*✨ನವರಾತ್ರಿಯ “ಅಖಂಡ ದೀಪ”*
ನವರಾತ್ರಿಯ ಸಮಯದಲ್ಲಿ ಬಹುತೇಕ ಮನೆಗಳಲ್ಲಿ ಅಖಂಡ ಜ್ಯೋತಿ ಬೆಳಗುತ್ತಿರುತ್ತದೆ. ಅಖಂಡ ಜ್ಯೋತಿ ಎಂದರೆ ಹಚ್ಚಿದ ದೀಪ 9 ದಿನಗಳ ಕಾಲ ನಿರಂತರವಾಗಿ ಉರಿಯುತ್ತಲೇ ಇರಬೇಕು. ಅಖಂಡ ಜ್ಯೋತಿ ಬೆಳಗಿದರೆ ಮನೆಗೆ ಬಹಳ ಒಳ್ಳೆಯದು, ಆದರೆ ಅಷ್ಟೇ ಎಚ್ಚರಿಕೆವಹಿಸಬೇಕಾಗಿದೆ, ಯಾರಾದರೂ ಒಬ್ಬರು ಮನೆಯಲ್ಲಿ ದೀಪ ಕೆಡದಂತೆ ಜಾಗ್ರತೆವಹಿಸಬೇಕು.
*ಅಖಂಡ ಜ್ಯೋತಿಯ ಮಹತ್ವ* :
ಅಖಂಡ ಜ್ಯೋತಿಯನ್ನು ಒಂಭತ್ತು ದಿನಗಳವರೆಗೆ ಬೆಳಗುವುದರಿಂದ ದೇವಿಯ ಕೃಪೆ ಆ ಮನೆಯ ಮೇಲಿರುತ್ತದೆ. ಇದರಿಂದ ನಿಮ್ಮ ಎಲ್ಲಾ ಕಾರ್ಯದಲ್ಲಿ ಯಶಸ್ಸು ಪಡೆಯುತ್ತೀರಿ, ದೇವಿಯ ಕೃಪೆಯಿಂದಾಗಿ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ, ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗುವುದು.
*ನವರಾತ್ರಿ ಅಖಂಡ ಜ್ಯೋತಿ ಹೇಗೆ ಹಚ್ಚಬೇಕು ?*
* ಅಖಂಡ ಜ್ಯೋತಿಗೆ ನೀವು ದಪ್ಪವಾದ ಬತ್ತಿ ಬಳಸಬೇಕು
* ಹಿತ್ತಾಳೆ, ತಾಮ್ರ, ಬೆಳ್ಳಿ ಅಥವಾ ಮಣ್ಣಿನ ದೀಪ ಬೆಳಗಿಸಬಹುದು
* ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಅಥವಾ ಹಸುವಿನ ಶುದ್ಧ ತುಪ್ಪ ಬಳಸಬಹುದು
* ಅಖಂಡ ಜ್ಯೋತಿ ಹಚ್ಚಿಡುವ ಕಡೆ ಸ್ವಚ್ಛ ಮಾಡಿ ಅಲ್ಲಿ ಅಷ್ಟದಳ ಬರೆದು, ಅದರಲ್ಲಿ ದೀಪವನ್ನು ಇಡಬೇಕು.
* ದುರ್ಗಾ ದೇವಿಯ ಬಲಭಾಗದಲ್ಲಿ ದೀಪವನ್ನು ಹಚ್ಚಬೇಕು, ಎಡಭಾಗದಲ್ಲಿ ಪೂಜೆಗೆ ಬಳಸುವ ಎಣ್ಣೆಯನ್ನು ಇಡಬೇಕು.
* ಎಣ್ಣೆ ದೀಪವಾದರೆ ಅಷ್ಟ ದಳದ ಎಡಭಾಗದ ತುಪ್ಪದ ದೀಪವಾದರೆ ಅಷ್ಟದಳದ ಬಲಭಾಗ ಹಚ್ಚಿಡಬೇಕು.
* ದೇವಿ ಮಂತ್ರವನ್ನು ಹೇಳುತ್ತಾ ಶುಭ ಸಮಯದಲ್ಲಿ ದೀಪವನ್ನು ಬೆಳಗಿಸಬೇಕು.
*ಏನು ಮಾಡಬೇಕು ?*
* ತುಂಬಾ ಭಕ್ತಿ ಹಾಗೂ ಶ್ರದ್ಧೆಯಿಂದ ದೀಪವನ್ನು ಹಚ್ಚಬೇಕು
* ಬತ್ತಿ ದಪ್ಪವಾಗಿರಬೇಕು, ಒಂಭತ್ತು ದಿನಗಳು ಬರುವಷ್ಟು ಉದ್ದವಿರಬೇಕು
* ದೀಪ ಯಾವಾಗಲೂ ಬೆಳಗುವಂತೆ ನೋಡಿಕೊಳ್ಳಿ
* ಎಣ್ಣೆ ಅಥವಾ ತುಪ್ಪ ಕಡಿಮೆಯಾಗಲು ಬಿಡಬೇಡಿ, ದೀಪಕ್ಕೆ ಆಗಾಗ ಹಾಕುತ್ತಲೇ ಇರಿ, ರಾತ್ರಿಯಲ್ಲೂ ಅಷ್ಟೇ.
* ಅವಶ್ಯಕತೆ ಇದ್ದರೆ, ಅಖಂಡ ದೀಪವನ್ನು ಗಾಜಿನಿಂದ ಮುಚ್ಚಿ ಮಾಡಿ, ಇದರಿಂದ ಗಾಳಿ ಬೀಸಿದಾಗ ಆರುವುದಿಲ್ಲ
* ಬತ್ತಿಯನ್ನು ಸರಿಪಡಿಸುವಾಗ, ಎಣ್ಣೆ ಹಾಕುವಾಗ ಬತ್ತಿ ಕೆಡದಂತೆ ನೋಡಿಕೊಳ್ಳಿ.
* ಈ 9 ದಿನಗಳು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು.
*ಏನು ಮಾಡಬಾರದು ?*
• ಸ್ನಾನ ಮಾಡದೆ ದೀಪವನ್ನು ಸ್ಪರ್ಶ ಮಾಡಬೇಡಿ
• ಗಟ್ಟಿ ತುಪ್ಪವನ್ನು ಹಾಕಬೇಡಿ, ಕರಗಿಸಿ ಹಾಕಿದರೆ ಒಳ್ಳೆಯದು
* ದೀಪದ ಪಕ್ಕದ ಗೋಡೆ ಸ್ನಾನದ ಗೃಹ, ಶೌಚಾಲಯ ಇರಕೂಡದು
* ಅಖಂಡ ಜ್ಯೋತಿ ಹಚ್ಚಿದ ಮೇಲೆ ಅದರ ಬಗ್ಗೆ ನಿರ್ಲಕ್ಷ್ಯ ಮಾಡಲೇಬೇಡಿ.
* ಸೂರ್ಯಕಾಂತಿ ಎಣ್ಣೆ, ಪಾಮ್ ಆಯಿಲ್ ಬಳಸಬಾರದು
* ದೀಪವನ್ನು 9 ದಿನಗಳವರೆಗೆ ಅಲುಗಾಡಿಸಬಾರದು
* ನವರಾತ್ರಿಯಲ್ಲಿ ಬ್ರಹ್ಮಚರ್ಯ ಪಾಲಿಸಿ