ಮೊದಲು ಆಳಾಗುವುದನ್ನು ಕಲಿಯಿರಿ. ಆಗ ನಾಯಕನ ಅರ್ಹತೆ ತಾನಾಗಿಯೇ ಬರುತ್ತದೆ. – ಸ್ವಾಮಿ ವಿವೇಕಾನಂದ

ಒಂದು ಸಾಮಾನ್ಯ ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ. – ಸ್ವಾಮಿ ವಿವೇಕಾನಂದ

ಇಡೀ ಪ್ರಪಂಚ ನಿರ್ಮಾಣವಾಗಿರುವುದೇ ಮಾನವಶಕ್ತಿಯಿಂದ ಮತ್ತು ಉತ್ಸಾಹದ ತೀವ್ರತೆಯಿಂದ. – ಸ್ವಾಮಿ ವಿವೇಕಾನಂದ

ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಶುದ್ಧನಾಗಿರದಿದ್ದರೆ ಅವನು ದೇವಸ್ಥಾನಕ್ಕೆ ಹೋಗುವುದು ಮತ್ತು ದೇವರನ್ನು ಪೂಜಿಸುವುದು ಯಾವುದೇ ಪ್ರಯೋಜನಕ್ಕೆ ಬಾರದು. – ಸ್ವಾಮಿ ವಿವೇಕಾನಂದ

ಯಾವುದಕ್ಕೂ ಅಂಜದಿರು ಅದ್ಭುತ ಕಾರ್ಯವನ್ನೆಸಗುವೆ. ಭೀತಿಯೇ ಪ್ರಪಂಚದ ಎಲ್ಲ ದು:ಖಗಳಿಗೂ ಮಹತ್ಕಾರಣ. – ಸ್ವಾಮಿ ವಿವೇಕಾನಂದ

ನಮ್ಮ ರಾಷ್ಟ್ರೀಯ ಆದರ್ಶಗಳು ತ್ಯಾಗ ಮತ್ತು ಸೇವೆ. ದೇಶವನ್ನು ಈ ಎರಡು ಆದರ್ಶಗಳಲ್ಲಿ ತೊಡಗಿಸಿದರೆ ಉಳಿದೆಲ್ಲವೂ ತಾವೇ ಸರಿಯಾಗುತ್ತವೆ. – ಸ್ವಾಮಿ ವಿವೇಕಾನಂದ

ವಿಧವೆಯ ಕಣ್ಣೀರನ್ನು ನಿವಾರಿಸಲು ಅಥವಾ ಅನಾಥನ ಬಾಯಿಗೆ ಒಂದು ತುತ್ತು ಅನ್ನವನ್ನು ನೀಡಲು ಸಮರ್ಥವಾಗದ ಧರ್ಮದಲ್ಲಾಗಲಿ, ದೈವದಲ್ಲಾಗಲಿ ನನಗೆ ನಂಬಿಕೆಯಿಲ್ಲ. – ಸ್ವಾಮಿ ವಿವೇಕಾನಂದ

ನಿಮ್ಮೊಬ್ಬರ ಮೇಲೆಯೇ ಇಡೀ ಕೆಲಸವೂ ಬಿದ್ದಿದೆಯೇನೋ ಎಂಬಂತೆ ನೀವು ಪ್ರತಿಯೊಬ್ಬರೂ ಕೆಲಸ ಮಾಡಿಕೊಂಡು ಹೋಗಿ. – ಸ್ವಾಮಿ ವಿವೇಕಾನಂದ

ನನ್ನ ಧೀರಪುತ್ರರೇ, ನೀವೆಲ್ಲರೂ ಮಹತ್ಕಾರ್ಯವನ್ನು ಮಾಡಲು ಹುಟ್ಟಿರುವಿರಿ. ನಾಯಿ ನರಿಗಳ ಬೊಗಳುವಿಕೆಯಿಂದ ಅಪ್ರತಿಭರಾಗಬೇಡಿ. ಸಿಡಿಲ ಗರ್ಜನೆಯೂ ನಿಮ್ಮನ್ನಂಜಿಸದಿರಲಿ. ಎದ್ದು ನಿಂತು ಕಾರ್ಯೋನ್ಮುಖರಾಗಿ. – ಸ್ವಾಮಿ ವಿವೇಕಾನಂದ

Leave a Reply

Your email address will not be published. Required fields are marked *

Translate »