ದೇವರಿಗೆ ದೀಪ ಯಾಕೆ ಹಚ್ಚಬೇಕು
ನಾವು ದಿನ ನಿತ್ಯ ದೇವರಿಗೆ ದೀಪ ಇಟ್ಟು, ಭಕ್ತಿಯಿಂದ ದೇವರಿಗೆ ಕೈ ಮುಗಿಯುತ್ತೇವೆ.
ನಮ್ಮನ್ನು ಕುತೂಹಲದಿಂದ ನೋಡಿ ಕಲಿಯುವ ಮಕ್ಕಳು ನಾವು ದೇವರಿಗೆ ದೀಪ ಯಾಕೆ ಇಡಬೇಕು?ಅಂತ ನಮ್ಮನ್ನು ಕೇಳಿದರೆ ?
ನೀವು ತಬ್ಬಿಬ್ಬುಗೊಳ್ಳುತ್ತಿರಿ, ಇದು ನಮ್ಮ ಸಂಪ್ರದಾಯ ಮಗು, ಅಜ್ಜ ಇಡುತ್ತಿದ್ದರು ಆದನಂತರ ಅಪ್ಪ ಇಡುತ್ತಿದ್ದರು ಈಗ ನಾನು ಮುಂದೆ ನೀನು ಎನ್ನುತ್ತಾ ಮಗುವನ್ನು ಸಮಾಧಾನ ಪಡಿಸುತ್ತಿರಿ ಇದನ್ನೇ ಮಗು ಸತ್ಯ ಎನ್ನುತ್ತಾ ನಂಬಿ ಬಿಡುತ್ತದೆ!!.
ಆದರೆ ಸತ್ಯ ಅದಲ್ಲ ನೀವು ತಿಳಿದುಕೊಳ್ಳಿ ಮತ್ತು ನಿಮ್ಮವರೊಂದಿಗೂ ಹಂಚಿಕೊಳ್ಳಿ.
ದೀಪ ಅನ್ನುವುದು ಬರೇ ಬೆಳಕಿಗಾಗಿ ಇಡುವುದಲ್ಲ ಬದಲಿಗೆ ನಿಮ್ಮ ಪ್ರಾರ್ಥನೆ ಮತ್ತು ಹರಕೆಯನ್ನು ದೇವರಿಗೆ ತಲುಪಿಸುವ ವಾಹಕ.
ದೀಪ ಅನ್ನುವುದು ಅಗ್ನಿಯಿಂದ ಪ್ರಜ್ವಲಿತವಾಗಿದೆ, ನಾವು ಮಾಡುವ ಯಾಗದ ಹವಿಸನ್ನು ಹೇಗೆ ಅಗ್ನಿಯು ಆಯ ದೇವತೆಗಳಿಗೆ ಕೊಂಡೊಯ್ದು ಒಪ್ಪಿಸುತ್ತದೋ ಅದೇ ತೆರನಾಗಿ ದೀಪವೂ ನಿಮ್ಮ ಪ್ರಾರ್ಥನೆಯನ್ನು ಭಗವಂತನ ಬಳಿಗೆ ಕೊಂಡೊಯ್ಯುವ ಸಾಧನವಾಗಿದೆ.
ನೀವು ಯಾವ ದೇವರನ್ನು ಪ್ರಾರ್ಥನೆ ಮಾಡುತ್ತಿರೋ ಆ ಪ್ರಾರ್ಥನೆ ನಿಮ್ಮ ಆ ದೇವರ ಬಳಿ ತಲುಪಲು ದೀಪ ಒಂದು ಮಾಧ್ಯಮ.
ದೀಪವಿಲ್ಲದೆ ನಿಮ್ಮ ಪ್ರಾರ್ಥನೆ ತಲುಪಬೇಕಾದ ಜಾಗವನ್ನು ತಲುಪುವುದಿಲ್ಲ, ಹಿಂದೊಮ್ಮೆ ನಾವು ಪ್ರಾರ್ಥನೆ ಮಾಡುವಾಗ ದೀಪ ನಂದಿ ಹೋದರೆ ಅಪಶಕುನ ಅನ್ನುತ್ತಿದ್ದರು ಯಾಕೆಂದರೆ ನಿಮ್ಮ ಪ್ರಾರ್ಥನೆ ಭಗವಂತನನ್ನು ತಲುಪಲಿಲ್ಲ ಅನ್ನುವುದೇ ಅದರ ತಾತ್ಪರ್ಯ.
ಆತ್ಮ ಮತ್ತು ಪರಮಾತ್ಮನ ಮಧ್ಯೆ ಸಂಬಂಧ ಸೇತುವೆ ಒಂದು ಪುಟ್ಟ ದೀಪವಾಗಬಲ್ಲುದು.
ನೀವು ನಿತ್ಯ ಮನೆಯಲ್ಲಿ ದೇವರಿಗೆ ಅಥವಾ ಧೈವಗಳಿಗೆ ಕೈ ಮುಗಿಯುವಾಗ ಪುಟ್ಟ ದೀಪವೊಂದನ್ನು ಪ್ರಜ್ವಲಿಸುವ ಪರಿಪಾಟವನ್ನು ಇಟ್ಟುಕೊಳ್ಳಿ, ನಿಮ್ಮ ಪ್ರತಿ ಪ್ರಾರ್ಥನೆ ಮುಟ್ಟಬೇಕಾದ ಜಾಗವನ್ನು ತಟ್ಟುತ್ತದೆ ಹಾಗು ಪ್ರಾರ್ಥನೆಗಳು ಫಲಿಸುತ್ತವೆ, ದೇವರ ಮತ್ತು ನಿಮ್ಮ ಸಂಬಂಧಗಳು ಹತ್ತಿರ ಮತ್ತು ಗಟ್ಟಿಯಾಗುತ್ತದೆ, ಕಾರಣಿಕಗಳು ಮಾತಾಡುತ್ತವೆ.
ದಯಮಾಡಿ ಮಕ್ಕಳ ಜನ್ಮ ದಿನಾಚರಣೆಯ ಸಮಯದಲ್ಲಿ ಕ್ಯಾಂಡಲ್ ನಂದಿಸುವುದಕ್ಕಿಂತ ದೀಪ ಪ್ರಜ್ವಲಿಸುವುದು ತುಂಬಾ ಸೂಕ್ತವಾದ ಆಚರವಾಗಿದೆ.
ಉರಿಯುತ್ತಿರುವ ಪುಟ್ಟ ದೀಪ ನಿಮ್ಮ ಬಂಧುಗಳ ಹಾರೈಕೆಯನ್ನು ಭಗವಂತನ ಬಳಿಗೆ ಕೊಂಡೊಯ್ಯುತ್ತದೆ ಹಾಗೂ ಯಾರಾದರೂ ಕೆಟ್ಟ ಹಾರೈಕೆಯನ್ನು ಮಾಡಿದರೆ ಅವನ್ನು ಅಲ್ಲೇ ಸುಟ್ಟು ಒಳ್ಳೆಯ ಆರೈಕೆಗಳನ್ನು ಮಾತ್ರ ದೇವರ ಪಾದತಳದಲ್ಲಿಡುವ ಗುಣ ಒಂದು ಪುಟ್ಟ ಹಣತೆಗಿದೆ….
ಸಂಗ್ರಹ ಲೇಖನ