ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶ್ರೀರಾಘವೇಂದ್ರಸ್ವಾಮಿಗಳು ಮಂಚಾಲೆ ಕ್ಷೇತ್ರದ ಇತಿಹಾಸ ಮತ್ತು ತಮ್ಮ ಬೃಂದಾವನ ಪ್ರವೇಶದ ರಹಸ್ಯ ತಿಳಿಸಿದ್ದು

ಮಂತ್ರಾಲಯದ ಇತಿಹಾಸ – 51

ಶ್ರೀರಾಘವೇಂದ್ರಸ್ವಾಮಿಗಳು ಮಂಚಾಲೆ ಕ್ಷೇತ್ರದ ಇತಿಹಾಸ ಮತ್ತು ತಮ್ಮ ಬೃಂದಾವನ ಪ್ರವೇಶದ ರಹಸ್ಯ ತಿಳಿಸಿದ್ದು

*ಒಂದು ದಿನ ಶ್ರೀರಾಘವೇಂದ್ರಸ್ವಾಮಿಗಳವರು ವೆಂಕಣ್ಣನೊಂದಿಗೆ ತುಂಗಭದ್ರಾ ತೀರದ ಒಂದು ವಿಶಾಲ ಜಾಗದಲ್ಲಿ ತೋರಿಸಿದರು. *ಅಲ್ಲಿ ಹೋಮ ಮಾಡಿದ ಕುರುಹುಗಳು ಕಂಡು ಬಂದವು. ಇದು ಕೇವಲ ಕುಗ್ರಾಮವೆಂದು ನೀವು ಭಾವಿಸಿದ್ದಿರಿ. ಆದರೆ ಪೂರ್ವದಲ್ಲಿ ಪ್ರಹ್ಲಾದರಾಜರು ಯಜ್ಞ ಮಾಡಿದ ಸ್ಥಳವಿದು ಹಾಗೂ ಶ್ರೀರಾಮನು ವನವಾಸದಲ್ಲಿ ಲಕ್ಷ್ಮಣ ಸಹಿತನಾಗಿ ಸೀತೆಯನ್ನು ಹುಡುಕುತ್ತ ಈ ಸ್ಥಳದಲ್ಲಿ ಸಂಚಾರ ಮಾಡಿ ಹೋಗಿರುವನು ಮತ್ತು ದ್ವಾಪರಯುಗದಲ್ಲಿ ಶ್ರೀಕೃಷ್ಣನೊಂದಿಗೆ ಅರ್ಜುನನು ಅನುಸಾಲ್ವನೊಂದಿಗೆ ಯುದ್ಧ ಮಾಡುವ ಪ್ರಸಂಗ ಬಂದಾಗ ಎಷ್ಟು ಸಮಯವಾದರೂ ಅನುಸಾಲ್ವ ಸೋಲಲಿಲ್ಲ. ಆಗ ಅರ್ಜುನನು ಅಚ್ಚರಿಪಟ್ಟು ಶ್ರೀಕೃಷ್ಣನನ್ನು ಕೇಳಲು. ಆತನು ರಥದ ಜಾಡನ್ನು ಸ್ವಲ್ಪ ಬದಲಿಸಿ ಸ್ವಲ್ಪ ದೂರ ಕರೆದೊಯ್ಯಲು ಕ್ಷಣದಲ್ಲಿ ಅನುಸಾಲ್ವನು ಸೋತು ಶರಣಾದನು. ಕಾರಣ ಕೇಳಿದಾಗ ಆ ಸ್ಥಳದ ಮಹಿಮೆಯನ್ನು ಶ್ರೀಕೃಷ್ಣನು ಹೀಗೆ ತಿಳಿಸಿದನು.* ಕೃತಯುಗದಲ್ಲಿ ಪ್ರಹ್ಲಾದರಾಜರು ಯಜ್ಞ ಮಾಡಿದ ಹೋಮಕುಂಡವಿರುವ ಸ್ಥಳವಿದು, ಈ ಪುಣ್ಯಸ್ಥಳದಲ್ಲಿ ಅನುಸಾಲ್ವನು ನಿಂತಿದ್ದರಿಂದ ಅವನಿಗೆ ಸೋಲಾಗಲಿಲ್ಲ ಎಂದು ಹೇಳಿದರು. ಶ್ರೀಪ್ರಹ್ಲಾದರಾಜರು ಯಜ್ಞ ಮಾಡಿದ್ದರಿಂದಲೂ, ಶ್ರೀರಾಮಲಕ್ಷ್ಮಣರು ಹಾಗೂ ಶ್ರೀಕೃಷ್ಣಾರ್ಜುನರುಗಳ ಪಾದಸ್ಪರ್ಶದಿಂದ ಪರಮಪಾವನವಾದ ವರಾಹದೇವರ ಬಾಯಿಂದ ಹೊರಬಂದ ಪವಿತ್ರ ತುಂಗಭದ್ರಾ ತರಂಗಗಳಿಂದ ಪರಮಪಾವನ ಭೂಮಿಯಾದ ಈ ಗ್ರಾಮವನ್ನು ತಾವು ಇಷ್ಟಪಟ್ಟದ್ದೆಂದು ತಿಳಿಸಿದರು. ಹೀಗೆ ಶ್ರೀಗುರುರಾಜರು ತಾವು ಪೂರ್ವಜನ್ಮದಲ್ಲಿ ಅನುಷ್ಠಾನ ಮಾಡಿದ ಯಜ್ಞವನ್ನು ಸ್ಮರಿಸಿಕೊಳ್ಳುತ್ತಾ ದ್ವಾಪರಯುಗದಲ್ಲಿ ನಡೆದ ಸಂಘಟನೆಯನ್ನು ಕೂಡ ಅಲ್ಲಿ ವೆಂಕಣ್ಣನಿಗೆ ತಿಳಿಸಿದರು. ಆದ್ದರಿಂದ ತುಂಗಭದ್ರಾ ತೀರವು ಜಪ-ತಪಾನುಷ್ಠಾನಗಳನ್ನು ಮಾಡುವುದರಿಂದ ಒಂದು ಜಪಕ್ಕೆ ಕೋಟಿ ಜಪ ಮಾಡಿದ ಫಲವು ಉಂಟಾಗಿ ಬೇಗನೆ ಮಂತ್ರಸಿದ್ಧಿಯಾಗುವ ಮಹಾಮಂತ್ರ ಸಿದ್ಧಿಕ್ಷೇತ್ರವೆನಿಸಿದೆ. ಅಂತೆಯೇ “ಹೋಮಕುಂಡದ ಈ ಸ್ಥಳದಲ್ಲಿ ಸಜೀವ ಬೃಂದಾವನ ಪ್ರವೇಶ ಮಾಡಿ ಬಹುಕಾಲ ಲೋಕಕಲ್ಯಾಣಕ್ಕಾಗಿ ತಪೋನಿರತರಾಗಲು ನಿಶ್ಚಯಿಸಿದ್ದೆವೆ.! ಇದು ಶ್ರೀಹರಿಯ ಸಂಕಲ್ಪ. ಈ ವಿಚಾರವನ್ನು ನೀನು ರಹಸ್ಯವಾಗಿಡು. ಮುಂದಿನ ಕಾರ್ಯಗಳಲ್ಲಿ ನಿನ್ನದೇ ಪ್ರಧಾನಪಾತ್ರ” ಎಂದು ಅಪ್ಪಣೆ ಮಾಡಿದರು. ಉನ್ನತ ಪದವಿ ಕೊಡಿಸಿ ಗಣ್ಯ ವ್ಯಕ್ತಿಯನ್ನಾಗಿ ಮಾಡಿ, ತಮ್ಮ ಆಂತರಂಗಿಕ ವಿಚಾರವನ್ನು ಗುರುಗಳ ಮಾತನ್ನಾಲಿಸಿದ ವೆಂಕಣ್ಣನು ರೋಮಾಂಚಿತನಾದನು.ಭಕ್ತ್ಯತಿಶಯದಿಂದ ಕಣ್ಣುಗಳಿಂದ ಅವನಿಗೆ ತಿಳಿಯದಂತೆ ಆನಂದಾಶ್ರುಗಳು ಧಾರೆಯಾಗಿ ಹರಿದವು.ಆದರೆ ಅವರು ಬೃಂದಾವನಸ್ಥರಾದರೆ ಆಗುವ ಅಗಲಿಕೆಯನ್ನು ನೆನೆಸಿ ದುಃಖಿಸಿದನು. ಅಲ್ಲಿಂದ ಸಂಚಾರತ್ವೇನ ರಾಯಚೂರು ಜಿಲ್ಲೆಯ ಗಾಣಧಾಳದಲ್ಲಿ ಪಂಚಮುಖಿ ಆಂಜನೇಯ ಸ್ವಾಮಿ ತಪಸ್ಸು ಮಾಡಲು ತೆರಳಿದರು.

  ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನಿ

🙏🚩

Leave a Reply

Your email address will not be published. Required fields are marked *

Translate »