ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ನವವಧುವಿನ ಕೈಯಲ್ಲಿ ಯಾಕೆ ಸೇರು ಒದ್ದೆಸುವುದು?

ನವವಧುವಿನ ಕೈಯಲ್ಲಿ ಯಾಕೆ ಸೇರು ಒದ್ದೆಸುವುದು?

ಭಾಗ್ಯದ ಲಕ್ಷ್ಮಿ ಬಾರಮ್ಮ ಎಂದು ನವ ವಧುವನ್ನು ಸೇರು, ಅಕ್ಕಿ, ಬೆಲ್ಲ ಒದ್ದು ಒಳಗೆ ಕಾಲಿಡುತ್ತಾಳೆ. ಮನೆ ತುಂಬಿಸಿಕೊಳ್ಳುತ್ತಾರೆ ಯಾಕೆ ಇದು ಯಾವುದಕ್ಕೆ ಸಂಪ್ರದಾಯ🤔

ಸೇರಲ್ಲಿ ಅಕ್ಕಿ ಹಾಕಿ ಮೇಲೆ ಬೆಲ್ಲದ ಅಚ್ಚು ಹೊಸ್ತಿಲ ಮೇಲೆ ಇಟ್ಟು ಯಾವ ಕಾರಣಕ್ಕೆ ನವವಧು ಅದನ್ನು ಒದ್ದು ಗೃಹ ಪ್ರವೇಶ ಮಾಡುತ್ತಾಳೆ?

ಈ ಶಾಸ್ತ್ರವನ್ನು ಯಾಕೆ ಈ ರೀತಿಯಾಗಿ ಮಾಡಿದ್ದಾರೆ. ಇದರ ಅರ್ಥವಾದರೂ  ಏನು ಇರಬಹುದು ಯೋಚಿಸಿ ನೋಡಿ ಒಮ್ಮೆ🤔

ಇದಕ್ಕೆ ಅರ್ಥ ನನಗೆ ಗೊತ್ತಿರುವಷ್ಟು ನಾನು ತೀಳಿಸಲು ಪ್ರಯತ್ನ ಮಾಡುವೆ🦜🦜

ಸೇರಿಗೆ ಕಾರಕ = ಶನಿ

ಅಕ್ಕಿಗೆ ಕಾರಕ =ಚಂದ್ರ

ಬೆಲ್ಲಕ್ಕೆ ಕಾರಕ = ಗುರು

ಬೆಲ್ಲ ಅಂದ್ರೆ ಮೃತ್ಯುಂಜಯ ನವವಧು ಮನೆಗೆ ಬಂದ ಮೇಲೆ ಯಾವುದೇ ಸಾವು ನೋವು ಸಂಭವಿಸದೆ ಇರಲಿ ಎಂದು ಒಂದು ಕಡೆಯಾದರೆ, ಎಲ್ಲರ ಮನಸ್ಸು ಸಿಹಿಯಾಗಿರಲಿ ಎಂದು ಇನ್ನೊಂದು ಕಡೆ.

  ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು

ಚಂದ್ರ + ಗುರು = ಗಜಕೇಸರಿ ಯೋಗ

ಅಂದರೆ ಇವರ ಮನೆಯಲ್ಲಿ ಯಾವಾಗಲೂ ಗಜಕೇಸರಿ ಯೋಗ ತುಂಬಿರಲಿ ಎಂದು ಸೇರು ಒದ್ದೆಸುವುದು ಮದುಮಗಳ ಕೈಯಲ್ಲಿ.

ನವವಧು = ಶುಕ್ರ

ಸೇರಿಗೆ ಕಾರಕ = ಶನಿ

ಅಕ್ಕಿ = ಚಂದ್ರ

ಬೆಲ್ಲ = ಗುರು

ಒದ್ದೆಯುವ ಕಾಲಿನ ಪಾದ = ಶನಿ

ಒದ್ದೆಯುವ ಕಾಲಿನ ಬೆರಳು = ಗುರು

ಸೇರು ಅಂದರೆ ಶನಿ= ಮಾವನಿಗೆ ಕಾರಕ

ಸೇರಿನೊಳಗೆ ಇರುವ ಅಕ್ಕಿ, ಬೆಲ್ಲ ಅಂದರೆ ಚಂದ್ರ, ಗುರು ಅತ್ತೆಗೆ ಹಾಗು ಉತ್ತಮ ಭಾಂಧವ್ಯ ಕ್ಕೆ ಕಾರಕ.

ಅತ್ತೆ ಮಾವನೊಂದಿಗೆ ನವವಧುವು ಉತ್ತಮ ಸಂಬಂಧ ಇಟ್ಟು ಕೊಳ್ಳಬೇಕು ಎನ್ನುವ ಸಂಕೇತ.

  ಸ್ತ್ರೀಯರು ಸುಲಭವಾಗಿ ಮಾಡಬಹುದಾದ ದಾನಗಳು

ಶನಿ = ಎಂದರೆ ಋಣ, ರೋಗ, ದಾರಿದ್ರ್ಯ

ಗುರು = ಎಂದರೆ ಪರಿಹಾರ ಹಾಗೂ ಅಭಿವೃದ್ಧಿ

ಶುಕ್ರ = ಎಂದರೆ ಲಕ್ಷ್ಮೀ ಹಾಗೂ ಗೃಹ

ಋಣ, ರೋಗ, ದಾರಿದ್ರ್ಯಗಳನ್ನೂ ಪರಿಹಾರ ಎನ್ನುವ ಬೆರಳಿನಿಂದ ಒದ್ದು, ಆ ಗೃಹದಲ್ಲಿ ಸಮೃದ್ಧಿ, ಪ್ರೀತಿ ಉತ್ತಮ ಬಾಂಧವ್ಯ ಅಭಿವೃದ್ಧಿ ಬೆಳಸಬೇಕು ಎನ್ನುವ ಸಂಕೇತ.

ಶನಿ + ಚಂದ್ರ = ಅತ್ತೆ, ಮಾವ ಹಾಗೂ ಗುರು, ಹಿರಿಯರ ಸಲಹೆ ಹಾಗು ಆಶೀರ್ವಾದ ಇವು ಉತ್ತಮ ಬಾಂಧವ್ಯಕ್ಕೆ ಅಗತ್ಯ.

ಶನಿ = ಕರ್ಮ 

ಗುರು = ಬೆರಳು, ಅಭಿವೃದ್ಧಿ

ಶುಕ್ರ = ವಧು

ಈ ಹೆಣ್ಣು ಮಾಡುವ ಪ್ರತಿ ಕೆಲಸವು ಗಂಡನ ಮನೆಗೆ ಅಭಿವೃದ್ಧಿಯನ್ನು ತರಲಿ ಎಂಬ ಸಂಕೇತ

ಶುಕ್ರ = ಹೆಣ್ಣು, ವೈವಾಹಿಕ ಜೀವನ

  18 ಪುರಾಣಗಳು : ವಾಯು ಪುರಾಣ ಏನು ಹೇಳುತ್ತದೆ?

ಶನಿ = ಅಡೆತಡೆ

ಗುರು = ನಿವಾರಣೆ ಹಾಗೂ ತಾಳ್ಮೆ

ಚಂದ್ರ = ಶುದ್ಧ ಮನಸ್ಸು ಹಾಗೂ ಆಕರ್ಷಣೆ

ವೈವಾಹಿಕ ಜೀವನದಲ್ಲಿ ಏನೇ ಅಡೆತಡೆ ಬಂದರೂ ತಾಳ್ಮೆಗೆಡದೆ, ನಿವಾರಿಸಿಕೊಂಡು ಪರಸ್ಪರ ಆಕರ್ಷಣೆಯಿಂದ ಶುದ್ಧ ಮನಸ್ಸಿನ ಉತ್ತಮ ವೈವಾಹಿಕ ಜೀವನ ನಡೆಸಬೇಕು ಎನ್ನುವ ಸಂಕೇತವೇ ಈ ಸೇರು ಒದ್ದೆಸುವುದು ಹಾಗೂ ಮನೆ ತುಂಬಿಸಿಕೊಳ್ಳುವುದು.🙂😊

ಮೂಲ ಲೇಖನ ಕೃಪೆ :

ಪುಷ್ಪಾ ಆಚಾರ್ಯರು. ಪಿ

Leave a Reply

Your email address will not be published. Required fields are marked *

Translate »