ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದೇವರ ಗರ್ಭಗುಡಿಗೆ ಪ್ರದಕ್ಷಿಣೆ ಹಾಕುವುದರ ಮಹತ್ವ


‌ ‌
ದೇವರ ಗರ್ಭಗುಡಿಗೆ ಪ್ರದಕ್ಷಿಣೆ ಹಾಕುವುದರ ಮಹತ್ವ..!

ದೇವರ ಪೂಜೆ, ಪ್ರಾರ್ಥನೆ ಮತ್ತು ಧ್ಯಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದು. ಅಂತೆಯೇ ದೇವರ ಗುಡಿಯ ಸುತ್ತ ಒಂದಿಷ್ಟು ಪ್ರದಕ್ಷಿಣೆ ಮಾಡಿದರೆ ತನ್ನಿಂದ ತಾನೇ ಮನಸ್ಸಿಗೆ ಒಂದು ಬಗೆಯ ನಿರಾಳತೆ ಉಂಟಾಗುವುದು. ಸಾಕಷ್ಟು ಸಮಾಧಾನ ಪಡೆದ ಅನುಭವವು ದೊರೆಯುವುದು. ಹಾಗಾಗಿ ಭಕ್ತರು ತಮ್ಮ ಕಷ್ಟಗಳನ್ನು ದೇವರ ಮುಂದೆ ಹೇಳಿಕೊಳ್ಳಲು ಹಾಗೂ ಒಂದಿಷ್ಟು ಮನದಾಸೆಗಳನ್ನು ದೇವರ ಮುಂದಿಡಲು ಬಯಸುತ್ತಾರೆ. ಈ ಹಿನ್ನೆಲೆಯಲ್ಲಿಯೇ ಬಹುತೇಕ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಪ್ರದಕ್ಷಿಣೆಯ ಸೇವೆ ಸಲ್ಲಿಸಿ ಕಷ್ಟಗಳಿಂದ ಮುಕ್ತರಾಗುವರು.

ದೇವಾಲಯದ ಗರ್ಭ ಗೃಹವನ್ನು ಸುತ್ತುವುದು ಹಿಂದೂ ಧರ್ಮದಲ್ಲಿ ಒಂದು ಸಾಂಪ್ರದಾಯಿಕ ಆಚರಣೆ ಮತ್ತು ಪದ್ಧತಿಯೂ ಹೌದು. ಈ ಪ್ರಕ್ರಿಯೆಯನ್ನು ಪರಿಕ್ರಮ, ಪ್ರದಕ್ಷಿಣೆ ಅಥವಾ ಪ್ರದಕ್ಷಿಣಂ ಎಂದು ಕರೆಯುತ್ತಾರೆ. ಭಕ್ತರು ದೇವರ ಗುಡಿಯನ್ನು ಸುತ್ತುವುದರಿಂದ ತಮ್ಮ ಅಹಂಕಾರವನ್ನು ಹಾಗೂ ದುಷ್ಟ ಚಿಂತನೆಗಳನ್ನು ಬಿಟ್ಟು, ನಿನಗೆ ಶರಣಾಗುತ್ತೇವೆ, ನಿನ್ನ ಪಾದದ ಸೇವೆಯನ್ನು ಮಾಡಿಕೊಂಡು ಭಕ್ತರಾಗಿ ಇರುತ್ತೇವೆ. ಇದರ ಫಲವಾಗಿ ನಮ್ಮ ಕಷ್ಟಗಳನ್ನು ನಿವಾರಿಸು ದೇವ ಎನ್ನುವ ಅರ್ಥವನ್ನು ನೀಡುವುದು.

ಪ್ರದಕ್ಷಿಣೆ ಸುತ್ತುವುದು ಧಾರ್ಮಿಕ ವಿಧಿ. ಅದು ಕೆಲವು ಧಾರ್ಮಿಕ ರೀತಿ-ನೀತಿ ಹಾಗೂ ಸಂಖ್ಯೆಗಳ ಮಿತಿಯನ್ನು ಸಹ ಹೊಂದಿದೆ. ಗರ್ಭಗೃಹದ ಒಳಗೆ ವಿಶೇಷವಾದ ದೈವ ಶಕ್ತಿ ಇರುತ್ತದೆ. ಈ ಶಕ್ತಿಯ ಸುತ್ತಲು ಸಾಕಷ್ಟು ಧನಾತ್ಮಕ ಸಂಗತಿಗಳ ಹರಿವು ಇರುವುದು. ಆದ್ದರಿಂದ ದೇವರ ಮನೆಯ ಸುತ್ತ ಸುತ್ತುವ ಪ್ರದಕ್ಷಿಣೆಯ ಪರಿಯು ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.

“ಪ್ರಾ” ಎನ್ನುವ ಪದದ ಅರ್ಥ ವಿಶೇಷತೆಯಿಂದ ಕೂಡಿದೆ. ಪ್ರಾ ಎನ್ನುವ ಶಬ್ದವು ತುಂಬಾ ಎನ್ನುವ ಅರ್ಥವನ್ನು ನೀಡುತ್ತದೆ. ದಕ್ಷಿಣ ಎಂದರೆ ಗರ್ಭಗುಡಿಯ ಬಲಬಾಗದಿಂದ ತಿರುಗುವುದು ಎನ್ನುವ ಅರ್ಥವನ್ನು ನೀಡುವುದು. ಪ್ರದಕ್ಷಿಣೆ ಮಾಡುವುದರಿಂದ ಪ್ರಾಮಾಣಿಕ, ನಿಷ್ಪಕ್ಷಪಾತ, ಸ್ನೇಹ ಭಾವನೆ, ಶುಭ ಸೂಚಕ ಎಂದು ನಂಬಲಾಗಿದೆ.

ಪ್ರದಕ್ಷಿಣೆಯ ಮಹತ್ವ
‌ ಒಂದು ಕೇಂದ್ರ ಬಿಂದು ಇಲ್ಲದೆ ವೃತ್ತಾಕಾರವನ್ನು ಮಾಡಲು ಸಾಧ್ಯವಿಲ್ಲ. ಹಾಗೆಯೇ ಭಗವಂತ ನಮ್ಮ ಕೇಂದ್ರ ಬಿಂದು. ದೇವರೇ ನಮ್ಮ ಮೂಲ ಮತ್ತು ಸಾರ. ಆ ಪರಮಾತ್ಮನಿಗೆ ಪ್ರದಕ್ಷಿಣೆ ಮಾಡುವುದರ ಮೂಲಕ ಅಂಗೀಕರಿಸುತ್ತೇವೆ. ಆತನೇ ನಮ್ಮ ಜೀವನಕ್ಕೆ ಆಧಾರ ಹಾಗೂ ಬೆಳಕು. ಆ ಮಹಾನ್ ಶಕ್ತಿಯ ಕೃಪೆಗೆ ಒಳಗಾಗಲು ಅವನ ಸುತ್ತ ಸುತ್ತುವುದಕ್ಕೆ ಪ್ರದಕ್ಷಿಣೆ ಎಂದು ಕರೆಯುವರು. ಪ್ರದಕ್ಷಿಣೆ ಹಾಕುವಾಗ ಮನಸ್ಸನ್ನು ನಿರಾಳವಾಗಿ ಇಟ್ಟುಕೊಳ್ಳಬೇಕು ಎಂದು ಧಾರ್ಮಿಕ ನೀತಿಯು ತಿಳಿಸುತ್ತದೆ.

  ಜಗತ್ತಿನಲ್ಲಿರುವ 5 ತುಂಬಲಾಗದ ಕೊಡಗಳು ಯಾವುವು ಗೊತ್ತೇ ?

ದೇವರ ದೃಷ್ಟಿಯಿಂದ ಎಲ್ಲರೂ ಸಮಾನರು
ವೃತ್ತದ ಸುತ್ತಳತೆಯಲ್ಲಿ ಇರುವ ಪ್ರತಿಯೊಂದು ಬಿಂದುವು ಕೇಂದ್ರದಿಂದ ಸಮಾನ ದೂರದಲ್ಲಿ ಇರುತ್ತದೆ. ಹಾಗೆಯೇ ಭಗವಂತ ಮತ್ತು ನಾವು. ನಾವು ಎಲ್ಲೇ ಇದ್ದರೂ ಅಥವಾ ಯಾರೇ ಆಗಿರಲಿ, ಭಗವಂತನಿಗೆ ಎಲ್ಲರೂ ಸಮಾನರು. ಆತನ ಅನುಗ್ರಹವು ಯಾರ ಪಕ್ಷಪಾತವಿಲ್ಲದೆಯೇ ಎಲ್ಲರಿಗೂ ಸಮಾನವಾಗಿ ದೊರೆಯುವುದು. ಹಾಗಾಗಿ ಯಾರೇ ಆದರೂ ದೇವರಿಗೆ ಪ್ರದಕ್ಷಿಣೆ ಹಾಕಿದರೆ ಕಷ್ಟಗಳು ದೂರವಾಗಿ, ಮನಸ್ಸಿಗೆ ನೆಮ್ಮದಿ ದೊರೆಯುವುದು ಎಂದು ಹೇಳಲಾಗುವುದು.

ಪ್ರದಕ್ಷಿಣೆಯ ಹಿಂದಿರುವ ಪೌರಾಣಿಕ ಹಿನ್ನಲೆ
ಒಮ್ಮೆ ಶಿವನು ತನ್ನ ಇಬ್ಬರು ಮಕ್ಕಳಾದ ಗಣೇಶ ಮತ್ತು ಸುಬ್ರಹ್ಮಣ್ಯನು ಲೌಕಿಕ ಅನುಭವ ಪಡೆಯಬೇಕು ಎಂದು ಬಯಸಿದನು. ಅಂತೆಯೇ ಇಬ್ಬರ ಬಳಿಯೂ ಬ್ರಹ್ಮಾಂಡವನ್ನು ಪ್ರವಾಸ ಕೈಗೊಳ್ಳಲು ಹೇಳಿದನು. ಆಗ ಸುಬ್ರಹ್ಮಣ್ಯನು ನವಿಲಿನ ಮೇಲೆ ಕುಳಿತು ಪ್ರಪಂಚವನ್ನು ಸುತ್ತುತ್ತಾ ದಶಕಗಳ ಕಾಲ ಕಳೆದನು. ಆದರೆ ಗಣೇಶನು ತನ್ನ ತಾಯಿ ಮತ್ತು ತಂದೆಯ ಸುತ್ತ ಒಂದು ಪ್ರದಕ್ಷಿಣೆಯನ್ನು ಹಾಕಿ, “ಜಗತ್ತು ನಿಮ್ಮೊಳಗೇ ಇದೆ. ಹಾಗಾಗಿ ನಾನು ಈಗಾಗಲೇ ಜಗತ್ತನ್ನು ಸುತ್ತುವರಿದು ಬಂದೆ ಎಂದು ಹೇಳಿದನು. ಈ ಹಿನ್ನೆಲೆಯಲ್ಲಿಯೇ ದೇವತೆಗಳ ಸುತ್ತ ಸುತ್ತಿದರೆ ಸಾಕಷ್ಟು ಪುಣ್ಯ ಹಾಗೂ ಆಶೀರ್ವಾದ ದೊರೆಯುವುದು ಎಂದು ಹೇಳಲಾಗುವುದು.

ವಿಭಿನ್ನ ಸಂಖ್ಯೆಯ ಪ್ರದಕ್ಷಿಣೆಗಳು
ಧಾರ್ಮಿಕ ನಂಬಿಕೆಗಳ ಪ್ರಕಾರ ಪುರುಷ ದೇವರಿಗೆ 0,2,4,6, 8 ಹೀಗೆ ಸಮ ಸಂಖ್ಯೆಯ ಪ್ರದಕ್ಷಿಣೆಯನ್ನು ಮಾಡಬೇಕು. ಸ್ತ್ರೀ ದೇವತೆಗಳಿಗೆ 1, 3, 5, 7 ಹೀಗೆ ಬೆಸ ಸಂಖ್ಯೆಯ ಪ್ರದಕ್ಷಿಣೆಯನ್ನು ಹಾಕಬೇಕು ಎಂದು ಹೇಳಲಾಗುವುದು. ಶೂನ್ಯ ಸಂಖ್ಯೆಯು ಬ್ರಹ್ಮನನ್ನು ಪ್ರತಿನಿಧಿಸುತ್ತದೆ. ಬ್ರಹ್ಮಾಂಡದ ಸೃಷ್ಟಿಕರ್ತ ಬ್ರಹ್ಮನು ಸರ್ವೋತ್ತಮ ಎನ್ನುವುದನ್ನು ಶೂನ್ಯವು ಪ್ರತಿನಿಧಿಸುವುದು. ಸಂಖ್ಯೆ 1 ಮಾಯಾ ಶಕ್ತಿಯನ್ನು ಅಂದರೆ ಸ್ತ್ರೀಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಸಮ ಸಂಖ್ಯೆಯ ಪ್ರದಕ್ಷಿಣೆ ಪುರುಷ ದೇವರಿಗೆ ಮತ್ತು ಬೆಸ ಸಂಖ್ಯೆಯ ಪ್ರದಕ್ಷಿಣೆಯನ್ನು ಮಹಿಳಾ ದೇವತೆಗಳಿಗೆ ಮೀಸಲು ಎಂದು ತಿಳಿಸುತ್ತದೆ.

ದೇವರಿಗನುಗುಣವಾಗಿ ಪ್ರದಕ್ಷಿಣೆ
ಒಂದು ಶಿವನನ್ನು ಪ್ರತಿನಿಧಿಸುತ್ತದೆ. ಇವನು ಸುಪ್ತ ಮತ್ತು ಸ್ಪಷ್ಟವಲ್ಲದ ನಿರ್ಗಮ ಶಕ್ತಿಯ ಸಂಕೇತ ಎಂದು ಹೇಳಲಾಗುವುದು. ಈ ಹಿನ್ನೆಲೆಯಲ್ಲಿ 1 ಸುತ್ತಿನ ಪ್ರದಕ್ಷಿಣೆಯು ಮಹತ್ವವನ್ನು ಪಡೆದುಕೊಂಡಿದೆ.
ದುರ್ಗಾ ದೇವಿಯು 1 ರ ಸಂಖ್ಯೆಯನ್ನು ಪ್ರತಿನಿಧಿಸುತ್ತಾಳೆ. ಸುಗುಣ ಶಕ್ತಿಯನ್ನು ಬಿಂಬಿಸುವ ದೇವತೆ ದುರ್ಗಾದೇವಿ ಎಂದು ಹೇಳಲಾಗುವುದು. ಈ ಹಿನ್ನೆಲೆಯಲ್ಲಿ ಬೆಸ ಸಂಖ್ಯೆಯ ಪ್ರದಕ್ಷಿಣೆಯು ಮಹತ್ವವನ್ನು ಪಡೆದುಕೊಂಡಿದೆ.
ಶ್ರೀರಾಮನಿಗೆ 4ರ ಸಂಖ್ಯೆ ಶ್ರೇಷ್ಠವಾದದ್ದು. ಇದು ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ತಾಶ್ರಮ ಮತ್ತು ಸನ್ಯಾಸ ಆಶ್ರಮಗಳಾದ ನಾಲ್ಕು ಆಶ್ರಮಗಳನ್ನು ಮತ್ತು ಆದರ್ಶವಾದ ಅನುಯಾಯಿ ರಾಜ ಎನ್ನುವುದನ್ನು ಪ್ರತಿನಿಧಿಸುತ್ತದೆ. ಹಾಗಾಗಾಗಿ 4 ಸುತ್ತಿನ ಪ್ರದಕ್ಷಿಣೆಯು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.
ಮಾರುತಿಯು ಪಂಚ ತತ್ವಗಳ ಮೇಲೆ ಪಾಂಡಿತ್ಯವನ್ನು ಹೊಂದಿರುವನು. ಹಾಗಾಗಿ ಈ ಹಿನ್ನೆಲೆಯಲ್ಲಿ 5 ಸುತ್ತಿನ ಪ್ರದಕ್ಷಿಣೆಯು ಮಹತ್ವವನ್ನು ಪಡೆದುಕೊಂಡಿದೆ.
ದತ್ತಾತ್ರೇಯ ದೇವನು ದೇಹದಲ್ಲಿ ಇರುವ ಏಳು ಚಕ್ರಗಳನ್ನು ಶುದ್ಧೀಕರಿಸುವ ಮೂಲಕ ಜೀವನದ ಆಧ್ಯಾತ್ಮಿಕ ಪ್ರಗತಿಯನ್ನು ತರುವನು. ಈ ಹಿನ್ನೆಲೆಯಲ್ಲಿ 7 ಸುತ್ತಿನ ಪ್ರದಕ್ಷಿಣೆಯು ಮಹತ್ವವನ್ನು ಪಡೆದುಕೊಂಡಿದೆ.
ಶ್ರೀ ಗಣೇಶನು 8 ದಿಕ್ಕುಗಳ ಅಧಿಪತಿಯು. ಹಾಗಾಗಿ 8 ಸುತ್ತಿನ ಪ್ರದಕ್ಷಿಣೆಯು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.
ಹೀಗೆ ಭಕ್ತರು ತಮ್ಮ ಶಕ್ತಿಗೆ ಅನುಗುಣವಾಗಿ ದೇವರನ್ನು ಸುತ್ತುವರಿಯಬಹುದು. ಅದರಿಂದ ಯಾವುದೇ ಅಪವಾದ ಅಥವಾ ಪಾಪಗಳು ಬರದು. ದೇವರ ಧ್ಯಾನದಿಂದ ಕೈಗೊಳ್ಳುವ ಪ್ರತಿಯೊಂದು ಸಂಗತಿಯೂ ಉತ್ತಮ ಫಲವನ್ನೇ ನೀಡುತ್ತದೆ ಎಂದು ಧಾರ್ಮಿಕ ಸಂಗತಿಗಳು ತಿಳಿಸುತ್ತವೆ.

  ದೀಪಾವಳಿ ಮೊದಲ ದಿನ ಆಚರಿಸುವ ವಿಧಾನ - ನೀರು ತುಂಬುವ ಹಬ್ಬ


🔯 ಆಧ್ಯಾತ್ಮಿಕ ವಿಚಾರ.📖🔯

ದೇವಸ್ಥಾನದಲ್ಲಿ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆಗೆ ಹಾಕಬೇಕು…!

ದೇಗುಲಕ್ಕೆ ಹೋದಾಗ ಪ್ರದಕ್ಷಿಣೆ ಎಂಬುದು ಅತೀ ಮುಖ್ಯ ಆಗಿರುತ್ತದೆ, ಸರಿಯಾದ ರೀತಿಯಲ್ಲಿ ಪ್ರದಕ್ಷಿಣೆ ಮಾಡಿದ್ರೆ ಅದ್ರ ಫಲ ನಾವು ಪಡೆಯಬಹುದು ಹಾಗಾದ್ರೆ ಈ ಲೇಖನದಲ್ಲಿ ಪ್ರದಕ್ಷಿಣೆ ಫಲ ಏನು ಎಂಬುದು ಸಂಪೂರ್ಣ ತಿಳಿಯೋಣ. ಪ್ರದಕ್ಷಿಣೆ ಏಕೆ ಹಾಕುತ್ತೇವೆ ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ ಭಗವಂತನ ಬಳಿ ನಿನ್ನ ಬಿಟ್ಟರೆ ನಮ್ಮನ್ನು ಕಾಯುವವರು ಯಾರೂ ಇಲ್ಲ ನೀನು ತೋರಿಸಿದ ಮಾರ್ಗದಲ್ಲಿ ನಡೆಯುತ್ತೇವೆ ಎಂಬುದು ಈ ಪ್ರದಕ್ಷಿಣೆಯ ಅರ್ಥ ಆಗಿದೆ. ದೇವಸ್ಥಾನದಲ್ಲಿ ಪ್ರದಕ್ಷಿಣೆಯನ್ನು ಎಷ್ಟು ಬಾರಿ ಮಾಡಿದರೆ ಏನು ಫಲ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. ದೇವಸ್ಥಾನದಲ್ಲಿ 5 ಬಾರಿ ಪ್ರದಕ್ಷಿಣೆ ಮಾಡಿದರೆ ಜಯ ಸಿಗುತ್ತದೆ ಹಾಗೆಯೇ 7 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಶತ್ರುಗಳನ್ನು ಪರಾಜಯ ಮಾಡಬಹುದು. 9 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಸಂತಾನ ಪ್ರಾಪ್ತಿ ಆಗುತ್ತದೆ.
11 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಆಯುಷ್ಯ ವೃದ್ಧಿ ಆಗುತ್ತದೆ. ದೇವಸ್ಥಾನಕ್ಕೆ 13 ಬಾರಿ ಪ್ರದಕ್ಷಿಣೆ ಹಾಕುವುದರಿಂದ ಪ್ರಾರ್ಥನೆ ಸಿದ್ಧಿ ಆಗುತ್ತದೆ 15 ಬಾರಿ ಪ್ರದಕ್ಷಿಣೆ ಹಾಕುವುದರಿಂದ ಧನ ಪ್ರಾಪ್ತಿ ಆಗುತ್ತದೆ 17 ಬಾರಿ ಪ್ರದಕ್ಷಿಣೆ ಮಾಡಿದರೆ ಧನ ವೃದ್ಧಿ ಆಗುತ್ತದೆ. 19 ಬಾರಿ ಪ್ರದಕ್ಷಿಸಿದರೆ ರೋಗ ನಿವಾರಣೆ ಆಗುತ್ತದೆ. ದೇವಸ್ಥಾನಕ್ಕೆ ಬೆಳಗಿನ ಜಾವ ಪ್ರದಕ್ಷಿಣೆ ಹಾಕಿದರೆ ರೋಗ ನಿವಾರಣೆ ಆಗುತ್ತದೆ ಮಧ್ಯಾಹ್ನ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ಧಿ ಆಗುತ್ತದೆ ಸಂಜೆ ವೇಳೆ ಪ್ರದಕ್ಷಿಣೆ ಮಾಡುವುದರಿಂದ ಪಾಪ ದೂರ ಆಗುತ್ತದೆ ರಾತ್ರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಮೋಕ್ಷ ಸಿದ್ಧಿ ಆಗುತ್ತದೆ.
ಪ್ರದಕ್ಷಿಣೆ ಪದದ ಪ್ರತಿ ಅಕ್ಷರ ಅರ್ಥ ಗರ್ಭಿತ ಆಗಿದೆ. ಪ್ರ ಎಂದರೆ ಪಾಪ ನಾಶ ಎಂದು ದ ಎಂದರೆ ಅಭಿಷ್ಟ ಪ್ರಾಪ್ತಿ ಎಂದು ಅರ್ಥ ಕ್ಷಿ ಎಂದರೆ ಕರ್ಮ ನಾಶ ಣೆ ಎಂದರೆ ಮೋಕ್ಷ ಪ್ರಾಪ್ತಿ ಆಗುವುದು ಎಂದು ಅರ್ಥವಾಗಿದೆ. ಪ್ರದಕ್ಷಿಣೆ ಎಂದರೆ ಗರ್ಭಗುಡಿಯನ್ನು ದಕ್ಷಿನಾಭಿಮುಖವಾಗಿ ಸುತ್ತಿ ಬರುವುದು ಎಂದು ಅರ್ಥ. ತಾನು ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳು ಪದೇ ಪದೇ ದೇವರನ್ನು ಪ್ರದಕ್ಷಿಣೆ ಮಾಡುವುದರಿಂದ ನಾಶ ಆಗಲಿ ಎಂಬ ಭಾವನೆ. ಒಂದನೆಯ ಪ್ರದಕ್ಷಿಣೆ ಯಿಂದ ಎಲ್ಲಾ ಪಾಪ ನಾಶ ಎರಡನೆಯ ಪ್ರದಕ್ಷಿಣೆ ಯಿಂದ ಪ್ರಾಪಂಚಿಕ ಆಧ್ಯಾತ್ಮಿಕ ಲಾಭ ಮೂರನೇ ಪ್ರದಕ್ಷಿಣೆ ಮೋಕ್ಷದ ದಾರಿ ಪ್ರಾಪ್ತಿ ಆಗುತ್ತದೆ.
ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು ಅಂದರೆ ಗಣಪತಿಗೆ 1 ಬಾರಿ ಸೂರ್ಯನಿಗೆ 2 ಬಾರಿ ಪ್ರದಕ್ಷಿಣೆ ಹಾಕಬೇಕು ಯಾವುದೇ ದೇವಿ ಮತ್ತು ವಿಷ್ಣುವಿಗೆ 4 ಬಾರಿ ಪ್ರದಕ್ಷಿಣೆ ಹಾಕಬೇಕು. ತನ್ನ ದೇಹವೇ ದೇವಾಲಯ ಒಳಗಿರುವ ಆತ್ಮನೇ ಪರಮಾತ್ಮ ಎಂದು ಭಾವಿಸಿದಾಗ ನಿಂತಲ್ಲೇ ಕೈ ಮುಗಿದು ಕೊಂಡು ಮೂರು ಸುತ್ತು ಬರುವುದು ವಾಡಿಕೆ. ಪ್ರದಕ್ಷಿಣೆ ಹಾಕುವಾಗ ಮನಸಿನಲ್ಲಿ ಚಂಚಲ ಸ್ವಭಾವ ಇರಬಾರದು ಯಾರ ಜೊತೆಗೆ ಮಾತನಾಡಲು ಸಹ ಹೋಗಬಾರದು, ಏಕಾಗ್ರತೆ ಹೆಚ್ಚಿಸಿಕೊಂಡು ಭಗವಂತನ ಸ್ಮರಣೆ ಮಾಡುತ್ತಾ ನಿದಾನವಾಗಿ ಪ್ರದಕ್ಷಿಣೆ ಮಾಡಬೇಕು.

Leave a Reply

Your email address will not be published. Required fields are marked *

Translate »