ದಿನಕ್ಕೊಂದು ಕಗ್ಗದಲ್ಲಿ – ಇಂದಿನ ಕಗ್ಗ ಹಸಿವಿನ ಬಗ್ಗೆ
ಡಿವಿಜಿಯವರು ಈ ಕಗ್ಗದಲ್ಲಿ , ಹಸಿವು ಎಲ್ಲ ಜೀವಿಗಳಿಗೆ ಎಷ್ಟು ಪ್ರಾಮುಖ್ಯ ಎಂದರೆ ದೇವರಿಗಿಂತ ದೊಡ್ಡವನು ಈ ಹಸಿವು ಎಂಬ ಅರ್ಥದಲ್ಲಿ ಹೇಳಿದ್ದಾರೆ. ಪ್ರಪಂಚದಲ್ಲಿರುವ ಸಕಲ ಜೀವಿಗಳಲ್ಲಿ ಹಸಿವಿನಿಂದ ತಪ್ಪಿಸ್ಕೊಂಡವು ಯಾವುವು ಇಲ್ಲ ಹಾಗು ಹಸಿವು ಎಲ್ಲ ಜೀವಿಗಳಲ್ಲಿನ ಗುಣ – ಅವಗುಣ ಕೂಡ ನಿರ್ಧರಿಸುವುದನ್ನು ಸೂಚ್ಯವಾಗಿ ಈ ಕೆಳಗಿನ ಕಗ್ಗದ ಮೂಲಕ ಹೇಳಿದ್ದಾರೆ.
ಹಸಿವಿನ ದೇವರು –Hunger God
ಉದರದೈವಕೆ ಜಗದೊಳೆದುರು ದೈವವದೆಲ್ಲಿ ।
ಮೊದಲದರ ಪೂಜೆ ಮಿಕ್ಕೆಲ್ಲವದರಿಂದ ।।
ಮದಿಸುವುದದಾದರಿಸೆ ಕುದಿವುದು ನಿರಾಕರಿಸೆ ।
ಹದದೊಳಿರಿಸುವುದೆಂತೊ ಮಂಕುತಿಮ್ಮ ।।
Which God is greater than the Stomach God in this world ?
It has to get the first worship; others come afterwards.
If you respect it, it takes over you. If you ignore it, it seethes with rage.
How to keep it at bay? no one knows yet. –Mankuthimma