ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ.

ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ..!

ಪಂಚೋಪಚಾರ ಪೂಜೆಯಲ್ಲಿ ಕರ್ಪೂರದೀಪ ಹಚ್ಚುವ ಉಪಚಾರ ಇಲ್ಲದಿದ್ದರೂ, ಕರ್ಪೂರವು ಸಾತ್ತ್ವಿಕವಾಗಿರುವುದರಿಂದ ಕರ್ಪೂರದೀಪವನ್ನು ಹಚ್ಚುವುದರಿಂದ ಹೆಚ್ಚಿನ ಸಾತ್ತ್ವಿಕತೆ ಸಿಗಲು ಸಹಾಯವಾಗುತ್ತದೆ. ಇದಕ್ಕಾಗಿ ನೈವೇದ್ಯ ಅರ್ಪಿಸಿದ ನಂತರ ಕರ್ಪೂರದೀಪವನ್ನು ಹಚ್ಚಬಹುದು.

ಲಾಭ

‘ಕರ್ಪೂರ’ ದೀಪವನ್ನು ಹಚ್ಚುವುದರಿಂದ ಅಶ್ವಮೇಧಯಾಗದ ಪುಣ್ಯವು ಸಿಗುತ್ತದೆ.

ಅಶ್ವಮೇಧಯಾಗದ ವೈಶಿಷ್ಟ್ಯ

ಅಶ್ವಮೇಧವು ಎಲ್ಲಕ್ಕಿಂತ ದೊಡ್ಡ ಯಾಗವಾಗಿದೆ. ಅಶ್ವವು (ಕುದುರೆ) ಶಕ್ತಿ ಮತ್ತು ವೇಗದ ಪ್ರತೀಕವಾಗಿದೆ. ‘ಪ್ರಜಾಪತಿಯ ಎಲ್ಲ ಶಕ್ತಿಯು ಅಶ್ವದಲ್ಲಿ ಒಟ್ಟುಗೂಡಿರುತ್ತದೆ’ ಎಂದು ಹೇಳುತ್ತಾರೆ. ಅಶ್ವಮೇಧಯಾಗದಿಂದ ಉತ್ಪನ್ನವಾಗುವ ಶಕ್ತಿಯನ್ನು ವಿರಾಟಪುರುಷರೂಪಿ ಶಿವರೂಪಿ ಈಶ ತತ್ತ್ವದೊಂದಿಗೆ ತುಲನೆ ಮಾಡಲಾಗುತ್ತದೆ.

  ಸಾವಿರ ಕನ್ನಡ ಗಾದೆಗಳು ಭಾಗ - ೪ - thousand Kannada proverb

ಕರ್ಪೂರ ರೂಪ ದೀಪದಿಂದ ಸ್ವಯಂ ಶಿವರೂಪಿ ಪುರುಷ ಶಕ್ತಿಯು ಜಾಗೃತವಾಗುವುದರಿಂದ ಅದರ ಸಹವಾಸವು ನಮಗೆ ದೊರಕಿ ನಾವು ಬಲಶಾಲಿ ಮತ್ತು ಕ್ರಿಯೆಯಲ್ಲಿ ಅಶ್ವದಂತೆಯೇ ವೇಗವಂತರಾಗುತ್ತೇವೆ. ಈ ದೀಪದ ಸಹವಾಸದಿಂದ ಅಶ್ವಮೇಧ ಮಾಡಿದ ನಂತರ ಸಿಗುವ ಶಕ್ತಿಯಂತೆ ಪುಷ್ಟಿವರ್ಧಕ ಶಿವರೂಪಿ ಶಕ್ತಿಯು ಸಿಗುತ್ತದೆ, ಆದುದರಿಂದ ಕರ್ಪೂರದೀಪಕ್ಕೆ ಮಹತ್ವದ ಸ್ಥಾನ ನೀಡಿರುವುದು ಕಂಡುಬರುತ್ತದೆ.

ವಾಯುಮಂಡಲದಲ್ಲಿನ ತ್ರಾಸದಾಯಕ ಸ್ಪಂದನಗಳು ಲಯವಾಗಲು ಸಹಾಯವಾಗುವುದು ಮತ್ತು ಅತ್ಯಂತ ಕಡಿಮೆ ಕಾಲಾವಧಿಗಾಗಿ ಕಾರ್ಯನಿರತವಾಗುವ ಕರ್ಪೂರದೀಪವು ಅವ್ಯಕ್ತ ಭಾವದ ಸ್ತರದಲ್ಲಿನ ಜೀವಕ್ಕೆ ಲಾಭವಾಗುವುದು.

  ಗೆಲುವು ಯಾರದು ? ಸೋಲು ಯಾರದು ? Win - Lose Zen Story

ಕರ್ಪೂರದೀಪದ ಬಳಿ ಶಿವರೂಪಿ ವಿರಾಟ ಪುರುಷರೂಪಿ ತೇಜದ ವಾಸ್ತವ್ಯವಿರುವುದರಿಂದ, ಇಂತಹ ದೀಪದ ಸಾನ್ನಿಧ್ಯದಿಂದ ವಾಯುಮಂಡಲದಲ್ಲಿನ ತ್ರಾಸದಾಯಕ ಸ್ಪಂದನಗಳು ಲಯವಾಗಲು ಸಹಾಯವಾಗುತ್ತದೆ.

ಲಯವಾಗುವ ಪ್ರಕ್ರಿಯೆಯು ಪುನರ್ನಿರ್ಮಿತ ರಹಿತವಾಗಿರುವುದರಿಂದ ಈ ದೀಪದ ಸಾನ್ನಿಧ್ಯವು ವಿಶೇಷ ಲಾಭದಾಯಕವಾಗಿದೆ, ಆದರೆ ಕರ್ಪೂರದೀಪವು ಅತ್ಯಂತ ಕಡಿಮೆ ಕಾಲಾವಧಿಗಾಗಿ ಕಾರ್ಯನಿರತವಾಗುವುದರಿಂದ ಅದರಲ್ಲಿನ ಶಿವರೂಪಿ ತೇಜದ ಸಹವಾಸವನ್ನು ದೀರ್ಘಕಾಲ ಪಡೆದುಕೊಳ್ಳಲು ಅವ್ಯಕ್ತ ಭಾವದ ಸ್ತರದಲ್ಲಿರಬೇಕಾಗುತ್ತದೆ.

Leave a Reply

Your email address will not be published. Required fields are marked *

Translate »