ಅರ್ಜುನನ ಮಗ ಅರವಣ
ಈತ ಅರ್ಜುನನ ಮಗ ಬಹುಷಃ ಅರವಣನ ಬಗ್ಗೆ ಅಷ್ಟಾಗಿ ತಿಳಿದಿರಲಾರದು .ಯಾಕೆಂದರೆ ಅರವಣನ ಕತೆ ಮಹಾಭಾರತದ ಉಪ ಕತೆಯಲ್ಲಿ ಬರುತ್ತದೆ . ಅರ್ಜುನನಿಗೆ #ಅಭಿಮನ್ಯು ಮತ್ತು ಬಬ್ರುವಾಹನ ನಲ್ಲದೆ ಅರವಣ ಎಂಬ ಪುತ್ರನೂ ಇದ್ದನೂ ಆದರೆ ಅರವಣನನ್ನು ಯುದ್ದಕ್ಕಾಗಿ ಬಲಿ ಕೊಡಬೇಕಾಯ್ತು ಅರವಣನೂ ಅಭಿಮನ್ಯುವಿನಂತೆ ಮಹಾಭಾರತದ ಯುದ್ದಕ್ಕಾಗಿ ತನ್ನ ಬಲಿದಾನವನ್ನು ಮಾಡಿದ ಮಹಾನ್ ವೀರ .
ಒಮ್ಮೆ ಧರ್ಮರಾಯ ಮತ್ತು ದ್ರೌಪದಿಯರು ಶಯ್ಯಾಗೃಹದಲ್ಲಿದ್ದಾಗ ಅರ್ಜುನ ಗಮನಿಸದೆ ಕೋಣೆಯನ್ನು ಪ್ರವೇಶಿಸುವ ಅಲ್ಲಿ ಧರ್ಮರಾಯ ದ್ರೌಪದಿಯ ಜೊತೆ ಇರುವುದನ್ನು ಕಂಡು ಎಂತಹ ಕೆಲಸ ಮಾಡಿಬಿಟ್ಟೆ ಎಂದು ಮುಜುಗರ ಪಟ್ಟು ಕೊಳ್ಳುತ್ತಾ ಹೊರಬರುತ್ತಾನೆ .
ಧರ್ಮ ಸಂಕಟಕ್ಕೆ ಸಿಲುಕಿದೆನಲ್ಲಾ ಎಂತಹ ಅಚಾತುರ್ಯ ವಾಯ್ತು ಎಂದು ಚಿಂತಿಸುತ್ತಾನೆ . ಪಾಂಡವರಲ್ಲಿ ಒಂದು ಒಪ್ಪಂದ ವಾಗಿರುತ್ತದೆ ದ್ರೌಪದಿಯ ಜೊತೆ ಪಾಂಡವರೆಲ್ಲರೂ ಒಬ್ಬಬ್ಬರಾಗಿ ಇರಬೇಕಾದರೆ ಅವರ ಕೋಣೆಗೆ ಇತರ ಪಾಂಡವರು ಹೋಗಬಾರದು ಎಂದು .
ಮತ್ತು ಕೋಣೆಯೊಳಗೆ ಹೋದಾಗ ಬಾಗಿಲ ಬಳಿ ಪಾದರಕ್ಷೆ ಬಿಡಬೇಕು ಎಂದು ಒಪ್ಪಂದ ವಾಗಿರುತ್ತದೆ . ಅಂದು ಅರ್ಜುನ ದ್ರೌಪದಿಯ ಕೋಣೆಗೆ ಹೋದಾಗ ಬಾಗಿಲ ಬಳಿ ಯಾರ ಪಾದರಕ್ಷೆಯೂ ಇರುವುದಿಲ್ಲ ಅದಕ್ಕಾಗಿಯೇ ಒಳ ಹೋಗಿದ್ದ .
ಧರ್ಮರಾಯನ ಪಾದರಕ್ಷೆ ಒಂದು ನಾಯಿ ಎಳೆದು ಹೊಯ್ದಿರುತ್ತದೆ ಇದರಿಂದ ಅರ್ಜುನ ಒಳಗೆ ಬಂದಿರುವುದ ತಿಳಿದ ದ್ರೌಪದಿ ನಾಯಿಗೆ ಶಾಪ ಕೊಡುತ್ತಾಳೆ .
ಅರ್ಜುನ ತನ್ನ ಧರ್ಮ ಸಂಕಟ ನಿವಾರಿಸಿಕೊಳ್ಳಲು ತೀರ್ಥಯಾತ್ರೆ ಗೆ ಹೋಗುತ್ತಾನೆ . ಒಂದು ಸಾಯಂ ಸಂದ್ಯಾಕಾಲ ಸೂರ್ಯದೇವನ ಪೂಜೆಯನ್ನು ನದೀ ತೀರದಲ್ಲಿ ಮಾಡುತ್ತಿದ್ದಾಗ ನಾಗಲೋಕದ ನಾಗರಾಜನ ಪುತ್ರಿ ನಾಗಕನ್ನಿಕೆ ಯಾದ ಉಲೂಚಿ (ಉಲೂಪಿ ) ಮದ್ಯಮ ಪಾಂಡವನಾದ ಅರ್ಜುನನನ್ನು ಕಂಡು ಮೋಹಿಸುತ್ತಾಳೆ . ಮತ್ತು ಅರ್ಜುನನನ್ನು ನಾಗಲೋಕಕ್ಕೆ ಕೊಂಡೊಯ್ಯುತ್ತಾಳೆ .
ಅರ್ಜುನ ಉಲೂಚಿಯನ್ನು ಕಂಡು ಮೋಹ ಗೊಂಡು ಇಬ್ಬರೂ ಗಾಂದರ್ವ ವಿವಾಹ ಮಾಡಿಕೊಳ್ಳುತ್ತಾರೆ . ಅವರಿಬ್ಬರಿಗೂ ಜನಿಸಿದ ಪುತ್ರನೇ #ಅರವಣ .
#ಮಹಾಭಾರತದ ಯುದ್ದ ಪ್ರಾರಂಭ ವಾಗಿರುತ್ತದೆ . ಆಗ ಕೃಷ್ಣ ಯುದ್ದವನ್ನು ಗೆಲ್ಲಬೇಕಾದರೆ ಪಾಂಡವರಲ್ಲೊಬ್ಬರನ್ನು ಅದು ಮೈ ಮೇಲಿನರೋಮಗಳು ಮೇಲೆ ಎದ್ದಿರ ಅಂತಹ ಪಾಂಡವ ಬೇಕು ಅವರನ್ನು ಬಲಿ ಕೊಟ್ಟರೆ ಯುದ್ದದಲ್ಲಿ ಗೆಲುವು ಸಾದ್ಯ ಎಂದು ಹೇಳುತ್ತಾನೆ .
ಅಂತಹ ಪುರುಷರಲ್ಲಿ ಅರ್ಜುನ ಇದ್ದರೆ ಅರ್ಜುನನೇ ಯುದ್ದದ ಮುಖ್ಯ ಪಾತ್ರ ಇನ್ನು ಧರ್ಮರಾಯ ಹಿರಿಯ ಯಾರನ್ನು ಬಲಿ ಕೊಡಬೇಕು ಎಂದು ಚಿಂತಿಸುತ್ತಿರುವಾಗ ಅರ್ಜುನನ ಮಗ #ಅರವಣ ನಾನು ಬಲಿಗೆ ಆಹುತಿ ಯಾಗುತ್ತೇನೆ ಎಂದು ಮುಂದೆ ಬಂದನು .
ಆದರೆ ನನ್ನ ಕಡೆಯ ಆಸೆಯನ್ನು ಈಡೇರಿಸಿದರೆ ಮಾತ್ರ ಎಂದನು . ಕೃಷ್ಣನು ಅರವಣ ನಿನ್ನ ಅಭಿಮತ ವೇನು ತಿಳಿಸು ಎಂದಾಗ ಅರವಣ ಕೃಷ್ಣನಿಗೆ …. ನಾನು ಬಲಿಗೆ ಮೊದಲು ಮದುವೆಯಾಗ ಬೇಕು ನಂತರ ಮೊದಲ ರಾತ್ರಿಯ ರಸ ಗಳಿಗೆಯನ್ನು ಅನುಭವಿಸಬೇಕು ಇದೇ ನನ್ನ ಅಂತಿಮ ಆಸೆ ಅಂದಾಗ .
ಕೃಷ್ಣ ಮತ್ತು ಪಾಂಡವರು ಒಪ್ಪುವರು . ಆದರೆ ದುರದೃಷ್ಟಕರ ಯಾವೊಂದು ಹೆಣ್ಣೂ ಅರವಣನನ್ನು ಮದುವೆ ಯಾಗಲು ಮುಂದೆ ಬರುವುದಿಲ್ಲ . ಮದುವೆಯ ಮಾರನೆಯ ದಿನ ಬಲಿಯಾಗುವ ಪುರುಷ ನಮಗೆ ಬೇಡ ಎಂದವರೇ ಎಲ್ಲರು .
ಈಗಿರುವಾಗ ಕೃಷ್ಣ ಚಿಂತಿಸಿ ಕೊನೆಗೆ ತಾನೇ ಸ್ವಯಂ ಮೋಹಿನಿಯ ರೂಪದರಿಸುತ್ತಾನೆ . ಮೋಹಿನಿಯನ್ನು ಕಂಡ ಅರವಣ ಆಕೆಯನ್ನು ಮೋಹಿಸುತ್ತಾನೆ ಮದುವೆಯಾಗಿ ತನ್ನ ಆಸೆ ಪೂರೈಸಿ ಕೊಳ್ಳುತ್ತಾನೆ .
ನಂತರ ಮಾರನೆಯ ದಿನ ಅರವಣನನ್ನು ಯುದ್ದ ಜಯಿಸಲಿಕ್ಕಾಗಿ ಬಲಿಯನ್ನು ಕೊಡುತ್ತಾರೆ . ಅರವಣನ ಈ ತ್ಯಾಗ ಬಲಿದಾನಕ್ಕೆ ಮೆಚ್ಚಿದ ಕೃಷ್ಣ ಅರವಣನನ್ನು ಹರಸಿ ಸೂರ್ಯ ಚಂದ್ರ ರಿರುವ ತನಕ ನಿನ್ನ ಹೆಸರು ಶಾಶ್ವತ ವಾಗಿರಲಿ ಎಂದು ವರ ವನ್ನು ಕೊಡುತ್ತಾನೆ . ಈ ಕತೆ ಮಹಾಭಾರತದ ಉಪಕತೆಯಲ್ಲಿ ಉಲ್ಲೇಖ ವಾಗಿದೆ .
ಇಂದಿಗೂ ಸಹ ಅರವಣನ ದೇವಸ್ಥಾನ ವಿದೆ ಅರವಣನ ಉತ್ಸವವನ್ನು ಮಾಡುತ್ತಾರೆ .
ಕೃಷ್ಣ ಮೋಹಿನಿ ಅವತಾರ ವೆತ್ತಿ ಅರವಣನನ್ನು ವಿವಾಹವಾಗಿ ಮಾರನೆಯ ದಿನ ವಿಧವೆಯಾಗುತ್ತಾಳೆ . ಆದ ಕಾರಣ ಇಂದಿಗೂ ಸಹ ಮಂಗಳ ಮುಖಿಯರು ಅರವಣನ ಉತ್ಸವ ಮಾಡುತ್ತಾರೆ .
#ಅರವಣನ ದೇವಸ್ಥಾನ ತಮಿಳಿನಾಡಿನ ಪೋತಾಂಡ ಪುರ್ ನಲ್ಲಿದೆ
ಪ್ರತೀವರ್ಷ ಚೈತ್ರ ಮಾಸದಂದು ದೇಶದಲ್ಲಿರುವ ಸಾವಿರಾರು ಮಂಗಳ ಮುಖಿಯರು ಪೋತಾಂಡಪುರ್ ದೇವಸ್ಥಾನ ಕ್ಕೆ ಹೋಗಿ ಅರವಣನ ಉತ್ಸವ ವನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ .
ಕೃಷ್ಣಮೋಹಿನಿ ರೂಪ ದರಿಸಿದ್ದರಿಂದ ಕೃಷ್ಣನನ್ನು ಪೂಜಿಸುತ್ತಾರೆ.
ಮಂಗಳ ಮುಖಿಯರೆಲ್ಲಾ ಮದುವಣಗಿತ್ತಿಯಂತೆ ಅಲಂಕರಿಸಿಕೊಳ್ಳುವರು ಅವರಿಗೆಲ್ಲ ಪೂಜಾರಿಯೇ ತಾಳಿ
ಕಟ್ಟುವ ಹತ್ತು ದಿನಗಳ ಕಾಲ ಉತ್ಸವ ನಡೆಯುತ್ತದೆ .
ಹತ್ತುದಿನದ ನಂತರ ಮಂಗಳ ಮುಖಿಯರು ಕೈ ಬಳೆ ಹೊಡೆದು ಅಳುತ್ತಾರೆ . ಇಂದಿಗೂ ಸಹ ಚೈತ್ರ ಮಾಸದಲ್ಲಿ ಅರವಣನ ಉತ್ಸವ ನಡೆಯುತ್ತದೆ .
ಧನ್ಯವಾದಗಳು
ಲೇಖಕರು
✒✒ಮಮತಾ ಎಸ್ ಗೌಡ