ಆಂಜನೇಯ ಅಷ್ಟೋತ್ತರ ಶತನಾಮಾವಳಿ – ಕನ್ನಡ ಅರ್ಥ ಸಹಿತ

‌ ಹನುಮದ್ ವ್ರತದ ಪ್ರಯುಕ್ತ…

ಆಂಜನೇಯಸ್ವಾಮಿಯ ೧೦೮ ಹೆಸರುಗಳ ವಿವರಣೆ…

ಆಂಜನೇಯ ಅಷ್ಟೋತ್ತರ ಶತನಾಮಾವಳಿಯಲ್ಲಿ ಹನುಮಂತನ ೧೦೮ ಹೆಸರುಗಳನ್ನು ಹೇಳಿಕೊಂಡು ನಮಸ್ಕರಿಸುವುದು ಪರಿಪಾಠ.

.ಅಷ್ಟೋತ್ತರ ಶತನಾಮಾವಳಿಯ ಈ ೧೦೮ ಹೆಸರುಗಳು ಮತ್ತು ಕನ್ನಡ ಅರ್ಥ / ಹಿನ್ನೆಲೆ ಇಲ್ಲಿದೆ :

  1. ಆಂಜನೇಯಯ – ಅಂಜನಾ ದೇವಿಯ ಪುತ್ರನಿಗೆ ನಮಸ್ಕಾರ
  2. ಮಹಾವೀರಾಯ – ವೀರರಲ್ಲಿ ವೀರನಾದವನಿಗೆ ನಮಸ್ಕಾರ
  3. ಹನುಮತೇ – ಭಕ್ತಿ ಮತ್ತು ‌ಸ್ವಯಂಶಿಸ್ತುವುಳ್ಳವನಿಗೆ ನಮಸ್ಕಾರ
  4. ಮಾರುತಾತ್ಮಜಾಯ – ಮಾರುತ (ವಾಯುದೇವ) ಪುತ್ರನಿಗೆ ನಮಸ್ಕಾರ
  5. ತತ್ತ್ವಜ್ಞಾನ ಪ್ರದಾಯ – ತತ್ವಜ್ಞಾನಿಯೂ, ತತ್ತ್ವಜ್ಞಾನದ ಅರಿವನ್ನು ನೀಡುವವನೂ ಆದವನಿಗೆ ನಮಸ್ಕಾರ
  6. ಸೀತಾದೇವಿಮುದ್ರಾ ಪ್ರದಾಯಕಾಯ – ಸೀತಾದೇವಿಯ ಬಳಿ ರಾಮನ ಮುದ್ರೆಯನ್ನು ಕೊಂಡೊಯ್ದವನಿಗೆ ನಮಸ್ಕಾರ
  7. ಅಶೋಕವನಿಕಾಚ್ಛೇತ್ರೇ – ಅಶೋಕವನದಲ್ಲಿ ಸೀತಾದೇವಿಯನ್ನು ಪತ್ತೆ ಮಾಡಿದವನಿಗೆ ನಮಸ್ಕಾರ
  8. ಸರ್ವ ಮಾಯಾವಿಭಂಜನಾಯ – ಎಲ್ಲೆಡೆ ತನ್ನ ಕಾಂತಿ ತುಂಬಿ ಶೋಭಿಸುವವನಿಗೆ ನಮಸ್ಕಾರ
  9. ಸರ್ವ ಬಂಧ ವಿಮೋಕ್ತ್ರೇ – ಎಲ್ಲಾ ಬಗೆಯ ಬಂಧನಗಳಿಂದ ಮುಕ್ತಗೊಳಿಸುವವನಿಗೆ ನಮಸ್ಕಾರ
  10. ರಕ್ಷೋವಿಧ್ವಂಸಕಾರಕಾಯ – ಪಾಂಡಿತ್ಯದ ಮೂರ್ತರೂಪನೇ ನಿನಗೆ ನಮಸ್ಕಾರ
  11. ಪರವಿದ್ಯಾ ಪರಿಹಾರಾಯ – ಮತ್ತೊಬ್ಬರು ತಮ್ಮ ವಿದ್ಯೆಯಿಂದ ಉಂಟು ಮಾಡುವ ಅಡ್ಡಿಗಳನ್ನು ನಿವಾರಿಸುವವನಿಗೆ ನಮಸ್ಕಾರ
  12. ಪರ ಶೌರ್ಯ ವಿನಾಶಕಾಯ – ಮತ್ತೊಬ್ಬರು ತಮ್ಮ ಶೌರ್ಯದಿಂದ ಉಂಟು ಮಾಡುವ ಅಡ್ಡಿಗಳನ್ನು ನಿವಾರಿಸುವವನಿಗೆ ನಮಸ್ಕಾರ
    13 .ಪರ ಮಂತ್ರ ನಿರಾಕರ್ತ್ರೇ – ಮತ್ತೊಬ್ಬರು ಮಂತ್ರ ಪ್ರಯೋಗದಿಂದ ಉಂಟು ಮಾಡುವ ಅಡ್ಡಿಗಳನ್ನು ನಿವಾರಿಸುವವನಿಗೆ ನಮಸ್ಕಾರ
  13. ಪರ ಯಂತ್ರ ಪ್ರಭೇದಕಾಯ – ಮತ್ತೊಬ್ಬರು ಯಂತ್ರ ಪ್ರಯೋಗದಿಂದ ಉಂಟು ಮಾಡುವ ಅಡ್ಡಿಗಳನ್ನು ನಿವಾರಿಸುವವನಿಗೆ ನಮಸ್ಕಾರ
  14. ಸರ್ವಗ್ರಹ ವಿನಾಶಿನೇ – ಎಲ್ಲಾ ಗ್ರಹ ಬಾಧೆಗಳನ್ನು ನಿವಾರಿಸುವವನಿಗೆ ನಮಸ್ಕಾರ
  15. ಭೀಮಸೇನ ಸಹಾಯಕೃತೇ – ಭೀಮಸೇನನಿಗೆ ಸಹಾಯ ಮಾಡಿದ ನಿನಗೆ ನಮಸ್ಕಾರ
  16. ಸರ್ವದುಃಖ ಹರಾಯ – ಎಲ್ಲಾ ಬಗೆಯ ದುಃಖಗಳನ್ನು ಪರಿಹರಿಸುವವನಿಗೆ ನಮಸ್ಕಾರ
  17. ಸರ್ವಲೋಕಚಾರಿಣೇ – ಸಕಲ ಲೋಕಗಳಲ್ಲೂ ಸಂಚರಿಸಬಲ್ಲವನಿಗೆ ನಮಸ್ಕಾರ
  18. ಮನೋಜವಾಯ – ಮನೋವೇಗದಲ್ಲಿ ಚಲಿಸಬಲ್ಲವನೇ ನಮಸ್ಕಾರ
  19. ಪಾರಿಜಾತ ದೃಮೂಲಸ್ಥಾಯ – ಪಾರಿಜಾತ ವೃಕ್ಷದ ಕೆಳಗೆ ಕುಳಿತವನೇ ನಿನಗೆ ನಮಸ್ಕಾರ
  20. ಸರ್ವ ಮಂತ್ರ ಸ್ವರೂಪಾಯ – ಸಕಲ ಮಂತ್ರ ಸ್ವರೂಪಿಯಾದ ನಿನಗೆ ನಮಸ್ಕಾರ
  21. ಸರ್ವ ತಂತ್ರ ಸ್ವರೂಪಿಣೇ – ಸಕಲ ತಂತ್ರ ಸ್ವರೂಪಿಯಾದ ನಿನಗೆ ನಮಸ್ಕಾರ
  22. ಸರ್ವ ಯಂತ್ರಾತ್ಮಕಾಯ – ಸಕಲ ಯಂತ್ರ ಸ್ವರೂಪಿಯಾದ ನಿನಗೆ ನಮಸ್ಕಾರ
  23. ಕಪೀಶ್ವರಾಯ – ಕಪಿ ಸೇನೆಗಳ ನಾಯಕ ನಿನಗೆ ನಮಸ್ಕಾರ
  24. ಮಹಾಕಾಯಾಯ – ಬೃಹತ್ ಶರೀರವುಳ್ಳವ ನಿನಗೆ ನಮಸ್ಕಾರ
  25. ಸರ್ವರೋಗಹರಾಯ – ಸಕಲ ರೋಗಗಳನ್ನು ಪರಿಹರಿಸುವವನೇ ನಮಸ್ಕಾರ
  26. ಪ್ರಭವೇ – ಪ್ರಭಾವಶಾಲಿಯಾದ ನಿನಗೆ ನಮಸ್ಕಾರ
  27. ಬಲಸಿದ್ದಿಕರಾಯ – ಬಲವನ್ನೂ ಸಿದ್ಧಿಯನ್ನೂ ದಯಪಾಲಿಸುವವನೇ ನಮಸ್ಕಾರ
  28. ಸರ್ವವಿದ್ಯಾ ಸಂಪತ್ಪ್ರದಾಯಕಾಯ – ಸಕಲ ವಿದ್ಯೆಗಳನ್ನೂ ಸಂಪತ್ತನ್ನೂ ಕರುಣಿಸುವವನೇ ನಮಸ್ಕಾರ
  29. ಕಪಿಸೇನಾನಾಯಕಾಯ – ಕಪಿಸೇನೆಯ ನಾಯಕನೇ ನಮಸ್ಕಾರ
  30. ಭವಿಷ್ಯತ್ ಚತುರಾನನಾಯ – ನಾಲ್ಕು ಮುಖಗಳನ್ನು ಹೊಂದಿರುವವನೇ ನಮಸ್ಕಾರ
  31. ಕುಮಾರ ಬ್ರಹ್ಮಚಾರಿಣೇ – ಬ್ರಹ್ಮಚಾರಿಯೇ ನಿನಗೆ ನಮಸ್ಕಾರ
  32. ರತ್ನ ಕುಂಡಲ ದೀಪ್ತಿಮತೇ – ರತ್ನಕುಂಡಲಗಳನ್ನು ಧರಿಸಿ ದೀಪದಂತೆ ಬೆಳಗುವವನೇ ನಮಸ್ಕಾರ
  33. ಚಂಚಲದ್ವಾಲಸನ್ನದ್ಧ ಲಂಬಾಮಾನ ಶಿಖೋಜ್ವಾಲಾಯ ಚಂಚಲನೇತ್ರ ಜ್ವಾಲೆಯಂತೆ ಶೋಭಿಸುವವನೇ ನಮಸ್ಕಾರ
  34. ಗಂಧರ್ವ ವಿದ್ಯಾಯ – ಗಂಧರ್ವ ವಿದ್ಯೆ ಬಲ್ಲವನೇ ನಿನಗೆ ನಮಸ್ಕಾರ
  35. ತತ್ತ್ವಜ್ಞಾನಾಯ – ತತ್ವಜ್ಞಾನಿಯೇ ನಿನಗೆ ನಮಸ್ಕಾರ
  36. ಮಹಾಬಲ ಪರಾಕ್ರಮಾಯ – ಮಹಾಬಲಶಾಲಿಯಾದ ಪರಾಕ್ರಮಿಯೇ ನಿನಗೆ ನಮಸ್ಕಾರ
  37. ಕಾರಾಗೃಹ ವಿಮೋಕ್ತ್ರೇ – ಸೆರೆಮನೆಯಿಂದ ಮುಕ್ತಗೊಳಿಸುವವನೇ ನಿನಗೆ ನಮಸ್ಕಾರ
  38. ಶೃಂಖಲಾ ಬಂಧಮೋಚಕಾಯ – ಸಂಸಾರ ಸಂಕೋಲೆಗಳ ಬಂಧಮುಕ್ತಗೊಳಿಸುವವನೇ ನಿನಗೆ ನಮಸ್ಕಾರ
  39. ಸಾಗರೋತ್ತರಕಾಯ – ಭವ ಸಾಗರವನ್ನು ದಾಟಿದವನೇ ನಿನಗೆ ನಮಸ್ಕಾರ
  40. ಪ್ರಾಜ್ಞಾಯ – ಸ್ವತಃ ಪ್ರಜ್ಞೆಯಾಗಿರುವವನೇ ನಿನಗೆ ನಮಸ್ಕಾರ
  41. ರಾಮದೂತಾಯ – ಪ್ರಭು ರಾಮನ ದೂತನಾಗಿರುವ ನಿನಗೆ ನಮಸ್ಕಾರ
  42. ಪ್ರತಾಪವತೇ – ಪ್ರತಾಪಿಯಾದ ನಿನಗೆ ನಮಸ್ಕಾರ
  43. ಕೇಸರಿಸುತಾಯ – ಕೇಸರಿಯ ಮಗನೇ ನಿನಗೆ ನಮಸ್ಕಾರ
  44. ಸೀತಾ ಶೋಕ ನಿವಾರಕಾಯ – ಸೀತೆಯ ಶೋಕ ಪರಿಹರಿಸಿದ ನಿನಗೆ ನಮಸ್ಕಾರ
  45. ಅಂಜನಾ ಗರ್ಭ ಸಂಭೂತಾಯ – ಅಂಜನೆಯ ಗರ್ಭದಲ್ಲಿ ಜನಿಸಿದ ನಿನಗೆ ನಮಸ್ಕಾರ
  46. ಬಾಲಾರ್ಕಸದೃಶಾನನಾಯ – ಮಕ್ಕಳ ರಕ್ಷಣೆ ಮಾಡುವವನೇ ನಿನಗೆ ನಮಸ್ಕಾರ
  47. ವಿಭೀಷಣ ಪ್ರಿಯಕರಾಯ – ವಿಭೀಷಣನಿಗೆ ಪ್ರಿಯನಾದವನೇ ನಿನಗೆ ನಮಸ್ಕಾರ
  48. ದಶಗ್ರೀವ ಕುಲಾಂತಕಾಯ – ಹತ್ತು ತಲೆಯ ರಾವಣನಿಗೆ ಪಾಠ ಕಲಿಸಿದವನೇ ನಿನಗೆ ನಮಸ್ಕಾರ
  49. ಲಕ್ಷ್ಮಣ ಪ್ರಾಣದಾತ್ರೇ – ಲಕ್ಷ್ಮಣನ ಪ್ರಾಣ ರಕ್ಷಣೆ ಮಾಡಿದ ನಿನಗೆ ನಮಸ್ಕಾರ
  50. ವಜ್ರಕಾಯಾಯ – ವಜ್ರದೇಹಿಯಾದ ನಿನಗೆ ನಮಸ್ಕಾರ
  51. ಮಹಾದ್ಯುತಾಯ – ಮಹಾಪ್ರಕಾಶಮಾನನಾದ ನಿನಗೆ ನಮಸ್ಕಾರ
  52. ಚಿರಂಜೀವಿನೇ – ಚಿರಂಜೀವಿಯಾದ ನಿನಗೆ ನಮಸ್ಕಾರ
  53. ರಾಮ ಭಕ್ತಾಯ – ರಾಮಭಕ್ತನಾದ ನಿನಗೆ ನಮಸ್ಕಾರ
    55.ದೈತ್ಯ ಕಾರ್ಯ ವಿಘಾತಕಾಯ – ದೈತ್ಯರ ಕೃತ್ಯಗಳಿಗೆ ಅಡ್ಡಿಯಾಗಿ ನಿಲ್ಲುವವನೇ ನಿನಗೆ ನಮಸ್ಕಾರ
  54. ಅಕ್ಷಹಂತ್ರೇ – ಅಕ್ಷಯ ಸಂಹಾರ ಮಾಡಿದ ನಿನಗೆ ನಮಸ್ಕಾರ
  55. ಕಾಂಚನಾಭಾಯ – ಬಂಗಾರದಂತ ದೇಹವುಳ್ಳ ನಿನಗೆ ನಮಸ್ಕಾರ
  56. ಪಂಚವಕ್ತ್ರಾಯ – ಐದು ಮುಖವುಳ್ಳ ನಿನಗೆ ನಮಸ್ಕಾರ
  57. ಮಹಾ ತಪಸೇ – ಮಹಾತಪಸ್ವಿಯೇ ನಿನಗೆ ನಮಸ್ಕಾರ
    60.ಲಂಕಿಣಿ ಭಂಜನಾಯ – ಲಂಕಿಣಿಯನ್ನು ದಮನ ಮಾಡಿದವನೇ ನಿನಗೆ ನಮಸ್ಕಾರ
  58. ಶ್ರೀಮತೇ – ದೈವ ಸೇವೆಗೆ ಸಮರ್ಪಿತ ನಿನಗೆ ನಮಸ್ಕಾರ
  59. ಸಿಂಹಿಕಾ ಪ್ರಾಣ ಭಂಜನಾಯ – ಸಿಂಹಿಕೆಯ ಪ್ರಾಣಹರಣ ಮಾಡಿದವನೇ ನಿನಗೆ ನಮಸ್ಕಾರ
  60. ಗಂಧಮಾದನ ಶೈಲಸ್ಥಾಯ – ಗಂಧಮಾದನ ಪರ್ವತದಲ್ಲಿ ಬೆಳೆದವನೇ ನಿನಗೆ ನಮಸ್ಕಾರ
  61. ಲಂಕಾಪುರ ವಿದಾಹಕಾಯ – ಲಂಕಾಪುರಿಗೆ ಪಾಠ ಕಲಿಸಿದವನೇ, ನಿನಗೆ ನಮಸ್ಕಾರ
  62. ಸುಗ್ರೀವ ಸಚಿವಾಯ – ಸುಗ್ರೀವನ ಮಂತ್ರಿಯಾದ ನಿನಗೆ ನಮಸ್ಕಾರ
  63. ಧೀರಾಯ – ಧೀರನಾದ ನಿನಗೆ ನಮಸ್ಕಾರ
  64. ಶೂರಾಯ – ಶೂರನಾದ ನಿನಗೆ ನಮಸ್ಕಾರ
  65. ದೈತ್ಯ ಕುಲಾಂತಕಾಯ – ದೈತ್ಯರಿಗೆ ಕುಲ ಸಂಹಾರಕ ನಿನಗೆ ನಮಸ್ಕಾರ
  66. ಸುರಾರ್ಚಿತಾಯ – ದೇವತೆಗಳಿಂದ ಪೂಜಿತನಾದ ನಿನಗೆ ನಮಸ್ಕಾರ
  67. ಮಹಾ ತೇಜಸೇ – ಅತ್ಯಂತ ತೇಜೋಮಯ ನಿನಗೆ ನಮಸ್ಕಾರ
  68. ರಾಮಚೂಡಾಮಣಿ ಪ್ರದಾಯ ಕಾಯ – ರಾಮ ನೀಡಿದ ಚೂಡಾಮಣಿಯನ್ನು ಸೀತೆಗೆ ತಲುಪಿಸದವನೇ ನಿನಗೆ ನಮಸ್ಕಾರ
  69. ಕಾಮರೂಪಿಣೇ – ಕಾಮನೆಗಳ ನಿಯಂತ್ರಕನೇ ನಿನಗೆ ನಮಸ್ಕಾರ
  70. ಪಿಂಗಳಾಕ್ಷಾಯ – ವಿಶೇಷವಾದ ಬಣ್ಣದ ಕಣ್ಣುಗಳುಳ್ಳ ನಿನಗೆ ನಮಸ್ಕಾರ
  71. ವಾರ್ಧಿಮೈನಾಕ ಪೂಜಿತಾಯ – ವರಾದಿಗಳಿಂದ ಪೂಜಿಸಲ್ಪಡುವವನೇ ನಿನಗೆ ನಮಸ್ಕಾರ
  72. ಕಬಲೀ ಕೃತ ಮಾರ್ತಾಂಡ ಮಂಡಲಾಯ – ಸೂರ್ಯನನ್ನು ನುಂಗಲು ಸೂರ್ಯ ಮಂಡಲಕ್ಕೆ ಜಿಗಿದ ನಿನಗೆ ನಮಸ್ಕಾರ
  73. ವಿಜಿತೇಂದ್ರಯಾಯ – ಇಂದ್ರಿಯಗಳ ಗೆದ್ದವನೇ ನಿನಗೆ ನಮಸ್ಕಾರ
  74. ರಾಮ ಸುಗ್ರೀವ ಸಂಧಾತ್ರೇ – ರಾಮ ಮತ್ತು ಸುಗ್ರೀವರನ್ನು ಸಂಪರ್ಕಿಸಿದ ನಿನಗೆ ನಮಸ್ಕಾರ
  75. ಮಹಿರಾವಣ ಮರ್ಧನಾಯ – ಮಹಿರಾವಣನನ್ನು ಮರ್ದಿಸಿದವನೇ ನಿನಗೆ ನಮಸ್ಕಾರ
  76. ಸ್ಫಟಿಕಾಭಯ – ಸ್ಫಟಿಕದಂತಹ ಕಾಂತಿಯುಳ್ಳ ನಿನಗೆ ನಮಸ್ಕಾರ
  77. ವಾಗಧೀಶಾಯ – ವಾಕ್ ಒಡೆಯನೇ ನಿನಗೆ ನಮಸ್ಕಾರ
  78. ನವ ವ್ಯಾಕೃತ ಪಂಡಿತಾಯ – ವ್ಯಾಕರಣ ಪಂಡಿತನೇ ನಿನಗೆ ನಮಸ್ಕಾರ
  79. ಚತುರ್ಭಾಹವೇ – ನಾಲ್ಕು ಭುಜಗಳ ನಿನಗೆ ನಮಸ್ಕಾರ
  80. ದೀನ ಬಂಧುವೇ – ಆರ್ತರ ಆಪದ್ಬಾಂದವ ನಿನಗೆ ನಮಸ್ಕಾರ
  81. ಮಹಾತ್ಮನೇ – ಅತ್ಯಂತ ಪವಿತ್ರವಾದ ಆತ್ಮವುಳ್ಳ ನಿನಗೆ ನಮಸ್ಕಾರ
  82. ಭಕ್ತವತ್ಸಲಾಯ – ಭಕ್ತರನ್ನು ಸದಾಕಾಲವೂ ಪೊರೆಯುವ ನಿನಗೆ ನಮಸ್ಕಾರ
  83. ಸಂಜೀವಿನಗಾಹರ್ತ್ರೇ – ಸಂಜೀವಿನಿ ಪರ್ವತವನ್ನು ಹೊತ್ತು ತಂದವನೇ ನಿನಗೆ ನಮಸ್ಕಾರ
  84. ಶುಚಯೇ – ಪರಿಶುದ್ಧನಾದ ನಿನಗೆ ನಮಸ್ಕಾರ
  85. ವಾಗ್ಮಿನೇ – ಚತುರ ಮಾತುಗಾರನಾದ ನಿನಗೆ ನಮಸ್ಕಾರ
  86. ದೃಢವ್ರತಾಯ – ಕಠಿಣವಾದ ವ್ರತ ನಿಯಮಗಳನ್ನು ಆಚರಿಸುವ ನಿನಗೆ ನಮಸ್ಕಾರ
  87. ಕಾಲನೇಮಿ ಪ್ರಮಥನಾಯ – ಕಾಲನೇಮಿ ರಾಕ್ಷಸನ ಮರ್ದಿಸಿದ ನಿನಗೆ ನಮಸ್ಕಾರ
  88. ಹರಿಮರ್ಕಟ ಮರ್ಕಟಾಯ – ಹರಿಮರ್ಕಟ ರೂಪಿಯೇ ನಿನಗೆ ನಮಸ್ಕಾರ
  89. ದಾಂತಾಯ – ಹಲ್ಲುಗಳನ್ನು ತೋರಿಸುತ್ತಾ ಉಗ್ರರೂಪ ತಾಳಿದವನೇ ನಿನಗೆ ನಮಸ್ಕಾರ
  90. ಶಾಂತಾಯ – ಶಾಂತರೂಪನೇ ನಿನಗೆ ನಮಸ್ಕಾರ
  91. ಪ್ರಸನ್ನಾತ್ಮನೇ – ಪ್ರಸನ್ನನಾಗಿ ಕುಳಿತಿರುವ ನಿನಗೆ ನಮಸ್ಕಾರ
  92. ಶತಕಂಠಮುದಾಪಹರ್ತ್ರೇ – ಶಾಂತಿಯ ಕಾಂತಿಯಿಂದ ಶೋಭಿಸುತ್ತಿರುವ ನಿನಗೆ ನಮಸ್ಕಾರ
  93. ಯೋಗಿನೇ – ಯೋಗಿಯಾದ ನಿನಗೆ ನಮಸ್ಕಾರ
  94. ರಾಮಕಥಾ ಲೋಲಾಯ – ರಾಮಕಥೆಯಲ್ಲಿ ಸಂತೋಷ ಕಾಣುವವನಾದ ನಿನಗೆ ನಮಸ್ಕಾರ
  95. ಸೀತಾನ್ವೇಷಣ ಪಂಡಿತಾಯ – ಸೀತಾನ್ವೇಷಣೆಯಲ್ಲಿ ತೊಡಗಿಕೊಂಡಿದ್ದ ನಿನಗೆ ನಮಸ್ಕಾರ
  96. ವಜ್ರದಂಷ್ಟ್ರಾಯ – ವಜ್ರ ದಂತಹ ದವಡೆಗಳನ್ನು ಹೊಂದಿರುವ ನಿನಗೆ ನಮಸ್ಕಾರ
  97. ವಜ್ರನಖಾಯ – ವಜ್ರದಂತ ಉಗುರುಗಳನ್ನುಳ್ಳ ನಮಸ್ಕಾರ
  98. ರುದ್ರವೀರ್ಯ ಸಮದ್ಭವಾಯ – ರುದ್ರನ ವೀರ್ಯದಿಂದ ಜನಿಸಿದವನಿಗೆ ನಮಸ್ಕಾರ
  99. ಇಂದ್ರಜಿತಪ್ರಹಿತಾಮೋಘ ಬ್ರಹ್ಮಾಸ್ತ್ರ ವಿನಿವಾರಕಾಯ – ಇಂದ್ರಜಿತನು ಪ್ರಯೋಗಿಸಿದ ಬ್ರಹ್ಮಾಸ್ತ್ರ ನಿವಾರಿಸಿದವನಿಗೆ ನಮಸ್ಕಾರ
  100. ಪಾರ್ಥ ಧ್ವಜಾಗ್ರ‌ ಸಂವಾಸಿನೇ – ಅರ್ಜುನನ ಧ್ವಜದಲ್ಲಿ ನೆಲೆಸಿದವನೇ ನಿನಗೆ ನಮಸ್ಕಾರ
  101. ದಶಬಾಹವೇ – ಹತ್ತು ಭುಜಗಳನ್ನು ಹೊಂದಿರುವ ನಿನಗೆ ನಮಸ್ಕಾರ
  102. ಲೋಕಪೂಜ್ಯಾಯ – ಲೋಕಪೂಜಿತನೇ ನಿನಗೆ ನಮಸ್ಕಾರ
  103. ಜಾಂಬವತ್ಪ್ರೀತಿವರ್ಧನಾಯ – ಜಾಂಬವತಿಗೆ ಪ್ರೀತಿ ಪಾತ್ರನಾದ ನಿನಗೆ ನಮಸ್ಕಾರ
  104. ಸೀತಾಸಮೇತ ಶ್ರೀರಾಮಪಾದ ಸೇವಾದುರಂಧರಾಯ – ಸೀತಾದೇವಿ ಸಹಿತವಾಗಿ ಪ್ರಭು‌ ಶ್ರೀರಾಮನ ಪಾದಸೇವೆಯನ್ನು ನಿಷ್ಠೆಯಿಂದ ಮಾಡುವ ನಿನಗೆ ನಮಸ್ಕಾರ
    ‌ ‌ ‌ ‌ ‌ ‌ ‌ ಸಂಸ್ಕೃತದಲ್ಲಿರುವ ಪ್ರತಿ ಹೆಸರಿಗೂ ‘ನಮಃ’ ಸೇರಿಸಿಕೊಂಡು ಪಠಿಸಬೇಕು.
    ಹನೂಮದ್ ಅಷ್ಟೋತ್ತರ ಶತನಾಮಾವಳಿಯ ನಿತ್ಯಪಠಣದಿಂದ ವಿದ್ಯಾಬುದ್ಧಿಗಳೂ ಆಯುರಾರೋಗ್ಯ ಐಶ್ವರ್ಯಗಳೂ ವೃದ್ಧಿಯಾಗುವವು. ಶ್ರೀರಾಮನಲ್ಲಿ ಭಕ್ತಿ ನೆಲೆಗೊಳ್ಳುವುದು. ವಿಶೇಷವಾಗಿ ಮಂಗಳವಾರ ಪಠಿಸಿದರೆ ಋಣ ಬಾಧೆಗಳು ಹಾಗೂ ಶನಿವಾರ ಪಠಿಸಿದರೆ ಶನಿ ಬಾಧೆಗಳು ನಿವಾರಣೆಯಾಗುವುದು.

Leave a Reply

Your email address will not be published. Required fields are marked *

Translate »