“””ಸುಖ ಹಾಗೂ ಶೋಕ””‘
ಒಂದು ಮರದಲ್ಲಿ ತುಂಬಾ ಹೂವುಗಳು ಬಿಟ್ಟಿತ್ತು. ಹಠಾತ್ತಾನೆ ಮಳೆ ಬೀಳ ತೊಡಗಿತು….
ಆ ಮಳೆಯ ಜೊತೆ ಜೋರಾಗಿ ಗಾಳಿ ಬೀಸಿ,
ಗಾಳಿಯ ರಭಸ ತೀವ್ರವಾಯಿತು.
ಮರ ತನ್ನ ಬೇರುಗಳನ್ನು ಭೂಮಿಯ ಹಿಡಿತದೊಂದಿಗೆ ಇರಿಸುವಲ್ಲಿ ಶ್ರಮ ತೊಡಗಿತು. ಅದರಲ್ಲಿ ಅದು ಕೆಳಗೆ ಉರುಳದಂತೆ ಜಯಿಸಿತು.
ಮಳೆ ಗಾಳಿ ನಿಂತಾಗ , ತನ್ನ ಇರುವಿಕೆಗೆ ಬೇರಿನ ಹಿಡಿತ ಸಾಧನೆಯೊಂದಿಗೆ ಕೆಳಗೆ ಉರುಳದೆ ನಿಟ್ಟುಸಿರು ಬಿಟ್ಟ ಆ ಮರ ಕಂಡಿದ್ದು. ….. ತನ್ನ ಎಲ್ಲಾ ಹೂಗಳೂ ಕಳಚಿ ನೆಲದಲ್ಲಿ ಬಿದ್ದಿವೆ!!!!!!!! ಬಿದ್ದು ಹೋದ ಹಲವಾರು ಹೂವುಗಳನ್ನು ಕಂಡು , ತನ್ನ ಎಲೆಯಲ್ಲಿ ಮುಂದಿನ ಸಮಯಕ್ಕೆ ಹಿಡಿದಿಟ್ಟುಕೊಂಡ ಮಳೆಯ ಹನಿಗಳು, ತನಗೇ ಭಾರವಾಗಿ , ತೊಟ್ಟು ತೊಟ್ಟಾಗಿ, ನಿಯಂತ್ರಣ ಇಲ್ಲದೆ ಕಣ್ಣೀರಿನಂತೆ ಬೀಳತೊಡಗಿತು.
ಈ ಮಧ್ಯೆ ಒಂದು ಪುಟ್ಟ ಹಕ್ಕಿ ಆ ಮರದಲ್ಲಿ ಬಂದು ಕೂತು, ಮರದಿಂದ ಬೀಳುವ ಕೊನೆಯತೊಟ್ಟು ನೋಡಿ ” ಯಾಕೆ ಕಣ್ಣೀರಿಡುವೆ?” ಎಂದು ಕೇಳಿತು.
ಮರ:- ” ನೋಡು, ಕೆಳಗೆ ನೆಲದಲ್ಲಿ ನೋಡು…. ನನ್ನ ಎಲ್ಲಾ ಸುಂದರ ಹೂವುಗಳೂ ನೆಲದಲ್ಲಿ ಬಿದ್ದು ಹೋಗಿವೆ. ಈ ಹೂಗಳು ನನ್ನ ಸಂತೋಷದ ಪ್ರತೀಕ …”
ಪುಟ್ಟ ಹಕ್ಕಿ ಹೇಳಿತು…
” ನೀನು ಕೆಳಗೆ ಯಾಕೆ ನೋಡುವೆ?
ಮೇಲೆ ನೋಡು ಸೂರ್ಯನ ಕಿರಣ ಇವೆ,
ನೀನು ಇನ್ನೂ ಉರುಳಿ ಬಿದ್ದಿಲ್ಲ.
ಇನ್ನೂ ಬೆಳೆಯುವ ಶಕ್ತಿ ನಿನ್ನಲ್ಲಿದೆ,
ಇನ್ನೂ ಸುಂದರ ಹೂವು ಬಿಡುವ ಚಕ್ಯತೆ ನೀನು ಕಳೆದೆಕೊಂಡಿಲ್ಲ ನಿನ್ನಲ್ಲಿದೆ.
ಹೊಸ ಹೊಸ ಸಂತೋಷದ ಪ್ರತೀಕವನ್ನು ಸ್ವೀಕರಿಸುವ, ಪುನರ್ ಆವಿಷ್ಕರಿಸುವ ಮನೋಸ್ಥೈರ್ಯ ನಿನ್ನಲ್ಲಿದೆ.
ಆ ಸುಖವನು ಕಾಣುವಂತವನಾಗು.
ಕಳೆದು ಹೋದುದರ ಬಗ್ಗೆ ಶೋಕವನ್ನು ಮರೆತುಬಿಡು.
ನೀನು ನಿನ್ನೊಳಗೆ ನೋಡು ನಿನ್ನ ಅರಿಯುವಂತವನಾಗು.
ನಾನು ಹಳೆ ಮರದಲ್ಲಿದ್ದ ನನ್ನ ಗೂಡು ಮರ ಬಿದ್ದಾಗ ನಾಶವಾದರೂ, ಕಳೆದುಕೊಂಡಿದ್ದು ಮರೆತು , ನನಗಿರುವ ರೆಕ್ಕೆಗಳಿಂದ ಹೊಸತನ್ನು ಹುಡುಕುತ್ತಿರುವೆ….. ನನ್ನ ರೆಕ್ಕೆಯ ಮೇಲೆ ನನಗೆ ಬರವಸೆ ಇದೆ….”
ಹಕ್ಕಿ ಅಲ್ಲಿಂದ ಹಾರಿ ಹೋಯಿತು.
ಶುಭದಿನ




