ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮೈಸೂರಲ್ಲಿ ಉಚಿತ ಪ್ರೌಢಶಾಲೆ ಮತ್ತು ಹಾಸ್ಟೆಲ್..!

ಮೈಸೂರಲ್ಲಿ ಉಚಿತ ಪ್ರೌಢಶಾಲೆ ಮತ್ತು ಹಾಸ್ಟೆಲ್..!


ಮೈಸೂರಲ್ಲಿ ಉಚಿತವಾಗಿ ಪ್ರೌಢಶಾಲೆಗೆ ಹಾಗೂ ಹಾಸ್ಟೆಲ್ ಗೆ ಸೇರ ಬಯಸುವ ವಿದ್ಯಾರ್ಥಿಗಳಿಗಿದೋ ಸುವರ್ಣಾವಕಾಶ..!

ಮಾನ್ಯರೆ ಶರಣು…
ಅನಾಥ ಮಕ್ಕಳಿಗೆ, ಕೇವಲ ತಂದೆ ಅಥವಾ ಕೇವಲ ತಾಯಿ ಇರುವ ಮಕ್ಕಳಿಗೆ, ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಬಡ ಮಕ್ಕಳಿಗೆ, ಯಾವುದೇ ಜಾತಿ ಭೇದವಿಲ್ಲದೆ ಸೇರಿಸಿಕೊಳ್ಳುವ, ಸಂಪೂರ್ಣ ಉಚಿತವಾಗಿ ವಿದ್ಯಾಭ್ಯಾಸ ಮಾಡಲು ಅವಕಾಶ ಒದಗಿಸುವ, ಹಾಸ್ಟೆಲ್ ಇರುವ ಪ್ರೌಢಶಾಲೆಯೊಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿದೆ..! ಖಂಡಿತವಾಗಿಯೂ ತಮಗಿದೊಂದು ಸುವರ್ಣಾವಕಾಶ ಕಲ್ಪಿಸಿಕೊಡಲಿದೆ..!
ಸೇರ ಬಯಸುವ ಆಸಕ್ತ ಮಕ್ಕಳು ಹಾಗೂ ಸೇರಿಸ ಬಯಸುವ ತಂದೆ/ತಾಯಿ/ಪಾಲಕ/ಪೋಷಕರು ದಯಮಾಡಿ ಗಮನಿಸಿ:
8 ರಿಂದ 10 ನೇ ತರಗತಿಯ ವರೆಗೆ ಕನ್ನಡ ಮಾಧ್ಯಮದ ಪ್ರತಿಷ್ಠಿತ ಡಿ.ಸಿ.ಎಂ. ಶಿಕ್ಷಣ ಸಂಸ್ಥೆಯ; ಶ್ರೀ ಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಪ್ರವೇಶಾತಿಯೂ ಸೇರಿದಂತೆ, ಊಟ, ವಸತಿ, ಸಮವಸ್ತ್ರ, ನೋಟ್ಸ್, , ಶೂಸ್ ಹೀಗೇ ಎಲ್ಲವೂ ಇಲ್ಲಿ ಸೇರಲಿರುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಉಚಿತವಾಗಿ ಸಿಗಲಿವೆ..!
ವಿವಿಧ ಸಂಕಷ್ಟಗಳ ಕಾರಣಗಳಿಂದ ಓದಲಾಗದೆ
ತೊಂದರೆಯಲ್ಲಿರುವ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ವಸತಿ/ಆಶ್ರಯ/ಶಿಕ್ಷಣ ನೀಡಲಿರುವ ಹಾಸ್ಟೆಲ್ ಹಾಗೂ ಈ ಪ್ರೌಢಶಾಲೆ, ನಿಜಕ್ಕೂ ಬಡ ಮಕ್ಕಳ ಪಾಲಿಗೆ ಆಶಾಕಿರಣವಷ್ಟೇ ಅಲ್ಲ, ನಾಳೆಯ ಬಾಳಿನ ಹೆಗ್ಗುರಿಗಾಗಿ ಸಾಗಲಿರುವ ನವ ಚೈತನ್ಯಗಳಿಗೆ ದಾರಿ ತೋರುವ ದೊಂದಿಗಳು; ಪ್ರೀತಿಯ ಪಂಜುಗಳು..!
ಬನ್ನಿ ವಿದ್ಯಾರ್ಥಿಗಳೆ ಈ ದೊಂದಿ/ಪಂಜುಗಳ ಮಮತೆಯ ಸಮತೆಯ ಮಧುರ ಮುಂಬೆಳಕಲ್ಲಿ ನಿಮ್ಮ ವಿದ್ಯಾಭ್ಯಾಸದ ಕನಸನ್ನು ನನಸಾಗಿಸಿಕೊಳ್ಳಿ..!

  ಆರತಿಯನ್ನು ಪ್ರಾರಂಭಿಸುವುದರ ಮೊದಲು ಶಂಖವನ್ನು ಏಕೆ ಊದಬೇಕು ?

ಮೊದಲು ಸಂಪರ್ಕಿಸುವವರಿಗೆ ಅಥವಾ ಬಂದವರಿಗೆ ಪ್ರಥಮಾಧ್ಯತೆ..!
ಈಗಲೇ ಕರೆಮಾಡಿ ಸಂಪರ್ಕಿಸಿ ಅಥವಾ ಸ್ವತಃ ಬಂದು, ಮುಂದೆ ಹೆಸರಿಸಿದ ಶಿಕ್ಷಕ ಶಿಕ್ಷಕಿಯರ ಕಂಡು ತಮ್ಮ ಮಕ್ಕಳಿಗೆ ಅವಕಾಶ ಖಚಿತಪಡಿಸಿಕೊಳ್ಳಿ..!

ಪ್ರವೇಶಾತಿಗಾಗಿ ತಾವು ಸಂಪರ್ಕಿಸಬೇಕಾದ/ಅಥವಾ ಕಾಣಬೇಕಾದ ಶಿಕ್ಷಕ/ಶಿಕ್ಷಕಿಯರ ಹೆಸರು ಹಾಗೂ ಪೋನ್ ವಿವರ:
೧) ಡಾ. ಜಯಪ್ಪ ಹೊನ್ನಾಳಿ
Mo: 9480216657
೨)ಶ್ರೀ ಮುರಳೀಧರರಾವ್
Mo: 9845026750
೩)ಶ್ರೀ ಶಿವಮೂರ್ತಿ
Mo:9880900918
೪)ಶ್ರೀ ಶ್ರೀನಿವಾಸ್
Mo:9449525468
೫)ಶ್ರೀ ಹರೀಶ್
Mo: 9739342125
೬)ಶ್ರೀ ಮಹದೇವಸ್ವಾಮಿ
Mo: 8951753368
೭)ಶ್ರೀಮತಿ ತನುಜಾ
Mo: 8722859033

"ತಮ್ಮ ಬರುವೆಮಗೆ ಪ್ರಾಣ ಜೀವಾಳ..!"

ತಮ್ಮ ನಿರೀಕ್ಷೆಯಲ್ಲಿ..!
      ಶರಣಾರ್ಥಿಗಳೊಂದಿಗೆ...

                  ಇಂತೀ,
               ತಮ್ಮ ವಿಶ್ವಾಸಿ...
         ಡಾ.ಜಯಪ್ಪ ಹೊನ್ನಾಳಿ
         (ಜಯಕವಿ), ಮೈಸೂರು

ವಿಳಾಸ:

  ಶ್ರೀಕೃಷ್ಣ ನಮಗೆ ಆದರ್ಶ - ಕೃಷ್ಣಂ ವಂದೇ ಜಗದ್ಗುರುಂ

ಶ್ರೀ ಸಿದ್ಧೇಶ್ವರ ಪ್ರೌಢಶಾಲೆ
ಶ್ರೀ ಡಿ ಎಸ್ ಎಂ ಶಿಕ್ಷಣ ಸಂಸ್ಥೆ
ಶ್ರೀ ಸಿದ್ಧೇಶ್ವರ ಅನುದಾನಿತ ಪ್ರೌಢಶಾಲೆ
ಮೊದಲನೇ ಹಂತ, ವಿಜಯನಗರ
ಯೋಗ ನರಸಿಂಹಸ್ವಾಮಿ ದೇವಸ್ಥಾನದ ಹತ್ತಿರ
100 ಅಡಿ ರಸ್ತೆ, ರಘುಲಾಲ್ ಪಕ್ಕ
ಮೈಸೂರು-570017 🙏🏻 ಯಾರಿಗಾದರೂ ಉಪಯೋಗ ಆಗುತ್ತದೆ ದಯವಿಟ್ಟು ನಿಮ್ಮ ಗುಂಪುಗಳಲ್ಲಿ ಪ್ರಚಾರ ಮಾಡಿ 🙏🏻

Leave a Reply

Your email address will not be published. Required fields are marked *

Translate »