ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದರ್ಭೆಯ ಬಗ್ಗೆ ಸಂಪೂರ್ಣ ಮಾಹಿತಿ

ದರ್ಭೆ ಏನು ? ಏಕೆ ಬಳಸುತ್ತಾರೆ? ಮತ್ತು ಹೇಗೆ ಬಳಸಬೇಕು? ತಿಳಿಯಿರಿ.

ಹಿಂದೆ ಭಗವಂತನು ದೇವತೆಗಳಿಗೆ ಹಾಗೂ ಮನುಷ್ಯರಿಗೆ ಮಾಧ್ಯಮವಾಗಿ ಯಜ್ಞವನ್ನು ಸೃಷ್ಟಿಸಿದನು. ಆದರೆ ಆ ಯಜ್ಞದ ಆಹುತಿ ದೇವತೆಗಳಿಗೆ ತಲುಪುತ್ತಿರಲಿಲ್ಲ.
ಅದರಂತೆ ಮನುಷ್ಯನು ಮಾಡಿದ ಶ್ರಾದ್ಧವೂ ಪಿತೃದೇವತೆಗಳಿಗೆ ತಲುಪುತ್ತಿರಲಿಲ್ಲ.

ಯಾಕೆಂದರೆ ಯಜ್ಞವನ್ನು ಹಾಗೂ ಶ್ರಾದ್ಧವನ್ನು ರಾಕ್ಷಸರು ಮುಟ್ಟಿ ಅದನ್ನು ಅಶುಚಿ ಮಾಡುತ್ತಿದ್ದರು. ಆಗ ದೇವತೆಗಳು ಮತ್ತು ಪಿತೃಗಳು ಭಗವಂತನನ್ನು ಪ್ರಾರ್ಥಿಸಲು ಭಗವಂತನು ವರಾಹ ರೂಪಿಯಾಗಿ ಬಂದು ತನ್ನ ರೋಮದಿಂದ ದರ್ಭೆಯನ್ನು ಸೃಷ್ಟಿಸಿ ಅದನ್ನು ಯಜ್ಞ ಹಾಗೂ ಶ್ರಾದ್ಧದ ರಕ್ಷಣೆಗೆ ನೀಡಿದನು. ಅಂದಿನಿಂದ ದರ್ಭೆಯ ಸ್ಪರ್ಶವಾದರೆ ದೈತ್ಯರು ಓಡಿಹೋಗುತ್ತಾರೆ. ಆದ್ದರಿಂದ ದರ್ಭೆಯಿಲ್ಲದೆ ಯಜ್ಞವನ್ನು ಹಾಗೂ ಶ್ರಾದ್ಧವನ್ನು ಮಾಡಲೇ ಬಾರದು.

“ಕುಶಮೂಲೇ ಸ್ಥಿತೋ ಬ್ರಹ್ಮಾ ಕುಶಮಧ್ಯೇ ತು ಕೇಶವಃ
ಕುಶಾಗ್ರೇ ಶಂಕರಂ ವಿದ್ಯಾತ್ ಸರ್ವದೇವಾಃ ಸಮಂತತಃ।। (ದೇವಲ)
ದರ್ಭೆಗಳು ಏಳು ವಿಧವಾಗಿದೆ.
ವಿಶ್ವಾಮಿತ್ರಾಃಕುಶಾಃಕಾಶಾಃದೂರ್ವಾ ವ್ರೀಹಯ ಏವ ಚ
ಬಲ್ವಲಾಶ್ಚ ಯವಾಶ್ಚೈವ ಸಪ್ತದರ್ಭಾಃ ಪ್ರಕೀರ್ತಿತಾಃ।।
ಇದರಲ್ಲಿ ರುದ್ರಸಂಬಂಧ ಹಾಗೂ ಆಭಿಚಾರ ಕೃತ್ಯದಲ್ಲಿ ಕಾಶ ಎಂಬ ದರ್ಭೆಯನ್ನು, ಶ್ರೌತ ಸ್ಮಾರ್ತ ಕರ್ಮಗಳಲ್ಲಿ ಕುಶವನ್ನೂ, ಋಷಿ ಪೂಜಾಗಳಲ್ಲಿ ದೂರ್ವಾವನ್ನೂ, ವೈಷ್ಣವ ಸಂಬಂಧಿ ಕಾರ್ಯದಲ್ಲಿ ವಿಶ್ವಾಮಿತ್ರ ದರ್ಭೆಯನ್ನು ಉಪಯೋಗಿಸಬೇಕೆಂದು ಶಾಸ್ತ್ರವು ತಿಳಿಸುತ್ತದೆ. ‌

  ಗೋವಿಂದ ದಾಮೋದರ ಸ್ತೋತ್ರಂ

“ಕಾಶಂ ತು ರೌದ್ರಂಮಾಖ್ಯಾತಂ ಕುಶಂ ಬ್ರಾಹ್ಮಂ ತಥಾ ಸ್ಮೃತಮ್
ದೂರ್ವಾತ್ವಾರ್ಷಂ ಸಮಾಖ್ಯಾತಂ ವಿಶ್ವಾಮಿತ್ರಂ ತು ವೈಷ್ಣವಮ್ ।। (ಹಾರೀತ)
ಕುಶಂ ತು ಸರ್ವಕಾರ್ಯೇಷು ಪವಿತ್ರಂ ಸ್ಮೃತಮ್
ಎಂಬ ವಾಕ್ಯದಂತೆ ಇದು ಯಾವುದೇ ಇಲ್ಲದಿದ್ದರೆ ಕುಶ ಎಂಬ ದರ್ಭೆಯನ್ನು ಎಲ್ಲಾ ಕಾರ್ಯಗಳಲ್ಲಿಯೂ ಉಪಯೋಗಿಸಬಹುದು.
ದರ್ಭೆಯನ್ನು ಯಾವಾಗ ಆಹರಣ ಮಾಡಬೇಕು ?

“ಮಾಸೇ ನಭಸ್ಯಮಾವಾಸ್ಯಾ ತಸ್ಯಾಂ ದರ್ಭೋಚ್ಚಯೋ ಮತಃ
ಅಯಾತಯಾಮಾಸ್ತೇ ದರ್ಭಾಃ ನಿಯೋಜ್ಯಾಃ ಸ್ಯುಃ ಪುನಃ ಪುನಃ ।।(ಹಾರೀತ) ಶ್ರಾವಣ ಮಾಸದ ಅಮಾವಾಸ್ಯೆಯಂದು ಕತ್ತರಿಸಿ ತಂದ ದರ್ಭೆಯು ಯಾತಯಾಮವಾಗದೇ ಯಾವತ್ತೂ ಕಾರ್ಯಗಳಿಗೆ ಬಳಸಬಹುದು.
ಬೇರೆ ಅಮಾವಾಸ್ಯೆಯಂದು ತಂದ ದರ್ಭೆಯನ್ನು ಒಂದು ತಿಂಗಳು ಮಾತ್ರ ಬಳಸಬೇಕು.
ಹುಣ್ಣಿಮೆಯಂದು ತಂದ ದರ್ಭೆಯು 15 ದಿನಗಳ ಕಾಲ ಶುದ್ಧ.
ಮಹಾಲಯ ಅಮಾವಾಸ್ಯೆಯಂದು ತಂದ ದರ್ಭೆಯು 6 ತಿಂಗಳು ಶುದ್ಧ.
ಭಾನುವಾರ ತಂದರೆ 1 ವಾರ. ಆಯಾಯ ದಿನ ತಂದರೆ ಆಯಾಯ ದಿನ ಮಾತ್ರ ಶುದ್ಧ. ‌ ಶ್ರಾವಣ ಅಮಾವಾಸ್ಯೆಯಂದು ಕತ್ತರಿಸಿ ತಂದ ದರ್ಭೆಯ ಜೊತೆಗೆ ಉಳಿದದ್ದನ್ನು ಸೇರಿಸಿದರೆ ಎಲ್ಲವೂ ಶುದ್ಧವಾಗಿ ಯಾವಾಗಲೂ ಬಳಸಬಹುದು.
ದರ್ಭೆಯ ಬಗ್ಗೆ ಇನ್ನೂ ಕೆಲವು ಚಿಂತನೆಗಳು
“ಅಗ್ರಸ್ಥೂಲಂ ಭವೇನ್ನಾರೀ ಮೂಲಸ್ಥೂಲಂ ನಪುಂಸಕಂ
ಮೂಲಾದಗ್ರಸಮಂ ಪುಂಸಾಂ ದರ್ಭಾಣಾಂ ಚೈವ ಲಕ್ಷಣಮ್ ।। “
ಹೀಗೆ ದರ್ಭೆಯಲ್ಲಿ ಸ್ತ್ರೀ, ಪುಂ, ನಪುಂಸಕ ಎಂದು ಮೂರು ವಿಧವಾಗಿದೆ.

  Surya Grahana ಸೂರ್ಯ ಗ್ರಹಣ 25.10.22  ಮಂಗಳವಾರ

ಯಾವ ಯಾವ ಕಾರ್ಯಗಳಿಗೆ ಯಾವ ಯಾವ ದರ್ಭೆಯನ್ನು ಬಳಸಬೇಕು?
ವಿವಾಹೇ ಚೈವ ಪುಂದರ್ಭಾಃ ಸ್ತ್ರೀದರ್ಭಾಃ ಚೈವ ಪುಂಸುವೇ
ಅನ್ಯಕರ್ಮಸು ಷಂಡಾಃಸ್ಯುಃ ದರ್ಭಾಣಾಂ ಚೈವ ಲಕ್ಷಣಮ್ ।।
ವಿವಾಹಾದಿ ಪುರುಷ ಸಂಸ್ಕಾರದಲ್ಲಿ ಪುಂದರ್ಭೆಯನ್ನೂ, ಪುಂಸವನಾದಿ ಸ್ತ್ರೀಸಂಸ್ಕಾರಗಳಲ್ಲಿ ಸ್ತ್ರೀದರ್ಭೆಯನ್ನೂ, ಇತರ ಕರ್ಮಗಳಿಗೆ ನಪುಂಸಕ ದರ್ಭೆಯನ್ನು ಬಳಸಬೇಕು.

ಪ್ರಾದೇಶಮಾತ್ರದ ಎರಡು ದರ್ಭೆಯು ಪವಿತ್ರ ಎನಿಸಿಕೊಳ್ಳುತ್ತದೆ. (ಅನಖಚ್ಛೇದಿತ, ಸಮೌ, ಸಾಗ್ರೌ, ತುಲ್ಯೌ ಪವಿತ್ರಾರ್ಥಂ ಗೃಹೀತ್ವಾ ಎಂದು ಅಗ್ನಿಮುಖದಲ್ಲಿ ಹೇಳಿದ ಪವಿತ್ರ ಇದೇ)
“ವಿಚ್ಛಿನ್ನಾಗ್ರಂ ತೃಣಂ ಪ್ರೋಕ್ತಂ ಅವಿಚ್ಛಿನ್ನಂ ಪವಿತ್ರಕಮ್
ಪ್ರಾದೇಶಮಾತ್ರಂ ದರ್ಭಾಶ್ಚ……….
ಓಂ ನಮೋ ಭಗವತೇ ವಾಸುದೇವಾಯ
ಕೃಷ್ಣ…ಕೃಷ್ಣ..ಕೃಷ್ಣ

  ಗಣೇಶ ಚತುರ್ಥಿ ಶಾಸ್ತ್ರೋಕ್ತ ಪೂಜಾ ವಿಧಾನ..!

ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »