ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಉಪಯೋಗವಾಗದ ಯಾವುದೇ ವಿದ್ಯೆ ಎಷ್ಟು ದೊಡ್ಡದಾದರೂ ಅದರಿಂದ ಉಪಯೋಗವಿಲ್ಲ…

ಉಪಯೋಗವಾಗದ ಯಾವುದೇ ವಿದ್ಯೆ ಎಷ್ಟು ದೊಡ್ಡದಾದರೂ ಅದರಿಂದ ಉಪಯೋಗವಿಲ್ಲ…

ಒಮ್ಮೆ ರಾಮಕೃಷ್ಣ ಪರಮಹಂಸರು ತಮ್ಮ ಶಿಷ್ಯರೊಂದಿಗೆ ಗಂಗಾ ನದಿಯ ತೀರದಲ್ಲಿ ಕುಳಿತಿದ್ದಾಗ ತಾಂತ್ರಿಕನೊಬ್ಬ ಬಂದು ಅವರಿಗೆ ಸವಾಲು ಹಾಕಿದ… ನನ್ನ ಹಾಗೆ ನೀವು ನೀರಿನ ಮೇಲೆ ನಡೆದು ತೋರಿಸಬಲ್ಲಿರಾ ಎಂದು ಆಗ ರಾಮಕೃಷ್ಣರು ನೀನು ನಿನ್ನ ಸಾಧನೆಯನ್ನು ಪ್ರದರ್ಶಿಸು ಎಂದರು.

ಆ ತಾಂತ್ರಿಕನು ಜಂಬದಿಂದ ನೀರಿನ ಮೇಲೆ ನದಿಯ ಇನ್ನೊಂದು ತೀರದವರಿಗೆ ನಡೆದು ವಾಪಸ್ ಬಂದು ಹೇಳಿದ. ನನ್ನ ಹಾಗೆ ನೀವು ಮಾಡಬಲ್ಲಿರಾ ಎಂದು. ಆಗ ರಾಮಕೃಷ್ಣರು ಶಾಂತವಾಗಿ ನೀನು ಹೀಗೆ ಬೇರೆಯವರನ್ನು ನದಿ ದಾಟಿಸಬಲ್ಲೆಯಾ ಎಂದು ಕೇಳಿದರು.

  ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂದು ಧ್ವಜಾರೋಹಣ ಮಾಡುವ ವ್ಯತ್ಯಾಸವೇನು?

ಆಗ ಅವನು ಅಹಂಕಾರದಿಂದ ಇದು ನನ್ನ 20 ವರ್ಷಗಳ ಸಾಧನೆ, ಬೇರೆಯವರು ಇದನ್ನು ಮಾಡಲು ಸಾಧ್ಯವಿಲ್ಲ ಎಂದನು. ಆಗ ಪರಮಹಂಸರು ನೋಡು ನಿನ್ನ ಸಾಧನೆಗಿಂತ ಅಂಬಿಗನ ಕೆಲಸವೇ ವಾಸಿ. ಅವನು ಒಂದು ರೂಪಾಯಿ ಕೊಟ್ಟರೆ ಅವನ ದೋಣಿಯಲ್ಲಿ 50 ಜನರನ್ನು ನದಿ ದಾಟಿಸುವವನು ಎಂದು ಹೇಳಿದರು.

ಆಗ ತಾಂತ್ರಿಕ ನಾಚಿಕೆಯಿಂದ ತಲೆತಗ್ಗಿಸಿಕೊಂಡು ಹೊರಟು ಹೋದನು. ಜನರಿಗೆ ಉಪಯೋಗವಾಗದ ಯಾವುದೇ ವಿದ್ಯೆ ಎಷ್ಟು ದೊಡ್ಡದಾದರೂ ಅದನ್ನು ದೇವರು ಮೆಚ್ಚುವುದಿಲ್ಲ.

Leave a Reply

Your email address will not be published. Required fields are marked *

Translate »